Evening Snacks: ಸಂಜೆ ಚಹಾ ಜೊತೆಗೆ ತಿಂಡಿ ತಿನ್ನುವ ಅಭ್ಯಾಸವಿದ್ರೆ ಇಲ್ಲಿದೆ ಸ್ಪೆಷಲ್ ರವೆ ಸ್ನ್ಯಾಕ್ಸ್

ನಮ್ಮ ಕಿಚನ್ನಿನ ಭಾಗವಾಗಿ ನಾವು ರವೆಯನ್ನು ಬಳಸುತ್ತೇವೆ. ರವೆಯಿಂದ ತಯಾರಿಸುವ ಹಲವು ಖಾದ್ಯಗಳ ಪರಿಚಯ ನಮಗಿದೆ. ಅದರಲ್ಲಿ ಬಿಸಿ ಬಿಸಿ ರವೆ ವಡೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವಿಲ್ಲಿ ನೋಡೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಸಂಜೆ (Evening) ಟೀ (tea) ಜೊತೆ ಒಂದಷ್ಟು ಕುರುಕುರು ತಿಂಡಿ (tiffen) ಇಲ್ಲವೇ ವಡೆ ಇದ್ದರೆ ಬಲು ಇಷ್ಟ (like) ಮತ್ತು ಮೋಜು. ಅಡುಗೆಯಲ್ಲಿ ಸಾವಿರಾರು ಬಗೆಗಳಿವೆ. ಆದರೆ ಆಯಾ ಪ್ರದೇಶಕ್ಕನುಗುಣವಾಗಿ ಎಲ್ಲರೂ ತಮ್ಮ ಮನೆಗಳಲ್ಲಿ ತಿಂಡಿ ಮಾಡಿಕೊಂಡು ತಿನ್ನುತ್ತಾರೆ. ಆದರೆ ಯಥೇಚ್ಛವಾಗಿ ಎಲ್ಲಾ ಪ್ರಕಾರದ ತಿಂಡಿ-ತಿನಿಸುಗಳನ್ನು ಎಲ್ಲರೂ ತಿನ್ನುತ್ತಾರೆ. ದಾವಣಗೆರೆಗೆ ಹೋದರೆ ಬೆಣ್ಣೆದೋಸೆ, ಹುಬ್ಬಳ್ಳಿಗೆ ಬಂದರೆ ಮಿರ್ಚಿ ಮಂಡಕ್ಕಿ, ಸವಣೂರಿಗೆ ಹೋದರೆ ಖಾರ. ಇನ್ನು ಹೋಟೆಲ್ ತಿಂಡಿಗಿಂತ ಮನೆಯಲ್ಲಿ ನಾವೇ ತಯಾರು ಮಾಡಿಕೊಂಡು ತಿನ್ನುವ ಖಾದ್ಯಗಳು ಶುಚಿಯಾಗಿ ಮತ್ತು ರುಚಿಯಾಗಿಯೂ ಇರುತ್ತವೆ. ಹಾಗಿದ್ದರೆ ನಮ್ಮ ಕಿಚನ್ನಿನ ಭಾಗವಾಗಿ ನಾವು ರವೆಯನ್ನು (rave) ಬಳಸುತ್ತೇವೆ. ರವೆಯಿಂದ ತಯಾರಿಸುವ ಹಲವು ಖಾದ್ಯಗಳ ಪರಿಚಯ ನಮಗಿದೆ. ಅದರಲ್ಲಿ ಬಿಸಿ ಬಿಸಿ ರವೆ ವಡೆ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ನಾವಿಲ್ಲಿ ನೋಡೋಣ.

    ರವೆ ವಡೆಗೆ ಬೇಕಾಗುವ ಸಾಮಗ್ರಿ:

    ½ ಟೀಸ್ಪೂನ್ ಉಪ್ಪು,  1 ಟೀಸ್ಪೂನ್ ಎಣ್ಣೆ , 1½ ಕಪ್ ರವೆ, 1 ಟೀಸ್ಪೂನ್ ಜೀರಿಗೆ,  ½ ಟೀಸ್ಪೂನ್ ಮೆಣಸಿನ ಹುಡಿ, ಕರಿಬೇವಿನ ಎಲೆಗಳು (ಕತ್ತರಿಸಿದ,) 2 ಮೆಣಸಿನಕಾಯಿ (ಸಣ್ಣದಾಗಿ ಹೆಚ್ಚಿದ), 2 ಚಮಚ ಕೊತ್ತಂಬರಿ ಸೊಪ್ಪು (ಸಣ್ಣದಾಗಿ ಕೊಚ್ಚಿದ), 2 ಟೀಸ್ಪೂನ್ ನಿಂಬೆ ರಸ ಎಣ್ಣೆ (ಹುರಿಯಲು)

    ತಯಾರಿಸುವ ವಿಧಾನ:

    ಮೊದಲು ದೊಡ್ಡ ಕಡಾಯಿಯಲ್ಲಿ 2 ಕಪ್ ನೀರು, ½ ಟೀಸ್ಪೂನ್ ಉಪ್ಪು ಮತ್ತು 1 ಟೀಸ್ಪೂನ್ ಎಣ್ಣೆಯನ್ನು ಹಾಕಿ, ಕುದಿಯಲು ಇಡಿ.

    ನೀರು ಕುದಿಯಲು ಪ್ರಾರಂಭಿಸಿದ ನಂತರ, 1½ ಕಪ್ ರವೆ ಸೇರಿಸಿ, ನಿರಂತರವಾಗಿ ಬೆರೆಸಿ, ರವೆ ನೀರನ್ನು ಹೀರಿಕೊಳ್ಳುವವರೆಗೆ ಬೆರೆಸಿ.

    ಇದನ್ನೂ ಓದಿ: ನೀಡುವ ಭರವಸೆ ನೀಡಿದ ಬೆಂಗಳೂರು ಮೂಲದ ಈ ಸ್ಟಾರ್ಟಪ್‌ ಕಂಪನಿ..!

    ಹೀಗೆ ಬೇಯಿಸಿದ ರವೆಯನ್ನು ದೊಡ್ಡ ಬಟ್ಟಲಿಗೆ ಹಾಕಿ, ಅದಕ್ಕೆ 1 ಟೀಸ್ಪೂನ್ ಜೀರಿಗೆ, ½ ಟೀಸ್ಪೂನ್ ಮೆಣಸಿನ ಹುಡಿ, ಕರಿಬೇವಿನ ಎಲೆಗಳು, 2 ಮೆಣಸಿನಕಾಯಿ, 2 ಟೀಸ್ಪೂನ್ ಕೊತ್ತಂಬರಿ ಮತ್ತು 2 ಟೀಸ್ಪೂನ್ ನಿಂಬೆ ರಸವನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.

    ಈಗ ಕೈಗೆ ಎಣ್ಣೆ ಹಚ್ಚಿಕೊಂಡು, ಮಿಕ್ಸ್ ಮಾಡಿದ ಉಂಡೆಯನ್ನು ವಡೆಯ ಆಕಾರಕ್ಕೆ ತಟ್ಟಿ. ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿ. ಈಗ ನಿಮ್ಮ ಬಿಸಿಬಿಸಿ ರವೆ ವಡೆ ರೆಡಿ. ಚಟ್ನಿಯೊಂದಿಗೆ ರವೆ ವಡೆಯನ್ನು ತಿನ್ನಿರಿ.

    ಬೇಳೆ ಮತ್ತು ರವೆಯಿಂದ ಮಾಡಿದ ತಿಂಡಿ:

    ಬೇಕಾಗುವ ಸಾಮಗ್ರಿಗಳು: ಬಟ್ಟಲು ಬೇಯಿಸಿದ ಕಪ್ಪು ಬೇಳೆ, 4 ಟೇಬಲ್ ಸ್ಪೂನ್ ರವೆ, ಹಸಿ ಮೆಣಸಿನ ಕಾಯಿ, ರುಚ್ಚಿಗೆ ತಕ್ಕಷ್ಟು ಉಪ್ಪು, ಟೇಬಲ್ ಸ್ಪೂನ್ ಮೊಸರು, ಟೇಬಲ್ ಸ್ಪೂನ್ ಚಟ್ನಿ, 1ಟೀ ಸ್ಪೂನ್ ಹುರಿದ ಜೀರಾ, 1 ಟೀ ಸ್ಪೂನ್ ಜಿಂಜರ್-ಗಾರ್ಲಿಕ್ ಪೇಸ್ಟ್, 1 ಟೇಬಲ್ ಸ್ಪೂನ್ ಸಣ್ಣಗೆ ಹೆಚ್ಚಿದ ಕೊತಂಬರಿ ಸೊಪ್ಪು ಬೇಕಾದ ಸಾಮಗ್ರಿಗಳಾಗಿವೆ.

    ತಿಂಡಿ ತಯಾರಿಸುವ ವಿಧಾನ

    ಬೇಯಿಸಿದ ಕಪ್ಪು ಬೇಳೆಗೆ ಹಸಿ ಮೆಣಸಿನಕಾಯಿ, ಚಟ್ನಿ, ರುಚಿಗೆ ತಕ್ಕಂತೆ ಉಪ್ಪು ಹಾಗೂ ಮೊಸರನ್ನು ಮಿಕ್ಸಿ ಜಾರ್ ಗೆ ಹಾಕಿ ಚೆನ್ನಾಗಿ ಗ್ರೈಂಡ್ ಮಾಡಿ. ಸ್ವಲ್ಪ ನೀರನ್ನೂ ಬೆರೆಸಬಹುದು.

    ಇದನ್ನೂ ಓದಿ: ಮಗುವಿನ ಕೂದಲು ಬೆಳೆಯುತ್ತಿಲ್ಲ ಅಂತ ಚಿಂತೆ ಬಿಡಿ, ಈ ಟಿಪ್ಸ್ ಫಾಲೋ ಮಾಡಿ

    ಈಗ ಬೌಲ್ ವೊಂದರಲ್ಲಿ ರವೆಯನ್ನು ಹಾಕಿ ಅದರಲ್ಲಿ ಹುರಿದ ಜೀರಾ, ಜಿಂಜರ್-ಗಾರ್ಲಿಕ್ ಪೇಸ್ಟ್, ಗ್ರೈಂಡ್ ಮಾಡಿದ ಬೇಳೆಯ ಪೇಸ್ಟ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ತಯಾರಾದ ಮಿಕ್ಸರ್ ಅನ್ನು 15 ನಿಮಿಷಗಳ ಕಾಲ ಪ್ರತ್ಯೆಕವಾಗಿಡಿ. ಈಗ ಈ ಮಿಶ್ರಣವನ್ನು ಹಲವು ಭಾಗಗಳಲ್ಲಿ ಪ್ರತ್ಯೇಕಿಸಿ ಓವಲ್ ಶೇಪ್ ಉಂಡೆಗಳನ್ನು ತಯಾರಿಸಿ. ಬೌಲ್ ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ರವೆ-ಬೇಳೆಯ ಓವಲ್ ಶೇಪ್  ಉಂಡೆಗಳನ್ನು ತಿಳು ಕಂದು ಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ. ನಂತರ ವಡೆಯನ್ನು ತೆಗೆದು ಸವಿಯಿರಿ.
    Published by:renukadariyannavar
    First published: