• Home
  • »
  • News
  • »
  • lifestyle
  • »
  • Vangi Bath Upma: ನಿಮ್ಗೆ ರವೆ ಉಪ್ಪಿಟ್ಟು ಅಂದ್ರೆ ಇಷ್ಟ ಇಲ್ವಾ? ಹಾಗದ್ರೆ ಟ್ರೈ ಮಾಡಿ ಡಿಫರೆಂಟ್ ರವೆ ವಾಂಗೀಬಾತ್ ಉಪ್ಮಾ!

Vangi Bath Upma: ನಿಮ್ಗೆ ರವೆ ಉಪ್ಪಿಟ್ಟು ಅಂದ್ರೆ ಇಷ್ಟ ಇಲ್ವಾ? ಹಾಗದ್ರೆ ಟ್ರೈ ಮಾಡಿ ಡಿಫರೆಂಟ್ ರವೆ ವಾಂಗೀಬಾತ್ ಉಪ್ಮಾ!

ರವೆ ವಾಂಗೀಬಾತ್

ರವೆ ವಾಂಗೀಬಾತ್

ಉಪ್ಪಿನಲ್ಲಿ ತರಕಾರಿ ಉಪ್ಪಿಟ್ಟು, ಖಾರಬಾತ್, ಬಿಳಿ ರವೆ ಉಪ್ಮಾ, ಬನಸಿ ರವೆ ಉಪ್ಮಾ ಹೀಗೆ ನಾನಾ ವೆರೈಟಿಗಳಿದೆ. ಆದರೆ ಇದೆಲ್ಲದ್ದಕ್ಕಿಂತ ರುಚಿಕರವಾದ ಉಪಿಟ್ಟು ಅಂದರೆ ರವೆ ವಾಂಗೀಬಾತ್ ಉಪ್ಪಿಟ್ಟು. ಹೌದು ರವೆ ಉಪಯೋಗಿಸಿ ಮಾಡುವುದೇ ವಾಂಗೀಬಾತ್ ರವೆ ಉಪ್ಪಿಟ್ಟು. ಇದು ಕೊಂಚ ಖಾರಬಾತ್ ರುಚಿ​ ನೀಡದರೂ ಸಖತ್ ಟೆಸ್ಟಿಯಾಗಿರುತ್ತದೆ.

ಮುಂದೆ ಓದಿ ...
  • Share this:

ಎಷ್ಟೋ ಮಂದಿಗೆ ಉಪ್ಪಿಟ್ಟು​ ಅಂದರೆ ಇಷ್ಟವಿರುವುದಿಲ್ಲ. ಹೀಗಿದ್ದರೂ ಕೆಲ ಮನೆಗಳಲ್ಲಿ ಬಹು ಬೇಗ ಆಗುವ ತಿಂಡಿ ಉಪ್ಪಿಟ್ಟು ಎಂದು ಮಾಡುತ್ತಲೇ ಇರುತ್ತಾರೆ. ಈ ವೇಳೆ ಅನಿವಾರ್ಯದಿಂದ ಮನೆಮಂದಿ ತಿನ್ನಲೇ ಬೇಕಾಗುತ್ತದೆ. ಆದರೆ ಒಮ್ಮೆ ಉಪ್ಪಿಟ್ಟಿನಲ್ಲಿ ಡಿಫರೆಂಟ್​ ರೆಸಿಪಿ ಟ್ರೈ ಮಾಡಿ ಖಂಡಿತ ಉಪ್ಮಾ ಬೇಡ ಎಂದು ನೀವು ಹೇಳುವುದಿಲ್ಲ. ಉಪ್ಪಿನಲ್ಲಿ ತರಕಾರಿ ಉಪ್ಪಿಟ್ಟು, ಖಾರಬಾತ್, ಬಿಳಿ ರವೆ ಉಪ್ಮಾ, ಬನಸಿ ರವೆ ಉಪ್ಮಾ ಹೀಗೆ ನಾನಾ ವೆರೈಟಿಗಳಿದೆ. ಆದರೆ ಇದೆಲ್ಲದ್ದಕ್ಕಿಂತ ರುಚಿಕರವಾದ ಉಪಿಟ್ಟು ಅಂದರೆ ರವೆ ವಾಂಗೀಬಾತ್ ಉಪ್ಪಿಟ್ಟು. ಹೌದು ರವೆ ಉಪಯೋಗಿಸಿ ಮಾಡುವುದೇ ವಾಂಗೀಬಾತ್ ರವೆ ಉಪ್ಪಿಟ್ಟು. ಇದು ಕೊಂಚ ಖಾರಬಾತ್ ರುಚಿ​ ನೀಡದರೂ ಸಖತ್ ಟೆಸ್ಟಿಯಾಗಿರುತ್ತದೆ. ಮನೆಯಲ್ಲೇ ಬಹಳ ಸರಳವಾದ ಈ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ.


do you know how to make rava vangi bath recipe


ರವೆ ವಾಂಗೀಬಾತ್ ಮಾಡಲು ಬೇಕಾಗುವ ಸಾಮಾಗ್ರಿಗಳು


  • 1 ಕಪ್ ರವೆ

  • ¼ ಕೆಜಿ ಬಿಳಿ ಬದನೆಕಾಯಿ

  • 100 ಗ್ರಾಂ ಹಸಿ ಬಟಾಣಿ

  • 3 ಹಸಿ ಮೆಣಸಿನ ಕಾಯಿ

  • 10 ಎಲೆ ಹರಬೆ ಹೂ

  • 1 ಟೊಮೆಟೊ

  • 1 ಕಪ್ ಕೊತ್ತಂಬರಿ ಸೊಪ್ಪು

  • ½ ನಿಂಬೆ ಹಣ್ಣು

  • 2 ಈರುಳ್ಳಿ

  • ½ ಚಮಚ ಸಾಸಿವೆ

  • 1 ಸ್ಪೋನ್ ವಾಂಗೀಬಾತ್ ಮಸಾಲ

  • 10 ಗೋಡಂಬಿ

  • 1/2 ಚಮಚ ಉದ್ದಿನ ಬೇಳೆ

  • 1/2 ಚಮಚ ಕಡಲೆ ಬೇಳೆ

  • ರುಚಿಗೆ ತಕ್ಕಷ್ಟು ಉಪ್ಪು

  • 1/4 ಚಮಚ ಬೆಲ್ಲ

  • 1 ಟೇಬಲ್ ಸ್ಪೂನ್ ತುಪ್ಪ

  • 3 ಟೇಬಲ್ ಸ್ಪೂನ್ ಎಣ್ಣೆ

  • 1 ಕಪ್​ರವೆಗೆ ಎರಡೂವರೆ ಕಪ್ ನೀರು


do you know how to make rava vangi bath recipe
ರವೆ ವಾಂಗೀಬಾತ್


ರವೆ ವಾಂಗೀಬಾತ್ ಮಾಡುವ ವಿಧಾನ


  • ಮೊದಲು ಒಲೆ ಮೇಲೆ ಒಂದು ಪ್ಯಾನ್ ಇಡಿ. ಪ್ಯಾನ್​ಗೆ ಒಂದು ಕಪ್ ಮೀಡಿಯಂ ರವೆ ಸುರಿದು ಚೆನ್ನಾಗಿ ಉರಿದು ಕೊಳ್ಳಿ. ಈ ವೇಳೆ ಒಂದು ಟೇಬಲ್ ಸ್ಪೂನ್ ಎಣ್ಣೆ ಹಾಕಿಕೊಂಡು ಉರಿದರೆ ರವೆ ಮತ್ತಷ್ಟು ಬಿಡಿಬಿಡಿಯಾಗಿ ಚೆನ್ನಾಗಿರುತ್ತದೆ.

  • ಉರಿದ ರವೆಯನ್ನು ಒಂದು ಪ್ಲೇಟ್​ನಲ್ಲಿ ಸುರಿದು ಕೊಳ್ಳಿ. ನಂತರ ಪ್ಯಾನ್​ಗೆ 2 ಟೇಬಲ್ ಸ್ಪೂನ್​ನಷ್ಟು ಎಣ್ಣೆ ಹಾಕಿ, ಅದಕ್ಕಿ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಹಾಕಿ ಕೆಂಪಾಗುವವರೆಗೂ ಉರಿಯಬೇಕು. ನಂತರ ಅದಕ್ಕೆ ಈರುಳ್ಳಿ, ಹಸಿ ಮೆಣಸಿನ ಕಾಯಿ, ಕರಿಬೆ ಹೂ ಹಾಕಿ ಮತ್ತೆ ಉರಿಬೇಕು.

  • ಬಳಿಕ ಇದಕ್ಕೆ ನೆನೆಸಿಟ್ಟ ಬದನೆ ಕಾಯಿ, ಬಟಾಣಿ, ಟೊಮೆಟೊ, ಕೊಂಚ ಉಪ್ಪು ಬೆರೆಸಿ ಬೇಯಿಸಬೇಕು. ಬದನೆಕಾಯಿ ಬಟಾಣಿ ಬೆಂದ ಬಳಿಕ ಅದಕ್ಕೆ ವಾಂಗೀಬಾತ್ ಪೌಡರ್, ಸ್ವಲ್ಪ ಅರಿಶಿನ ಹಾಕಿ ಮಿಕ್ಸ್ ಮಾಡಿ ಒಂದು ನಿಮಿಷ ಬೇಯಿಸಬೇಕು.


do you know how to make rava vangi bath recipe

  • ಸ್ವಲ್ಪ ಮಸಾಲ ಎಣ್ಣೆಯಲ್ಲಿ ಬೆಂದ ಬಳಿಕ 2.1/4 ಕಪ್ ನೀರನ್ನು ಹಾಕಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು,1/2 ಸ್ಪೂನ್ ಬೆಲ್ಲ, ಅರ್ಧನಿಂಬೆ ಹಣ್ಣಿನ ರಸ ಹಾಕಿ ನೀರನ್ನು ಕುದಿಸಬೇಕು.

  • ನೀರು ಕುದಿದ ಬಳಿಕ ಉರಿದಿಟ್ಟುಕೊಂಡಿದ್ದ ರವೆಯನ್ನು ಹಾಕುತ್ತಾ ಸೌಟು ಹಿಡಿದು​ ತಿರುವುತ್ತಿರಬೇಕು. ನಂತರ ಮುಚ್ಚುಳ ಹಾಕಿ 3 ರಿಂದ 4 ನಿಮಿಷ ಬೇಯಿಸಿಕೊಳ್ಳಬೇಕು. ಬಳಿಕ ಸ್ಟಾವ್ ಆಫ್​ ಮಾಡಿ ಕೊತ್ತಂಬರಿ ಸೊಪ್ಪು, ಒಂದು ಟೇಬಲ್ ಸ್ಪೂನ್ ತುಪ್ಪ ಹಾಕಬೇಕು.

  • ನಂತರ ಮತ್ತೊಂದು ಪುಟ್ಟ ಪಾತ್ರೆಗೆ ತುಪ್ಪ ಹಾಕಿ, ಅದಕ್ಕೆ ಗೋಡಂಬಿ ಹಾಕಿ ಕರಿದು, ವಾಂಗೀಬಾತ್​ ಉಪ್ಪಿಟ್ಟಿನ ಮೇಲೆ ಉದುರಿಸಿದರೆ, ರುಚಿಕರವಾದ ರವೆ ವಾಂಗೀಬಾತ್ ಸವಿಯಲು ರೆಡಿ..

Published by:Monika N
First published: