Relationship Tips: ನಿಮ್ಮ ಸಂಗಾತಿ ಜೊತೆ ಸಂತೋಷವಾಗಿರಲು ಹೀಗೆ ಮಾಡಿ..

Happy Couples: ಸಂಗಾತಿಯೊಡನೆ ಸಂತೋಷದಿಂದರಲು ಏನು ಮಾಡುತ್ತೀರಾ? ನಾವು ಪ್ರತಿದಿನ ಮಾಡುವ ಸಣ್ಣಪುಟ್ಟ ಕೆಲಸಗಳು ನಮ್ಮನ್ನು ಸಂತೋಷಪಡಿಸಬಲ್ಲವು. ಸಂಬಂಧದಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿ, ಗೌರವ ಬಹಳ ಮುಖ್ಯವಾಗುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ಎಲ್ಲ ಕಾಲ್ಪನಿಕ ಕಥೆಗಳನ್ನು ಕೇಳಿರುತ್ತೀರಾ. ಅದರಲ್ಲಿ ರಾಜ ರಾಣಿ ಮದುವೆಯಾಗುತ್ತಾರೆ. ಆದರೆ  ಮದುವೆಗಳ ನಂತರ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನೀವು ಆರೋಗ್ಯಕರ ಸಂಬಂಧದಲ್ಲಿದ್ದರೆ ಅಥವಾ ಸಂತೋಷದಿಂದ ಮದುವೆಯಾಗಿದ್ದರೆ, ಅದನ್ನು ಮುಂದುವರೆಸಿಕೊಂಡು ಹೋಗುವುದು ಮುಖ್ಯವಾಗುತ್ತದೆ. ಸಂಗಾತಿಯೊಡನೆ ಸಂತೋಷದಿಂದರಲು ಏನು ಮಾಡುತ್ತೀರಾ? ನಾವು ಪ್ರತಿದಿನ ಮಾಡುವ ಸಣ್ಣಪುಟ್ಟ ಕೆಲಸಗಳು ನಮ್ಮನ್ನು ಸಂತೋಷಪಡಿಸಬಲ್ಲವು. ಸಂಬಂಧದಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿ, ಗೌರವ ಬಹಳ ಮುಖ್ಯವಾಗುತ್ತದೆ. ಸಂಬಂಧವು ದೀರ್ಘಕಾಲ ತನಕ ಉಳಿಯಬೇಕಾದರೆ, ಆಗ ಅದಕ್ಕೆ ಸಂಗಾತಿಗಳಿಬ್ಬರು ತೀವ್ರ ಶ್ರಮ ವಹಿಸಬೇಕು. ಒಬ್ಬರು ಮತ್ತೊಬ್ಬರಿಗೆ ಸಹಕಾರದಿಂದ ಮುನ್ನಡೆದರೆ ಎಲ್ಲವೂ ಸಾಧ್ಯ.

ಒಬ್ಬರಿಗೊಬ್ಬರು ಪರಸ್ಪರ ಮಾತನಾಡುತ್ತಿರಿ.. ಯಾವುದೇ ರೀತಿಯ ತಪ್ಪುಗ್ರಹಿಕೆಯನ್ನು ಅಳಿಸಲು ದಿನಕ್ಕೆ ಒಮ್ಮೆಯಾದರೂ ಒಳ್ಳೆಯ ಸಂಭಾಷಣೆಯನ್ನು ನಡೆಸುವುದು  ಉತ್ತಮ. ನೀವು ಯಾವುದಾದರೂ ವಿಷಯದ ಬಗ್ಗೆ ತಲೆಕೆಡಿಸಿಕೊಂಡಿದ್ದರೆ ಅಥವಾ ನಿಮ್ಮ ಸಂಗಾತಿ ಮಾಡುತ್ತಿರುವ ಯಾವುದಾದರೂ ಕೆಲಸ ಇಷ್ಟವಿಲ್ಲವೆಂದರೆ ಅದನ್ನು ಅವರಿಗೆ ಹೇಳಿ. ಸಂಭಾಷಣೆಯನ್ನು ಪ್ರಾರಂಭಿಸಿ. ಒಳ್ಳೆಯ ಮಾತುಗಳನ್ನು ಆಡಿ, ನೆಗೆಟಿವ್ ಬಗ್ಗೆ ಹೆಚ್ಚು ಗಮನ ನೀಡುವ ಬದಲು ಪಾಸಿಟಿವ್ ಬಗ್ಗೆ ಗಮನ ನೀಡಿ.

ಸಂಗಾತಿ ಜೊತೆ ಮತ್ತು ಅವರ ಸ್ನೇಹಿತರ ಜತೆಗೆ ಸ್ವಲ್ಪ ಸಮಯ ಕಳೆಯುವುದು ಉತ್ತಮ. ಅವರೊಂದಿಗೆ ಹೊರಗಡೆ ಹೋಗಿ, ಊಟ ಮಾಡಿ, ಅವರನ್ನು ಮನೆಗೆ ಆಹ್ವಾನಿಸಿ.  ಜೊತೆಯಾಗಿ ಪ್ರವಾಸಕ್ಕೆ ಹೋಗಿ. ಸಂಗಾತಿಯ ಸ್ನೇಹಿತರು ಮತ್ತು ಕುಟುಂಬದವರು ಜತೆಯಾಗಿ ಹೆಚ್ಚು ಸಮಯ ಕಳೆದಷ್ಟು ತುಂಬಾ ಒಳ್ಳೆಯದು ಎಂದು ಅಧ್ಯಯನಗಳು ಸಾಬೀತು ಮಾಡಿವೆ.

ಸಂಗಾತಿಯ ಸಾಧನೆಯನ್ನು ಯಾವಾಗಲೂ ಸಂಭ್ರಮಿಸಿ. ನೀವು ಪರಸ್ಪರರನ್ನು ಪ್ರೋತ್ಸಾಹ ನೀಡಿದರೆ ಮಾತ್ರ ಜೀವನದಲ್ಲಿ ಒಟ್ಟಿಗೆ ಸಂತೋಷದಿಂದ ಬಾಳಲು ಸಾಧ್ಯವಾಗುತ್ತದೆ.  ಸಂಗಾತಿಯ ಯಶಸ್ಸಿಗಾಗಿ ನೀವು ಅವರಿಗಾಗಿ ಏನಾದರೂ ಮಾಡಲು ಪ್ರಯತ್ನಿಸಿ. ಅವರೊಂದಿಗೆ ಒಟ್ಟಿಗೆ ಹೆಚ್ಚು ಸಮಯ ಕಳೆಯಿರಿ, ಅವರಿಗೆ ಹೊಸ ರುಚಿಗಳನ್ನು ತಯಾರು ಮಾಡಿ. ಅವರ ಜೊತೆ ಹೊರಗೆ ಹೋಗಿ ಸುತ್ತಾಡಿ

ಮನುಷ್ಯನ ಅದ್ಭುತ ಗುಣವೆಂದರೆ ಅದು ಹಾಸ್ಯ ಪ್ರಜ್ಞೆ.  ಅನಿರೀಕ್ಷಿತ ಸಮಯದಲ್ಲಿ ಹಾಸ್ಯ ಮಾಡಿ ಸಂದರ್ಭವನ್ನು ತಿಳಿಗೊಳಿಸುವ ಶಕ್ತಿ ಮನುಷ್ಯನಿಗಿದೆ. ಇನ್ನು ಆಗಾಗ ಹಾಸ್ಯ ಚಟಾಕಿ ಹಾರಿಸುವುದು ಸಂಬಂಧದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಸಂಗಾತಿಯೊಡನೆ ಆಗಾಗ ತಮಾಷೆಗಳನ್ನು ಮಾಡುತ್ತಿರಿ ಅದು ಅವರಿಗೆ ಸಂತೋಷವನ್ನುಂಟು ಮಾಡುತ್ತದೆ.

ಇದನ್ನೂ ಓದಿ: ಕೂದಲು ಸಮೃದ್ಧವಾಗಿ ಬೆಳೆಯಲು ಕ್ಯಾಸ್ಟರ್ ಆಯಿಲ್ ಬಳಕೆ ಉತ್ತಮ ಆಯ್ಕೆ

ನಿಮ್ಮ ಭವಿಷ್ಯದ ಯೋಜನೆಯ ಬಗ್ಗೆ  ಮಾತನಾಡಿ.  ನೀವು ಕ್ಯಾಲೆಂಡರ್‌ಗಳು, ಕ್ಯಾಲ್ಕುಲೇಟರ್‌ಗಳು ಮತ್ತು ನೋಟ್ ಪ್ಯಾಡ್‌ಗಳೊಂದಿಗೆ ಕುಳಿತುಕೊಳ್ಳಿ.  ನೀವು ಒಟ್ಟಿಗೆ ನಿಮ್ಮ ಜೀವನದ ಭವಿಷ್ಯದ ಯೋಜನೆಗಳ ಬಗ್ಗೆ ಆಳವಾದ ಮತ್ತು ಅರ್ಥಪೂರ್ಣವಾದ ಮಾತುಗಳನ್ನಾಡಿ.  

ಸಂಗಾತಿಯ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಅವರಲ್ಲಿ ಆಗುವ ಸಣ್ಣ ಬದಲಾವಣೆಯಾದಾಗ ಅದನ್ನು ಗಮನಿಸಿ ಅರ್ಥ ಮಾಡಿಕೊಂಡು ಅವರ ಸಮಸ್ಯೆಗಳನ್ನು ಕೇಳಬೇಕು. ಅವರ ಸುಖದಲ್ಲಿ ಭಾಗಿಯಾಗುವ ಹಾಗೆ ಕಷ್ಟದಲ್ಲಿ ಕೂಡ ಜೊತೆ ಇರುವುದು ಸಂಬಂಧವನ್ನು ಗಟ್ಟಿ ಮಾಡುತ್ತದೆ.  ತಪ್ಪುಗಳು ಸಹಜವಾಗಿ ಪ್ರತಿಯೊಬ್ಬರಿಂದಲೂ ಆಗುತ್ತದೆ. ಆದರೆ ಅದನ್ನೇ ಎತ್ತಿ ಹಿಡಿಯಬಾರದು. ತಪ್ಪುಗಳನ್ನು ಮರೆತು ಮುನ್ನೆಡಯಬೇಕು. ಒಂದು ವಿಚಾರವನ್ನು ಹಿಡಿದುಕೊಂಡು ಅದನ್ನೇ ಎಳೆಯುವುದು ಸಂಬಂಧವನ್ನು ಹಾಳು ಮಾಡುತ್ತದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: