Baby Sleeping Position: ರಾತ್ರಿ ಹೊತ್ತು ಮಗುವನ್ನು ಹೊಟ್ಟೆಯ ಮೇಲೆ ಮಲಗಿಸಬೇಡಿ..!

ನಿದ್ರೆಯ ವಿಷಯದಲ್ಲೂ ಅಷ್ಟೇ. ಹಾಗಾಗಿ ಹುಟ್ಟಿದ ಮಗು (baby sleep) ದಿನದ ಹೆಚ್ಚು ಹೊತ್ತು ಮಲಗಿರಬೇಕು ಎಂದು ಹೇಳಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಪುಟಾಣಿ ಮಕ್ಕಳು ಸಿಡ್ಸ್'' (sids)ಎಂಬ ಅಪರೂಪದ ಕಾಯಿಲೆಗೆ ತುತ್ತಾಗುತ್ತಿರುವುದು ಹೆಚ್ಚು ಗಮರ್ನಾಹವಾದ ವಿಚಾರವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹುಟ್ಟಿದ ಮಗು(Baby) ಆರೋಗ್ಯ ಬಹಳ ಸೂಕ್ಷ್ಮ. ಅದರಲ್ಲೂ ಪುಟ್ಟ ಮಕ್ಕಳ ವಿಷಯದಲ್ಲಿ ಕೆಲವೊಂದು ಬಾರಿ ನಾವು ತೋರುವ ನಿರ್ಲಕ್ಷತೆ ಅವರ ಆರೋಗ್ಯಕ್ಕೆ (Health) ಮಾರಕವಾಗಿ ಪರಿಣಮಿಸುತ್ತದೆ. ಪುಟ್ಟ ಮಕ್ಕಳ ಜವಾಬ್ದಾರಿಯನ್ನು ಹೊತ್ತ ಪೋಷಕರು (Parents) ಬಹಳಷ್ಟು ಜಾಗರೂಕತೆಯಿಂದ ಪ್ರತಿ ಕ್ಷಣವೂ ಅವರ ಆರೈಕೆಯ ಜೊತೆಗೆ ದಿನ ನಿತ್ಯದ ಚಟುವಟಿಕೆಗಳ ಮೇಲೆ ಗಮನ ವಹಿಸಬೇಕು. ನಿದ್ರೆಯ ವಿಷಯದಲ್ಲೂ ಅಷ್ಟೇ. ಹಾಗಾಗಿ ಹುಟ್ಟಿದ ಮಗು (Baby Sleep) ದಿನದ ಹೆಚ್ಚು ಹೊತ್ತು ಮಲಗಿರಬೇಕು ಎಂದು ಹೇಳಲಾಗುತ್ತದೆ. ಇತ್ತೀಚೆನ ದಿನಗಳಲ್ಲಿ ಪುಟಾಣಿ ಮಕ್ಕಳು ಸಿಡ್ಸ್'' (Sids)ಎಂಬ ಅಪರೂಪದ ಕಾಯಿಲೆಗೆ ತುತ್ತಾಗುತ್ತಿರುವುದು ಹೆಚ್ಚು ಗಮರ್ನಾಹವಾದ ವಿಚಾರವಾಗಿದೆ.

  ಪೋಷಕರು ಎಚ್ಚರ ವಹಿಸಿ: ಹೌದು ಸಿಡ್ಸ್ ಪದದ ಅರ್ಥ sudden infant death syndrome ಎಂದು, ನಿದ್ದೆಯಲ್ಲಿಯೇ ಯಾವುದೇ ಸೂಚನೆಯಿಲ್ಲದೇ ಮಗು ಸಾವಿಗೀಡಾಗುವುದನ್ನು ಹೀಗೆ ಕರೆಯಬಹುದು. ಮಕ್ಕಳ ಬೆಳವಣಿಗೆಗೆ ಸೂಕ್ತ ಪ್ರಮಾಣದ ಗಾಢ ನಿದ್ದೆ ಅವಶ್ಯಕವಾಗಿದ್ದು ಇದನ್ನು ಪಡೆಯಲು ಬೆನ್ನ ಮೇಲೆ ಮಲಗುವ ಭಂಗಿಯೇ ಅತ್ಯುತ್ತಮವಾಗಿದೆ. ಒಂದು ವೇಳೆ ನಿದ್ದೆ ಸಮರ್ಪಕವಾಗಿಲ್ಲದಿದ್ದರೆ ಇದು "ಸಿಡ್ಸ್'' ಗೆ ಬಲಿಯಾಗಬೇಕಾಗುತ್ತದೆ, ಹಾಗಾಗಿ ಪೋಷಕರು ಬಹಳ ಎಚ್ಚರ ವಹಸಿಬೇಕು ಎಂದು ವೈದ್ಯರು ಹೇಳುತ್ತಾರೆ. ಅರಿವಿಲ್ಲದೇ ಮಕ್ಕಳನ್ನು ತಪ್ಪಾದ ಭಂಗಿಯಲ್ಲಿ ಮಲಗಿಸುವ ಪರಿಣಾಮ ಇಂತಹ ಸಮಸ್ಯಗೆ ಆಹ್ವಾನಿಸುದಂತಾಗುತ್ತದೆ. ಹಾಗಾಗಿ ಇದು ಪ್ರತಿ ತಾಯಂದಿರೂ ಅರಿತುಕೊಂಡಿರಬೇಕಾದ ವಿಷಯವಾಗಿದೆ.

  ಬೆನ್ನ ಮೇಲೆ ಮಲಗಿಸಬೇಕು: ಒಂದು ವರ್ಷ ತುಂಬುವ ಮುನ್ನ ಮಗುವನ್ನು ಸದಾ ಬೆನ್ನ ಮೇಲೆ ಮಲಗಿಸಬೇಕು.(his back before filling one year.) ಹಾಸಿಗೆಯ ಮೇಲೆ ಮಲಗಿಸುವಾಗ, ಮಡಿಲಲ್ಲಿ ಮಲಗಿಸಿಕೊಳ್ಳುವಾಗ ಅಥವಾ ಇತರ ಸ್ಥಳಕ್ಕೆ ಹೋದಾಗ ಮಗುವನ್ನು ಅಲ್ಪಕಾಲದವರೆಗೆ ಮಲಗಿಸಿದಾಗ ಅಥವಾ ತೊಟ್ಟಿಲಲ್ಲಿ ತೂಗುವಾಗ ಮತ್ತು ರಾತ್ರಿ ಮಲಗಿಸುವಾಗ ಬೆನ್ನ ಮೇಲೆಯೇ ಮಲಗಿಸಬೇಕು. ಈ ಹಂತದಲ್ಲಿ ಮಲಗಿದ್ದಾಗ ಮಗು 'ಸಿಡ್ಸ್' ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಅತ್ಯಂತ ಕಡಿಮೆಯಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಮಲಗಿದ್ದಾಗ ಮೂಗು ಮೇಲಿದ್ದು ಉಸಿರಾಟ ಸರಾಗವಾಗಿರುವುದು. ಮಗು ಹೀಗೆ ಮಲಗಿದ್ದಾಗಲೇ ಅತಿ ಸುರಕ್ಷಿತವಾಗಿರುತ್ತದೆ ಎಂದು ಅಮೇರಿಕಾದ ರಾಷ್ಟ್ರೀಯ ಮಕ್ಕಳ ಆರೋಗ್ಯ ಮತ್ತು ಮಾನವ ಅಭಿವೃದ್ಧಿ ಸಂಸ್ಥೆ (The US National Institute of Child Health and Human Development) ಎಂದು ಎಚ್ಚರಿಕೆ ನೀಡಿದೆ.

  ಹೊಟ್ಟೆಯ ಮೇಲೆ ಮಲಗಿಸಬೇಡಿ: ಮಗುವನ್ನು(baby) ಹೊಟ್ಟೆಯ ಮೇಲೆ ಮಲಗಿಸಿ ನಿದ್ದೆ ಮಾಡುವ ಭಂಗಿಯನ್ನು ತಪ್ಪು ಎಂದು ಹಲವಾರು ಅಧ್ಯಯನಗಳು ತಿಳಿಸುತ್ತವೆ. ಏಕೆಂದರೆ. ಮಗುವಿನ ದವಡೆಯ ಮೇಲೆ ಒತ್ತಡ ಬೀರುತ್ತದೆ. ಮೂಗಿನಿಂದ ಉಸಿರೆಳೆದುಕೊಳ್ಳಲು ಕಷ್ಟಕರವಾಗಿ ಉಸಿರಾಟ ಕಷ್ಟಕರವಾಗಬಹುದು. ಮೂಗಿನಿಂದ ಹೊರಗೆ ಬಿಟ್ಟ ಗಾಳಿಯನ್ನೇ ಮತ್ತೆ ಒಳಗೆಳೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ. ಒಂದು ವೇಳೆ ಹಾಸಿಗೆ ಮೆತ್ತಗಿದ್ದರೆ, ಹೊಟ್ಟೆಯ ಮೇಲೆ ಮಲಗಿದಾಗ ಮುಖದಡಿಯ ಭಾಗದ ಹಾಸಿಗೆ ತಳಕ್ಕಿಳಿದು ಮಗುವಿಗೆ ಉಸಿರಾಟ ಅಸಾಧ್ಯವಾಗಿಸಬಹುದು. ಹಾಸಿಗೆ (bed)ಮತ್ತು ಹೊದಿಕೆಗಳಲ್ಲಿ ಆಶ್ರಯ ಪಡೆದಿದ್ದ ಸೂಕ್ಷ್ಮಜೀವಿಗಳು ಸುಲಭವಾಗಿ ಮೂಗಿನ ಮೂಲಕ ಮಗುವಿನ ದೇಹಕ್ಕೆ ಪ್ರವೇಶ ಪಡೆದುಕೊಳ್ಳಬಹುದು. ಹಾಗಾಗಿ ಮಗುವನ್ನು ಹೆಚ್ಚು ಹೊಟ್ಟೆಯ ಮೇಲೆ ಮಲಗಿಸುವ ರೂಡಿಯನ್ನು ಮಾಡಬೇಡಿ.

  ಇದನ್ನೂ ಓದಿ: Ayurveda Tips: ಆಯುರ್ವೇದದಲ್ಲಿ PCODಗೆ ಇದೆ ಪರಿಹಾರ.. ಸುಲಭ ವಿಧಾನಗಳನ್ನು ಅನುಸರಿಸಿದರೆ ಸಾಕು

  ಮಗುವನ್ನು ಎಚ್ಚರಾಗಿದ್ದಾಗ ಹೊಟ್ಟೆಯ (stomack)ಮೇಲೆ ಕೊಂಚ ಹೊತ್ತು ಮಲಗಿಸಿದ್ದರೆ ತಲೆ ಎತ್ತಲು ಮತ್ತು ಕೈಗಳನ್ನು (hand)ಬಳಸಿ ಎದ್ದು ನಿಲ್ಲಲು ನಡೆಸುವ ಪ್ರಯತ್ನ ಮಗುವಿನ ಶರೀರಕ್ಕೆ ಉತ್ತಮ ವ್ಯಾಯಾಮ ನೀಡುತ್ತದೆ. ಆರೋಗ್ಯ ಕಾರಣಗಳಿಂದ ಒಂದು ವೇಳೆ ಯಾವುದೋ ಕಾರಣಕ್ಕೆ ಹೊಟ್ಟೆಯ ಮೇಲೆ ಮಲಗಿಸುವುದು ಅನಿವಾರ್ಯವಾದರೆ ವೈದ್ಯರೇ ಇದನ್ನು ಸೂಚಿಸುತ್ತಾರೆ ಹಾಗೂ ಕಾಳಜಿ ವಹಿಸುವ ಕ್ರಮಗಳನ್ನೂ ಕೈಗೊಳ್ಳುತ್ತಾರೆ.

  ನಿದ್ರೆ ಮಾಡುವ ಅಭ್ಯಾಸ: ಸಾಮಾನ್ಯವಾಗಿ ಪುಟ್ಟ ಮಕ್ಕಳು ಯಾವಾಗ ಅಂದರೆ ಅವಾಗಲೇ ನಿದ್ರೆ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತವೆ. ಪೋಷಕರು ಆದಷ್ಟು ಇದನ್ನು ತಪ್ಪಿಸಿ ಬೆಳಗಿನ ಸಮಯದಲ್ಲಿ ಎಚ್ಚರವಾಗಿರುವಂತೆ ಬೇರೆ ಬೇರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಂಡು ರಾತ್ರಿಯ(night time) ಸಮಯದಲ್ಲಿ ಹೆಚ್ಚು ನಿದ್ರೆ ಮಾಡುವಂತೆ ಅಭ್ಯಾಸ ಮಾಡಿಸಬೇಕು. ಇದರಿಂದ ಮಗುವಿನ ಬೆಳವಣಿಗೆಯ ಮೇಲೆ ಒಳ್ಳೆಯ ಪ್ರಭಾವ ಬೀರಿ ನಿಮ್ಮಂತೆಯೇ ಆರೋಗ್ಯವಾಗಿ ನಿಮ್ಮ ಮಗುವೂ ಕೂಡ ಬೆಳವಣಿಗೆ ಹೊಂದುತ್ತದೆ.ರಾತ್ರಿಯ ಸಮಯದಲ್ಲಿ ಅಥವಾ ಕತ್ತಲ ಕೋಣೆಗೆ (dark room)ನಿಮ್ಮ ಮಗು ಹೋಗಲು ಭಯ ಪಟ್ಟರೆ ತಕ್ಷಣವೇ ಲೈಟ್( lights) ಹಾಕಿ. ನಿಮ್ಮ ಮಗು ನಿದ್ರೆಗೆ ಜಾರುವವರೆಗೂ ನೀವೂ ಅಲ್ಲೇ ಇದ್ದು ನಂತರ ದೀಪ ಆರಿಸಿ
  Published by:vanithasanjevani vanithasanjevani
  First published: