• Home
 • »
 • News
 • »
 • lifestyle
 • »
 • Health Tips: ಮನೆ ಆಗಲಿ, ಆಫೀಸ್ ಆಗಲಿ ಕುಳಿತೇ ಇರ್ತೀರಾ? ಹಾಗಿದ್ರೆ 5 ನಿಮಿಷ ಮಾಡಿ ಈ ಸಿಂಪಲ್ ವ್ಯಾಯಾಮ

Health Tips: ಮನೆ ಆಗಲಿ, ಆಫೀಸ್ ಆಗಲಿ ಕುಳಿತೇ ಇರ್ತೀರಾ? ಹಾಗಿದ್ರೆ 5 ನಿಮಿಷ ಮಾಡಿ ಈ ಸಿಂಪಲ್ ವ್ಯಾಯಾಮ

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

ಮನೆ ಇರಲಿ, ಆಫೀಸ್ ಇರಲಿ.. 8ರಿಂದ 9 ಗಂಟೆ ಒಂದೇ ಕಡೆ ಕುಳಿತು ಕೆಲಸ ಮಾಡ್ತೀರಾ? ಹಾಗಾದರೆ ಬೇರೆ ಬೇರೆ ಅನಾರೋಗ್ಯ ನಿಮ್ಮನ್ನು ಕಾಡಬಹುದು. ಇದರಿಂದ ತಪ್ಪಿಸಿಕೊಳ್ಳಲು ಬ್ಯುಸಿ ವರ್ಕ್ ನಡುವೆ ಕಂಪ್ಯೂಟರ್ ಮುಂದೆ ಕುಳಿತುಕೊಂಡೇ ಈ ಐದು ವ್ಯಾಯಾಮವನ್ನು ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • New Delhi, India
 • Share this:

  ಬೆಳೆಯುತ್ತಿರುವ ತಂತ್ರಜ್ಞಾನದ ಮುಂದೆ ಒಂದು ಕಡೆ ನಮ್ಮ ಆರೋಗ್ಯ ( Health ) ಕ್ಷೀಣಿಸುತ್ತಿದೆ. ಯಾಕೆಂದ್ರೆ ಹೆಚ್ಚುತ್ತಿರುವ ಕೆಲಸ, ಒತ್ತಡ, ಇದಲ್ಲದೆ  ಕಂಪ್ಯೂಟರ್ (Computer ) ಮುಂದೆ ಕುಳಿತು ಹೆಚ್ಚು ಸಮಯ ಕಳೆಯುವುದು, ಸರಿಯಾಗಿ ನಿದ್ದೆ ಇಲ್ಲದಿರುವುದು, ಆಹಾರದಲ್ಲಿ ಬದಲಾವಣೆ, ದೈಹಿಕ ಚಟುವಟಿಕೆಯತ್ತ ಗಮನ ಹರಿಸದೆ ಇರುವುದು ಇದೆಲ್ಲ ನಮ್ಮ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ . ದೈಹಿಕ ಚಟುವಟಿಕೆಯಿಲ್ಲದೇ ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವ ಕೆಲಸಗಾರರು ಅಥವಾ ಉದ್ಯೋಗಿಗಳು ಬೊಜ್ಜು ( Fat ) ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದಲ್ಲದೆ ದೀರ್ಘಕಾಲದವರೆಗೆ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕಾದ ಜೊತೆಗೆ ಮಾರಣಾಂತಿಕವೂ ಆಗಿರಬಹುದು ಎಂದು ಹಲವಾರು ಅಧ್ಯಯನ, ಸಂಶೋಧನೆ ಸಾಬೀತುಪಡಿಸಿವೆ.  ಹಾಗಾದರೆ ಈ ಬ್ಯುಸಿ ವರ್ಕ್ ನಡುವೆ ಕಂಪ್ಯೂಟರ್ ( Computer ) ಮುಂದೆ ಕುಳಿತುಕೊಂಡೇ ಈ ಐದು ವ್ಯಾಯಾಮವನ್ನು ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅವುಗಳ ಮಾಹಿತಿ ಹೀಗಿದೆ.


  2013 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ಅಧ್ಯಯನವೊಂದನ್ನು ನಡೆಸಿದ್ದು , ಅಂದಾಜು 3.2 ಮಿಲಿಯನ್ ಜನರು ಬದಲಾಗುತ್ತಿರುವ ಜೀವನಶೈಲಿಯಿಂದ ಪ್ರತಿ ವರ್ಷ ಅಕಾಲಿಕವಾಗಿ ಮರಣ ಹೊಂದುತ್ತಾರೆ ಎಂದು ಹೇಳಿದೆ. ಇದಲ್ಲದೆ ಬೆನ್ನು ನೋವು, ಕುತ್ತಿಗೆ, ಮೊಣಕಾಲು ನೋವಿನಂತಹ ದೀರ್ಘಕಾಲದ ಸಮಸ್ಯೆಗಳಿಂದ ಅನೇಕರು ಬಳಲುತ್ತಿರುತ್ತಾರೆ. ಮುಂಬರುವ ವರ್ಷಗಳಲ್ಲಿ ದೊಡ್ಡ ಸಾಮಾಜಿಕ ಆರ್ಥಿಕ ಕಾಳಜಿಯಾಗಿ ಪರಿವರ್ತನೆಯಾಗಬಹುದು ಎಂದು ಅಭಿಪ್ರಾಯ ಪಟ್ಟಿದೆ.


  ದೀರ್ಘ ಸಮಯ ಕುಳಿತುಕೊಂಡರೆ ಆಗುವ ಆರೋಗ್ಯ ತೊಂದರೆ
  - ಹೆಚ್ಚಿದ ರಕ್ತದೊತ್ತಡ
  - ಟೈಪ್ 2 ಮಧುಮೇಹಕ್ಕೆ ದಾರಿ
  - ಸೊಂಟದ ಸುತ್ತ ಹೆಚ್ಚುವರಿ ಕೊಬ್ಬು ಬೆಳವಣಿಗೆ
  - ಹೆಚ್ಚಿನ ಮಟ್ಟದ ಕೆಟ್ಟ ಕೊಲೆಸ್ಟ್ರಾಲ್
  - ಸ್ನಾಯುವಿನ ಅಸಮತೋಲನ ಹೆಚ್ಚಳ
  - ಖಿನ್ನತೆ ಮತ್ತು ಒತ್ತಡ


  ಈ ಸಿಂಪಲ್ 5 ವ್ಯಾಯಾಮಗಳನ್ನು ಕುಳಿತಲ್ಲೇ ಮಾಡಿ


  ಪುಶ್ ಅಪ್


  ಮಾಡುವುದು ಹೇಗೆ : ನಿಮ್ಮ ಕೈಗಳನ್ನೂ ಮೇಜಿನ ಮೇಲೆ ಇಟ್ಟು. ನಿಮ್ಮ ಕೈಗಳನ್ನು ನಿಮ್ಮ ಭುಜಕ್ಕೆ ಸರಿಯಾಗಿ ಲಂಬವಾಗಿ ಇಟ್ಟುಕೊಳ್ಳಬೇಕು. ನಿಧಾನವಾಗಿ ಭುಜಗಳನ್ನೂ ಅಗಲವಾಗಿಸಿ. ದೇಹವನ್ನು ನೇರವಾಗಿ ಇಟ್ಟು ಎರಡು ಪದಗಳನ್ನು ಹಿಂದಕ್ಕೆ ಸರಿಸಿ. ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸಿ ಮತ್ತು ನಿಮ್ಮ ಮೊಣಕೈಯನ್ನು ನಿಮ್ಮ ದೇಹದೊಂದಿಗೆ 90 ಡಿಗ್ರಿ ಕೋನದಲ್ಲಿ ಇಡಿ.
  ನೆನಪಿಡಬೇಕಾದ ವಿಷಯ : ನಿಮ್ಮ ಡೆಸ್ಕ್ ನಿಮ್ಮ ದೇಹದ ತೂಕವನ್ನು ಹಿಡಿದಿಟ್ಟುಕೊಳ್ಳುವಷ್ಟು ಪ್ರಬಲವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ನೀವು ಗೋಡೆಯ ಪುಶ್-ಅಪ್ ಗಳನ್ನೂ ಮಾಡಬಹುದು.
  ಇದರ ಉಪಯೋಗ : ದೇಹದ ಮೇಲ್ಭಾಗದ ಬಲವನ್ನು ಸುಧಾರಿಸುತ್ತದೆ. ಸ್ನಾಯುಗಳನ್ನು ಸಕ್ರಿಯಗೊಳಿಸುತ್ತದೆ. ಹೃದಯದ ಆರೋಗ್ಯ ಕಾಪಾಡುತ್ತದೆ.


  ಕುಳಿತಲ್ಲೇ ಬೆನ್ನು ತಿರುಗಿಸಿ
  ಮಾಡುವುದು ಹೇಗೆ : ನಿಮ್ಮ ಪಾದಗಳನ್ನು ನೆಲದ ಮೇಲೆ ಆರಾಮವಾಗಿ ಇಡಿ. ಕುರ್ಚಿಯ ಮೇಲೆ ನೇರವಾಗಿ ಕುಳಿತುಕೊಳ್ಳಿ.
  ನಿಮ್ಮ ಬಲಗೈಯನ್ನು ಬಲಭಾಗದ ಹಿಂಭಾಗದಲ್ಲಿ ಇರಿಸಿ ಮತ್ತು ನಿಮ್ಮ ಎಡಗೈಯನ್ನು ನಿಮ್ಮ ಬಲ ತೊಡೆಯ ಮೇಲೆ ಇರಿಸಿ.
  ನಿಮ್ಮ ಎಡ ಭುಜವು ನಿಮ್ಮ ಬಲ ತೊಡೆಗೆ ಅನುಗುಣವಾಗಿರುವವರೆಗೆ ಮತ್ತು ನಿಮ್ಮ ಕಣ್ಣುಗಳು ನಿಮ್ಮ ಬಲ ಭುಜದ ಮೇಲೆ ಇರುವವರೆಗೆ ನಿಮ್ಮ ದೇಹವನ್ನು ನಿಮ್ಮ ಮುಂಡದಿಂದ ನಿಧಾನವಾಗಿ ತಿರುಗಿಸಿ. ಇನ್ನೊಂದು ಬದಿಯಲ್ಲಿ ಹೀಗೆ ಪುನರಾವರ್ತಿಸಿ.


  ಉಪಯೋಗ : ಇದು ಬೆನ್ನು ನೋವನ್ನು ನಿವಾರಿಸುತ್ತದೆ. ಬೆನ್ನು ಮೂಳೆಗಳು ಬಲಿಷ್ಠವಾಗಲು ಸಹಾಯವಾಗುತ್ತದೆ. ಸ್ನಾಯುಗಳನ್ನು ಬಲಪಡಿಸುತ್ತದೆ. ನಿಮ್ಮ ಎದೆ, ಸೊಂಟನೋವನ್ನು ಕಡಿಮೆ ಮಾಡುತ್ತದೆ.


  ಇದನ್ನೂ ಓದಿ:  Heart Health: ನಿಮಗೆ ಈ ಲಕ್ಷಣಗಳು ಕಾಣಿಸಿಕೊಳ್ತಿದ್ಯಾ? ಹುಷಾರ್, ನಿಮ್ಮ ಹೃದಯ ವೀಕ್ ಆಗ್ತಿದೆ ಕಣ್ರೀ!


  ಕುಳಿತಲ್ಲೇ ಮೊಣಕಾಲು ಪುಲ್ ಇನ್‌
  ಮಾಡುವುದು ಹೇಗೆ :ಕುರ್ಚಿಯಲ್ಲಿ ಕುಳಿತು ಬೆನ್ನನ್ನು ವಿಶ್ರಾಂತಿ ಮಾಡದೆ ನೇರವಾಗಿ ಕುಳಿತುಕೊಳ್ಳಿ ಮತ್ತು ಕುರ್ಚಿಯ ಆರ್ಮ್‌ರೆಸ್ಟ್ ಅನ್ನು ಹಿಡಿದುಕೊಳ್ಳಿ. ನೆಲಕ್ಕೆ ಸಮಾನಾಂತರವಾಗಿ ಎರಡೂ ಕಾಲುಗಳನ್ನು ನೇರಗೊಳಿಸಿ. .ನಿಮ್ಮ ಪಾದಗಳನ್ನು ಒಟ್ಟಿಗೆ ಇರಿಸಿ, ಎರಡೂ ಮೊಣಕಾಲುಗಳನ್ನು ನಿಮ್ಮ ದೇಹದ ಕಡೆಗೆ ಪುಶ್ ಇನ್ ಮಾಡಿ.
  ಇದರ ಉಪಯೋಗ : ಬೆನ್ನುಮೂಳೆಯನ್ನು ಸುಧಾರಿಸುತ್ತದೆ. ಇದಲ್ಲದೆ ಬೆನ್ನು ನೋವು, ಕೀಳು ನೋವನ್ನು ನಿವಾರಣೆ ಮಾಡುತ್ತದೆ.


  ಚೇರ್ ಸ್ಕ್ವಾಟ್ ವ್ಯಾಯಾಮ


  ಹೇಗೆ ಮಾಡುವುದು : ನಿಮ್ಮ ಕುರ್ಚಿಯಿಂದ ಒಂದು ಹೆಜ್ಜೆ ದೂರದಲ್ಲಿ ನಿಂತುಕೊಳ್ಳಿ, ನಿಮ್ಮ ಪಾದಗಳು ಭುಜದ ಅಂತರಕ್ಕೆ ನಿಂತುಕೊಳ್ಳಿ ನಿಮ್ಮ ಎರಡೂ ಪಾದದ ಕೀಲುಗಳ ಮೇಲೆ ನಿಮ್ಮ ದೇಹದ ತೂಕವನ್ನು ಹೊತ್ತುಕೊಂಡು, ನೀವು ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ನಿಮ್ಮ ಸೊಂಟ ಮತ್ತು ಮೊಣಕಾಲುಗಳನ್ನು ಬಾಗಿಸಿ. 5 ಸೆಕೆಂಡುಗಳ ಕಾಲ ಹಾಗೆಯೆ ಇರಿ. ನಂತರ ನಿಧಾನವಾಗಿ ಆರಂಭಿಕ ಸ್ಥಾನಕ್ಕೆ ಬನ್ನಿ.


  ಇದನ್ನೂ ಓದಿ:  Health Care: ರಕ್ತಹೀನತೆ ಸಮಸ್ಯೆ ತಡೆಯಲು ಈ ಒಂದು ಆಹಾರ ಇದ್ರೆ ಸಾಕಂತೆ


  ಉಪಯೋಗ : ಮಂಡಿ ನೋವು ನಿವಾರಣೆ ಆಗುತ್ತದೆ. ಬೊಜ್ಜು ಕರಗಿಸಲು ಸಾಧ್ಯ. ಸ್ನಾಯುಗಳು ಬಲಿಷ್ಠವಾಗುತ್ತದೆ.


  ನೆಕ್ಕ್ ರೋಲ್‌, ಶೋಲ್ಡರ್‌ ರೋಲ್‌
  ಹೇಗೆ ಮಾಡುವುದು : ನೆಕ್ಕ್ ರೋಲ್‌ ವ್ಯಾಯಾಮ ಒಮ್ಮೆ ಬಲ ಭಾಗಗಳಿಗೆ ನಿಧಾನವಾಗಿ ಮತ್ತೆ ಎಡ ಭಾಗಕ್ಕೆ ನಿಧಾನವಾಗಿ ತಲೆಯನ್ನು ರೊಲ್‌ ಮಾಡಿ ರಿಲಾಕ್ಸ್‌ ಮಾಡುವುದಾಗಿದೆ. ಭುಜವನ್ನು ಮೇಲ್ಮುಖವಾಗಿ ಕಿವಿಗೆ ತಾಗುವಂತೆ ಮತ್ತೆ ಹಿಮ್ಮುಖವಾಗಿ ಹಾಗೆ ಕೆಳಮುಖವಾಗಿ ಭುಜವನ್ನು ತಿರಿಗಿಸುವುದು ಶೋಲ್ಡರ್‌ ರೋಲ್‌ ಆಗಿದೆ


  ಇದರ ಉಪಯೋಗ
  ಕುತ್ತಿಗೆ ನೋವನ್ನು ಕಡಿಮೆ ಮಾಡುತ್ತದೆ. ಭುಜ ನೋವು ಕಡಿಮೆಯಾಗುತ್ತದೆ. ಸ್ನಾಯುಗಳು ಗಟ್ಟಿಯಾಗುತ್ತದೆ.

  Published by:Usha P
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು