Weight Loss: ಬರೋಬ್ಬರಿ 50 ಕೆಜಿ ತೂಕ ಇಳಿಸಿಕೊಂಡ 70 ವರ್ಷದ ಅಜ್ಜಿ, ಇದೇ ಇವರ ಸೀಕ್ರೆಟ್!

ಒಳ್ಳೆಯ ಜೀವನ ಶೈಲಿ ಹಾಗೂ ನಿಯಮಿತ ವ್ಯಾಯಾಮದಿಂದ ತೂಕ ಇಳಿಕೆ ಸಾಧ್ಯವಿದ್ದರೂ ಅದನ್ನು ಛಲಬಿಡದೇ ಮಾಡುವುದೇ ನಮ್ಮ ಮುಂದಿರುವ ಸವಾಲು. ಇಂಥವರಿಗೆ ಸ್ಪೂರ್ತಿಯಾಗಲೆಂದೇ ನಾವೀಗ ನಿಮಗೆ 70 ವರ್ಷದ ಮಹಿಳೆಯೊಬ್ಬಳು 50 ಕೆಜಿ ತೂಕ ಇಳಿಸಿಕೊಂಡ ಕಥೆ ಹೇಳುತ್ತೇವೆ.

ಡೆಬ್ಬಿ ರೋಸ್‌

ಡೆಬ್ಬಿ ರೋಸ್‌

  • Share this:
ಈಗಿನ ಕಾಲದಲ್ಲಿ ಯಾರನ್ನ ಕೇಳಿದ್ರೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆ (Health Problem). ಅದರಲ್ಲೂ ಮಹಿಳೆರಿಗೆ ಮತ್ತೊಂದಿಷ್ಟು ಸಮಸ್ಯೆಗಳು ಹೆಚ್ಚೇ ಎನ್ನಬಹುದು. ಹಾರ್ಮೋನಿನ ಜೊತೆಗೆ ಬರುವ ಒಬೆಸಿಟಿ ಹೆಚ್ಚಿನವರಿಗೆ ಕಾಡುವ ಸಮಸ್ಯೆ. ಏರುವ ತೂಕದ ಜೊತೆಗೆ ಬರುವ ಹಲವಾರು ಖಾಯಿಲೆಗಳು (diseases) ಮಹಿಳೆಯರನ್ನು ಹೈರಾಣಾಗಿಸುತ್ತವೆ. ಬಹಳಷ್ಟು ಜನರು ತೂಕ ಇಳಿಸಿಕೊಳ್ಳೋಕೆ ಪ್ರಯತ್ನಿಸ್ತಾರೆ. ಆದರೆ ಕೆಲವೇ ದಿನಗಳಲ್ಲಿ ಮತ್ತೆ ಆ ಪ್ರಯತ್ನವನ್ನೇ ಬಿಟ್ಟು ಬಿಡ್ತಾರೆ. ಒಳ್ಳೆಯ ಜೀವನ ಶೈಲಿ (Lifestyle) ಹಾಗೂ ನಿಯಮಿತ ವ್ಯಾಯಾಮದಿಂದ (Exercise) ತೂಕ ಇಳಿಕೆ ಸಾಧ್ಯವಿದ್ದರೂ ಅದನ್ನು ಛಲಬಿಡದೇ ಮಾಡುವುದೇ ನಮ್ಮ ಮುಂದಿರುವ ಸವಾಲು. ಇಂಥವರಿಗೆ ಸ್ಪೂರ್ತಿಯಾಗಲೆಂದೇ ನಾವೀಗ ನಿಮಗೆ 70 ವರ್ಷದ ಮಹಿಳೆಯೊಬ್ಬಳು 50 ಕೆಜಿ ತೂಕ ಇಳಿಸಿಕೊಂಡ ಕಥೆ ಹೇಳುತ್ತೇವೆ.

50 ಕೆಜಿ ತೂಕ ಇಳಿಸಿಕೊಳ್ಳಲು ತೆಗೆದುಕೊಂಡ ಸಮಯ 
ಆಕೆಯ ಹೆಸರು ಡೆಬ್ಬಿ ರೋಸ್‌ ಅಂತ. 70 ವರ್ಷ ವಯಸ್ಸಿನ ಈ ಮಹಿಳೆ ಕಳೆದ 2 ವರ್ಷ 7 ತಿಂಗಳುಗಳಲ್ಲಿ ಇಳಿಸಿಕೊಂಡಿದ್ದು ಸುಮಾರು 50 ಕೆಜಿ ತೂಕವನ್ನ ಅಂದ್ರೆ ನೀವು ನಂಬಲೇ ಬೇಕು. ಇದರ ಜೊತೆ ಹಲವಾರು ಆರೋಗ್ಯ ಸಮಸ್ಯೆ ಹೊಂದಿದ್ದ ಈಕೆಯ ಆರೋಗ್ಯವೂ ಸುಧಾರಿಸಿದೆ. ಆಕೆಗಿದ್ದ ಸ್ಲೀಪ್‌ ಅಪ್ನಿಯಾ ಸಮಸ್ಯೆ ಸುಧಾರಿಸಿದೆ. ರಕ್ತದೊತ್ತಡಕ್ಕೆ ಆಕೆ ಈಗ ಔಷಧ ತೆಗೆದುಕೊಳ್ಳುತ್ತಿಲ್ಲ. 6 ರಿಂದ 7 ಗಂಟೆಗಳ ಕಾಲ ಅವರು ನಿದ್ದೆ ಮಾಡ್ತಾರೆ.

ತೂಕ ಹೆಚ್ಚಾಗಲು ಕಾರಣವೇನು?
ಮೊದಲ ಪ್ರೆಗ್ನೆನ್ಸಿಯಿಂದ ಶುರುವಾದ ತೂಕ ಏರಿಕೆ ಎರಡನೇ ಸಲ ಗರ್ಭ ಧರಿಸಿದಾಗ ಇನ್ನಷ್ಟು ಏರಿಕೆಯಾಯಿತು. ನಂತರ ಆಕೆಗೆ ಗ್ಯಾಸ್ಟರಿಕ್‌ ಬೈಪಾಸ್‌ ಸರ್ಜರಿ ಕೂಡ ಆಯಿತು. ಆ ಸಮಯದಲ್ಲಿ ಅಂದರೆ 2001 ರಲ್ಲಿ ಆಕೆಯ ತೂಕ 156 ಕೆಜಿ ಇತ್ತು. ನಂತರ ಸ್ವಲ್ಪ ತೂಕ ಇಳಿಯಿತು. ನಂತರ ಒಂದು ಆಕಸ್ಮಿಕ ಆಕ್ಸಿಡೆಂಟ್‌ ಕಾರಣದಿಂದ ಶ್ರವಣ ಶಕ್ತಿಯನ್ನೂ ಕಳೆದುಕೊಳ್ಳಬೇಕಾಯಿತು.

ಇದನ್ನೂ ಓದಿ: Life Hacks: ಕೆಲಸದ ಒತ್ತಡದಿಂದ ಮುಕ್ತಿ ಬೇಕು ಅಂದ್ರೆ ಈ ಐಡಿಯಾಗಳನ್ನು ಬಳಸಿ ನೋಡಿ

ಇವರ ವೆಯಿಟ್ ಲೋಸ್ ಸೀಕ್ರೆಟ್ ಏನು
ಇಷ್ಟಲ್ಲ ಆಗಿ ಒಮ್ಮೆ ಮೊಳಕಾಲು ನೋವಿನಿಂದ ಬಳಲುತ್ತಿದ್ದ ರೋಸ್‌ ವೈದ್ಯರ ಬಳಿ ಹೋದಾಗ ನಿಮ್ಮ ಬದುಕಿನ ಗುಣಮಟ್ಟ ನೀವು ಎಷ್ಟು ತೂಕ ಇಳಿಸುತ್ತೀರಿ ಅನ್ನೋದ್ರ ಮೇಲೆ ನಿಂತಿದೆ ಎಂದರು. ಇದನ್ನು ಮನಸ್ಸಿಗೆ ತೆಗೆದುಕೊಂಡ ರೋಸ್‌ ವೇಯ್ಟ್‌ ಲಾಸ್‌ ಜರ್ನಿ ತುಂಬಾ ಇಂಟೆರೆಸ್ಟಿಂಗ್.‌ ತನ್ನ ತೂಕ ನಿಧಾನವಾಗಿ ಇಳಿಯುತ್ತೆ ಅನ್ನೋದನ್ನು ಅರಿತ ರೋಸ್‌ ತೂಕ ಇಳಿಕೆಗೆ ದೃಢ ನಿರ್ಧಾರ ಮಾಡಿದರು. ಚಿಕ್ಕ ಚಿಕ್ಕ ಗುರಿಗಳನ್ನು ಸೆಟ್‌ ಮಾಡಿ ಅದರಂತೆ ನಡೆಯತೊಡಗಿದರು.

ಇವರು ಸೇವಿಸುತ್ತಿದ್ದ ಆಹಾರ 
ಮೊದಲಿಗೆ ಆಕೆ ಮಾಡಿದ್ದು 80/20 ರೂಲ್.‌ ಬೇರೆ ಬೇರೆ ಡಯೆಟ್‌ ಮಾಡಿ ಸೋತಿದ್ದ ರೋಸ್‌ ಗೆ ಈ ರೂಲ್‌ ಸೆಟ್‌ ಆಯಿತು. ಏನಿದು 80/20 ರೂಲ್‌ ಅಂದುಕೊಂಡ್ರಾ.. ಇದು ಸಿಂಪಲ್.‌ ಹೆಲ್ತಿಯಾದ ಆಹಾರ ಅಂದರೆ ಸುಲಭವಾಗಿ ಜೀರ್ಣವಾಗುವ ಆಹಾರ. ನಾವು ಸೇವಿಸುವ ಹಸಿ ತರಕಾರಿ, ಹಣ್ಣು ಇಂಥವುಗಳ ಪ್ರಮಾಣ ನಾವು ಸೇವಿಸುವ ಆಹಾರದ 80 ಪ್ರತಿಶತದಷ್ಟಿದ್ದರೆ.. ನಾವು ಇಷ್ಟಪಡುವ ಆಹಾರ ಅದು ಜಂಕ್‌ ಆಗಲಿ ಅಥವಾ ಸ್ವೀಟ್‌ ಆಗಲಿ, ಅದು ಕೇವಲ 20 ಪರ್ಸೆಂಟ್‌ ರಷ್ಟಿರಬೇಕು. ಆಗ ನಾವಿಷ್ಟ ಪಟ್ಟದ್ದು ತಿನ್ನಲಾಗದು ಅನ್ನೋ ಬೇಸರವೂ ಇರೋದಿಲ್ಲ.. ಹೆಲ್ತಿಯಾಗೂ ತಿನ್ನುತ್ತೇವೆ. ಇದರಿಂದ ತೂಕ ಕಂಟ್ರೋಲ್‌ ಗೆ ಬರುತ್ತದೆ.

ಇದನ್ನೂ ಓದಿ: Weight Loss Tips: ಇದೊಂದು ವಸ್ತು ಇದ್ರೆ ಸಾಕು ನಿಮ್ಮ ತೂಕ ಫಟಾಪಟ್​ ಇಳಿದು ಬಿಡುತ್ತೆ

ಇನ್ನು 2020ರಲ್ಲಿ ಆಕೆ ಇಂಟರ್‌ ಮಿಟೆಂಟ್‌ ಫಾಸ್ಟಿಂಗ್‌ ಶುರು ಮಾಡಿಕೊಂಡರು. ರಾತ್ರಿ 7 ಗಂಟೆಯ ನಂತರ ಏನೂ ತಿನ್ನದೇ ಇರೋದು ಹಾಗೂ ಬೆಳಗ್ಗೆ ಬ್ಲಾಕ್‌ ಕಾಫಿ ಹಾಗೂ 11 ಗಂಟೆಗೆ ಪ್ರೋಟೀನ್‌ ಸಲಾಡ್‌ ತಿನ್ನುವುದನ್ನು ರೂಢಿ ಮಾಡಿಕೊಂಡರು. ದಿನಕ್ಕೆ ಕೇವಲ 2 ಊಟವಷ್ಟೇ ಅವರು ತಿನ್ನುತ್ತಿದ್ದರಂತೆ.

ಪ್ರತಿನಿತ್ಯ ವಾಕಿಂಗ್
ಆಕೆಗೆ ಎರಡೂ ಮೊಣಕಾಲಿನ ಶಸ್ತ್ರ ಚಿಕಿತ್ಸೆಯಾಗಿತ್ತು. ಆದಾಗ್ಯೂ ಆಕೆ ವಾಕಿಂಗ್‌ ಬಿಡಲಿಲ್ಲ.‌ ದಿನವೂ ಆಕೆ 6 ಸಾವಿರದಿಂದ 9 ಸಾವಿರ ಹೆಜ್ಜೆ ನಡೆದೇ ನಡೆಯುತ್ತಾರೆ. ಅಲ್ಲದೇ ಬೇರೆ ವ್ಯಾಯಾಮ ಕೂಡ ಮಾಡ್ತಾರೆ. ಹೀಗೆ ಇಳಿ ವಯಸ್ಸಿನಲ್ಲಿಯೂ ತೂಕ ಇಳಿಸಿಕೊಂಡ ರೋಸ್‌ ಸಾಕಷ್ಟು ಜನರಿಗೆ ಸ್ಪೂರ್ತಿಯಾಗ್ತಾರೆ.
Published by:Ashwini Prabhu
First published: