Chapati: ಉಳಿದಿರುವ ಚಪಾತಿ ಹಿಟ್ಟನ್ನು ಫ್ರಿಜ್​​ನಲ್ಲಿಟ್ಟು ನಂತರ ಬಳಸಿದರೆ ಏನಾಗುತ್ತೆ?

ಸಾಮಾನ್ಯವಾಗಿ ಚಪಾತಿ ಮಾಡಿದ ನಂತರ ಉಳಿಯುವ ಹಿಟ್ಟನ್ನು ಫ್ರಿಜ್ ನಲ್ಲಿಟ್ಟು ಮತ್ತೆ ಬಳಸುತ್ತೇವೆ. ಇನ್ನು ಕೆಲವರು ಒಮ್ಮೆ ಹಿಟ್ಟು ಕಲಸುವಾಗಲೇ ಎರಡು ಮೂರೂ ದಿನಗಳಿಗಾಗುವಷ್ಟು ಹಿಟ್ಟು ಕಲಸಿ ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ (left over dough). ಆದರೆ ಇದು ಸರಿಯಾದ ಕ್ರಮವೇ ಎಂದು ತಿಳಿಯಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಧುಮೇಹಿಗಳಿಗೆ ಚಪಾತಿ (Chapati) ಬಹಳ ಇಷ್ಟವಾದ ಆಹಾರಗಳಲ್ಲಿ ಒಂದು.  ಸಕ್ಕರೆ ಪ್ರಮಾಣ ಕಾಪಾಡಿಕೊಳ್ಳಲು ಚಪಾತಿ ಪರಿಣಾಮಕಾರಿಯಾಗಿ ಬಳಸಲಾಗುವುದು. ಕಲೆಸಿದ ಚಪಾತಿ ಹಿಟ್ಟನ್ನು ಫ್ರಿಜ್‌ನಲ್ಲಿಟ್ಟು(fridge)  ಬಳಸುವುದು ಸಾಮಾನ್ಯ. ಚಪಾತಿ ತಯಾರಿಸುವ ಸ್ಪಲ್ಪ ಮೊದಲು ಹಿಟ್ಟನ್ನು ಹಿಂದೆ ಕೋಣೆಯ ಉಷ್ಣಾಂಶಕ್ಕೆ (room temperature)ತಂದು ಬಳಸುವ ಅಭ್ಯಾಸವನ್ನು ನಾವು ರೂಡಿಸಿಕೊಂಡಿದ್ದೇವೆ. ಈ ವಿಧಾನವು ಸುಲಭವೆಂದು ತೋರುತ್ತದೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಫ್ರಿಜ್‌ನಲ್ಲಿಟ್ಟ ಹಿಟ್ಟಿನ ತಯಾರಿಸುವ ಚಪಾತಿ ತಿನ್ನುವುದು ಅನೇಕ ಸಮಸ್ಯೆಗಳನ್ನು ತರಬಹುದು. ಹಾಗಾಗಿ ಈ ಕೂಡಲೇ ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

    ಇದನ್ನು ಓದಿ: Kitchen Tips: ಪ್ರೆಶರ್ ಕುಕ್ಕರ್‌ನಲ್ಲಿ ಚಪಾತಿ ಮಾಡುವುದು ಹೇಗೆ ಗೊತ್ತಾ..?: ವಿಡಿಯೋ ವೈರಲ್

    ಸಾಮಾನ್ಯವಾಗಿ, ಚಪಾತಿ ಮಾಡಿದ ನಂತರ ಉಳಿಯುವ ಹಿಟ್ಟನ್ನು ಫ್ರಿಜ್ ನಲ್ಲಿಟ್ಟು ಮತ್ತೆ ಬಳಸುತ್ತೇವೆ. ಇನ್ನು ಕೆಲವರಿಗೆ ಒಮ್ಮೆ ಹಿಟ್ಟು ಕಲಸುವಾಗಲೇ ಎರಡು ಮೂರೂ ದಿನಗಳಿಗಾಗುವಷ್ಟು ಹಿಟ್ಟು ಕಲಸಿ ಇಟ್ಟುಕೊಳ್ಳುವ ಅಭ್ಯಾಸವಿರುತ್ತದೆ (left over dough). ಇದರಿಂದ ಸಮಯ ಉಳಿಸಬಹುದು. ಕೆಲಸ ಬೇಗ ಮುಗಿಯುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಹೀಗೆ ಮಾಡಲಾಗುತ್ತದೆ. ಹೀಗೆ ಮಾಡಿದರೆ ಹಿಟ್ಟು ಕಲಸುವ ಸಮಯ ಉಳಿಯಬಹುದು. ಆದರೆ ಇದು ಆರೋಗ್ಯಕ್ಕೆ ಹಾನಿಕಾರಕ (Side effect of leftover dough) ಎನ್ನುವುದನ್ನು ಕೂಡಾ ನೆನಪಿನಲ್ಲಿಟ್ಟು ಕೊಳ್ಳಬೇಕು. ಈ ರೀತಿ ಮಾಡುವುದು ಆರೋಗ್ಯದ ಮೇಲೆ ಭಾರೀ ಕೆಟ್ಟ (serious impact on health)ಪರಿಣಾಮ ಬೀರುತ್ತದೆ ಎಂಬುದನ್ನು ನಾವೀಗ ಅರಿತು ಆ ಬಗ್ಗೆ ಜಾಗೃತಿ ಮೂಡಿಸಬೇಕಾಗಿರುವುದು ಅಗತ್ಯ.

    ಹಾನಿಕಾರಕ ಅನಿಲ(Harmful gas)
    ಹಿಟ್ಟಿಗೆ ನೀರನ್ನು ಸೇರಿಸಿದಾಗ, ಅದರಲ್ಲಿ ಕೆಲವು ರಾಸಾಯನಿಕ ಬದಲಾವಣೆಗಳಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಚಪಾತಿಯನ್ನು ತಕ್ಷಣ ತಿಂದರೆ ಅದು ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ. ಆದರೆ,ಆ ಹಿಟ್ಟನ್ನು ಫ್ರಿಜ್‌ನಲ್ಲಿ ಇಟ್ಟ ತಕ್ಷಣ, ಫ್ರಿಜ್‌ನಿಂದ ಬರುವ ಹಾನಿಕಾರಕ ಅನಿಲಗಳು ಹಿಟ್ಟನ್ನು ಪ್ರವೇಶಿಸುತ್ತವೆ. ಇದು ಅನೇಕ ರೋಗಗಳಿಗೆ ಕಾರಣವಾಗಬಹುದು. ಹಿಟ್ಟನ್ನು ಕಲಸಿ ಫ್ರಿಡ್ಜ್ ನಲ್ಲಿಟ್ಟರೆ ಫ್ರಿಡ್ಜ್ ನ ಹಾನಿಕಾರಕ ಗ್ಯಾಸ್ ಹಿಟ್ಟಿನೊಳಗೆ ಸೇರುತ್ತದೆ. ಈ ಕಾರಣದಿಂದಾಗಿ, ಈ ಹಿಟ್ಟಿನಿಂದ ಮಾಡಿದ ಚಪಾತಿ ತಿನ್ನುವುದರಿಂದ ಅನಾರೋಗ್ಯಕ್ಕೆ (Health problem) ಒಳಗಾಗಬೇಕಾಗಬಹುದು. ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

    ಬ್ಯಾಕ್ಟೀರಿಯಾ ಬೆಳೆಯುತ್ತದೆ(Bacteria grow)
    ಒಮ್ಮೆ ಹಿಟ್ಟನ್ನು ಕಲಸಿ ಇಟ್ಟರೆ, ಅದರ ಹುದುಗುವಿಕೆಯ (fermentation) ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಹಾಗಾಗಿ, ಹಿಟ್ಟನ್ನು ಫ್ರಿಡ್ಜ್ ನಲ್ಲಿಟ್ಟ ನಂತರ ಅದರಿಂದ ಚಪಾತಿ ಮಾಡಿ ತಿಂದರೆ ಹೊಟ್ಟೆ ಕೆಡಬಹುದು. ಕಲೆಸಿದ ಹಿಟ್ಟಿನಲ್ಲಿ ಬ್ಯಾಕ್ಟೀರಿಯಾ ಫಾಸ್ಟ್‌ ಆಗಿ ಬೆಳೆಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೀರ್ಘಕಾಲದವರೆಗೆ ಸ್ಟೋರ್‌ ಮಾಡುವುದರಿಂದ ಬ್ಯಾಕ್ಟೀರಿಯಾ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತದೆ. ಅವುಗಳಿಂದ ತಯಾರಿಸಿದ ರೋಟಿ ಯಾ ಚಪಾತಿ ತಿಂದಾಗ ಆರೋಗ್ಯಕ್ಕೆ ಹಾನಿಯಾಗುತ್ತದೆ.

     ಇದನ್ನು ಓದಿ:Soft Chapatis Secret: ಚಪಾತಿಗಳು ಮೃದುವಾಗಿರಬೇಕೆ.. ಹಾಗಾದರೆ ಈ 2 ರಹಸ್ಯ ವಸ್ತುಗಳನ್ನು ಬೆರೆಸಿ ಸಾಕು..

    ರೋಗನಿರೋಧಕ ಶಕ್ತಿ ದುರ್ಬಲ(Weakened immunity)
    ಹಳಸಿದ ಹಿಟ್ಟಿನ ಚಪಾತಿ ತಿನ್ನುವುದರಿಂದ ಹೊಟ್ಟೆ ನೋವು, ಮಲಬದ್ಧತೆ (Constipation) ಮತ್ತು ಗ್ಯಾಸ್‌ನಂತಹ ತೊಂದರೆಗಳು ಉಂಟಾಗಬಹುದು. ಪ್ರತಿದಿನ ಹಳಸಿದ ಹಿಟ್ಟನ್ನು ಬಳಸಿದರೆ, ಜೀರ್ಣಕ್ರಿಯೆ ಹದಗೆಡುತ್ತದೆ. ಇಮ್ಮ್ಯುನ್ ಸಿಸ್ಟಮ್ (Immune system) ಕೂಡಾ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ರೋಗನಿರೋಧಕ ಶಕ್ತಿ (Immunity) ದುರ್ಬಲವಾದರೆ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಎಷ್ಟೋ ಜನ ಒತ್ತಡದ ಬದುಕಿನಲ್ಲಿ ಫ್ರಿಜ್ ಬಳಕೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ಅತಿಯಾದ ಬಳಕೆ ಜೀವಕ್ಕೆ ಮಾರಕ ಎಂಬುದನ್ನು ಮರೆತಿದ್ದಾರೆ. ಅದರಲ್ಲೂ ಚಪಾತಿ ಹಿಟ್ಟು ಇಡುವುದು ಸದ್ದಿದಲ್ಲೇ ಪ್ರಾಣಕ್ಕೆ ಕುತ್ತು ತರುತ್ತದೆ.
    Published by:vanithasanjevani vanithasanjevani
    First published: