ಬಾಡೂಟ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ, ಭಾನುವಾರ (Sunday) ಬಂತಂದ್ರೆ ಅದೆಷ್ಟೋ ಮಂದಿಗೆ ಹಬ್ಬದಂತೆ. ಕೆಲವರಿಗೆ ಚಿಕನ್ (Chicken) ಇಷ್ಟವಾದರೆ, ಇನ್ನೂ ಕೆಲವರಿಗೆ ಮಟನ್ (Mutton) ಅಂದ್ರೆ ಬಹಳ ಇಷ್ಟ. ಮಟನ್ ಹಾಗೂ ಚಿಕನ್ನಲ್ಲಿ ನಾನಾ ಬಗೆಯ ವೆರೈಟಿ ಫುಡ್ಗಳು (Variety Food) ಸಿಗುತ್ತದೆ. ಅದರಲ್ಲಿಯೂ ಸ್ಟಾರ್ ಹೋಟೆಲ್ಗಳಲ್ಲಂತೂ (Hotel) ಹೆಸರೇ ಕೇಳಿರದಷ್ಟು ಹೊಸ ಹೊಸದಾದ ಖಾದ್ಯಗಳು ಸಿಗುತ್ತದೆ. ಅದಕ್ಕಾಗಿಯೇ ಅದೆಷ್ಟೂ ಮಂದಿ ನೆಚ್ಚಿನ ಆಹಾರ ಸವಿಯಲು ಪ್ರತಿಷ್ಠಿಯ ಹೋಟೆಲ್ಗಳನ್ನೇ ಹುಡುಕಿಕೊಂಡು ಹೋಗ್ತಾರೆ. ಆದರೆ ನಿಜವಾಗಿಯೂ ನೀವು ಸ್ಟಾರ್ ಹೋಟೆಲ್ಗೆ ಹೋಗುವ ಅಗತ್ಯವಿಲ್ಲ.
ನಾನ್ವೆಜ್ನಲ್ಲಿ ನೀವು ಡಿಫರೆಂಟ್ ಆದ ಆಹಾರ ಸೇವಿಸಬೇಕೆಂದಿದ್ದರೆ, ಒಮ್ಮೆ ಈ ಆಹಾರವನ್ನು ಟ್ರೈ ಮಾಡಿ ಅದುವೇ ಮಟನ್ ಬೋಟಿ ಗೊಜ್ಜು . ಹೌದು, ಮಿಲ್ಟ್ರಿ ಹೋಟೆಲ್ಗಳ ಮೆನುವಿನಲ್ಲಿ ಕಾಣ ಸಿಗುವ ಮಟನ್ ಬೋಟಿ ಗೊಜ್ಜನ್ನು ಹೆಚ್ಚಾಗಿ ಮದುವೆ , ಬೀಗರ ಔತಣ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಇದನ್ನು ಹೆಚ್ಚಾಗಿ ಮಾಡುತ್ತಾರೆ. ನಿಮಗೆ ಬೇಕೆನಿಸಿದರೆ ಮನೆಯಲ್ಲಿಯೇ ಸುಲಭವಾಗಿ ಮಾಡಿಕೊಂಡು ತಿನ್ನಬಹುದಾಗಿದೆ.
ಮಟನ್ ಬೋಟಿ ಗೊಜ್ಜು ಮಾಡಲು ಬೇಕಾಗುವ ಸಾಮಾಗ್ರಿಗಳು
ಮಟನ್ ಬೋಟಿ ಗೊಜ್ಜು ಮಾಡುವ ವಿಧಾನ
ಮೊದಲಿಗೆ ಬಿಸಿಯಾದ ನೀರಿನಲ್ಲಿ ಬೋಟಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಕಟ್ ಮಾಡಿಕೊಂಡು ಪಕ್ಕಕ್ಕೆ ಇಟ್ಟುಕೊಳ್ಳಬೇಕು. ಕಟ್ ಮಾಡಿಕೊಂಡಿದ್ದ ಬೋಟಿಗೆ ಉಪ್ಪು, ಸ್ವಲ್ಪ ಅರಿಶಿನ ಬೆರೆಸಿ ಕುಕ್ಕರ್ನಲ್ಲಿ 5 ವಿಜಿಲ್ ಕೂಗಿಸಿಕೊಳ್ಳಬೇಕು. ಬಳಿಕ ಬೇರೆ ಪ್ಯಾನ್ಗೆ ಎಣ್ಣೆ ಹಾಕಿ, ಅದಕ್ಕೆ ಲವಂಗ, ದಾಲ್ಚಿನ್ನಿ, ಏಲಕ್ಕಿ ಬೀಜಗಳನ್ನು ಸೇರಿಸಿ ಫ್ರೈ ಮಾಡಿಕೊಳ್ಳಬೇಕು. ನಂತರ ಕಟ್ ಮಾಡಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರಿಶಿನ ಪುಡಿ, ಬೋಟಿ ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ನೀರು ಹಾಕಿ ಬೇಯಿಸಿಕೊಳ್ಳಬೇಕು.
ಇದನ್ನೂ ಓದಿ: Papaya Water: ಪಪ್ಪಾಯಿಯಿಂದ ಜ್ಯೂಸ್ ಮಾತ್ರವಲ್ಲ, ನೀರೂ ತಯಾರಾಗುತ್ತೆ, ಇದರ ಪ್ರಯೋಜನ ಹಲವು!
ನಂತರ ಬೋಟಿ ಗೊಜ್ಜುಗೆ ಕೊತ್ತಂಬರಿ ಪುಡಿ, ತೆಂಗಿನಕಾಯಿ ತುರಿ, ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ನಂತರ ಗರಂ ಮಸಾಲಾ ಪುಡಿ, ಕೊತ್ತಂಬರಿ ಸೊಪ್ಪುಗಳನ್ನು ಸೇರಿಸಿ ಕೊಂಚ ನೀರು ಬೆರಸಿ ಚೆನ್ನಾಗಿ ಕುದಿಸಿದರೆ ಬೋಟಿ ಗೊಜ್ಜು ಸವಿಯಲು ಸಿದ್ಧವಾಗಿರುತ್ತದೆ.
ಚಪಾತಿ, ರೋಟಿ, ರೊಟ್ಟಿ, ಪೂರಿ ಜೊತೆಗೆ ಬೋಟಿ ಗೊಜ್ಜು ಬೆಸ್ಟ್ ಕಾಂಬಿನೇಷನ್
ಅದೆಷ್ಟೋ ಜನ ಬೋಟಿ ಗೊಜ್ಜನ್ನು ತಿನ್ನಲೆಂದು ಕೆಲವೊಂದು ಹೋಟೆಲ್ಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಆದರೆ ಅದರ ಅಗತ್ಯವಿಲ್ಲ. ಮನೆಯಲ್ಲಿಯೇ ಇನ್ಮುಂದೆ ನೀವು ಬೋಟಿ ಗೊಜ್ಜನ್ನು ಮಾಡಿಕೊಳ್ಳಬಹುದು. ಅಲ್ಲದೇ ಬೋಟಿ ಗೊಜ್ಜನ್ನು ಬಿಸಿ ಬಿಸಿ ಅನ್ನ, ಚಪಾತಿ, ರೋಟಿ, ರೊಟ್ಟಿ, ಪೂರಿ ಜೊತೆಗೆ ಸೇವಿಸಬಹುದಾಗಿದೆ. ಈ ಬೋಟಿ ಗೊಜ್ಜನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಇಷ್ಟ ಪಡುತ್ತಾರೆ. ಅಲ್ಲದೇ ರಾಗಿ ಮುದ್ದೆ ಜೊತೆಗೂ ಬೋಟಿ ಗೊಜ್ಜು ಬೆಸ್ಟ್ ಕಾಂಬಿನೇಷನ್ ಎಂದೇ ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ