Chicken Recipe: ಸೌತ್ ಇಂಡಿಯನ್ ಸ್ಟೈಲ್ ನಲ್ಲಿ ‘ಘೀ ಚಿಕನ್ ಕರಿ’ ಹೇಗೆ ಮಾಡುವುದು ಗೊತ್ತಾ? ಈ ಟೇಸ್ಟಿ ರೆಸಿಪಿ ನಿಮಗಾಗಿ

ನೀವು ನಾನ್ ವೆಜ್ ಪ್ರಿಯರಾಗಿದ್ದರೆ, ಈ ಕೋಳಿ ಮತ್ತು ಕುರಿ ಮಾಂಸದಿಂದ ಅನೇಕ ರೀತಿಯ ಪಾಕವಿಧಾನಗಳನ್ನು ಅನುಸರಿಸಿ ವಿಭಿನ್ನ ರೀತಿಯ ಸ್ವಾದಿಷ್ಟಕರವಾದ ಅಡುಗೆಗಳನ್ನು ಮಾಡಿಕೊಳ್ಳಬಹುದು. ನೀವು ಈ ಚಿಕನ್ ಕರಿ ಗಳಲ್ಲಿ ಸ್ವಲ್ಪ ವಿಭಿನ್ನತೆಯನ್ನು ಹುಡುಕುತ್ತಿದ್ದರೆ, ನೀವು ರಮನ್ನುಣ್ಣಿ ನಾಯರ್ ಅವರು ಇಲ್ಲಿ ತೋರಿಸಿರುವ ಪಾಕವಿಧಾನವನ್ನು ಅನುಸರಿಸಿ ದಕ್ಷಿಣ ಭಾರತೀಯ ‘ಘೀ ಚಿಕನ್ ಕರಿ’ ಮಾಡಿಕೊಂಡು ಆನಂದಿಸಿರಿ.

ಘೀ ಚಿಕನ್ ಕರಿ

ಘೀ ಚಿಕನ್ ಕರಿ

  • Share this:
ನೀವು ನಾನ್ ವೆಜ್ (Non Veg) (ಮಾಂಸಾಹಾರ) ಪ್ರಿಯರಾಗಿದ್ದರೆ, ಈ ಕೋಳಿ (Chicken) ಮತ್ತು ಕುರಿ ಮಾಂಸದಿಂದ (Mutton) ಅನೇಕ ರೀತಿಯ ಪಾಕವಿಧಾನಗಳನ್ನು (Recipe) ಅನುಸರಿಸಿ ವಿಭಿನ್ನ ರೀತಿಯ (Different way) ಸ್ವಾದಿಷ್ಟಕರವಾದ ಅಡುಗೆಗಳನ್ನು (Delicious cooking) ಮಾಡಿಕೊಳ್ಳಬಹುದು. ನೀವು ಈ ಚಿಕನ್ ಕರಿ ಗಳಲ್ಲಿ (Chicken Curry) ಸ್ವಲ್ಪ ವಿಭಿನ್ನತೆಯನ್ನು ಹುಡುಕುತ್ತಿದ್ದರೆ, ನೀವು ರಮನ್ನುಣ್ಣಿ ನಾಯರ್ (Ramannunni Nair)ಅವರು ಇಲ್ಲಿ ತೋರಿಸಿರುವ ಪಾಕವಿಧಾನವನ್ನು ಅನುಸರಿಸಿ ದಕ್ಷಿಣ ಭಾರತೀಯ ‘ಘೀ ಚಿಕನ್ ಕರಿ’ (South Indian Time Ghee Chicken Curry) ಮಾಡಿಕೊಂಡು ಆನಂದಿಸಿರಿ.

ಇವರು ಟೊಮೇಟೊವನ್ನು ಭಾರತೀಯ ಮಸಾಲೆಗಳೊಂದಿಗೆ ಜೋಡಿಸಿ ಸರಳವಾದ ಮತ್ತು ಸೊಗಸಾದ ‘ಘೀ ಚಿಕನ್ ಕರಿ’ ಯನ್ನು ತಯಾರಿಸುತ್ತಾರೆ. ಇದನ್ನು ವಾರದ ಯಾವುದೇ ದಿನ ಬೇಕಾದರೂ ನೀವು ಹಬೆಯಲ್ಲಿ ಬೇಯಿಸಿದ ಅನ್ನ ಅಥವಾ ರೊಟ್ಟಿಗಳೊಂದಿಗೆ ಸವಿಯಬಹುದು.

ಇದಕ್ಕೆ ಬೇಕಾಗುವ ಪದಾರ್ಥಗಳು:


750 ಗ್ರಾಂ ಚಿಕನ್ ಅನ್ನು ಸ್ವಚ್ಛಗೊಳಿಸಿ 10 ರಿಂದ 12 ತುಂಡುಗಳಾಗಿ ಕತ್ತರಿಸಿಕೊಳ್ಳಿರಿ.

4 ಚಮಚ ಕೊತ್ತಂಬರಿ ಬೀಜ

5 ರಿಂದ 6 ಒಣ ಕೆಂಪು ಮೆಣಸಿನಕಾಯಿ

1/2 ಟೀ ಸ್ಪೂನ್ ಕರಿಮೆಣಸು

3 ಟೊಮೆಟೊಗಳು

1/2 ತುಂಡು ಸಿಪ್ಪೆ ಸುಲಿದ ಶುಂಠಿ

2 ರಿಂದ 3 ಸಿಪ್ಪೆ ಸುಲಿದ ಬೆಳ್ಳುಳ್ಳಿ ಎಸಳುಗಳು

2 ರಿಂದ 3 ಹಸಿಮೆಣಸಿನಕಾಯಿಗಳು

1/2 ಟೀ ಸ್ಪೂನ್ ಅರಿಶಿನ ಅಥವಾ ಅರಿಶಿನ ಪುಡಿ

1 ಟೀ ಸ್ಪೂನ್ ಕಾಶ್ಮೀರಿ ಕೆಂಪು ಮೆಣಸಿನ ಪುಡಿ

4 ರಿಂದ 5 ನುಣ್ಣಗೆ ಕತ್ತರಿಸಿದ ಶಾಲೋಟ್ ಗಳು ಮತ್ತು 1 ದೊಡ್ಡ ಈರುಳ್ಳಿ

1 ಟೀ ಸ್ಪೂನ್ ಕತ್ತರಿಸಿದ ಹಸಿರು ಧನಿಯಾ ಅಥವಾ ಕೊತ್ತಂಬರಿ ಸೊಪ್ಪು

4 ಟೇಬಲ್ ಸ್ಪೂನ್ ಎಣ್ಣೆ

1 ಕಪ್ ನೀರು

1 ರಿಂದ 2 ಚಮಚ ತುಪ್ಪ

ಕರಿಬೇವಿನ ಎಲೆಗಳು

ರುಚಿಗೆ ತಕ್ಕಷ್ಟು ಉಪ್ಪು

ಇದನ್ನು ಮಾಡಿಕೊಳ್ಳುವ ವಿಧಾನ:
ಮೊದಲಿಗೆ ಒಂದು ತವಾದಲ್ಲಿ ಕೊತ್ತಂಬರಿ ಬೀಜಗಳು, ಕೆಂಪು ಮೆಣಸಿನಕಾಯಿ, ಕಾಳು ಮೆಣಸುಗಳನ್ನು 2 ನಿಮಿಷಗಳ ಕಾಲ ಡ್ರೈ ರೋಸ್ಟ್ ಮಾಡಿ. ನಂತರ ಅದನ್ನು ಶಾಖದಿಂದ ತೆಗೆಯಿರಿ, ತಣ್ಣಗಾಗಿಸಿ ಮತ್ತು ಮಿಕ್ಸರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಬ್ಲಾಂಚ್ ಮಾಡಿದ ಟೊಮೆಟೊಗಳನ್ನು ನುಣ್ಣಗೆ ಕತ್ತರಿಸಿ ಮತ್ತು ರುಬ್ಬಿದ ಮಸಾಲಾಗೆ ಸೇರಿಸಿ ಮತ್ತು ನಯವಾದ ಪೇಸ್ಟ್ ಗೆ ಮಿಶ್ರಣ ಮಾಡಿ ಸ್ವಲ್ಪ ಕಾಲದವರೆಗೆ ಪಕ್ಕಕ್ಕೆ ಇರಿಸಿಕೊಳ್ಳಿರಿ.

ಇದನ್ನೂ ಓದಿ:  Quick Breakfast: ಈ 5 ಸೂಪರ್ ಫಾಸ್ಟ್ ರೆಸಿಪಿ ನೋಡಿ, 15 ನಿಮಿಷದಲ್ಲಿ ಬೆಳಗಿನ ತಿಂಡಿ ರೆಡಿಯಾಗುತ್ತೆ

ನಂತರ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿಯನ್ನು ಗಾರೆಯಲ್ಲಿ ಜಜ್ಜಿ ನುಣ್ಣಗೆ ಪೇಸ್ಟ್ ಮಾಡುವವರೆಗೆ ಹುರಿಯಿರಿ. ಕಡಾಯಿಯಲ್ಲಿ, ಎಣ್ಣೆಯನ್ನು ಬಿಸಿ ಮಾಡಿ. ಶುಂಠಿ, ಬೆಳ್ಳುಳ್ಳಿ, ಮೆಣಸಿನ ಪೇಸ್ಟ್ ಅನ್ನು ಅದಕ್ಕೆ ಸೇರಿಸಿಕೊಂಡು ಅದನ್ನೆಲ್ಲಾ ಒಂದು ನಿಮಿಷ ಚೆನ್ನಾಗಿ ಹುರಿಯಿರಿ.

ನಂತರ ಚಿಕನ್ ತುಂಡುಗಳನ್ನು ಅದಕ್ಕೆ ಸೇರಿಸಿಕೊಳ್ಳಿರಿ. ಅದಕ್ಕೆ ಅರಿಶಿನ ಮತ್ತು ಉಪ್ಪನ್ನು ಸೇರಿಸಿಕೊಳ್ಳಿರಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿರಿ. ಮಧ್ಯಮ ಶಾಖದಲ್ಲಿ ಐದು ನಿಮಿಷಗಳ ಕಾಲ ಬೇಯಿಸಿಕೊಳ್ಳಿರಿ. ಟೊಮೆಟೊ ಮಸಾಲಾ ಪೇಸ್ಟ್ ಸೇರಿಸಿ ಅದನ್ನು ಚೆನ್ನಾಗಿ ಕಲಕಿ. 1 ಕಪ್ ನೀರನ್ನು ಅದಕ್ಕೆ ಸೇರಿಸಿ ಮತ್ತು ಮಿಶ್ರಣ ಮಾಡಿ.

ಇದನ್ನೂ ಓದಿ:   Bread Breakfast: ಬ್ರೇಕ್​ಫಾಸ್ಟ್​ಗೆ ದಿನವೂ ಬಿಳಿಬ್ರೆಡ್? ಹೃದಯದ ಆರೋಗ್ಯಕ್ಕೆ ತುಂಬಾ ಡೇಂಜರ್ 

ಉಪ್ಪನ್ನು ಪರಿಶೀಲಿಸಿ ಮತ್ತು ಅಗತ್ಯವಿದ್ದರೆ ಇನ್ನಷ್ಟು ಸೇರಿಸಿ. ಕೆಂಪು ಬಣ್ಣದ ಗ್ರೇವಿಯನ್ನು ಪಡೆಯಲು ಕಾಶ್ಮೀರಿ ಮೆಣಸಿನ ಪುಡಿಯನ್ನು ಸೇರಿಸಿ 10 ನಿಮಿಷಗಳ ಕಾಲ ಕಡಿಮೆ ಶಾಖದಲ್ಲಿ ಮುಚ್ಚಿ ಅದನ್ನು ಬೇಯಿಸಿ. ಇನ್ನೊಂದು ಕಡೆ ಟೆಂಪರಿಂಗ್ ಪ್ಯಾನ್ ನಲ್ಲಿ, ತುಪ್ಪವನ್ನು ಬಿಸಿ ಮಾಡಿ. ಕರಿಬೇವಿನ ಎಲೆಗಳು ಮತ್ತು ಕತ್ತರಿಸಿದ ಈರುಳ್ಳಿಯನ್ನು ಸೇರಿಸಿ. ಈರುಳ್ಳಿ ಬಣ್ಣ ಬದಲಾಗುವವರೆಗೆ 1 ರಿಂದ 2 ನಿಮಿಷಗಳ ಕಾಲ ಹುರಿಯಿರಿ. ನಂತರ ಇದನ್ನು ಚಿಕನ್ ಗ್ರೇವಿಗೆ ಸೇರಿಸಿ ಮತ್ತು ಮಿಶ್ರಣ ಮಾಡಿ.

ಹಬೆಯಲ್ಲಿ ಬೇಯಿಸಿದ ಅನ್ನ, ರೊಟ್ಟಿಗಳು, ಮಲಬಾರ್ ಪರೋಟಾಗಳು ಅಥವಾ ಬ್ರೆಡ್ ಜೊತೆಗೆ ಈ ಘೀ ಚಿಕನ್ ಕರಿಯನ್ನು ಬಿಸಿ ಬಿಸಿಯಾಗಿ ಬಡಿಸಿ. ಸೌತ್ ಇಂಡಿಯನ್ ಘೀ ಚಿಕನ್ ಕರಿ ಪಾಕವಿಧಾನದ ಕಡಿಮೆ ಕ್ಯಾಲೋರಿ ಆವೃತ್ತಿಗಾಗಿ, ದಯವಿಟ್ಟು ತುಪ್ಪ ಮತ್ತು ಎಣ್ಣೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
Published by:Ashwini Prabhu
First published: