Health Care: ಕೀಲು, ಸೊಂಟ ನೋವಿನ ಸಮಸ್ಯೆ ಕಾಡುತ್ತಿದೆಯೇ? ಹಾಗಿದ್ದರೆ ಈ ಪದಾರ್ಥಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ

ದೇಹವನ್ನು ಆರೋಗ್ಯವಾಗಿರಿಸಲು ಪೌಷ್ಟಿಕ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಮೂಳೆಗಳು ಗಟ್ಟಿಯಾಗಲು ಕೆಲವು ಅಗತ್ಯ ಪೋಷಕಾಂಶಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಮೂಳೆಗಳು ದೀರ್ಘಕಾಲದವರೆಗೆ ಆರೋಗ್ಯವಾಗಿ ಇರುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    -ವಯಸ್ಸಾಗುತ್ತಾ (Age) ಹೋದಂತೆ ದೇಹದಲ್ಲಿ (Body) ಪೋಷಕಾಂಶಗಳ (Nutrients) ಕೊರತೆ ಉಂಟಾಗುತ್ತದೆ. ಅದರಲ್ಲೂ 40 ವರ್ಷದ ನಂತರ ಮೂಳೆ ನೋವು (Bones Pain), ಕೀಲು ನೋವಿನ ಸಮಸ್ಯೆ ಮಹಿಳೆಯರನ್ನು (Woman) ತುಂಬಾ ಕಾಡುತ್ತದೆ.  ಶೀತ ವಾತಾವರಣದಲ್ಲಿ ಸಂಧಿವಾತ ರೋಗಿಗಳು ಸಮಸ್ಯೆ ಅನುಭವಿಸಬೇಕಾಗುತ್ತದೆ. ಅಂತಹ ಸ್ಥಿತಿಯಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯವಾಗುತ್ತದೆ. ಮೂಳೆಗಳು ಗಟ್ಟಿಯಾಗಲು ಕೆಲವು ಅಗತ್ಯ ಪೋಷಕಾಂಶಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಮೂಳೆಗಳು ದೀರ್ಘಕಾಲದವರೆಗೆ ಆರೋಗ್ಯವಾಗಿ ಇರುತ್ತವೆ. ಕ್ಯಾಲ್ಸಿಯಂ ಮಾತ್ರವಲ್ಲದೆ, ಮೂಳೆಗಳು ಗಟ್ಟಿಯಾಗಲು ಅನೇಕ ವಿಟಮಿನ್‌ ಮತ್ತು ಪೋಷಕಾಂಶಗಳು ಸಹ ಬೇಕು.

    ಪೌಷ್ಟಿಕ ಆಹಾರ ಸೇವನೆ ಅಗತ್ಯ

    ದೇಹವನ್ನು ಆರೋಗ್ಯವಾಗಿರಿಸಲು ಪೌಷ್ಟಿಕ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ನಾವು ಎಷ್ಟು ಪ್ರಮಾಣದಲ್ಲಿ ಪೌಷ್ಠಿಕ ಆಹಾರ ಸೇವನೆ ಮಾಡುತ್ತೇವೆಯೋ ಅಷ್ಟು ಆರೋಗ್ಯದಿಂದ ಇರಲು ಸಾಧ್ಯ. ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡಿದ ಸತ್ವ ಭರಿತ ಆಹಾರವನ್ನು ಪ್ರತಿ ಮಹಿಳೆಯೂ ದಿನವೂ ಸೇವನೆ ಮಾಡುವುದು ಮುಖ್ಯ.

    ಏಕೆಂದರೆ ಉತ್ತಮ ಆಹಾರ ಸೇವನೆ ದೇಹವನ್ನು ಸರಿಯಾಗಿ ಇಡುತ್ತದೆ. ನಿಮ್ಮ ದೇಹವು ಸರಿಯಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ರೋಗಗಳ ವಿರುದ್ಧ ಹೋರಾಡಲು ಸಾಧ್ಯ ಆಗುತ್ತದೆ. ಇಲ್ಲದಿದ್ದರೆ ದೈಹಿಕ ಸಮಸ್ಯೆಗಳು ಹೆಚ್ಚಾಗಲು ತುಂಬಾ ಸಮಯ ಬೇಕಾಗಲ್ಲ.

    ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳನ್ನು ಸೇವಿಸಿದ್ರೆ ತೂಕ ಹೆಚ್ಚೋ ಭಯವಿಲ್ಲ, ಫಿಟ್ ಆಗಿರುತ್ತೀರಿ 

    ದೇಹಕ್ಕೆ ಪ್ರತಿದಿನ ಕೆಲವು ಜೀವಸತ್ವಗಳು ಮತ್ತು ಖನಿಜಗಳು ಬೇಕಾಗುತ್ತವೆ. ಆದ್ದರಿಂದ, ನಿಮ್ಮ ದೈನಂದಿನ ಅಗತ್ಯಗಳನ್ನು ಪೂರೈಸುವ ಆಹಾರದಲ್ಲಿ ಪೋಷಕಾಂಶ ಭರಿತ ಪದಾರ್ಥಗಳನ್ನು ಸೇರಿಸಬೇಕು. ಅದರಲ್ಲೂ ಮಹಿಳೆಯರು ತಮ್ಮ ಆಹಾರದಲ್ಲಿ ಈ ಜೀವಸತ್ವಗಳನ್ನು ಸೇರಿಸಿಕೊಳ್ಳಬೇಕು.

    ಕೀಲು ನೋವಿನಿಂದ ಪರಿಹಾರ ಪಡೆಯಲು ಜೀವಸತ್ವಗಳ ಅವಶ್ಯಕತೆ

    ಕ್ಯಾಲ್ಸಿಯಂ

    ಮೂಳೆಗಳಲ್ಲಿನ ನೋವಿನ ಪ್ರಮುಖ ಸಮಸ್ಯೆ ಅವುಗಳ ದುರ್ಬಲಗೊಳ್ಳುವಿಕೆ. ಮೂಳೆಗಳನ್ನು ಬಲಗೊಳಿಸಲು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ಆಹಾರ ಸೇವನೆ ಮಾಡಬೇಕು. ದೇಹದಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇಲ್ಲದಿದ್ದರೆ ಮೂಳೆಗಳು ದುರ್ಬಲಗೊಳ್ಳುತ್ತವೆ. ಇದು ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ.

    ಕ್ಯಾಲ್ಸಿಯಂಗಾಗಿ ಚೀಸ್, ಮೊಸರು ಮುಂತಾದ ಹಾಲಿನಿಂದ ಮಾಡಿದ ವಸ್ತುಗಳನ್ನು ಸೇರಿಸಿ. ಬ್ರೊಕೊಲಿ, ಸಾಲ್ಮನ್ ಮೀನು, ಹಸಿರು ಎಲೆಗಳ ತರಕಾರಿಗಳು ಮತ್ತು ದ್ವಿದಳ ಧಾನ್ಯಗಳನ್ನು ತರಕಾರಿಗಳಲ್ಲಿ ಸೇರಿಸಿ.

    ವಿಟಮಿನ್ ಡಿ

    ವಿಟಮಿನ್ ಡಿ ಕೂಡ ಮೂಳೆಗಳು ಗಟ್ಟಿಯಾಗಲು ಬೇಕು. ಕ್ಯಾಲ್ಸಿಯಂ ಹೀರಿಕೊಳ್ಳಲು ದೇಹವು ಸಾಕಷ್ಟು ವಿಟಮಿನ್ ಡಿ ಅನ್ನು ಹೊಂದಿರಬೇಕು. ವಿಟಮಿನ್ ಡಿ ಯ ನೈಸರ್ಗಿಕ ಮೂಲವೆಂದರೆ ಸೂರ್ಯ ಆದರೆ ನೀವು ಅದನ್ನು ಪೂರಕಗಳು, ಸುಟ್ಟ ಸಾಲ್ಮನ್ ಮೀನು ಅಥವಾ ಹುಳಿ ಪದಾರ್ಥ ತಿನ್ನಬೇಕು.

    ಪ್ರೋಟೀನ್

    ಎಲುಬುಗಳನ್ನು ಬಲಿಷ್ಠಗೊಳಿಸಲು ಪ್ರೋಟೀನ್ ಅಗತ್ಯ. ಮೂಳೆ ಮುರಿತದ ನಂತರ ನಿಮ್ಮ ದೇಹ ಸರಿಪಡಿಸಲು ಪ್ರೋಟೀನ್ ಕೆಲಸ ಮಾಡುತ್ತದೆ. ಡೈರಿ ಉತ್ಪನ್ನಗಳಲ್ಲಿ ಪ್ರೋಟೀನ್ ಪಡೆಯಬಹುದು.  ಹಾಲು, ಚೀಸ್, ಮೊಸರು ಪ್ರೋಟೀನ್‌ನ ಉತ್ತಮ ಮೂಲ. ಕುಂಬಳಕಾಯಿ ಬೀಜಗಳು, ಕಡಲೆಕಾಯಿ, ತೋಫು, ಪೇರಲ ಮತ್ತು ಸೀಗಡಿಗಳಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಕಂಡು ಬರುತ್ತದೆ.

    ಇದನ್ನೂ ಓದಿ: ಕೈಗಳಲ್ಲಿ ಮರಗಟ್ಟುವಿಕೆ, ಜುಮ್ಮೆನ್ನುವುದನ್ನು ನಿರ್ಲಕ್ಷ್ಯ ಮಾಡದೇ, ಸಮಸ್ಯೆಯ ಬಗ್ಗೆ ಅರಿಯಿರಿ

    ಜೀವಸತ್ವಗಳು ಮತ್ತು ಖನಿಜಗಳು

    ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಂ ಮೂಳೆಗಳನ್ನು ಬಲಪಡಿಸಲು ಬಹಳ ಮುಖ್ಯ. ಪಾಲಕ ಮತ್ತು ಸೋಯಾಬೀನ್‌ನಿಂದ ಮಾಡಿದ ವಸ್ತುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಬೇಕು. ವಿಟಮಿನ್ ಕೆ, ವಿಟಮಿನ್ ಸಿ ಮತ್ತು ವಿಟಮಿನ್ ಎ ಮುಖ್ಯ. ನೀವು ಆಹಾರದಲ್ಲಿ ಸಿಟ್ರಸ್ ಹಣ್ಣುಗಳು, ಟೊಮ್ಯಾಟೊ, ಕ್ಯಾರೆಟ್, ಹಸಿರು ತರಕಾರಿಗಳು, ಮಾಂಸ, ಮೊಟ್ಟೆ, ಬಾದಾಮಿ ಮತ್ತು ಗೋಡಂಬಿ ತಿನ್ನಬೇಕು.
    Published by:renukadariyannavar
    First published: