Sweets: ಊಟದ ನಂತರ ಸ್ವೀಟ್ಸ್ ತಿನ್ನುವ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ನೀವು ಓದಲೇ ಬೇಕಾದ ಸ್ಟೋರಿ

ಎಷ್ಟೋ ಕಾಲದಿಂದ ಊಟದ ಬಳಿಕ ಸಿಹಿ ತಿನ್ನುವ ಅಭ್ಯಾಸ ರೂಢಿಸಿಕೊಂಡು ಬಂದಿದ್ದೇವೆ, ಅದರಲ್ಲೇನು ತಪ್ಪು ಎನ್ನುತ್ತೀರಾ? ಹೌದು, ಎನ್ನುತ್ತದೆ ಆಯುರ್ವೇದ.

 ಸಿಹಿ ತಿಂಡಿಗಳು

ಸಿಹಿ ತಿಂಡಿಗಳು

  • Share this:
ಲಾಡು, ಹಲ್ವಾ, ಹೋಳಿಗೆ, ಪಾಯಸ ಆಹಾ , ಈ ರೀತಿಯ ತರಾವರಿ ಸಿಹಿ ತಿಂಡಿಗಳನ್ನು (Sweets) ಇಷ್ಟಪಡದವರು ಯಾರಿಲ್ಲ ಹೇಳಿ. ಮಕ್ಕಳಿಂದ ಮುದುಕರಾದಿಯಾಗಿ ಎಲ್ಲರಿಗೂ ಸಿಹಿ ತಿನಿಸುಗಳನ್ನು ಮೆಲ್ಲುವುದೆಂದರೆ ಖುಷಿ. ಇಲ್ಲಿ ಮಧುಮೇಹಿಗಳ (Diabetes) ಮಾತು ಬೇರೆ ಬಿಡಿ, ಪಾಪ, ಸಿಹಿ ತಿನಿಸುಗಳು ಇಷ್ಟವಿದ್ದರೂ ತಿನ್ನಲಾಗದ ಸ್ಥಿತಿ ಅವರದ್ದು. ಆದರೆ ಉಳಿದವರು ಸಿಹಿಯನ್ನು ಒಲ್ಲೆ ಎನ್ನುವುದು ತೀರಾ ಅಪರೂಪ. ಕೆಲವರಿಗೆ ದಿನದ ಯಾವ ಸಮಯದಲ್ಲಿ ಸಿಹಿ ತಿಂಡಿಯನ್ನು ಕೊಟ್ಟರೂ ತಿನ್ನುವ ಚಪಲವಿದ್ದರೆ, ಇನ್ನು ಕೆಲವು ಮಂದಿಗೆ, ಊಟದ (Meals) ಬಳಿಕ ಕೊಂಚ ಸಿಹಿಯನ್ನು ಸೇವಿಸದಿದ್ದರೆ ಊಟ ಸಂಪೂರ್ಣವೆನಿಸುವುದಿಲ್ಲ. ಆದರೆ, ಊಟದ ಕೊನೆಯಲ್ಲಿ ಸಿಹಿ ತಿನ್ನುವುದು ಸರಿಯೇ? ಹಾಗೆ ಮಾಡುವುದರಿಂದ ನಿಮ್ಮ ನಾಲಗೆಗೆ (tongue) ಖುಷಿ ಸಿಗಬಹುದು, ಆದರೆ ದೇಹಕ್ಕಲ್ಲ ಎನ್ನುತ್ತಾರೆ ತಜ್ಞರು.

ಆಯುರ್ವೇದ ಸಲಹೆಯ ಪ್ರಕಾರ ಯಾವುದು ಉತ್ತಮ

ಅರೇ, ಎಷ್ಟೋ ಕಾಲದಿಂದ ಊಟದ ಬಳಿಕ ಸಿಹಿ ತಿನ್ನುವ ಅಭ್ಯಾಸ ರೂಢಿಸಿಕೊಂಡು ಬಂದಿದ್ದೇವೆ, ಅದರಲ್ಲೇನು ತಪ್ಪು ಎನ್ನುತ್ತೀರಾ? ಹೌದು, ಎನ್ನುತ್ತದೆ ಆಯುರ್ವೇದ. ನಿಮ್ಮ ದೇಹದ ಜೀರ್ಣ ಕ್ರೀಯೆ ಚೆನ್ನಾಗಿ ನಡೆದು, ನಿಮ್ಮ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳು ಸಿಗಬೇಕು ಎಂದರೆ, ಊಟದ ಆರಂಭದಲ್ಲಿ ಸಿಹಿ ತಿನ್ನಬೇಕೇ ಹೊರತು, ಕೊನೆಯಲ್ಲಿ ಅಲ್ಲ, ಎಂದು ಆಯುರ್ವೇದ ಸಲಹೆ ನೀಡುತ್ತದೆ. ಆಯುರ್ವೇದ ತಜ್ಞೆ ಡಾ. ನಿತಿಕಾ ಕೋಹ್ಲಿ ಅವರು ತಮ್ಮ ಇನ್‍ಸ್ಟಾಗ್ರಾಂ (Instagram) ಪೋಸ್ಟ್ ಒಂದರಲ್ಲಿ ಈ ಕುರಿತು ಕೆಲವು ಮಾಹಿತಿಗಳನ್ನು ನೀಡಿದ್ದಾರೆ.

ಇದನ್ನೂ ಓದಿ:  BreakFast Recipe: ಬೆಳಗಿನ ಉಪಹಾರಕ್ಕೆ ರುಚಿಕರ ಪಾಲಕ್ ಪೂರಿ; ಒಮ್ಮೆ ಮನೆಯಲ್ಲಿ ಮಾಡಿ ನೋಡಿ

ಸಿಹಿ ತಿಂಡಿಗಳನ್ನು ಹಿನ್ನುವ ಸರಿಯಾದ ಸಮಯ

ಸಿಹಿ ತಿಂಡಿಗಳ ತಿನ್ನುವ ಅವಧಿ ಮತ್ತು ಊಟದ ಸಮಯದಲ್ಲಿನ ಅರಿವಿನ ಸ್ಥಿತಿ, ದೇಹದಲ್ಲಿ ಓಜಸ್ (ಚೈತನ್ಯ) ಹೆಚ್ಚಿಸುತ್ತದೆ , ಇಲ್ಲವೇ ಅಮ (ವಿಷಕಾರಿತ್ವ) ಹೆಚ್ಚು ಮಾಡುತ್ತದೆ. ಹಾಗಾಗಿ, ಪ್ರತಿಯೊಬ್ಬರು ತಾವೇನು ತಿನ್ನುತ್ತೇವೆ ಎಂಬುದರ ಬಗ್ಗೆ, ಅಂದರೆ ತನ್ನ ಆಹಾರ ಅಭ್ಯಾಸಗಳ ಬಗ್ಗೆ ಸದಾ ಗಮನ ಹರಿಸುವುದು ಮತ್ತು ಎಚ್ಚರಿಕೆಯಿಂದ ಇರುವುದು ಅತ್ಯಾವಶ್ಯಕ.

“ಈ ಕೆಳಗಿನ ನಿಯಮಗಳು, ಆಯುರ್ವೇದದ ಪ್ರಾಚೀನ ಜ್ಞಾನವನ್ನು ಸ್ಪರ್ಶಿಸಲು ಮತ್ತು ಅದನ್ನು, ಸಿಹಿ ತಿನಿಸುಗಳ ಮೂಲಕ ಆರೋಗ್ಯವನ್ನು (Health), ಚೈತನ್ಯ ಮತ್ತು ಶಕ್ತಿಯನ್ನು ರಚಿಸಲು ಬಳಸಿಕೊಳ್ಳಲು ಮಾರ್ಗದರ್ಶಿಯಾಗಿ ಕಾರ್ಯ ನಿರ್ವಹಿಸುತ್ತವೆ” ಎಂದು ತಮ್ಮ ಇನ್‍ಸ್ಟಾಗ್ರಾಂ ಪೋಸ್ಟಿನಲ್ಲಿ ಅವರು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಯಾವುದೇ ಸಿಹಿ ತಿನಿಸುಗಳನ್ನು ಊಟಕ್ಕೂ ಮುಂಚೆಯೇ ತಿನ್ನುವುದು ಏಕೆ ಒಳ್ಳೆಯದು ಮತ್ತು ಅವುಗಳನ್ನು ಊಟದ ಬಳಿಕ ಸೇವಿಸುವುದು ಏಕೆ ಸೂಕ್ತವಲ್ಲ ಎಂಬುದಕ್ಕೆ ಕೆಲವು ಕಾರಣಗಳನ್ನು ಕೂಡ ಅವರು ಪೋಸ್ಟಿನಲ್ಲಿ ಉಲ್ಲೇಖಿಸಿದ್ದಾರೆ. ಡಾ. ನಿತಿಕಾ ಕೋಹ್ಲಿ ನೀಡಿರುವ ಆ ಕಾರಣಗಳು ಈ ಕೆಳಗಿನಂತಿವೆ.

ಇದನ್ನೂ ಓದಿ: Heart Disease: ಹೃದಯಾಘಾತದ ಮೊದಲು ಕಂಡು ಬರುವ ಈ ಲಕ್ಷಣಗಳನ್ನು ನಿರ್ಲಕ್ಷಿಸದಿರಿ!

ಊಟದ ನಂತರ ಸಿಹಿ ತಿಂಡಿ ತಿಂದ್ರೆ ಆಗುವ ಸಮಸ್ಯೆಗಳು

  1. ನಾವು ಸೇವಿಸುವ ಯಾವುದೇ ಸಿಹಿ ತಿನಿಸುಗಳು ಬೇಗ ಜೀರ್ಣವಾಗುವುದಿಲ್ಲ, ಅವು ದೀರ್ಘ ಸಮಯ ತೆಗೆದುಕೊಳ್ಳುತ್ತವೆ.

  2. ಊಟಕ್ಕೂ ಮೊದಲು ಸಿಹಿ ತಿನಿಸುಗಳನ್ನು ತಿಂದರೆ, ಅವು ಜೀರ್ಣಕಾರಿ ಸ್ರವಿಸುವಿಕೆಯ ಹರಿವನ್ನು ಸಕ್ರೀಯಗೊಳಿಸುತ್ತವೆ.

  3. ಒಂದು ವೇಳೆ ಊಟದ ಬಳಿಕ ಸಿಹಿ ತಿನಿಸನ್ನು ತಿನ್ನುತ್ತೀರಿ ಎಂದಾದಲ್ಲಿ, ಅದು ನಿಮ್ಮ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.

  4. ಜೀರ್ಣಕ್ರಿಯೆಯ ಹೊರತಾಗಿ, “ಊಟದ ಆರಂಭದಲ್ಲಿಯೇ ಸಿಹಿ ತಿನಿಸನ್ನು ತಿನ್ನುವುದರಿಂದ, ನಿಮ್ಮ ಟೇಸ್ಟ್ ಬಡ್‍ಗಳು ಸಕ್ರಿಯಗೊಳ್ಳುತ್ತವೆ.

  5. ಊಟದ ಕೊನೆಯಲ್ಲಿ ಸಿಹಿ ತಿನಿಸುಗಳನ್ನು ತಿನ್ನುವುದರಿಂದ, ಅದು ಜೀರ್ಣಕಾರಿ ತಾಪವನ್ನು, ಅಂದರೆ ಜಠರಾಗ್ನಿಯನ್ನು ಆರಿಸುವ ಸಾಧ್ಯತೆ ಇರುತ್ತದೆ ಮತ್ತು ಆಮ್ಲೀಯ ಸ್ರವಿಸುವಿಕೆಯಿಂದ ಹುದುಗುವಿಕೆ ಮತ್ತು ಆಜೀರ್ಣ ಉಂಟಾಗಬಹುದು.

  6.  ಊಟದ ಬಳಿಕ ಸಕ್ಕರೆಯನ್ನು ಸೇವಿಸುವುದರಿಂದ, ಗ್ಯಾಸ್ ಫಾರ್ಮೇಶನ್ ಮತ್ತು ಹೊಟ್ಟೆ ಉಬ್ಬರ ಉಂಟಾಗುವ ಸಾಧ್ಯತೆ ಕೂಡ ಇರುತ್ತದೆ.

Published by:Ashwini Prabhu
First published: