Mosquito Killer: ಸೊಳ್ಳೆಗಳು ನಿಮ್ಮ ಹತ್ರ ಸುಳಿಯದಂತೆ ಮಾಡಬೇಕಾ? ಹಾಗಿದ್ರೆ ಈ 9 ಅದ್ಭುತ ಪ್ರಾಕೃತಿಕ ಮಾರ್ಗಗಳನ್ನು ಬಳಸಿ

ಯಾವ ಅಡ್ಡ ಪರಿಣಾಮಗಳಿಲ್ಲದ ಸೊಳ್ಳೆಗಳನ್ನು ದೂರವಿರಿಸುವ ಯಾವ ಮಾರ್ಗವೂ ಇಲ್ಲವೆ? ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಕೆಲವು ಪ್ರಾಕೃತಿಕ ಮಾರ್ಗಗಳ ಮೂಲಕ ನಾವು ಸೊಳ್ಳೆಗಳನ್ನು ದೂರವಿರಿಸಬಹುದಾಗಿದೆ. ಅವು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.

ಸೊಳ್ಳೆ

ಸೊಳ್ಳೆ

  • Share this:
ಸಾಮಾನ್ಯವಾಗಿ ಹೊರಾಂಗಣ ಚಟುವಟಿಕೆಗಳೆಂದರೆ ಬಹಳಷ್ಟು ಜನರಿಗೆ (Peolpe) ತುಂಬ ಇಷ್ಟವಾಗುತ್ತದೆ. ಅದರಲ್ಲೂ ಎಲ್ಲಾದರೂ ಪ್ರವಾಸಕ್ಕೆ ಹೋದರೆ ಅಥವಾ ಸ್ನೇಹಿತರೊಡನೆ (Friends) ಚಾರಣಕ್ಕೆ ಹೋದರೆ ಅದ್ಭುತವಾದ ಸಮಯವನ್ನು ಪ್ರಕೃತಿಯ ಮಡಿಲಿನಲ್ಲಿ ಕಳೆಯಬಹುದು. ರಾತ್ರಿಯಾದರೆ ಸಾಕು, ಕ್ಯಾಂಪ್ ಫೈರ್ ಅಂತ ಹೊತ್ತಿಸಿಕೊಂಡು, ಏನಾದರೂ ಅಡುಗೆ ಮಾಡುತ್ತ, ಹರಟೆ ಹೊಡೆಯುತ್ತ ಅದ್ಭುತವಾಗಿ ಸಮಯ ಕಳೆಯುವುದೆಂದರೆ ಬಹುತೇಕ ಜನರಿಗೆ ಪ್ರೀತಿ. ಆದರೆ, ಎಲ್ಲವೂ ಚೆನ್ನಾಗಿರುವಾಗ ಅದರಲ್ಲೂ ವಿಶೇಷವಾಗಿ ಪ್ರಕೃತಿಯ (Nature) ಮಡಿಲಿನಲಿದ್ದಾಗ ಒಂದು ಕಿರಿಕಿರಿಯಂತೂ ಖಂಡಿತ ಆಗುತ್ತದೆ. ಅದೇ ಸೊಳ್ಳೆಗಳ (Mosquitoes) ಕಾಟ. ಹೌದು, ಈ ಹೊರಾಂಗಣ ಚಟುವಟಿಕೆ ಅಂದ್ರೇನೇ ಹಾಗೆ. ಎಷ್ಟು ಸಂತಸ ಸಿಗುತ್ತದೋ ಅಷ್ಟೇ ಸೊಳ್ಳೆಗಳ ಕಾಟವೂ ಇರುತ್ತದೆ.

ನೀವು ನಿಮ್ಮ ಎರಡು ಕೈಗಳನ್ನು ನಿಮ್ಮ ರಕ್ಷಣೆಗಾಗಿ ಮುಂದೆ ಚಾಚಿ ಕುಳಿತರೆ ಓಕೆ....ಆದರೆ ಹಾಯಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತೇನೆಂದರೆ ಆ ಹೆಣ್ಣು ರಕ್ತ ಹೀರುವ ಸೊಳ್ಳೆಗಳು ನಿಮ್ಮನ್ನು ಹಾಯಾಗಿರಲು ಬೀಡವು.

ಸೊಳ್ಳೆಗಳು ಹೆಚ್ಚು ಆಕರ್ಷಿತವಾಗಿರುವ ರಕ್ತ ಗುಂಪು ಯಾವುದು
ಇನ್ನು ಈ ಸೊಳ್ಳೆಗಳು ಯಾವ ರೀತಿಯ ಚರ್ಮ ಹೊಂದಿರುವ ಮನುಷ್ಯರನ್ನು ಕಚ್ಚಲು ಬಯಸುತ್ತವೆ ಎಂಬುದನ್ನು ಹೇಳುವುದು ಕಷ್ಟ. ಒಂದು ತರ್ಕದ ಪ್ರಕಾರ, ಬೆವರು ಹಾಗೂ ಕೆಲ ಬ್ಯಾಕ್ಟಿರಿಯಾದ ವಿಶಿಷ್ಟ ಸಂಯೋಜನೆ ಸೊಳ್ಳೆಗಳನ್ನು ಹೆಚ್ಚು ಆಕರ್ಷಿಸುತ್ತದೆ ಎಂದು ಹೇಳಲಾಗಿದ್ದರೆ ಇನ್ನೊಂದು ಅಧ್ಯಯನದ ಪ್ರಕಾರ ಒ ರಕ್ತದ ಗುಂಪನ್ನು ಹೊಂದಿರುವ ಜನರೆಡೆ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ ಎನ್ನಲಾಗುತ್ತದೆ. ಆದಾಗ್ಯೂ, ವೈಜ್ಞಾನಿಕವಾಗಿ ಗಮನಿಸುವುದಾದರೆ ಜನರು ಹೊರಸೂಸುವ ಇಂಗಾಲದಿಂದಾಗಿ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ ಎನ್ನಲಾಗಿದೆ.

ಪ್ರಾಕೃತಿಕ ಮಾರ್ಗಗಳ ಮೂಲಕ ಸೊಳ್ಳೆಗಳನ್ನು ದೂರವಿರಿಸುವುದು ಹೇಗೆ
ಮಾರುಕಟ್ಟೆಯಲ್ಲಿ ಸೊಳ್ಳೆಗಳನ್ನು ಓಡಿಸುವ ಅದೆಷ್ಟೋ ವಸ್ತುಗಳು ದೊರೆಯುತ್ತವೆಯಾದರೂ ಅವುಗಳಲ್ಲಿರುವ ಹಲವು ರಾಸಾಯನಿಕಗಳು ಖಂಡಿತವಾಗಿಯೂ ಮನುಷ್ಯನ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುವುದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಹಲವರು ಇಂತಹ ರಾಸಾಯನಾಧಾರಿತ ಸೊಳ್ಳೆ ರಿಪೆಲ್ಲೆಂಟ್ ಗಳನ್ನು ಬಳಸಲು ಹಿಂದೇಟು ಹಾಕುತ್ತಾರೆ. ಹಾಗಾದರೆ, ಯಾವ ಅಡ್ಡ ಪರಿಣಾಮಗಳಿಲ್ಲದ ಸೊಳ್ಳೆಗಳನ್ನು ದೂರವಿರಿಸುವ ಯಾವ ಮಾರ್ಗವೂ ಇಲ್ಲವೆ? ಎಂದು ನೀವಂದುಕೊಂಡಿದ್ದರೆ ಅದು ತಪ್ಪು. ಕೆಲವು ಪ್ರಾಕೃತಿಕ ಮಾರ್ಗಗಳ ಮೂಲಕ ನಾವು ಸೊಳ್ಳೆಗಳನ್ನು ದೂರವಿರಿಸಬಹುದಾಗಿದೆ. ಅವು ಯಾವುವು ಎಂಬುದನ್ನು ಇಲ್ಲಿ ತಿಳಿಯಿರಿ.

1. ಸಿಟ್ರೋನೆಲ್ಲಾ ಕ್ಯಾಂಡಲ್ಸ್
ಸಾಯ್ ವ್ಯಾಕ್ಸಿನಿಂದ ಮಾಡಲ್ಪಟ್ಟ ಈ ಸಿಟ್ರೋನೆಲ್ಲಾ ಮೇಣದ ದೀಪಗಳು ನಿಜಕ್ಕೂ ಸೊಳ್ಳೆಗಳನ್ನು ದೂರವಿರಿಸುವ ಒಂದು ಅದ್ಭುತ ಮಾರ್ಗವಾಗಿದೆ. ಆದಷ್ಟು ಸಾಯ್ ಮೇಣ ಹಾಗೂ ಎಸ್ಸೆನ್ಷಿಯಲ್ ಎಣ್ಣೆಗಳಿಂದ ಮಾಡಲ್ಪಟ್ಟ ಕ್ಯಾಂಡಲ್ಲುಗಳನ್ನೇ ಹೆಚ್ಚಾಗಿ ಬಳಸಿ.

2. ಎಲೆಕ್ಟ್ರಿಕ್ ಫ್ಯಾನ್
ನೀವು ಎಂದಾದರೂ ಗಮನಿಸಿದ್ದೀರಾ? ಗಾಳಿಯಾಡುವ ಸಂದರ್ಭದಲ್ಲಿ ಸಾಮಾನ್ಯವಾಗಿ ಸೊಳ್ಳೆಗಳು ಕಚ್ಚದೆ ಇರುವುದನ್ನು? ಇದಕ್ಕೆ ಎರಡು ತಾರ್ಕಿಕ ಕಾರಣಗಳಿವೆ. ಮೊದಲನೆಯದ್ದು ಗಾಳಿಯ ರಭಸವು ನಾವು ಹೊರ ಹಾಕುವ ಇಂಗಾಲವನ್ನು ನಮ್ಮಿಂದ ದೂರಕ್ಕೊಯ್ಯುತ್ತದೆ ಹಾಗೂ ಸೊಳ್ಳೆಗಳು ನಮ್ಮ ಬಳಿ ಇಂಗಾಲವಿಲ್ಲದೆ ಇರುವುದರಿಂದ ಹತ್ತಿರ ಸುಳಿಯಲಾರವು. ಎರಡನೆಯದ್ದು ಗಾಳಿ ಶಕ್ತಿಯ ಮುಂದೆ ಸೊಳ್ಳೆಗಳು ಹಾರಾಡಲು ಪರದಾಡಬೇಕಾಗುತ್ತವೆ. ಹಾಗಾಗಿ ನಿಮ್ಮ ಮನೆಯಲ್ಲಿ ಇರುವ ಟೇಬಲ್ ಫ್ಯಾನ್ ಅನ್ನು ಬಳಸಿ. ಇದು ಸೊಳ್ಳೆಗಳು ನಿಮ್ಮ ಬಳಿ ಬರದ ಹಾಗೆ ದೂರ ಇರಿಸುತ್ತದೆ.

3. ಸೊಳ್ಳೆಗಳನ್ನು ದೂರ ಇರಿಸುವ ಎಸ್ಸೆನ್ಷಿಯಲ್ ಎಣ್ಣೆಗಳು
ಹಲವು ಎಸ್ಸೆನ್ಷಿಯಲ್ ಎಣ್ಣೆಗಳು ಸಾಕಷ್ಟು ಪರಿಣಾಮಕಾರಿಯಾಗಿದ್ದು ಸೊಳ್ಳೆಗಳನ್ನು ದೂರವಿರುವಂತೆ ಮಾಡುತ್ತವೆ. ನೀವು ಈ ಎಣ್ಣೆಗಳನ್ನು ನಿಮ್ಮ ರಿಪೆಲ್ಲೆಂಟುಗಳಲ್ಲಿ ಬಳಸಲೂ ಬಹುದು. ಹಲವು ಘಮಘಮಿಸುವ ವಿವಿಧ ಸುವಾಸನೆಗಳಲ್ಲಿ ಈ ಎಣ್ಣೆಗಳು ಲಭ್ಯ. ಒಂದೊಮ್ಮೆ ನಿಮಗೆ ಹಿತ ಎನಿಸುವ ಸುವಾಸನೆಯ ಎಣ್ಣೆ ದೊರೆಯಿತೆಂದರೆ ಅದನ್ನೇ ಬಳಸಿ ಹಾಗೂ ಅದ್ಭುತ ಸುವಾಸನೆಯುಕ್ತ ಸೊಳ್ಳೆರಹಿತ ಸಮಯವನ್ನು ಆನಂದಿಸಿ.

ಇದನ್ನೂ ಓದಿ: Beauty Tips: ಮಳೆಗಾಲದಲ್ಲಿ ಅಕ್ಕಿ ನೀರನ್ನು ಹೀಗೆ ಬಳಸಿದ್ರೆ ತ್ವಚೆಯ ಅಂದ ಹೆಚ್ಚಾಗುತ್ತೆ

4. ಬಗ್ ರಿಪೆಲ್ಲೆಂಟ್ ಲುಮಿನರಿಗಳು
ನಿಮ್ಮದೆ ಆದ ವಿಷಕಾರಿ ಅಲ್ಲದ ಸೊಳ್ಳೆ ರಿಪೆಲ್ಲೆಂಟ್ ಲುಮಿನರಿಯನ್ನು ತಯಾರಿಸುವುದರ ಮೂಲಕ ಸೊಳ್ಳೆಗಳನ್ನು ಸಂಜೆಯ ಸಮಯದಲ್ಲಿ ದೂರವಿರಿಸಬಹುದು. ಇದನ್ನು ತಯಾರಿಸುವುದು ಸುಲಭವಾಗಿದ್ದು ಸಮಯ ಸಿಕ್ಕಾಗ ಈ ಬಗ್ಗೆ ವಿಡಿಯೋ ನೋಡಿ ನೀವೇ ಮನೆಯಲ್ಲಿ ಸುಲಭವಾಗಿ ಇದನ್ನು ತಯಾರಿಸಬಹುದು.

5. ಮನೆಯಲ್ಲಿ ಮಾಡಬಹುದಾದ ಪ್ರಾಕೃತಿಕ ಸೊಳ್ಳೆ ರಿಪೆಲ್ಲೆಂಟುಗಳು
ರೋಸ್ ಮೆರಿ, ಮಿಂಟ್, ಥೈಮ್ ಇತ್ಯಾದಿ ಕೆಲವು ಸಸ್ಯಗಳು ಪ್ರಾಕೃತಿಕ ಸೊಳ್ಳೆ ನಿರೋಧಿ ಸಸ್ಯಗಳಾಗಿದ್ದು ಇವುಗಳನ್ನು ಬಳಸಿ ನೀವೇ ಸ್ವತಃ ಪ್ರಾಕೃತಿಕವಾದ ಸೊಳ್ಳೆ ರಿಪೆಲ್ಲೆಂಟುಗಳನ್ನು ತಯಾರಿಸಬಹುದು. ಇದನ್ನು ಮಾಡಲು ನೀವು ಈ ಸಸ್ಯ ಅಥವಾ ಹರ್ಬ್ ಗಳನ್ನು ಒಣಗಿದ ಸ್ಥಿತಿಗೆ ತಂದು ಬಳಸಬೇಕು. ಇವುಗಳನ್ನು ಕುದಿಯುತ್ತಿರುವ ನೀರಿನಲ್ಲಿ ಹಾಕಿ ಬೇಯಿಸಿದರೆ ಸಾಕು. ತದನಂತರ ಈ ದ್ರಾವಣ ಆರಿದ ಮೇಲೆ ಅದಕ್ಕೆ ಎಂಟು ಔನ್ಸ್ ಗಳಷ್ಟು ವಿಚ್ ಹೆಜಲ್ ಸೇರಿಸಿ ಸ್ಪ್ರೇ ಮಾಡಬಹುದಾದ ಬಾಟಲಿಯಲ್ಲಿ ಸಂಗ್ರಹಿಸಿದರೆ ನಿಮ್ಮ ರಿಪೆಲ್ಲೆಂಟ್ ಸಿದ್ಧ.

6. ಹಗುರವಾದ ಬಣ್ಣದ ಉಡುಪು ಧರಿಸಿ
ಬೇಸಿಗೆಯಲ್ಲಿ ಸಾಮಾನ್ಯವಾಗಿ ಶ್ವೇತ ವರ್ಣದ ಬಟ್ಟೆ ಧರಿಸಿ. ಇದು ಸೂರ್ಯನ ಕಿರಣಗಳನ್ನು ಪ್ರತಿಫಲಿಸುವುದರಿಂದ ನಿಮಗೆ ಹೆಚ್ಚಿನ ಶಾಖ ಹತ್ತದು ಹಾಗೂ ಸೊಳ್ಳೆಗಳು ಈ ಬಣ್ಣದಿಂದ ದೂರವಾಗಿಯೂ ಇರುತ್ತವೆ.

7. ಬೆಳ್ಳುಳ್ಳಿ ಆಧಾರಿತ ಸೊಳ್ಳೆ ರಿಪೆಲ್ಲೆಂಟ್
ಬೆಳ್ಳುಳ್ಳಿ ಸೇವನೆ ಆರೋಗ್ಯಕ್ಕೂ ಉತ್ತಮ ಹಾಗೂ ಸೊಳ್ಳೆಗಳು ಸಹ ಇದರ ಬಳಿ ಸುಳಿಯದು. ಹಾಗಾಗಿ ಬೆಳ್ಳುಳ್ಳಿ ಆಧಾರಿತ ರಿಪೆಲ್ಲೆಂಟ್ ತಯಾರಿಸಿ ಅದನ್ನು ಬಳಸುವ ಮೂಲಕ ಸೊಳ್ಳೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಹದಿನಾಲ್ಕು ಬೆಳ್ಳುಳ್ಳಿ ಎಸಳೆಗಳು, ಬಯೋಡಿಗ್ರೇಡೆಬಲ್ ಡಿಶ್ ಸಾಬೂನು ಹಾಗೂ ನೀರಿದ್ದರೆ ನಿಮ್ಮ ಬೆಳ್ಳ್ಳುಳ್ಳಿ ರಿಪೆಲ್ಲೆಂಟ್ ಸಿದ್ಧವಾಗುತ್ತದೆ. ಬೆಳ್ಳುಳ್ಳಿಯಲ್ಲಿರುವ ಗಂಧಕ ಸೊಳ್ಳೆಗಳಿಗೆ ಶತ್ರುವಾಗಿದ್ದು ಈ ಕಾರಣದಿಂದಲೇ ಅವು ಹತ್ತಿರ ಸುಳಿಯುವುದಿಲ್ಲ. ಬೇಕಿದ್ದರೆ ಬೆಳ್ಳುಳ್ಳಿಯನ್ನು ಕ್ರಶ್ ಮಾಡಿಕೊಂಡು ನಿಮ್ಮ ಚರ್ಮದ ಮೇಲೆಯೂ ಅನ್ವಯಿಸಿಕೊಳ್ಳಿ. ಸೊಳ್ಳೆಗಳು ನಿಮ್ಮ ಬಳಿ ಸುಳಿಯದು.

8. ಸೊಳ್ಳೆ ಪರದೆ
ಎಲ್ಲಕ್ಕಿಂತ ಉತ್ತಮ ಉಪಾಯ ಎಂದೇ ಹೇಳಬಹುದು. ಇದರಲ್ಲಿ ಯಾವ ರೀತಿಯ ರಾಸಾಯನಿಕತೆ, ವಿದ್ಯುತ್ ಬಳಕೆ ಎಂಬುದಾಗಲಿ ಇಲ್ಲವೇ ಇಲ್ಲ. ನೀವು ಹೊರಾಂಗಣದಲ್ಲಿ ಮಲಗುತ್ತಿದ್ದರೆ ನೀಟಾಗಿ ಸೊಳ್ಳೆಪರದೆ ಅಥವಾ ನೆಟ್ ಅಥವಾ ಮಚ್ಛರದಾನಿ ಇದನ್ನು ಕಟ್ಟಿಕೊಂಡರೆ ಸಾಕು.

ಇದನ್ನೂ ಓದಿ:  Hormonal Imbalance: ಹಾರ್ಮೋನುಗಳ ಅಸಮತೋಲನ ಸಂಕೇತ ಮತ್ತು ಲಕ್ಷಣಗಳು ಯಾವವು?

9. ಸೊಳ್ಳೆ ರಿಪೆಲ್ಲೆಂಟ್ ಸಸ್ಯಗಳು
ಕೆಲವು ಸಸ್ಯಗಳು ತಮ್ಮ ವಾಸನೆಯ ಶಕ್ತಿಯಿಂದ ಸೊಳ್ಳೆಗಳು ದೂರವಿರುವಂತೆ ಮಾಡುತ್ತವೆ. ಇಂತಹ ಸಸ್ಯಗಳು ಸೊಳ್ಳೆಗಳನ್ನು ದೂರವಿರಿಸಬಹುದಾದ ಉತ್ತಮ ಆಯ್ಕೆಗಳಾಗಿದ್ದು ನಿಮ್ಮ ಕೈದೋಟದಲ್ಲಿ ಸಾಧ್ಯವಾದಷ್ಟು ಇಂತಹ ಸಸ್ಯಗಳನ್ನು ನೆಟ್ಟು ಬೆಳೆಸಿ.
Published by:Ashwini Prabhu
First published: