Hyderabadi Biryani: ನಟ ಮಹೇಶ್ ಬಾಬು ಫೆವರೇಟ್ ಹೈದರಾಬಾದ್​ ಬಿರಿಯಾನಿ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ

ನಟ ಮಹೇಶ್ ಬಾಬು ಅವರ ಫೆವರೇಟ್ ಹೈದರಾಬಾದಿ ಬಿರಿಯಾನಿ ಹೇಗೆ ಮಾಡೋದು ಅಂತ ತಿಳಿದುಕೊಳ್ಳಬೇಕೇ? ಇಲ್ಲಿದೆ ನೋಡಿ ಬೇಕಾಗುವ ಸಾಮಗ್ರಿಗಳ ಪಟ್ಟಿ ಮತ್ತು ಇದನ್ನು ಮಾಡುವ ವಿಧಾನ.

ಹೈದರಾಬಾದಿ ಬಿರಿಯಾನಿ

ಹೈದರಾಬಾದಿ ಬಿರಿಯಾನಿ

  • Share this:
ತೆಲುಗು ಚಿತ್ರೋದ್ಯಮದ ಪ್ರಿನ್ಸ್ ಅಂತಾನೆ ಖ್ಯಾತಿ ಪಡೆದಿರುವ ನಟ ಮಹೇಶ್ ಬಾಬು (Mahesh Babu) ಅವರಿಗೆ ಏನು ಇಷ್ಟ ಅಂತ ಅವರ ಅಭಿಮಾನಿಗಳಿಗೆ ಕೇಳಿದರೆ, ಅವರ ಅಭಿಮಾನಿಗಳು ಥಟ್ಟನೆ ಹೇಳುವುದು ಹೈದರಾಬಾದಿ ಬಿರಿಯಾನಿ (Hyderabadi Biryani) ಅಂತ. ಹೌದು.. ಖುದ್ದು ಮಹೇಶ್ ಬಾಬು ಅವರೇ ಅನೇಕ ಬಾರಿ ತಮಗೆ ಹೈದರಾಬಾದಿ ಬಿರಿಯಾನಿ ಎಂದರೆ ತುಂಬಾನೇ ಇಷ್ಟ (favorite) ಅಂತ ಹೇಳಿಕೊಂಡಿದ್ದಾರೆ. ಬನ್ನಿ ಹಾಗಾದರೆ ನಿಮಗೂ ಈ ಬಿರಿಯಾನಿ ಹೇಗೆ ಮಾಡೋದು ಅಂತ ತಿಳಿದುಕೊಳ್ಳಬೇಕೆಂದು ಕುತೂಹಲವಿದ್ದರೆ, ಇಲ್ಲಿದೆ ನೋಡಿ ಬೇಕಾಗುವ ಸಾಮಗ್ರಿಗಳ (Ingredients) ಪಟ್ಟಿ ಮತ್ತು ಇದನ್ನು ಮಾಡುವ ವಿಧಾನ.

ಹೈದರಾಬಾದಿ ಬಿರಿಯಾನಿ ಮಾಡಲು ಬೇಕಾದ ಸಾಮಗ್ರಿಗಳು:

  • 500 ಗ್ರಾಂ ಮೂಳೆ ಇಲ್ಲದ ಚಿಕನ್

  • 1 ಕಪ್ ಮೊಸರು

  • 2 ಕಪ್ ಬಾಸ್ಮತಿ ಅಕ್ಕಿ

  • ಅರ್ಧ ಕಪ್ ನಷ್ಟು ಈರುಳ್ಳಿ ಪೇಸ್ಟ್

  • ಒಂದೂವರೆ ಟೇಬಲ್ ಸ್ಪೂನ್ ಶುಂಠಿ-ಬೆಳ್ಳುಳ್ಳಿ ಪೇಸ್ಟ್

  • 4 ರಿಂದ 5 ಹಸಿ ಮೆಣಸಿನಕಾಯಿ

  • 2 ಟೇಬಲ್ ಸ್ಪೂನ್ ನಿಂಬೆಹಣ್ಣಿನ ರಸ

  • 250 ಗ್ರಾಂ ನಷ್ಟು ಈರುಳ್ಳಿ

  • ಅರ್ಧ ಕಪ್ ಎಣ್ಣೆ

  • 4 ಟೇಬಲ್ ಸ್ಪೂನ್ ನಷ್ಟು ತುಪ್ಪ

  • ಕಾಲು ಕಪ್ ಭಾಗದಷ್ಟು ಕೊತ್ತಂಬರಿ ಎಲೆಗಳು

  • ಕಾಲು ಕಪ್ ಭಾಗದಷ್ಟು ಪುದಿನಾ ಎಲೆಗಳು

  • ರುಚಿಗೆ ತಕ್ಕಷ್ಟು ಉಪ್ಪು


ಹೈದರಾಬಾದಿ ಬಿರಿಯಾನಿ ಮಾಡಲು ಬೇಕಾದ ಮಸಾಲೆ ಪದಾರ್ಥಗಳು:

  • 1 ಟೇಬಲ್ ಸ್ಪೂನ್ ಅರಿಶಿನ ಪುಡಿ

  • ಅರ್ಧ ಟೇಬಲ್ ಸ್ಪೂನ್ ಕೇಸರಿ

  • ಕಾಲು ಕಪ್ ಹಾಲು

  • 4 ಲವಂಗಗಳು

  • 2 ಇಂಚಿನ ದಾಲ್ಚಿನ್ನಿ ಕಡ್ಡಿ

  • 7 ಹಸಿರು ಏಲಕ್ಕಿ

  • ಅರ್ಧ ಟೇಬಲ್ ಸ್ಪೂನ್ ಪೆಪ್ಪರ್ ಕಾರ್ನ್ ಗಳು

  • ಒಂದು ಟೇಬಲ್ ಸ್ಪೂನ್ ನಷ್ಟು ಜೀರಿಗೆ


ಇದನ್ನೂ ಓದಿ: Breakfast Recipe: ಮಕ್ಕಳ ಫೇವರಿಟ್​ ಭೇಲ್​ ಪುರಿ ಸ್ಯಾಂಡ್​ವಿಚ್​ ಮನೆಯಲ್ಲಿಯೇ ಮಾಡಿ ಸವಿಯಿರಿ

ಹೈದರಾಬಾದಿ ಬಿರಿಯಾನಿ ಮಾಡುವ ವಿಧಾನ:
ಹಂತ 1: ಮೊದಲಿಗೆ ನೀವು ತಂದಂತಹ ಚಿಕನ್ ಅನ್ನು ಚೆನ್ನಾಗಿ ತೊಳೆದುಕೊಂಡು, ಅದನ್ನು ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ, ಹಸಿಮೆಣಸಿನಕಾಯಿಗಳನ್ನು ಹಾಕಿಕೊಂಡು ಅರಿಶಿನದ ಪುಡಿ, ಉಪ್ಪು ಮತ್ತು ಕೊತ್ತಂಬರಿ ಎಲೆಗಳನ್ನು ಸೇರಿಸಿಕೊಂಡು ಚೆನ್ನಾಗಿ ಕಲಿಸಿಟ್ಟುಕೊಳ್ಳಿ.

ಹಂತ 2: ಎರಡನೆಯ ಹಂತದಲ್ಲಿ ನೀವು ಇರಿಸಿಕೊಂಡಿರುವ ಎಲ್ಲಾ ಮಸಾಲೆ ಪದಾರ್ಥಗಳನ್ನು ಚೆನ್ನಾಗಿ ಕಡಿಮೆ ಬೆಂಕಿಯಲ್ಲಿ ಹುರಿದುಕೊಂಡು ಅವುಗಳನ್ನು ಮಿಕ್ಸರ್ ಜಾರ್ ನಲ್ಲಿ ಹಾಕಿಕೊಂಡು ಪುಡಿ ಮಾಡಿಕೊಳ್ಳಿರಿ.

ಹಂತ 3: ಕಲಿಸಿಕೊಂಡು ಇಟ್ಟಂತಹ ಚಿಕನ್ ನಲ್ಲಿ 1-2 ಟೇಬಲ್ ಸ್ಪೂನ್ ನಷ್ಟು ಮಸಾಲೆ ಪದಾರ್ಥಗಳ ಪುಡಿಯನ್ನು ಸೇರಿಸಿಕೊಳ್ಳಿರಿ. ಈ ಮಿಶ್ರಣದಲ್ಲಿ ಚಿಕನ್ ನ ತುಂಡುಗಳು ಚೆನ್ನಾಗಿ ಮ್ಯಾರಿನೆಟ್ ಮಾಡಿಕೊಳ್ಳಿರಿ.

ಇದನ್ನೂ ಓದಿ: Coconut Simple Recipes: ತೆಂಗು ಇದ್ರೆ ಮಂಗನೂ ಅಡುಗೆ ಮಾಡುತ್ತಂತೆ! ತೆಂಗಿನಕಾಯಿಯ ಸಿಂಪಲ್ ರೆಸಿಪಿ ಇಲ್ಲಿದೆ!

ಹಂತ 4: ಹೀಗೆ ಕಲಿಸಿಕೊಂಡು ಇಟ್ಟಿರುವ ಚಿಕನ್ ಅನ್ನು ಕೆಲವು ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿರಿಸಿ.

ಹಂತ 5: ಅಕ್ಕಿಯನ್ನು 20 ನಿಮಿಷಗಳ ಕಾಲ ನೆನಸಿಡಿ ಮತ್ತು ನಂತರ ಅದನ್ನು ಚೆನ್ನಾಗಿ ತೊಳೆದುಕೊಂಡು ಅದರಲ್ಲಿ ನೀರು, 2-3 ಲವಂಗಗಳು, 2-3 ಹಸಿರು ಏಲಕ್ಕಿ, 1 ಇಂಚಿನ ದಾಲ್ಚಿನ್ನಿ ಕಡ್ಡಿಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಸ್ವಲ್ಪವೇ ಬೇಯಿಸಿಕೊಳ್ಳಿ.

ಹಂತ 6: ಒಂದು ಬಾಣಲೆಯಲ್ಲಿ ಈರುಳ್ಳಿಗಳನ್ನು ಚೆನ್ನಾಗಿ ಹುರಿದುಕೊಂಡು ಪಕ್ಕದಲ್ಲಿ ಇರಿಸಿಕೊಳ್ಳಿರಿ. ಬಾಣಲೆಯಲ್ಲಿ 1-2 ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಿಕೊಂಡು ಕಡಿಮೆ ಉರಿಯಲ್ಲಿ ಆ ಫ್ರಿಡ್ಜ್ ನಲ್ಲಿ ಇರಿಸಿಕೊಂಡ ಮ್ಯಾರಿನೆಟ್ ಮಾಡಿದ ಚಿಕನ್ ಅನ್ನು ಅದರಲ್ಲಿ ಹಾಕಿಕೊಳ್ಳಿರಿ.

ಹಂತ 7: ಅರ್ಧದಷ್ಟು ಆ ಸ್ವಲ್ಪ ಬೇಯಿಸಿಕೊಂಡ ಅನ್ನವನ್ನು ಚಿಕನ್ ಮೇಲೆ ಹಾಕಿಕೊಂಡು, ಅದರ ಮೇಲೆ 1 ಟೇಬಲ್ ಸ್ಪೂನ್ ತುಪ್ಪವನ್ನು, 1 ಟೇಬಲ್ ಸ್ಪೂನ್ ಪುದಿನಾ ಎಲೆಗಳು, 1 ಟೇಬಲ್ ಸ್ಪೂನ್ ಕೊತ್ತಂಬರಿ ಎಲೆಗಳು, ಕೇಸರಿ ಮತ್ತು ಹಾಲನ್ನು ಹಾಕಿಕೊಂಡು ಪೂರ್ತಿಯಾಗಿ ಬೆಯಲು ಬಿಡಿ.

ಹಂತ 8: ನಂತರ ಅಲ್ಯೂಮಿನಿಯಂ ಫಾಯ್ಲ್ ಅನ್ನು ತೆಗೆದುಕೊಂಡು ಆ ಪ್ಯಾನ್ ಅಥವಾ ಕಡಾಯಿಯನ್ನು ಪೂರ್ತಿಯಾಗಿ ಮುಚ್ಚಿರಿ. ಮಧ್ಯಮ ಉರಿಯಲ್ಲಿ ಇರಿಸಿ 8-10 ನಿಮಿಷಗಳ ಕಾಲದವರೆಗೆ ಮತ್ತು ನಂತರ 15-20 ನಿಮಿಷಗಳ ಕಾಲದವರೆಗೆ ಕಡಿಮೆ ಉರಿಯಲ್ಲಿ ಬಿರಿಯಾನಿ ಬೆಯಲು ಬಿಡಬೇಕು.

ಇದನ್ನೂ ಓದಿ: Breakfast Recipe: ಗಡಿಬಿಡಿಯಲ್ಲೂ ಮಾಡ್ಬೋದು ಈ ಪಾಪಡ್​ ದೋಸೆ, ಟೇಸ್ಟ್​ ಮಾತ್ರ ಸೂಪರ್

ಕೊನೆಯದಾಗಿ ಬಿರಿಯಾನಿಯನ್ನು ಸ್ಟೋವ್ ನಿಂದ ಕೆಳಗಿಳಿಸಿದ ನಂತರ ಸುಮಾರು 10-15 ನಿಮಿಷಗಳ ಕಾಲದವರೆಗೆ ಹಾಗೆ ಇಡಬೇಕು. ನಂತರ ಆ ಪ್ಯಾನ್ ಅಥವಾ ಕಡಾಯಿ ಮೇಲಿರುವ ಅಲ್ಯೂಮಿನಿಯಂ ಫಾಯ್ಲ್ ಅನ್ನು ತೆಗೆಯಿರಿ. ಬಿರಿಯಾನಿ ಮೇಲೆ ಕೆಲವು ಚೆನ್ನಾಗಿ ಗರಿಗರಿಯಾಗಿ ಹುರಿದುಕೊಂಡ ಈರುಳ್ಳಿಯನ್ನು ಹಾಕಿಕೊಳ್ಳಿ. ಇಷ್ಟು ಮಾಡಿದರೆ ನಿಮ್ಮ ಹೈದರಾಬಾದಿ ಬಿರಿಯಾನಿ ಸವಿಯಲು ಸಿದ್ದವಾಗಿರುತ್ತದೆ.
Published by:Ashwini Prabhu
First published: