Holiday Plan: ಫ್ಯಾಮಿಲಿ ಜೊತೆ ಈ ಪ್ಲೇಸ್​ಗಳಿಗೆ ಟ್ರಿಪ್​ ಹೋಗಿ - ಎಂಜಾಯ್​ ಮಾಡಿ

ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣಬಹುದಾದ ಜಗತ್ತಿನ ಬಹುಶಃ ಏಕೈಕ ದೇಶವೆಂದರೆ ಅದು ಭಾರತ. ಹಾಗಾಗಿಯೇ ಭಾರತ ಅನೇಕ ವಿದೇಶಿ ಪ್ರವಾಸಿಗರಿಗೆ ಬಲು ಆಕರ್ಷಕ ತಾಣ ಎಂದರೂ ತಪ್ಪಿಲ್ಲ.

ಹೂವಿನ ಕಣಿವೆಗಳು

ಹೂವಿನ ಕಣಿವೆಗಳು

  • Share this:
ವೈವಿಧ್ಯತೆಯಲ್ಲಿ ಏಕತೆಯನ್ನು (Unity in diversity) ಕಾಣಬಹುದಾದ ಜಗತ್ತಿನ ಬಹುಶಃ ಏಕೈಕ ದೇಶವೆಂದರೆ ಅದು ಭಾರತ (India). ಹಾಗಾಗಿಯೇ ಭಾರತ ಅನೇಕ ವಿದೇಶಿ ಪ್ರವಾಸಿಗರಿಗೆ (Foreign travelers) ಬಲು ಆಕರ್ಷಕ ತಾಣ ಎಂದರೂ ತಪ್ಪಿಲ್ಲ. ಆದರೆ, ಭಾರತ ಕೇವಲ ತನ್ನ ವಿಶಿಷ್ಟ ಸಂಸ್ಕೃತಿ (Culture), ಸಂಪ್ರದಾಯಗಳಿಂದ ಮಾತ್ರ ಆಕರ್ಷಕವಾಗಿದೆಯೆ..? ಖಂಡಿತ ಇಲ್ಲ. ಈ ಭವ್ಯ ದೇಶದಲ್ಲಿ ಅತ್ಯದ್ಭುತ ಐತಿಹಾಸಿಕ ರಚನೆಗಳು (Historical structure) ಸೇರಿದಂತೆ ಮೈಮನಗಳು ಪುಳುಕಿತಗೊಳ್ಳುವ, ರೋಮ ರೋಮಗಳು ಸೆಟೆದೆದ್ದು (Goosebumps) ನಿಲ್ಲುವಂತಹ ಅಸಂಖ್ಯಾತ ನಯನ ಮನೋಹರ ಪ್ರಾಕೃತಿಕ ಸೌಂದರ್ಯದ ಅನೇಕ ತಾಣಗಳೂ ಇವೆ!

ಸೌಂದರ್ಯದ ಬಗ್ಗೆ ಮಾತನಾಡುತ್ತಿದ್ದೇವೆಂದರೆ ಒಂದೊಮ್ಮೆ ಹೂವುಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ಪುಷ್ಪಗಳ ಕಣಿವೆಗಳ ಬಗ್ಗೆ ಮಾತನಾಡೋಣವೆ...? ಹೌದು, ಭಾರತವು ವಿಶ್ವದ ಅತ್ಯಂತ ಸುಂದರವಾದ ಹೂವಿನ ಕಣಿವೆಗಳನ್ನು ಹೊಂದಿದೆ ಎಂದು ನಿಮಗೆ ತಿಳಿದಿದೆಯೇ? ಭಾರತವು ಈ ಹೂವುಗಳಿಗೆ ಅತ್ಯಂತ ಅನುಕೂಲಕರವಾದ ಹವಾಮಾನ ಮತ್ತು ಎತ್ತರವನ್ನು ಹೊಂದಿರುವುದರಿಂದ ಇದು ಸಾಧ್ಯವಾಗಿದೆ. ಉತ್ತರದಿಂದ ದಕ್ಷಿಣಕ್ಕೆ, ಮತ್ತು ಪೂರ್ವದಿಂದ ಪಶ್ಚಿಮಕ್ಕೆ, ಸುಂದರವಾದ ವೈಲ್ಡ್ ಫ್ಲವರ್‌ಗಳಿಂದ ತುಂಬಿರುವ ಈ ಹೂವಿನ ಕಣಿವೆಗಳಿವೆ, ಕೆಲವು ಅತ್ಯಂತ ಸುಂದರವಾದ ದೃಶ್ಯಗಳೊಂದಿಗೆ ನಮ್ಮನ್ನು ಸ್ವಾಗತಿಸಲು ಯಾವಾಗಲೂ ಸಿದ್ಧವಾಗಿದೆ.

ಯುಮ್ತಾಂಗ್ ಕಣಿವೆ, ಸಿಕ್ಕಿಂ

ಯುಮ್ತಾಂಗ್ ಕಣಿವೆಯು ಕಾಂಚನಜುಂಗಾ ಪರ್ವತದ ತಳದ ಪ್ರದೇಶದಲ್ಲಿ ನೆಲೆಸಿದ್ದು ನೋಡಲು ಸುಂದರವಾಗಿದೆ. ಇದು ತನ್ನ ರಮಣೀಯ ಸೌಂದರ್ಯಕ್ಕಾಗಿ ದೇಶೀಯ ಹಾಗೂ ಅಂತರಾಷ್ಟ್ರೀಯ ಪ್ರಯಾಣಿಕರಲ್ಲಿ ಹೆಸರುವಾಸಿಯಾಗಿದೆ. ಇಲ್ಲಿಂದ ಕಾಣುವ ಪ್ರಪಂಚದ ಮೂರನೇ ಅತಿ ಎತ್ತರದ ಪರ್ವತವಾದ ಕಾಂಚನಜುಂಗಾದ ನೋಟಕ್ಕೆ ಯಾವುದೂ ಸಾಟಿಯಿಲ್ಲ ಎಂದೆನಿಸುತ್ತದೆ. ಕಣಿವೆಯು ಪ್ರೈಮ್ರೋಸ್ ಮತ್ತು ಕೋಬ್ರಾ ಲಿಲಿ ಮತ್ತು ರೋಡೋಡೆಂಡ್ರಾನ್ಗಳಂತಹ ಕಾಡು ಹೂವುಗಳಿಂದ ಆವೃತವಾಗಿದೆ. ಫೆಬ್ರವರಿ ಅಂತ್ಯದಿಂದ ಜೂನ್ ಮಧ್ಯದವರೆಗೆ, ಕಣಿವೆಯು ವರ್ಣರಂಜಿತ ಹೂವುಗಳಿಂದ ಆವೃತವಾಗಿದ್ದು ನೋಡುಗರಿಗೆ ಸುಂದರತೆಯ ಆಸ್ವಾದವನ್ನು ಉಣಬಡಿಸುತ್ತದೆ.

ಇದನ್ನೂ ಓದಿ: Viral Tree: ಇಲ್ಲೊಂದು ಕಾರಂಜಿ ಮರ! ಈ ಮರದೊಳಗಿಂದ ಚಿಮ್ಮುತ್ತಲೇ ಇರುತ್ತೆ ನೀರು, ಏನಿದರ ರಹಸ್ಯ?

ವ್ಯಾಲಿ ಆಫ್ ಫ್ಲವರ್ಸ್ ನ್ಯಾಷನಲ್ ಪಾರ್ಕ್, ಉತ್ತರಾಖಂಡ

ನೀವು ಹೂಗಳ ಕಣಿವೆಗೆ ಚಾರಣವನ್ನು ಯೋಜಿಸಿದಾಗ, ನಿಮ್ಮ ಉದ್ದೇಶ ಏನಾಗಿರಬಹುದು? ಖಂಡಿತವಾಗಿ ನೀವು ಆ ಪ್ರದೇಶದಲ್ಲಿರುವ ಅತ್ಯದ್ಭುತ ಹೂವುಗಳು ಹಾಗೂ ಆ ಹೂವುಗಳಿಂದ ಆವೃತವಾದ ಈ ಭವ್ಯ ಪ್ರದೇಶದ ಮನಮೋಹಕ ದೃಶ್ಯಾವಳಿಗಳನ್ನು ನೋಡುವುದನ್ನೇ ನೀವು ನಿರೀಕ್ಷಿಸುತ್ತೀರಿ. ನಂದಾ ದೇವಿ ಬಯೋಸ್ಫಿಯರ್ ರಿಸರ್ವ್‌ನಲ್ಲಿರುವ ಪುಷ್ಪಗಳ ಕಣಿವೆಯು ಅತ್ಯಂತ ಪ್ರಮುಖವಾದ ಜೀವವೈವಿಧ್ಯ ತಾಣವಾಗಿದೆ. ಕಣಿವೆಯು ಪರಿಸರ ವ್ಯವಸ್ಥೆಗೆ ಬಹಳ ಮುಖ್ಯವಾದ ಹಲವಾರು ಸ್ಥಳೀಯ ಸಸ್ಯ ಪ್ರಭೇದಗಳನ್ನು ಹೊಂದಿದ್ದು ನೋಡಲು ಆಕರ್ಷಕವಾಗಿ ಕಂಗೊಳಿಸುತ್ತದೆ. ಬ್ರಹ್ಮಕಮಲ ಹೂವು, ನೀಲಿ ಹಿಮಾಲಯನ್ ಗಸಗಸೆ, ಮತ್ತು ಹಿಮಾಲಯನ್ ಮೇಪಲ್ ಇಲ್ಲಿ ಕಂಡುಬರುವ ಕೆಲವು ವಿಶೇಷ ಪುಷ್ಪಗಳಾಗಿವೆ.

ಜುಕೌ ಕಣಿವೆ (Dzukou Valley), ನಾಗಾಲ್ಯಾಂಡ್-ಮಣಿಪುರ

ಜುಕೌ ಕಣಿವೆಯು ತನ್ನ ಭೌಗೋಳಿಕ ಪ್ರದೇಶವನ್ನು ನಾಗಾಲ್ಯಾಂಡ್ ಮತ್ತು ಮಣಿಪುರದ ಎರಡು ರಾಜ್ಯಗಳೊಂದಿಗೆ ಹಂಚಿಕೊಂಡಿದೆ. ಇದು ಈಶಾನ್ಯ ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಆಕರ್ಷಕ ಪ್ರವಾಸಿ ಕ್ಷೇತ್ರಗಳಲ್ಲಿ ಒಂದಾಗಿದೆ. ಕಣಿವೆಯು ಅದರ ರೋಮಾಂಚನಕಾರಿ (ಮತ್ತು ಕೆಲವೊಮ್ಮೆ ಕಷ್ಟಕರವಾದ) ಟ್ರೆಕ್ಕಿಂಗ್ ಮಾರ್ಗಗಳು, ಸಾಟಿಯಿಲ್ಲದ ನೈಸರ್ಗಿಕ ಸೌಂದರ್ಯ ಮತ್ತು ಉತ್ತಮ ಕ್ಯಾಂಪಿಂಗ್ ಸ್ಥಳಗಳಿಗಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ವಸಂತಕಾಲದಲ್ಲಿ, ಕಣಿವೆಯು ಬಣ್ಣಗಳ ಗುಚ್ಛವಾಗಿ ಬದಲಾಗುತ್ತದೆ, ಎಲ್ಲೆಡೆ ಅನೇಕ ಕಾಡು ಹೂವುಗಳು ಅರಳುತ್ತವೆ ಮತ್ತು ಈ ದೃಶ್ಯವನ್ನು ನೋಡಿದಾಗ ನೋಡಿದಾಗ ಮಂತ್ರಮುಗ್ಧರಾಗುವುದು ಗ್ಯಾರಂಟಿ.

ಎರವಿಕುಲಂ ರಾಷ್ಟ್ರೀಯ ಉದ್ಯಾನವನ - ಮುನ್ನಾರ್, ಕೇರಳ

ಮುನ್ನಾರ್‌ನಿಂದ ಕೇವಲ 20 ನಿಮಿಷಗಳ ಅಂತರದಲ್ಲಿ ಎರವಿಕುಲಂ ರಾಷ್ಟ್ರೀಯ ಉದ್ಯಾನವನವಿದೆ, ಇದು 12 ವರ್ಷಗಳಿಗೊಮ್ಮೆ ಅರಳುವ ನೀಲಕುರಿಂಜಿ ಹೂವುಗಳಿಗೆ ಹೆಸರುವಾಸಿಯಾಗಿದೆ. ನೀಲಗಿರಿ ಪರ್ವತ ಶ್ರೇಣಿಯು ಈ ಹೂವಿನಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. ಅವು ಅರಳಿದಾಗ, ಇಡೀ ಕಣಿವೆ ನೇರಳೆ ಬಣ್ಣದಲ್ಲಿ ಸ್ನಾನ ಮಾಡುತ್ತಿದೆ ಎಂಬಂತೆ ಭಾಸವಾಗುತ್ತದೆ. ನೀಲಕುರಿಂಜಿಯು ಶೋಲಾ ಅರಣ್ಯದ ವಿಶೇಷತೆಯಾಗಿದೆ, ಇದು ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಹರಡಿದೆ.

ಇದನ್ನೂ ಓದಿ: Viral Story: ಅಬ್ದುಲ್ ಗಫರ್ ಗೋಪ್ರೇಮ, ಗೋವುಗಳ ದಾಹ ತಣಿಸುತ್ತಿರುವ ಗಫರ್!

ಕಾಸ್ ಪ್ರಸ್ಥಭೂಮಿ, ಮಹಾರಾಷ್ಟ್ರ

ಒಂದು ಹೂವಿನ ಕಣಿವೆಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿ ಗುರುತಿಸಲ್ಪಟ್ಟಿದೆ ಎಂದರೆ ಆ ಸ್ಥಳದಲ್ಲಿ ಏನಾದರೂ ವಿಶೇಷತೆ ಇರಲೇಬೇಕಲ್ಲವೆ? ಹೌದು, ಕಾಸ್ ಪ್ರಸ್ಥಭೂಮಿ ನಿಜಕ್ಕೂ ವಿಶೇಷವೇ ಆಗಿದೆ. ಮಹಾರಾಷ್ಟ್ರದ ಸತಾರಾದಿಂದ ಜಿಲ್ಲೆಯ ಹೊರಬದಿಯಲ್ಲಿ ಸ್ಥಿತೈರುವ ಈ ನಯನಮನೋಹರ ಕಾಸ್ ಭೂಮಿ ಪಶ್ಚಿಮ ಘಟ್ಟಗಳ ಪ್ರಮುಖ ಭಾಗವಾಗಿದೆ. ಆಗಸ್ಟ್‌ನಿಂದ ಅಕ್ಟೋಬರ್ ಆರಂಭದವರೆಗೆ, ಪ್ರಸ್ಥಭೂಮಿಯು ಸುಂದರವಾದ ಮತ್ತು ವರ್ಣರಂಜಿತ ಕ್ಯಾನ್ವಾಸ್ ಆಗಿ ಬದಲಾಗುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು.
Published by:Ashwini Prabhu
First published: