Jaggery Tea: ಸಕ್ಕರೆಗಿಂತ ಬೆಲ್ಲ ಒಳ್ಳೆಯದು ಅಂದ್ಕೊಂಡ್ರಾ? ಬೆಲ್ಲದ ಚಹಾ ಕುಡಿಯುತ್ತಿದ್ರೆ ಮೊದ್ಲು ನಿಲ್ಲಿಸಿ!

ಮರುಕಟ್ಟೆಯಲ್ಲಿ ಸಕ್ಕರೆಯನ್ನು ಬಳಸದೆ ಬೆಲ್ಲವನ್ನು ಬಳಸಿ ಅನೇಕ ಲಾಡುಗಳು, ಜಿಲೇಬಿ ಮತ್ತು ಅನೇಕ ರೀತಿಯ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿದ್ದು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರಿಗಾಗಿ ಲಭ್ಯವಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಬೆಲ್ಲದ ಚಹಾ

ಬೆಲ್ಲದ ಚಹಾ

  • Share this:
ಈಗಂತೂ ಸಕ್ಕರೆ ಕಾಯಿಲೆ (Sugar Disease) ಇರುವವರು ಬೇರೆಯವರಿಗೆ ಹೇಳುವ ಒಂದು ಸಾಮಾನ್ಯವಾದ ಮಾತು ಎಂದರೆ ಅದು ‘ಸಕ್ಕರೆ (Sugar) ತಿನ್ನುವ ಬದಲು ಬೆಲ್ಲವನ್ನು ಉಪಯೋಗಿಸಿ ಅಂತ’ ಇದು ಎಲ್ಲಾದಕ್ಕೂ ಅನ್ವಯಿಸುತ್ತದೆ. ಎಂದರೆ ಚಹಾ (Tea) ಮಾಡಿಕೊಂಡಾಗ ನಾವು ಸಕ್ಕರೆಯ ಬದಲಿಗೆ ಅದರಲ್ಲಿ ಬೆಲ್ಲ ಹಾಕಿಕೊಳ್ಳುವುದು, ಸಕ್ಕರೆಯಿಂದ ಮಾಡಿದ ಸಿಹಿ ತಿಂಡಿಗಳನ್ನು ಸೇವಿಸುವುದನ್ನು ಬಿಟ್ಟು ಬೆಲ್ಲದಿಂದ (Jaggery) ಮಾಡಿದ ಸಿಹಿ ತಿಂಡಿಗಳನ್ನು (Sweets) ಸೇವಿಸುವುದು. ಹೀಗೆ ಎಲ್ಲೆಲ್ಲಿ ನಾವು ಈ ಬಿಳಿ ಸಕ್ಕರೆಯನ್ನು (White sugar) ಬಳಸುತ್ತೇವೆಯೋ, ಅಲ್ಲಲ್ಲಿ ಬೆಲ್ಲವನ್ನು ಬಳಸುವುದಕ್ಕೆ ಶುರು ಮಾಡಿದ್ದೇವೆ.

ಸಕ್ಕರೆ ಬದಲಿಗೆ ಬೆಲ್ಲದ ಉಪಯೋಗ
ಈಗಿನ ಫಿಟ್ನೆಸ್ ಉತ್ಸಾಹಿಗಳು ಸಕ್ಕರೆಯನ್ನು ಬೆಲ್ಲ ಮತ್ತು ಜೇನುತುಪ್ಪದಂತಹ ಆರೋಗ್ಯಕರ ಪರ್ಯಾಯಗಳೊಂದಿಗೆ ಬದಲಾಯಿಸುವ ಪ್ರವೃತ್ತಿಯನ್ನು ಹೆಚ್ಚಾಗಿಯೇ ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಂತೂ ಮರುಕಟ್ಟೆಯಲ್ಲಿ ಸಕ್ಕರೆಯನ್ನು ಬಳಸದೆ ಬೆಲ್ಲವನ್ನು ಬಳಸಿ ಅನೇಕ ಲಾಡುಗಳು, ಜಿಲೇಬಿ ಮತ್ತು ಅನೇಕ ರೀತಿಯ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತಿದ್ದು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಜನರಿಗಾಗಿ ಲಭ್ಯವಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ:  High BP: ಅಧಿಕ ರಕ್ತದೊತ್ತಡದ ಸಮಸ್ಯೆಯೇ? ಹಾಗಿದ್ರೆ ಈ ಆಹಾರಗಳನ್ನು ಸೇವಿಸಿ

ಚಹಾದಲ್ಲಿ ಬೆಲ್ಲ ಹಾಕಿಕೊಂಡು ಕುಡಿಯುವುದು ದೋಷಪೂರಿತ ಸಂಯೋಜನೆ
ಇದಕ್ಕೆ ಮುಖ್ಯವಾದ ಕಾರಣ ಏನೆಂದರೆ ಬೆಲ್ಲ ಮತ್ತು ಜೇನುತುಪ್ಪ ಎರಡು ನೈಸರ್ಗಿಕ ಸಿಹಿಕಾರಕಗಳಾಗಿವೆ ಮತ್ತು ಸಕ್ಕರೆ ನೀಡದ ಹೆಚ್ಚುವರಿ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಅನೇಕ ಜನರು ಬೆಲ್ಲದಿಂದ ಸಿಹಿಯಾದ ಚಹಾದೊಂದಿಗೆ ತಮ್ಮ ದಿನವನ್ನು ಪ್ರಾರಂಭಿಸಲು ಇಷ್ಟಪಡುತ್ತಾರೆ. ಆದರೆ ಆಯುರ್ವೇದದ ಪ್ರಕಾರ, ಹೀಗೆ ಚಹಾದಲ್ಲಿ ಬೆಲ್ಲ ಹಾಕಿಕೊಂಡು ಕುಡಿಯುವುದು ಒಂದು ದೋಷಪೂರಿತ ಸಂಯೋಜನೆಯಾಗಿದೆ ಎಂದು ಹೇಳಲಾಗುತ್ತಿದೆ.

ಜೀರ್ಣಕ್ರಿಯೆಯ ಮೇಲೆ ಪರಿಣಾಮ
ಪ್ರಾಚೀನ ಔಷಧೀಯ ಪದ್ಧತಿಯ ಪ್ರಕಾರ, ಕೆಟ್ಟ ಆಹಾರ ಸಂಯೋಜನೆಗಳು ಕಳಪೆ ಜೀರ್ಣಕ್ರಿಯೆಗೆ ಕಾರಣವಾಗಬಹುದು ಮತ್ತು ವಿಷಕಾರಿ ತ್ಯಾಜ್ಯಕ್ಕೆ ಕಾರಣವಾಗಬಹುದು, ಇದು ಜೀರ್ಣಕ್ರಿಯೆಯ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ. ಬೆಲ್ಲ ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಗಳಿದ್ದರೂ ಸಹ ಜೀವಸತ್ವಗಳು, ರಂಜಕ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿದ್ದರೂ, ಹಾಲಿನೊಂದಿಗೆ ಅದರ ಸಂಯೋಜನೆಯು ಹಾನಿಕಾರಕವಾಗಬಹುದು.

ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವ ವಿಷಕಾರಿ ತ್ಯಾಜ್ಯ
ಆಯುರ್ವೇದದ ಪ್ರಕಾರ, ಆಹಾರಗಳ ತಪ್ಪು ಸಂಯೋಜನೆಯು ನಿಮ್ಮ ದೇಹದಲ್ಲಿ ಅಮಾ (ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುವ ವಿಷಕಾರಿ ತ್ಯಾಜ್ಯ) ಗೆ ಕಾರಣವಾಗಬಹುದು. ಆಯುರ್ವೇದದಲ್ಲಿ, ಪ್ರತಿಯೊಂದು ಆಹಾರವು ತನ್ನದೇ ಆದ ನಿರ್ದಿಷ್ಟ ಗುಣಮಟ್ಟ, ರುಚಿ, ಶಕ್ತಿ, ಜೀರ್ಣಕಾರಿ ನಂತರದ ಪರಿಣಾಮ ಮತ್ತು ಇತ್ಯಾದಿಗಳನ್ನು ಹೊಂದಿದೆ" ಎಂದು ಆಯುರ್ವೇದ ತಜ್ಞೆ ಡಾ. ರೇಖಾ ರಾಧಾಮಣಿ ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಹೇಳುತ್ತಾರೆ.

ಇದು ಎಷ್ಟರ ಮಟ್ಟಿಗೆ ಸತ್ಯ ಎಂದು ನಿಮಗೆ ಆಶ್ಚರ್ಯವಾಗುತ್ತಿದೆಯಲ್ಲವೇ? ಬನ್ನಿ ಹಾಗಾದರೆ ನೋಡೋಣ ಆಯುರ್ವೇದದಲ್ಲಿ ಇದರ ಬಗ್ಗೆ ಏನು ವಿವರಣೆ ಇದೆ ಅಂತ. ಹಾಲು ದೇಹಕ್ಕೆ ತಂಪನ್ನು ಒದಗಿಸಿದರೆ, ಇನ್ನೊಂದು ಕಡೆಯಲ್ಲಿ ಬೆಲ್ಲವು ದೇಹಕ್ಕೆ ಬಿಸಿಯನ್ನು ಒದಗಿಸುತ್ತದೆ. ನೀವು ಬಿಸಿ ಸಾಮರ್ಥ್ಯದ ಆಹಾರದೊಂದಿಗೆ ತಂಪಾದ ಸಾಮರ್ಥ್ಯದ ಆಹಾರ ಪದಾರ್ಥವನ್ನು ಸಂಯೋಜಿಸಿದಾಗ, ಅದು ಸರಿಯಾಗಿ ಹೊಂದಿಕೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ ಎಂದು ಡಾ. ರಾಧಾಮಣಿ ಹೇಳುತ್ತಾರೆ.

ಮಿಶ್ರಿ ಅಥವಾ ರಾಕ್ ಸಕ್ಕರೆ
ತಮ್ಮ ಚಹಾಕ್ಕಾಗಿ ಸಕ್ಕರೆ ಮತ್ತು ಬೆಲ್ಲವನ್ನು ಹೊರತು ಪಡಿಸಿ ಆರೋಗ್ಯಕರ ನೈಸರ್ಗಿಕ ಸಿಹಿಕಾರಕವನ್ನು ಹುಡುಕುತ್ತಿರುವ ಜನರಿಗೆ, ಮಿಶ್ರಿ ಅಥವಾ ರಾಕ್ ಸಕ್ಕರೆಯನ್ನು ಹಾಲಿನಂತೆ ದೇಹಕ್ಕೆ ತಂಪನ್ನು ನೀಡುತ್ತದೆ ಮತ್ತು ಇಲ್ಲಿ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮವಾಗುವುದಿಲ್ಲ ಎಂದು ಆಯುರ್ವೇದ ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ:  Breakfast Recipe: ಬೆಳಗಿನ ತಿಂಡಿಗೆ ಪಟ್​ ಪಟ್​ ಅಂತ ತಯಾರಿಸಿ ಜೋಳದ ಉಪ್ಪಿಟ್ಟು - ಇಲ್ಲಿದೆ ರೆಸಿಪಿ

ಆಯುರ್ವೇದದ ಪ್ರಕಾರ, ಆರೋಗ್ಯಕ್ಕೆ ಹಾನಿಕಾರಕವಾದ ಇತರ ಆಹಾರ ಸಂಯೋಜನೆಗಳೆಂದರೆ ಬಾಳೆಹಣ್ಣು ಮತ್ತು ಹಾಲು, ಹಾಲು ಮತ್ತು ಮೀನು, ಮೊಸರು ಮತ್ತು ಚೀಸ್, ಜೇನುತುಪ್ಪ ಮತ್ತು ತುಪ್ಪ. ತಪ್ಪು ಆಹಾರ ಸಂಯೋಜನೆಗಳು ಉರಿಯೂತ, ಚರ್ಮದ ಅಸ್ವಸ್ಥತೆಗಳಿಂದ ಹಿಡಿದು ಆಟೋ ಇಮ್ಯೂನ್ ಕಾಯಿಲೆಗಳವರೆಗೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಬಹುದು ಎಂದು ಹೇಳಲಾಗುತ್ತದೆ.
Published by:Ashwini Prabhu
First published: