Almond Peel: ಬಾದಾಮಿ ಸಿಪ್ಪೆಯನ್ನು ಎಸೆಯಬೇಡಿ, ಚರ್ಮದ ಸೌಂದರ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಬಹುದು

ಬಾದಾಮಿಯನ್ನು ನೆನೆಸಿಟ್ಟು ಸಿಪ್ಪೆ ತೆಗೆದು ತಿನ್ನುವುದು ಬಹಳ ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಆದರೆ ಅದರ ಸಿಪ್ಪೆಯನ್ನು ಬಿಸಾಡಬೇಕೆ? ಖಂಡಿತಾ ಸರಿಯಲ್ಲ. ಬಾದಾಮಿಯಂತೆ ಅದರ ಸಿಪ್ಪೆಯು ಕೂಡ ಅತ್ಯಂತ ಆರೋಗ್ಯಕರ. ಅದರಲ್ಲೂ ಕೂದಲು ಮತ್ತು ಚರ್ಮಕ್ಕೆ ಉಪಯೋಗಕಾರಿಯಾದ ವಿಟಮಿನ್‍ಗಳು, ಮಿನರಲ್‍ಗಳು ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳಿವೆ.

ಬಾದಾಮಿ ಸಿಪ್ಪೆ

ಬಾದಾಮಿ ಸಿಪ್ಪೆ

  • Share this:
ಬಾದಾಮಿಯನ್ನು (Almonds) ನೆನೆಸಿಟ್ಟು ಸಿಪ್ಪೆ (Peel) ತೆಗೆದು ತಿನ್ನುವುದು ಬಹಳ ಹಿಂದಿನಿಂದಲೂ ನಡೆದು ಬಂದ ಪದ್ಧತಿ (Habits). ಆದರೆ ಅದರ ಸಿಪ್ಪೆಯನ್ನು ಬಿಸಾಡಬೇಕೆ? ಖಂಡಿತಾ ಸರಿಯಲ್ಲ. ಬಾದಾಮಿಯಂತೆ ಅದರ ಸಿಪ್ಪೆಯು ಕೂಡ ಅತ್ಯಂತ ಆರೋಗ್ಯಕರ (Healthy). ಅದರಲ್ಲೂ ಕೂದಲು ಮತ್ತು ಚರ್ಮಕ್ಕೆ (Skin) ಉಪಯೋಗಕಾರಿಯಾದ ವಿಟಮಿನ್‍ಗಳು (Vitamin), ಮಿನರಲ್‍ಗಳು (Mineral) ಮತ್ತು ಆ್ಯಂಟಿ ಆಕ್ಸಿಡೆಂಟ್‍ಗಳಿವೆ (Antioxidant). ಬಾದಾಮಿ ಸಿಪ್ಪೆಗಳನ್ನು (Almond Peel) ಎಸೆಯಬಾರದು ಎಂದಾದರೆ, ಅವುಗಳನ್ನು ಏನು ಮಾಡಬೇಕು ಎನ್ನುತ್ತೀರಿ. ಬಾದಾಮಿ ಸಿಪ್ಪೆಯನ್ನು ಯಾವೆಲ್ಲಾ ರೀತಿ ಬಳಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ (Information).

1. ಬಾದಾಮಿಗಳನ್ನು ಸಿಪ್ಪೆ ಸಮೇತ ತಿನ್ನುವುದು ಸರಿಯೇ?
ಬಾದಾಮಿಯನ್ನು ನೆನೆಸಿ, ಸಿಪ್ಪೆ ಸುಲಿದು ತಿನ್ನುವುದು ಸಾಂಪ್ರದಾಯಿಕ ವಿಧಾನವಾಗಿದೆ. ಆದರೆ, ಬಾದಾಮಿಯ ಸಿಪ್ಪೆಯಲ್ಲೂ ಪೋಷಕಾಂಶಗಳು ಇರುವುದರಿಂದ ಸಿಪ್ಪೆ ಸುಲಿಯದೆ ತಿನ್ನುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಅದೇನೇ ಇದ್ದರೂ, ಬಾದಾಮಿಯನ್ನು ನೆನಸಿ ತಿನ್ನುವುದು ಒಳ್ಳೆಯದು. ಕೆಲವು ಸಂದರ್ಭಗಳಲ್ಲಿ ಬಾದಾಮಿಯಲ್ಲಿ ಫೈಟಿಕ್ ಆಮ್ಲ ಎಂಬ ರಾಸಾಯನಿಕ ಇರುತ್ತದೆ ಮತ್ತು ಅದು ಆರೋಗ್ಯಕ್ಕೆ ಹಾನಿಕಾರಕ.

2. ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುತ್ತದೆ
ಬಾದಾಮಿಯ ಸಿಪ್ಪೆಯಲ್ಲಿ ಫೈಬರ್ ಇರುತ್ತದೆ, ಅದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತದೆ ಮತ್ತು ಫ್ಲಾವನಾಯ್ಡ್ ಗಳು ಕೂಡ ಇವೆ. ಒಣಗಿಸಿದ ಬಾದಾಮಿ ಸಿಪ್ಪೆ, ಅಗಸೆ ಬೀಜ ಮತ್ತು ಕಲ್ಲಂಗಡಿ ಬೀಜವನ್ನು ಕಲ್ಲು ಸಕ್ಕರೆಯೊಂದಿಗೆ ಸೇರಿಸಿ, ಬೆಚ್ಚಗಿನ ಹಾಲಿನ ಜೊತೆ ಸೇವಿಸಿ. ಅದರಲ್ಲಿ ಅನ್‍ಸಾಲ್ಯುಬಲ್ ಫೈಬರ್ ಇರುವುದರಿಂದ, ಅದು ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುತ್ತದೆ.

3. ಬಾದಾಮಿ ಸಿಪ್ಪೆಯ ಲಾಡು
ಈ ಲಾಡುವನ್ನು ಮಾಡುವುದು ಬಹಳ ಸುಲಭ. ಒಂದು ಲೋಟ ಬಾದಾಮಿ ಸಿಪ್ಪೆ, 1/4 ಅಗಸೆ ಬೀಜ, 1 ಕಪ್ ಒಣ ಕೊಬ್ಬರಿ ತುರಿ ಮತ್ತು ಬೆಲ್ಲವನ್ನು ಮಿಕ್ಸರ್‍ನಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ಬಿಸಿ ಹಾಲು / ತುಪ್ಪದ ಜೊತೆ ಸೇರಿಸಿ ಲಾಡು ತಯಾರಿಸಿ.

ಇದನ್ನೂ ಓದಿ:  Monsoon Food System: ಮಳೆಗಾಲದಲ್ಲಿ ನಿಮ್ಮ ಆಹಾರ ಪದ್ಧತಿ ಹೀಗಿದ್ದರೆ ಅನಾರೋಗ್ಯದ ಬಗ್ಗೆ ಚಿಂತೆಯೇ ಬೇಡ

4. ವೇಗನ್ ಬ್ಯಾಕನ್ ಬಿಟ್ಸ್
ಬೆಳಗ್ಗಿನ ಉಪಹಾರಕ್ಕೆ, ಬಾದಾಮಿ ಸಿಪ್ಪೆಯು ಉತ್ತಮ ವೇಗನ್ ಬೇಕನ್ ಬಿಟ್ ಆಗಬಲ್ಲದು. ಅದಕ್ಕಾಗಿ ನೀವು ಮಾಡಬೇಕಾದದ್ದಿಷ್ಟೆ - ಒಂದು ಕಪ್ ಬಾದಾಮಿ ಸಿಪ್ಪೆಯನ್ನು ತೆಗೆದುಕೊಳ್ಳಿ, ಅದನ್ನು ಚೆನ್ನಾಗಿ ತೊಳೆಯಿರಿ ಮತ್ತು ಬಿಸಿಲಿನಲ್ಲಿ ಒಣಗಿಸಿ. ಬಳಿಕ, ಒಂದು ಬೌಲ್‍ನಲ್ಲಿ 1 ಟೇಬಲ್ ಚಮಚ ಆಲಿವ್ ಎಣ್ಣೆ ಹಾಕಿ, 1 ಟೀ ಸ್ಪೂನ್ ಬೆಳ್ಳುಳ್ಳಿ ಪುಡಿ, 1 ಟೀ ಚಮಚ ಈರುಳ್ಳಿ ಪುಡಿ, 1/2 ಟೀ ಚಮಚ ಪೆಪ್ರಿಕಾ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಪೆಪ್ಪರ್ ಸೇರಿಸಿಕೊಳ್ಳಿ. ಅದನ್ನು ಚೆನ್ನಾಗಿ ಕಲಸಿ, ಅದಕ್ಕೆ ಒಣಗಿಸಿದ ಬಾದಾಮಿ ಸಿಪ್ಪೆಗಳನ್ನು ಸೇರಿಸಿ. ಆ ನಂತರ, ಬೇಕಿಂಗ್ ಟ್ರೇ ಪರ್ಚಮೆಂಟ್ ಪೇಪರ್ ಹಾಕಿ, ಆ ಮಿಶ್ರಣವನ್ನು ಬೇಕನ್‍ನಂತೆ ಗರಿಗರಿ ಆಗುವವರೆಗೆ 5- 10 ನಿಮಿಷಗಳ ಕಾಲ ಬೇಕ್ ಮಾಡಿ.

5. ಬಾದಾಮಿ ಹೇರ್ ಮಾಸ್ಕ್
ಈ ಹೇರ್ ಮಾಸ್ಕನ್ನು ಮಾಡುವುದು ಸುಲಭ. ಅರ್ಧ ಕಪ್ ಬಾದಾಮಿ ಸಿಪ್ಪೆಯನ್ನು, ಒಂದು ಮೊಟ್ಟೆ, 1 ಟೇಬಲ್ ಚಮಚ ತೆಂಗಿನ ಎಣ್ಣೆ, 2 ಟೇಬಲ್ ಚಮಚ ಅಲೋವೆರಾ ಜೆಲ್ ಮತ್ತು ಜೇನು ತುಪ್ಪದ ಜೊತೆ ಸೇರಿಸಿ ರುಬ್ಬಿರಿ. ಜರಡಿಯಲ್ಲಿ ಸೋಸಿಕೊಂಡು, ಕೂದಲಿಗೆ ಹಚ್ಚಿರಿ. ಇದರಲ್ಲಿ ವಿಟಮಿನ್ ಇ ಇರುವುದರಿಂದ ಹೇರ್ ಸ್ಪಾನಂತೆ ಕೆಲಸ ಮಾಡುತ್ತದೆ.

6. ಬಾದಾಮಿ ಚಟ್ನಿ
ಬಾದಾಮಿ ಅಥವಾ ಯಾವುದೇ ಬೀಜದಿಂದ ಮಾಡಿದ ಚಟ್ನಿ ರುಚಿಕರವಾಗಿರುತ್ತದೆ. ಅದೇ ರೀತಿ ಬಾದಾಮಿ ಚಟ್ನಿಯು ಕೂಡ. ಈ ಚಟ್ನಿಯನ್ನು ಮಾಡುವ ವಿಧಾನ ಹೀಗಿದೆ - ಕಾವಲಿಯಲ್ಲಿ ಒಂದು ಕಪ್ ಶೇಂಗಾ ಬೀಜ, 1 ಕಪ್ ಬಾದಾಮಿ ಸಿಪ್ಪೆ, 1 ಟೇಬಲ್ ಸ್ಪೂನ್ ಉದ್ದಿನ ಬೇಳೆಯನ್ನು ತುಪ್ಪದಲ್ಲಿ ಹುರಿಯಿರಿ.

ಇದನ್ನೂ ಓದಿ:  Face Mask: ಮುಖದ ಅಂದ ಹೆಚ್ಚಿಸಲು ಮತ್ತು ಹೊಳೆಯುವ ತ್ವಚೆಗಾಗಿ ಇಲ್ಲಿವೆ ಕೆಲವು ಫೇಸ್ ಪ್ಯಾಕ್

ಈ ಮಿಶ್ರಣ ಕೋಣೆಯ ತಾಪಮಾನಕ್ಕೆ ಇಳಿದ ಬಳಿಕ, 3 ಹಸಿಮೆಣಸಿನ ಕಾಯಿ, 3 ಎಸಳು ಬೆಳ್ಳುಳ್ಳಿ, ಒಂದು ಇಂಚು ಶುಂಠಿ ಮತ್ತು ಎರಡು ಟೇಬಲ್ ಸ್ಪೂನ್ ಲಿಂಬೆ ರಸ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಕರಿಮೆಣಸನ್ನು ಹಾಕಿ ರುಬ್ಬಿಕೊಳ್ಳಿ. ಆ ನಂತರ ತುಪ್ಪದಲ್ಲಿ ಕರಿಬೇವಿನ ಎಲೆ, ಕೆಂಪು ಒಣ ಮೆಣಸಿನ ಕಾಯಿ ಮತ್ತು ಸಾಸಿವೆಯ ಒಗ್ಗರಣೆ ಕೊಡಿ.

7. ಬಾದಾಮಿ ಸಿಪ್ಪೆಯ ಸ್ಕ್ರಬ್
ಬಾದಾಮಿ ಮಾತ್ರವಲ್ಲ, ಅದರ ಸಿಪ್ಪೆಯು ಕೂಡ ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಒಂದು ಕಪ್ ಬಾದಾಮಿ ಸಿಪ್ಪೆಯನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ, ಅದನ್ನು 1/4 ಕಪ್ ರೋಲ್ಡ್ ಓಟ್ಸ್ , 1/4 ಕಪ್ ಕಡಲೇಹಿಟ್ಟು ಮತ್ತು ಅರ್ಧ ಕಪ್ ಕಾಫಿ ಪುಡಿಯ ಜೊತೆ ಪುಡಿ ಮಾಡಿಕೊಳ್ಳಿ. ಅದಕ್ಕೆ ಮೊಸರು ಸೇರಿಸಿ ಚರ್ಮಕ್ಕೆ ಹಚ್ಚಿಕೊಳ್ಳಿ.
Published by:Ashwini Prabhu
First published: