• Home
  • »
  • News
  • »
  • lifestyle
  • »
  • Supplements: ಕೂದಲು ಉದುರುವ ಸಮಸ್ಯೆಯೇ? ಇಲ್ಲಿದೆ ಸುಲಭ ಪರಿಹಾರ

Supplements: ಕೂದಲು ಉದುರುವ ಸಮಸ್ಯೆಯೇ? ಇಲ್ಲಿದೆ ಸುಲಭ ಪರಿಹಾರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪೂರಕಗಳು ಕೂದಲಿನ ಬೆಳವಣಿಗೆಗೆ ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತವೆ. ಈ ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮತ್ತು ಕೂದಲ ಬೆಳವಣಿಗೆಯನ್ನು ಉತ್ತೇಜಿಸುವ ಚಿಕಿತ್ಸೆಗಳಿಗಾಗಿ ಪ್ರತಿ ವರ್ಷ ಅಮೆರಿಕನ್ನರು ಲಕ್ಷಾಂತರ ಡಾಲರ್ ಹಣವನ್ನು ಖರ್ಚು ಮಾಡುತ್ತಾರಂತೆ.

  • Share this:

ಈಗಂತೂ ತಲೆ ಮೇಲಿನ ಕೂದಲು (Hair) ನಿಲ್ಲೋದೆ ಇಲ್ಲ ಎಂಬಂತಿವೆ ನೋಡಿ. ಹೌದು, ವಯಸ್ಸಿನ ಮಿತಿ ಇಲ್ಲದೆ ತಲೆ ಕೂದಲು ಪ್ರತಿದಿನ ಉದುರುತ್ತಲೆ ಇರುತ್ತವೆ. ಹೀಗೆ ಕೂದಲು ಉದುರುವುದಕ್ಕೆ (Hair Fall) ಅನೇಕ ಕಾರಣಗಳಿವೆ. ಹೇಗಪ್ಪಾ.. ಈ ಉದುರುವ ಕೂದಲಿನಿಂದ ಪಾರಾಗೋದು ಮತ್ತು ಕೂದಲು ಬೆಳವಣಿಗೆಯಾಗುವುದು ಅಂತ ಬಹುತೇಕರು ತಲೆ ಕೆಡೆಸಿಕೊಂಡಿರುತ್ತಾರೆ. ಕೂದಲು ಬೆಳವಣಿಗೆಗೆ ಕೆಲವರು ತಮ್ಮ ತಲೆಗೆ ಈ ತೈಲ (Oil), ಆ ತೈಲ ಅಂತೆಲ್ಲಾ ಹಚ್ಚಿದರೆ, ಇನ್ನೂ ಕೆಲವರು ಈ ಪೂರಕಗಳ (Supplements) ಮೇಲೆ ಸಹ ಅವಲಂಬಿತರಾಗಿರುತ್ತಾರೆ. ಈ ಪೂರಕಗಳು ಕೂದಲಿನ ಬೆಳವಣಿಗೆಗೆ (Hair Growth) ಎಷ್ಟರ ಮಟ್ಟಿಗೆ ಸಹಾಯ ಮಾಡುತ್ತವೆ.


ಈ ಕೂದಲು ಉದುರುವಿಕೆಯನ್ನು ತಡೆಗಟ್ಟಲು ಮತ್ತು ಕೂದಲ ಬೆಳವಣಿಗೆಯನ್ನು ಉತ್ತೇಜಿಸುವ ಚಿಕಿತ್ಸೆಗಳಿಗಾಗಿ ಪ್ರತಿ ವರ್ಷ ಅಮೆರಿಕನ್ನರು ಲಕ್ಷಾಂತರ ಡಾಲರ್ ಹಣವನ್ನು ಖರ್ಚು ಮಾಡುತ್ತಾರಂತೆ.


ಚರ್ಮರೋಗ ತಜ್ಞರು ಇದರ ಬಗ್ಗೆ ಏನ್ ಹೇಳ್ತಾರೆ?
ಕೂದಲು ಉದುರುವಿಕೆ ಮತ್ತು ಬೆಳವಣಿಗೆಗೆ ಪ್ರೊತ್ಸಾಹಿಸುವ ಅನೇಕ ಉತ್ಪನ್ನಗಳು ಈಗ ಮಾರುಕಟ್ಟೆಗಳಲ್ಲಿ ಲಭ್ಯವಿವೆ. ಆದರೆ ಇವುಗಳನ್ನು ಚೆನ್ನಾಗಿ ಪರಿಶೀಲಿಸುವುದು ಮತ್ತು ಯಾವುದು ಉತ್ತಮ ಫಲಿತಾಂಶ ನೀಡುತ್ತದೆ ಅಂತ ತಿಳಿದುಕೊಂಡು ಖರೀದಿಸುವುದು ಜಾಣತನವಾಗಿದೆ. ಡಲ್ಲಾಸ್ ನ ‘ಡೆರ್ಮಾಟೋಲೊಜಿ ಟ್ರಿಟ್ಮಂಟ್ ಆಂಡ್ ರಿಸರ್ಚ್ ಸೆಂಟರ್’ ನ ಪ್ರಮಾಣೀಕೃತ ಚರ್ಮರೋಗ ತಜ್ಞ ಡಾ. ರಾಸ್ ರಾಡಸ್ಕಿ ಅವರು "ಕೂದಲು ಉದುರುವಿಕೆಯನ್ನು ಪರಿಹರಿಸಲು ಜನರು ಯಾವಾಗಲೂ ಒಂದು ಮ್ಯಾಜಿಕ್ ಮಾತ್ರೆಯನ್ನು ಹುಡುಕುತ್ತಾರೆ. ಆದರೆ ಇದಕ್ಕೆ ಉತ್ತರವೆಂದರೆ ಯಾವುದೇ ಮ್ಯಾಜಿಕ್ ಮಾತ್ರೆ ಇಲ್ಲ" ಎಂದು ಹೇಳಿದ್ದಾರೆ.


"ನಿಮ್ಮ ಕೂದಲನ್ನು ಸಂಪೂರ್ಣವಾಗಿ ಮರಳಿ ತರುವುದಕ್ಕೆ ಆಗುವುದಿಲ್ಲ” ಎಂದು ಅವರು ಹೇಳುತ್ತಾರೆ. "ನಿಸ್ಸಂಶಯವಾಗಿ ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ, ಆದರೆ ಕೂದಲು ಉದುರುವಿಕೆಗೆ ದೃಢವಾದ ಚಿಕಿತ್ಸೆಗೆ ಕೂದಲು ಉದುರುವಿಕೆ ಪೂರಕಗಳು ಎಂದರೆ ಸಪ್ಲಿಮೆಂಟ್ ಗಳು ಪ್ರಮುಖ ಪಾತ್ರ ವಹಿಸುತ್ತವೆ" ಎಂದು ಹೇಳಿದ್ದಾರೆ. ಸಹಜವಾಗಿ, ನೀವು ಕೂದಲು ಉದುರುವಿಕೆಯೊಂದಿಗೆ ಹೆಣಗಾಡುತ್ತಿದ್ದರೆ, ಅಥವಾ ನಿಮ್ಮ ಆಹಾರಕ್ಕೆ ಹೊಸ ಪೂರಕವನ್ನು ಪರಿಚಯಿಸಲು ನೋಡುತ್ತಿದ್ದರೆ, ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮವಾಗಿರುತ್ತದೆ.


ಡಯಟ್ ಕೂದಲು ಉದುರುವಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ರಾಡಸ್ಕಿಯ ಪ್ರಕಾರ, ಉತ್ತರ ಅಮೆರಿಕಾದ ಆಹಾರಕ್ರಮವು ಕೂದಲಿನ ಬೆಳವಣಿಗೆಗೆ ಆಗಾಗ್ಗೆ ಅಸಮರ್ಪಕವಾಗಿರಬಹುದು ಮತ್ತು ಕೂದಲಿನ ಬೆಳವಣಿಗೆಗೆ ಹೊಂದಿಕೆಯಾಗುವ ಪೂರಕವು ಅಂತರವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ. "ಕೆಲವು ಬಿ-ಕಾಂಪ್ಲೆಕ್ಸ್ ಗಳು, ಡಿ-ಕಾಂಪ್ಲೆಕ್ಸ್ ಗಳು, ಸತು ಮತ್ತು ಕ್ಯಾಲ್ಸಿಯಂ ನಂತಹ ನಮಗೆ ಅಗತ್ಯವಿರುವ ಕೆಲವು ಪೋಷಕಾಂಶಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ, ಇದು ಉರಿಯೂತ ವಿರೋಧಿ ಪೂರಕವಾಗಿದೆ" ಎಂದು ಅವರು ಹೇಳುತ್ತಾರೆ.


ಇದನ್ನೂ ಓದಿ: Almonds And Health: ಬಾದಾಮಿಯ ಆರೋಗ್ಯಕರ ಪೋಷಕಾಂಶ ಪಡೆಯಲು ನೆನೆಸಿ ಸಿಪ್ಪೆ ರಹಿತ ಸೇವಿಸುವುದು ಸೂಕ್ತವೇ?


"ಆದ್ದರಿಂದ, ಕೂದಲು ಉದುರುವ ಪೂರಕದಲ್ಲಿ ಆ ಪದಾರ್ಥಗಳನ್ನು ಹುಡುಕುವುದು ಸಹಾಯ ಮಾಡುತ್ತದೆ. ನೀವು ಏನು ತಿನ್ನುತ್ತೀರೋ ಅದು ನಿಮ್ಮ ಕೂದಲನ್ನು ಪೂರ್ಣವಾಗಿ ಬೆಳೆಸಲು ಸಹಾಯ ಮಾಡುತ್ತದೆ" ಎಂದು ಹೇಳಿದ್ದಾರೆ.


"ಈ ಪೋಷಕಾಂಶಗಳನ್ನು ನೀವು ಸಸಿಗಳಿಗೆ ಹಾಕುವ ಗೊಬ್ಬರ ಅಂತ ನೀವು ತಿಳಿದುಕೊಳ್ಳಿರಿ, ನಿಮ್ಮ ಕೂದಲು ಬೆಳವಣಿಗೆಗೆ ಈ ಪೋಷಕಾಂಶಗಳಿರುವ ಪೂರಕಗಳನ್ನು ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಬೇಕು. ಇದು ಕೂದಲು ಉದುರುವಿಕೆಗೆ ಆಧಾರವಾಗಿರುವ ಪ್ರತಿಯೊಂದು ಕಾರಣವನ್ನು ಪರಿಹರಿಸುವುದಿಲ್ಲ, ಆದರೆ ಇದು ಉತ್ತಮ ಆರಂಭವಾಗಬಹುದು" ಎಂದು ಹೇಳಿದ್ದಾರೆ.


ಕೂದಲು ಉದುರುವಿಕೆ ಪೂರಕದಲ್ಲಿ ನಾವು ಏನನ್ನು ನೋಡಬೇಕು?
ರಾಡಸ್ಕಿ ಪ್ರಕಾರ, ನಿಮ್ಮ ಕೂದಲು ಉದುರುವಿಕೆಯ ಪೂರಕವು ಹೆಚ್ಚಿನ ಮಟ್ಟದ ಬಯೋಟಿನ್ ಅನ್ನು ತಪ್ಪಿಸುತ್ತದೆ ಎಂಬುದು ಮುಖ್ಯವಾಗಿದೆ. "ಬಯೋಟಿನ್, ಆಹಾರ ಮತ್ತು ಔಷಧ ಆಡಳಿತದಿಂದ (ಎಫ್‌ಡಿಎ) ಅನಿಯಂತ್ರಿತವಾಗಿದೆ ಮತ್ತು ಕೆಲವು ಕೂದಲು, ಚರ್ಮ ಮತ್ತು ಉಗುರು ಜೀವಸತ್ವಗಳು 10,000 ಮೈಕ್ರೋಗ್ರಾಮ್ ಗಳಷ್ಟು ಹೊಂದಿರಬಹುದು" ಎಂದು ಅವರು ಹೇಳುತ್ತಾರೆ. ರಾಡಸ್ಕಿಯ ಪ್ರಕಾರ, 1,000 ದಿಂದ 3,000 ಮೈಕ್ರೊ ಗ್ರಾಂ ಬಯೋಟಿನ್ ನ ಆದರ್ಶ ಶ್ರೇಣಿಯಾಗಿದೆ.


"ಹೆಚ್ಚು ಬಯೋಟಿನ್ ಕೆಟ್ಟದಕ್ಕೆ ಕಾರಣವೆಂದರೆ ಅದು ನಿಮ್ಮ ಥೈರಾಯ್ಡ್ ಮತ್ತು ನಿಮ್ಮ ಹೃದಯದ ಆರೋಗ್ಯಕ್ಕಾಗಿ ಪ್ರಮುಖ ರಕ್ತ ಪರೀಕ್ಷೆಗಳಿಗೆ ಅಡ್ಡಿಪಡಿಸುತ್ತದೆ. ಬಯೋಟಿನ್ ಮುಖ್ಯ, ಆದರೆ ಕೂದಲು ಬೆಳೆಯಲು ಸಹಾಯ ಮಾಡಲು ಇದು ಯಾವುದೇ ರೀತಿಯಲ್ಲೂ ಸಹಾಯ ಮಾಡುವುದಿಲ್ಲ” ಎಂದು ಅವರು ಹೇಳುತ್ತಾರೆ.


ಕೂದಲಿನ ಬೆಳವಣಿಗೆಗೆ ಅರಿಶಿನ ತುಂಬಾ ಸಹಾಯಕವಂತೆ!
ಕೂದಲಿನ ಬೆಳವಣಿಗೆಗೆ ಪ್ರಯೋಜನಕಾರಿಯಾದ ಮತ್ತೊಂದು ಅಂಶವೆಂದರೆ ಅರಿಶಿನ ಎಂದು ಅವರು ಹೇಳುತ್ತಾರೆ. "ಅರಿಶಿನ ಪ್ರಬಲ ಉರಿಯೂತ ನಿವಾರಕ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಕೂದಲಿನ ಮಟ್ಟದಲ್ಲಿ ಹಾರ್ಮೋನುಗಳ ಪ್ರಭಾವವನ್ನು ನಿಲ್ಲಿಸುತ್ತದೆ ಎಂದು ತೋರಿಸಲಾಗಿದೆ. ವಯಸ್ಸಾದಂತೆ ಪುರುಷರು ಮತ್ತು ಮಹಿಳೆಯರು ಕೂದಲು ಉದುರುವಿಕೆಯನ್ನು ಅನುಭವಿಸಲು ಪ್ರಾರಂಭಿಸುವ ಪ್ರಾಥಮಿಕ ಕಾರಣಗಳಲ್ಲಿ ಇದೂ ಒಂದಾಗಿದೆ" ಎಂದು ಹೇಳಿದ್ದಾರೆ.


ಅರಿಶಿನ ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಕೂದಲು ಉದುರುವಿಕೆಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದರ್ಶಪ್ರಾಯವಾಗಿ, ದೇಹಕ್ಕೆ ಅಗತ್ಯವಿರುವ ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳನ್ನು ನಾವು ತಿನ್ನುವುದು ಒಳ್ಳೆಯದು.


ಇದನ್ನೂ ಓದಿ: Pimples Remedy: ಮೇಕಪ್ ಮಾಡಿ ಮುಖದ ಮೇಲೆ ಮೊಡವೆ ಆಗಿದ್ರೆ ಇಲ್ಲೊಂದು ಹ್ಯಾಕ್ಸ್​ ಇದೆ


"ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುವ ಕೊಬ್ಬಿನ ಮೀನುಗಳು, ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೆಚ್ಚಿರುವ ಆಹಾರಗಳನ್ನು ನೀವು ಹೆಚ್ಚಾಗಿ ಸೇವಿಸಬೇಕು. ಸಂಸ್ಕರಿಸಿದ ಆಹಾರಗಳು, ಬಿಳಿ ಹಿಟ್ಟುಗಳು ಮತ್ತು ಅತಿಯಾದ ಕೊಬ್ಬುಗಳು ಮತ್ತು ಸಕ್ಕರೆಗಳಂತಹ ಉರಿಯೂತದ ಪರವಾದ ಆಹಾರಗಳಿಂದ ಆದಷ್ಟು ದೂರವಿರಿ" ಎಂದು ಹೇಳಿದ್ದಾರೆ.

Published by:Ashwini Prabhu
First published: