Peeling Potatoes: ಸುಲಭವಾಗಿ ಆಲೂಗಡ್ಡೆ ಸಿಪ್ಪೆ ತೆಗೆಯುವುದು ಹೇಗೆ ಗೊತ್ತೇ? ಈ ಟ್ರಿಕ್ ಬಳಸಿ

ಅನೇಕ ಕೆಲಸಗಳಿಂದ ನಾವು ಬೆಳಗ್ಗೆ ತುಂಬಾನೇ ಬ್ಯುಸಿ ಆಗಿರುತ್ತೇವೆ ಮತ್ತು ಇಂತಹ ಸಮಯದಲ್ಲಿ ಯಾವುದಾದರೂ ಒಂದು ಕೆಲಸ ತುಂಬಾ ಹೊತ್ತು ತೆಗೆದುಕೊಳ್ಳುತ್ತಿದ್ದರೆ, ನಾವು ಅದನ್ನು ಸುಲಭ ಮಾಡಿಕೊಳ್ಳಲು ಯಾವುದಾದರೂ ಒಂದು ಟ್ರಿಕ್ ಗಳನ್ನು ಬಳಸುತ್ತೇವೆ. ಇದೇ ರೀತಿಯ ಒಂದು ಟ್ರಿಕ್ ಅನ್ನು ಇಲ್ಲೊಬ್ಬರು ಹಂಚಿಕೊಂಡಿದ್ದಾರೆ ನೋಡಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಯಾರ ಬಳಿಯೂ ಸಮಯವಿಲ್ಲ, ಪುರುಷರಿಗೆ ಬೆಳಿಗ್ಗೆ ಎದ್ದು ಒಂದು ರೌಂಡ್ ವಾಕಿಂಗ್ (Walking) ಹೋಗಿ ಬರುವುದು, ನಂತರ ಮನೆಗೆ ಬೇಕಾದ ಸಾಮಾನುಗಳನ್ನು ತಂದು ಕೊಡುವುದು ಮತ್ತು ಸ್ನಾನ ಮಾಡಿ ಕಚೇರಿಗೆ (Office) ಹೋಗುತ್ತಾ ಮದ್ಯೆ ದಾರಿಯಲ್ಲಿ ಮಕ್ಕಳನ್ನು ಶಾಲೆಗೆ (School) ಬಿಟ್ಟು ಹೋಗುವುದು. ಹೀಗೆ ಮಹಿಳೆಯರು ಸಹ ಬೆಳಗ್ಗೆ ಬೆಳಗ್ಗೆ ತುಂಬಾನೇ ಬ್ಯುಸಿಯಾಗಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಬೆಳಗ್ಗೆ ಎದ್ದು ಸ್ನಾನ ಮಗಿಸಿ, ಮನೆಯವರಿಗೆ ತಿಂಡಿ ಮಾಡಿಕೊಡುವುದು, ಮಕ್ಕಳಿಗೆ ಸ್ನಾನ ಮಾಡಿಸಿ ಶಾಲೆಗೆ ಹೋಗಲು ರೆಡಿ ಮಾಡಿಸುವುದು ಮತ್ತು ಅವರಿಗೆ ಮಧ್ಯಾಹ್ನದ (Afternoon) ಊಟಕ್ಕಾಗಿ (Lunch) ಆಹಾರವನ್ನು ರೆಡಿ ಮಾಡಿ ಟಿಫಿನ್ ಗೆ ತುಂಬಿಸುವುದು.

ಹೀಗೆ ಅನೇಕ ಕೆಲಸಗಳಿಂದ ನಾವು ಬೆಳಗ್ಗೆ ತುಂಬಾನೇ ಬ್ಯುಸಿ ಆಗಿರುತ್ತೇವೆ ಮತ್ತು ಇಂತಹ ಸಮಯದಲ್ಲಿ ಯಾವುದಾದರೂ ಒಂದು ಕೆಲಸ ತುಂಬಾ ಹೊತ್ತು ತೆಗೆದುಕೊಳ್ಳುತ್ತಿದ್ದರೆ, ನಾವು ಅದನ್ನು ಸುಲಭ ಮಾಡಿಕೊಳ್ಳಲು ಯಾವುದಾದರೂ ಒಂದು ಟ್ರಿಕ್ ಗಳನ್ನು ಬಳಸುತ್ತೇವೆ. ಇದೇ ರೀತಿಯ ಒಂದು ಟ್ರಿಕ್ ಅನ್ನು ಇಲ್ಲೊಬ್ಬರು ಹಂಚಿಕೊಂಡಿದ್ದಾರೆ ನೋಡಿ.

ತರಕಾರಿಗಳ ಸಿಪ್ಪೆ ಸುಲಿಯುವ ಸುಲಭ ವಿಧಾನ 
ಯಾವುದೇ ತ್ವರಿತ ಮತ್ತು ಬುದ್ಧಿವಂತ ಕಿಚನ್ ಟ್ರಿಕ್ ಎಂದಿಗೂ ವ್ಯರ್ಥವಾಗುವುದಿಲ್ಲ. ನೀವು ನಿಯಮಿತವಾಗಿ ಅಡುಗೆ ಮಾಡುವವರಾಗಿದ್ದರೆ, ಈ ಸುಲಭ ಸಲಹೆಗಳು ಆಗಾಗ್ಗೆ ನಿಮ್ಮ ಕೆಲಸವನ್ನು ಸಂಪೂರ್ಣವಾಗಿ ಸುಲಭಗೊಳಿಸುತ್ತವೆ ಎಂದು ನಿಮಗೆ ತಿಳಿದಿರುತ್ತದೆ. ಹಣ್ಣುಗಳು ಮತ್ತು ತರಕಾರಿಗಳು ಸೇರಿದಂತೆ ಅನೇಕ ಪದಾರ್ಥಗಳಿವೆ, ನಾವು ಅಡುಗೆ ಮಾಡುವಾಗ ಪ್ರತಿದಿನವೂ ಬಳಸುತ್ತೇವೆ. ಅವುಗಳ ಸಿಪ್ಪೆ ಸುಲಿಯುವುದೇ ಒಂದು ತಲೆ ನೋವಿನ ಕೆಲಸ ಮತ್ತು ತುಂಬಾ ಸಮಯ ತೆಗೆದುಕೊಳ್ಳುವ ಕೆಲಸವಾಗಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಆಲೂಗಡ್ಡೆಯ ಸಿಪ್ಪೆ ಸುಲಿಯುವ ಸುಲಭ ವಿಧಾನ 
ಹೀಗೆ ಸಿಪ್ಪೆ ಸುಲಿಯುವ ಆಹಾರ ಪದಾರ್ಥಗಳಲ್ಲಿ ಆಲೂಗಡ್ಡೆಯು ಒಂದು. ಈ ತರಕಾರಿಯನ್ನು ನಾವು ಭಾರತೀಯರು ನಮ್ಮ ಅಡುಗೆ ಮನೆಗಳಲ್ಲಿ ವಿವಿಧ ರೀತಿಯ ಭಕ್ಷ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಆಲೂಗಡ್ಡೆಯನ್ನು ತಯಾರಿಸಲು ಅನೇಕ ಮಾರ್ಗಗಳಿವೆ.

ಇದನ್ನೂ ಓದಿ: Orange Peel Benefits: ಕಿತ್ತಳೆ ಸಿಪ್ಪೆ ಎಸೆಯುವ ಮುನ್ನ ಈ ಆರೋಗ್ಯಕರ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ

ಆದಾಗ್ಯೂ, ಹೆಚ್ಚಿನ ಸಮಯದಲ್ಲಿ, ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ಸುಲಿಯಲು ನಮ್ಮನ್ನು ಕೇಳಿದಾಗ ಅದು ತುಂಬಾನೇ ಕಿರಿಕಿರಿ ಉಂಟು ಮಾಡುವ ಮತ್ತು ಸ್ವಲ್ಪ ನೀರಸವಾಗುವ ಕೆಲಸವಾಗುತ್ತದೆ. ಆದ್ದರಿಂದ, ಸಮಯವನ್ನು ಉಳಿಸಲು ಮತ್ತು ಕೆಲಸವನ್ನು ಸುಲಭಗೊಳಿಸಲು ಯಾವುದಾದರೂ ಮಾರ್ಗವಿದೆಯೇ? ಹೌದು. ಬಾಣಸಿಗ ಪಂಕಜ್ ಭದೌರಿಯಾ ಅವರು ಆಲೂಗಡ್ಡೆಯ ಸಿಪ್ಪೆ ಸುಲಿಯಲು ಸುಲಭವಾದ ಸಲಹೆಯನ್ನು ಹೊಂದಿದ್ದಾರೆ.
ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಪಂಕಜ್ ಮೊದಲು ಚಾಕುವಿನಿಂದ ಪ್ರತಿ ಆಲೂಗಡ್ಡೆಯ ಮಧ್ಯದಲ್ಲಿ ರೌಂಡ್ ಆಗಿ ಒಂದು ಬಾರಿ ಕತ್ತರಿಸಿಕೊಳ್ಳಿ ಎಂದು ಹೇಳಿದರು. ನೀವು ಅದರ ಮೇಲ್ಮೈಯ ಸುತ್ತಲೂ ಸಂಪೂರ್ಣವಾಗಿ ಕತ್ತರಿಸಬಹುದು. ನಂತರ, ಮತ್ತಷ್ಟು ಕುದಿಯಲು ಅವೆಲ್ಲವನ್ನೂ ಪ್ರೆಶರ್ ಕುಕ್ಕರ್ ನಲ್ಲಿ ಇರಿಸಿ. ಈ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಆಲೂಗಡ್ಡೆಯನ್ನು ಸ್ವಲ್ಪ ಸಮಯದವರೆಗೆ ತಣ್ಣಗಾಗಲು ಬಿಡಿ ಮತ್ತು ಸಿಪ್ಪೆ ಸುಲಿಯುವ ಪ್ರಕ್ರಿಯೆಯು ಮೊದಲಿಗಿಂತ ಹೆಚ್ಚು ಸುಲಭವಾಗಿರುವುದನ್ನು ನೀವು ಗಮನಿಸಬಹುದು. ಈ ಕಾರ್ಯವಿಧಾನದ ನಂತರ, ನೀವು ಆಲೂಗಡ್ಡೆಯ ಸಿಪ್ಪೆಯನ್ನು ಕ್ಷಣಾರ್ಧದಲ್ಲಿ ಸುಲಭವಾಗಿ ಹೇಗೆ ಸುಲಿಯಬಹುದು ಎಂಬುದನ್ನು ಬಾಣಸಿಗರು ವಿಡಿಯೋದಲ್ಲಿ ತೋರಿಸಿದರು.

ಇದನ್ನೂ ಓದಿ: Weight Loss: ತೂಕ ಇಳಿಸಲು ಬಯಸುವವರು ಅವಲಕ್ಕಿ ತಿನ್ನೋದನ್ನು ಮಿಸ್ ಮಾಡಲೇಬೇಡಿ

ಕ್ಯಾಪ್ಸಿಕಂ ಅನ್ನು ಸರಿಯಾಗಿ ಬೇಯಿಸುವುದು ಹೇಗೆ
ಕ್ಯಾಪ್ಸಿಕಂ ಅನ್ನು ಸರಿಯಾಗಿ ಬೇಯಿಸುವುದು ಹೇಗೆ ಎಂಬ ಬಗ್ಗೆ ಬಾಣಸಿಗರಾದ ಪಂಕಜ್ ಭದೌರಿಯಾ ಈ ಹಿಂದೆ ಮತ್ತೊಂದು ವಿಡಿಯವನ್ನು ಹಂಚಿಕೊಂಡಿದ್ದರು. ಇದನ್ನು ತಯಾರಿಸಲು ಅನೇಕ ಮಾರ್ಗಗಳಿವೆ, ಆದಾಗ್ಯೂ, ಅದರ ರುಚಿಗಳು ಹಾಗೆಯೇ ಉಳಿಯುತ್ತವೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು. ಕ್ಯಾಪ್ಸಿಕಂ ರಸಭರಿತ ಮತ್ತು ಸುವಾಸನೆಯುಕ್ತವಾಗಿರಬೇಕು. ಕ್ಯಾಪ್ಸಿಕಂ ಅನ್ನು ಬೇಯಿಸಲು ಸರಿಯಾದ ಮಾರ್ಗವೆಂದರೆ ಅದನ್ನು ಸ್ಟಿರ್-ಫ್ರೈ ಮಾಡುವುದು ಎಂದು ಪಂಕಜ್ ಹೇಳಿದರು. ಅಡುಗೆ ಮಾಡುವಾಗ ಅದನ್ನು ಎಂದಿಗೂ ಕುದಿಸಬೇಡಿ ಎಂದು ವೀಕ್ಷಕರಿಗೆ ಸಲಹೆ ನೀಡಿದರು. ಕ್ಯಾಪ್ಸಿಕಂ ಅನ್ನು ಸ್ಟಿರ್-ಫ್ರೈ ಮಾಡುವುದರಿಂದ ಅದರ ರಚನೆ ಮತ್ತು ತೀಕ್ಷ್ಣತೆಯನ್ನು ಹಾಗೆಯೇ ಕಾಪಾಡಿಕೊಳ್ಳುತ್ತದೆ.
Published by:Ashwini Prabhu
First published: