ಅನೇಕರು ಬೆಳಿಗ್ಗೆ ಎದ್ದ ತಕ್ಷಣ ಮನೆಯಿಂದ (Home) ಹೊರಗಡೆ ದೂರ ಹೋಗಿ ವಾಕಿಂಗ್ (Walking) ಮಾಡಿ ಬರುತ್ತಾರೆ. ಹೀಗೆ ಬೆಳಿಗ್ಗೆ ಬೆಳಿಗ್ಗೆ (Morning) ನಡೆಯುವುದು ತುಂಬಾನೇ ಆರೋಗ್ಯಕ್ಕೆ (Health) ಒಳ್ಳೆಯದು ಎಂದು ಅನೇಕರು ಹೇಳುತ್ತಾರೆ. ಬೆಳಗ್ಗೆ ಅಥವಾ ಸಂಜೆ (Evening) ಹೊತ್ತಿನಲ್ಲಿ ವಾಕಿಂಗ್ ಹೋಗಿ ಬರುವುದು ಕಡಿಮೆ ಪರಿಣಾಮದ ತಾಲೀಮು ಆಗಿದ್ದು, ಅದನ್ನು ಮಾಡುವುದು ತುಂಬಾನೇ ಸುಲಭ ಮತ್ತು ಇದಕ್ಕೆ ಯಾವುದೇ ಸಲಕರಣೆಗಳ ಅಗತ್ಯವಿಲ್ಲ. ಪ್ರತಿದಿನ ತಪ್ಪದೆ ವಾಕಿಂಗ್ ಹೋಗುವುದು ಇತರ ಯಾವುದೇ ವ್ಯಾಯಾಮದಂತೆಯೇ (Exercise) ಅದೇ ಫಲಿತಾಂಶವನ್ನು ನೀಡುತ್ತದೆ. 30 ನಿಮಿಷಗಳ ಕಾಲ ವೇಗವಾಗಿ ನಡೆಯುವುದರಿಂದ 100 ರಿಂದ 300 ಕ್ಯಾಲೋರಿಗಳನ್ನು (Calories) ನಾವು ಬರ್ನ್ (Burn) ಮಾಡಿಕೊಳ್ಳಬಹುದು.
ವಾಕಿಂಗ್ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ
ನಿಯಮಿತ ವಾಕಿಂಗ್ ಗೆ ಸಂಬಂಧಿಸಿದ ಹಲವಾರು ಇತರ ಪ್ರಯೋಜನಗಳಿವೆ. ವಾಕಿಂಗ್ ಹೃದಯರಕ್ತನಾಳದ ಫಿಟ್ನೆಸ್ ಅನ್ನು ಸುಧಾರಿಸುತ್ತದೆ, ಇದು ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಶ್ವವಾಯುನಂತಹ ವಿವಿಧ ಆರೋಗ್ಯ ತೊಡಕುಗಳನ್ನು ಸಂಭವಿಸದಂತೆ ತಡೆಯುತ್ತದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ, ಸ್ನಾಯು ಸಹಿಷ್ಣುತೆಯನ್ನು ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ, ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ.
ಅದರ ಅಸಂಖ್ಯಾತ ಪ್ರಯೋಜನಗಳ ಹೊರತಾಗಿಯೂ, ನಡಿಗೆಯು ಅನೇಕರಿಗೆ ಅಪೇಕ್ಷಿತ ಫಲಿತಾಂಶಗಳನ್ನು ನೀಡುವುದಿಲ್ಲ. ಏಕೆಂದರೆ ನೀವು ವಾಕಿಂಗ್ ಮಾಡುವಾಗ ಮಾಡಿದ ಕೆಲವು ತಪ್ಪುಗಳಿಂದ ಅಪೇಕ್ಷಿತ ಫಲಿತಾಂಶ ನಿಮಗೆ ಸಿಗುವುದಿಲ್ಲ ಎಂದು ಹೇಳಬಹುದು.
ನಿಮ್ಮ ನಡಿಗೆಯ ವೇಗವನ್ನು ಯಾವೆಲ್ಲಾ ಅಂಶಗಳು ಅಡ್ಡಿಪಡಿಸುತ್ತದೆ?
ಗುಂಪಿನಲ್ಲಿ ನಡೆಯುವುದು, ನಡೆಯುವಾಗ ಹಾಡು ಕೇಳುವುದು, ಮೊಬೈಲ್ ಫೋನ್ ನಲ್ಲಿ ಬ್ರೌಸ್ ಮಾಡುವುದು, ಫೋನ್ ನಲ್ಲಿ ಅಥವಾ ವೈಯಕ್ತಿಕವಾಗಿ ಯಾರೊಂದಿಗಾದರೂ ಮಾತನಾಡುವುದು, ವೇಗವಾಗಿ ನಡೆಯದಿರುವುದು, ನಡೆಯುವಾಗ ಇಲ್ಲಿ ಮತ್ತು ಅಲ್ಲಿ ನೋಡುವುದು ಇವೆಲ್ಲಾ ಕಾರಣಗಳಿಂದಾಗಿ ವಾಕಿಂಗ್ ಮಾಡಿದರೂ ಸಹ ಅಪೇಕ್ಷಿಸಿದ ಫಲಿತಾಂಶ ದೊರೆಯುವುದಿಲ್ಲ.
ಇದನ್ನೂ ಓದಿ: Weight Gain: ತುಂಬಾ ತೆಳ್ಳಗಿದ್ದೀರಾ? ಹಾಗಾದರೆ ನೈಸರ್ಗಿಕ ಈ ಕ್ರಮಗಳ ಮೂಲಕ ನಿಮ್ಮ ತೂಕ ಹೆಚ್ಚಿಸಿಕೊಳ್ಳಿ
ಇದಲ್ಲದೆ ಸರಿಯಾದ ಉಡುಪನ್ನು ಧರಿಸದಿರುವುದು ನಿಮ್ಮ ನಡಿಗೆಯ ವೇಗದ ಮೇಲೂ ಪರಿಣಾಮ ಬೀರಬಹುದು. ತುಂಬಾ ಬಿಗಿಯಾದ ಬಟ್ಟೆಗಳು ಅಥವಾ ತುಂಬಾ ಸಡಿಲವಾದ ಬಟ್ಟೆಗಳನ್ನು ಧರಿಸುವುದರಿಂದ ವ್ಯಕ್ತಿಯು ಸರಿಯಾಗಿ ನಡೆಯಲು ಸಾಧ್ಯವಾಗುವುದಿಲ್ಲ. ಬೂಟುಗಳು ನಡಿಗೆಯ ವೇಗದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರಬಹುದು. ಸರಿಯಾದ ಫಿಟ್ ಶೂ ಗಳನ್ನು ಧರಿಸದಿರುವುದು ನಡಿಗೆಯ ವೇಗದ ಮೇಲೆ ಪರಿಣಾಮ ಬೀರುವುದಲ್ಲದೆ, ಇದು ಕಾಲಿನ ಮೂಳೆಗಳು ಮತ್ತು ಸ್ನಾಯುಗಳ ಮೇಲೂ ಪರಿಣಾಮ ಬೀರುತ್ತದೆ.
ನೀವು ಕೇವಲ ಹೆಜ್ಜೆಗಳ ಸಂಖ್ಯೆಯನ್ನು ಎಣಿಸುತ್ತಿದ್ದೀರಾ?
ನೀವು ಕೇವಲ ಹೆಜ್ಜೆಗಳ ಸಂಖ್ಯೆಯನ್ನು ಎಣಿಸುತ್ತಿದ್ದರೆ, ಅದು ತಪ್ಪು. ನಡಿಗೆ ಎಂದರೆ ಕೇವಲ ಹೆಜ್ಜೆಗಳನ್ನು ಎಣಿಸುವುದು ಎಂದರ್ಥವಲ್ಲ. ನಡಿಗೆಯ ಆರೋಗ್ಯ ಪ್ರಯೋಜನಗಳು ನೀವು ಎಷ್ಟು ಕ್ಯಾಲೋರಿಗಳನ್ನು ಬರ್ನ್ ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ, ಅದು ಮತ್ತೆ ನಿಮ್ಮ ನಡಿಗೆಯ ವೇಗವನ್ನು ಅವಲಂಬಿಸಿರುತ್ತದೆ.
ಒಂದು ನಿರ್ದಿಷ್ಟ ಸಮಯದಲ್ಲಿ ನೀವು ಎಷ್ಟು ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತೀರಿ ಎಂಬುದು ನಡಿಗೆಯ ವೇಗವಾಗಿದೆ. ಉದಾಹರಣೆಗೆ, ಪ್ರತಿ ಕಿಲೋ ಮೀಟರ್ ಗೆ 9 ನಿಮಿಷಗಳ ನಡಿಗೆಯ ವೇಗವು ಖಂಡಿತವಾಗಿಯೂ ಪ್ರತಿ ಕಿಲೋ ಮೀಟರ್ ಗೆ 10 ರಿಂದ 14 ನಿಮಿಷಗಳ ನಡಿಗೆ ವೇಗಕ್ಕಿಂತ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ.
ನೀವು ವಾಕಿಂಗ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
1. ನಿಮ್ಮ ತಲೆಯನ್ನು ಕೆಳಗೆ ನೇತು ಹಾಕಿಕೊಂಡು ನಡೆಯಬೇಡಿ. ನಿಮ್ಮ ತಲೆಯನ್ನು ನೇರವಾಗಿರಿಸಿಕೊಳ್ಳಿ ಮತ್ತು ನಿಮ್ಮ ಕುತ್ತಿಗೆ, ಬೆನ್ನು ಮತ್ತು ಭುಜಗಳಿಂದ ನೇರವಾದ ಭಂಗಿಯನ್ನು ಕಾಪಾಡಿಕೊಳ್ಳಿ, ಇದರಿಂದ ನೀವು ಸರಿಯಾಗಿ ಉಸಿರಾಡಲು ಸಾಧ್ಯವಾಗುತ್ತದೆ.
2. ಹರಟೆ ಹೊಡೆಯುವುದು, ಫೋನ್ ನಲ್ಲಿ ಬ್ರೌಸ್ ಮಾಡುವುದು ಅಥವಾ ನಡೆಯುವಾಗ ಸಂಗೀತ ಕೇಳುವುದು ಮುಂತಾದ ಇತರ ಚಟುವಟಿಕೆಗಳಲ್ಲಿ ತೊಡಗಬೇಡಿ.
3. ನಡೆಯುವಾಗ ನಿಮ್ಮ ತೋಳುಗಳನ್ನು ಕಾರ್ಯಪ್ರವೃತ್ತವಾಗಿರಿಸಿಕೊಳ್ಳಿ. ಅವುಗಳನ್ನು ಗಟ್ಟಿಯಾಗಿ ಇಡಬೇಡಿ ಮತ್ತು ನಿಮ್ಮ ಎರಡು ತೋಳುಗಳನ್ನು ನಿಮ್ಮ ನಡಿಗೆಯ ವೇಗದಲ್ಲಿ ಸ್ವಿಂಗ್ ಮಾಡಿ.
ಇದನ್ನೂ ಓದಿ: Sleep Tips: ಡಯೆಟ್ ಅಂತ ರಾತ್ರಿ ಕಡಿಮೆ ತಿಂದ್ರೆ ಸರಿಯಾಗಿ ನಿದ್ದೆ ಬರಲ್ಲ, ಹಾಗಾದರೆ ಹೀಗೆ ಮಾಡಿ
4. ಅತಿರೇಕ ಮಾಡಬೇಡಿ. ಸಣ್ಣ ಮತ್ತು ತ್ವರಿತ ಹೆಜ್ಜೆಗಳನ್ನು ತೆಗೆದುಕೊಳ್ಳಿ.
5. ಪ್ರತಿದಿನ ಒಂದೇ ಮಾರ್ಗದಲ್ಲಿ ವಾಕಿಂಗ್ ಹೋಗಬೇಡಿ. ನಿಮ್ಮ ವಾಕಿಂಗ್ ಗೆ ಹೋಗುವ ಮಾರ್ಗವನ್ನು ಬದಲಿಸಿ.
6. ಪ್ರತಿ ನಡಿಗೆಯ ನಂತರ ನಿಮ್ಮ ಕಾಲಿನ ಸ್ನಾಯುಗಳನ್ನು ಸ್ವಲ್ಪ ಹಿಗ್ಗಿಸಿ. ಇದು ನಿಮಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ