ಕಡಿಮೆ ಬೆಲೆಗೆ ವಿದೇಶದಿಂದ ಚಿನ್ನ ತರುವುದು ಎಷ್ಟು ಸುಲಭ ಗೊತ್ತಾ!

ಅಂದಹಾಗೆ ವಿದೇಶದಿಂದ ಭಾರತೀಯರೊಬ್ಬರು ಚಿನ್ನ ಆಮದು ಮಾಡಿಕೊಳ್ಳುತ್ತಿದ್ದರೆ ಎಂದರೆ ಇಂತಿಷ್ಟೆ ತರಬೇಕೆಂಬ ನಿಯಮವನ್ನು ಸುಂಕದ ಅಧಿಕಾರಿಗಳು ವಿಧಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ತಂದರೆ ನೀವು ಶಿಕ್ಷೆಗೆ ಒಳಪಡುವಿರಿ

Seema.R | news18
Updated:March 9, 2019, 6:07 PM IST
ಕಡಿಮೆ ಬೆಲೆಗೆ ವಿದೇಶದಿಂದ ಚಿನ್ನ ತರುವುದು ಎಷ್ಟು ಸುಲಭ ಗೊತ್ತಾ!
ಸಾಂದರ್ಭಿಕ ಚಿತ್ರ
  • News18
  • Last Updated: March 9, 2019, 6:07 PM IST
  • Share this:
ಭಾರತೀಯರಿಗೂ ಬಂಗಾರಕ್ಕೂ ಒಂದು ವಿಶೇಷ ನಂಟು ಎಂದೇ ಹೇಳಬಹುದು. ಅದರಲ್ಲಿಯೂ ಹೆಣ್ಣು ಮಕ್ಕಳಿಗಂತೂ ಚಿನ್ನ ಎಂದರೆ ಒಲವು ಹೆಚ್ಚು. ಯಾರಾದರೂ ತಮ್ಮ ಸಂಬಂಧಿಕರು ಗಲ್ಫ್​ ಅಥವಾ ವಿದೇಶದಲ್ಲಿದ್ದರೆ, ಅಲ್ಲಿ ಚಿನ್ನ ಎಷ್ಟು ತಂದರೂ ಎಂದು ಕೇಳುವವರೂ ಇದ್ದಾರೆ. ಒಂದು ವೇಳೆ ನೀವು ವಿದೇಶದಿಂದ ಚಿನ್ನ ತರುವುದಾದರೆ, ಎಷ್ಟು ಚಿನ್ನ ತರಬೇಕು ಎಂಬ ಬಗ್ಗೆ ನಿಮಗೆ ತಿಳಿದಿರಬೇಕು. ಅಲ್ಲಿಂದ ಅಧಿಕ ಚಿನ್ನ ತಂದು ಇಲ್ಲಿ ನೀವು ಕಳ್ಳಸಾಗಣೆ ಮೇಲೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಕೂಡ ಇದೆ.

ಅಂದಹಾಗೆ ವಿದೇಶದಿಂದ ಭಾರತೀಯರೊಬ್ಬರು ಚಿನ್ನ ಆಮದು ಮಾಡಿಕೊಳ್ಳುತ್ತಿದ್ದರೆ ಎಂದರೆ ಇಂತಿಷ್ಟೆ ತರಬೇಕೆಂಬ ನಿಯಮವನ್ನು ಸುಂಕದ ಅಧಿಕಾರಿಗಳು ವಿಧಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ತಂದರೆ ನೀವು ಜೈಲುಪಾಲಾಗುವುದು ಗ್ಯಾರಂಟಿ. ಅಂದಹಾಗೆ ವಿದೇಶದಿಂದ ಬರಬೇಕಾದರೆ ಮಹಿಳೆಯರು 40 ಗ್ರಾಂ ಚಿನ್ನ ತಂದರೆ, ಪುರುಷರು 20 ಗ್ರಾಂ ಚಿನ್ನವನ್ನು ತೆರಿಗೆ ರಹಿತವಾಗಿ ತರಲು ಭಾರತ ಸರ್ಕಾರ ಅನುಮತಿ ನೀಡಿದೆ. ಇದಕ್ಕಿಂತ ಹೆಚ್ಚಾಗಿ ತಂದರೆ ನೀವು ಶಿಕ್ಷೆಗೆ ಪಾತ್ರರಾಗುವಿರಿ.

ಇದನ್ನು ಓದಿ: PHOTOS: ಆಕಾಶ್​ ಅಂಬಾನಿ- ಶ್ಲೋಕ ವಿವಾಹ ಸಡಗರ

ಒಂದು ವೇಳೆ ವಿದೇಶದಲ್ಲಿ ಆರು ತಿಂಗಳಿಗೂ ಅಧಿಕ ಕಾಲ ನೆಲೆಸಿದ್ದರೆ, ಅಲ್ಲಿಂದ ಬೇಕಾದರೆ, 1 ಕೆಜಿ ಚಿನ್ನದ ಬಿಸ್ಕೆಟ್​ ತರಬಹುದು. ಆದರೆ, ಈ ಬಗ್ಗೆ ನೀವು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕಾಗಿರುವುದು ಅವಶ್ಯ.

ಈ ವಸ್ತುಗಳಿಗೂ ಇದೇ ಬೇಡಿಕೆ

ಚಿನ್ನದಂತೆ ಈ ವಸ್ತುಗಳು ಕೂಡ ವಿದೇಶಗಳಲ್ಲಿ ರಿಯಾಯಿತಿ ದರದಲ್ಲಿ ಉತ್ಕೃಷ್ಟ ಮಟ್ಟದಲ್ಲಿ ಕಡಿಮೆ ಬೆಲೆಯಲ್ಲಿ ತೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಜನರು ಈ ವಸ್ತುಗಳಿಗೂ ಮುಗಿಬೀಳುತ್ತಾರೆ. ಅಂತಹ ವಸ್ತುಗಳು, ಆಲ್ಕೋಹಾಲ್​, ಎಲೆಕ್ಟ್ರಾನಿಕ್​ ವಸ್ತುಗಳು.   ಎರಡು ಲೀ ಆಲ್ಕೋಹಾಲ್​, ನೂರು ಸಿಗರೇಟ್​ ಹಾಗೂ ಲ್ಯಾಪ್​ಟಾಪ್​ ಕೂಡ ತರಬಹುದು ಎಂದು ನಿಯಮ ವಿಧಿಸಲಾಗಿದೆ.

First published:March 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ