• Home
 • »
 • News
 • »
 • lifestyle
 • »
 • Omicron BF.7: ಎದೆ ನೋವು, ಕಿವುಡುತನ, ನಿರಂತರ ಕೆಮ್ಮು ನಿಮ್ಮನ್ನು ಕಾಡುತ್ತಿದೆಯಾ? ಹಾಗಿದ್ರೆ ಇದು ಓಮಿಕ್ರಾನ್ ಲಕ್ಷಣ!

Omicron BF.7: ಎದೆ ನೋವು, ಕಿವುಡುತನ, ನಿರಂತರ ಕೆಮ್ಮು ನಿಮ್ಮನ್ನು ಕಾಡುತ್ತಿದೆಯಾ? ಹಾಗಿದ್ರೆ ಇದು ಓಮಿಕ್ರಾನ್ ಲಕ್ಷಣ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಓಮಿಕ್ರಾನ್ BF.7 ಈಗ ಯುಕೆ, ಯುಎಸ್‌, ಆಸ್ಟ್ರೇಲಿಯಾ, ಬೆಲ್ಜಿಯಂನಲ್ಲೂ ಕಾಣಿಸಿಕೊಂಡಿದೆ ಎಂಬ ವರದಿಗಳು ಹರಿದಾಡುತ್ತಿವೆ. ಹೀಗಾಗಿ ಭಾರತದಲ್ಲೂ ಮುಂಬರುವ ಹಬ್ಬದ ಋತುವಿನಲ್ಲಿ ಮುನ್ನೆಚ್ಚರಿಕೆ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ತಜ್ಞರು ಸಲಹೆ ನೀಡಿದ್ದಾರೆ.

 • Share this:

ಭಾರತದಲ್ಲಿ ಕೊರೋನಾ ಪ್ರಕರಣ (Corona Cases) ಸಂಖ್ಯೆ ಏರಿಕೆಯಾಗುತ್ತಿದ್ದು, ಸಾಂಕ್ರಾಮಿಕದ ಅಪಾಯವು ಮತ್ತೆ ಎದುರಾದಂತೆ ಕಾಣುತ್ತಿದೆ. ಈಗಾಗ್ಲೇ ಸರ್ಕಾರ, ಆರೋಗ್ಯ ತಜ್ಞರು ಎಚ್ಚರಿಕೆ ರವಾನಿಸಿದ್ದಾರೆ. ಕೋವಿಡ್ ರೂಪಾಂತರಗಳಾದ BF.7 (COVID New Variant BF.7) ಮತ್ತು BA.5.1.7 ಹೆಚ್ಚಿನ ಹರಡುವಿಕೆಯೊಂದಿಗೆ ಸಾಂಕ್ರಾಮಿಕ ರೋಗವನ್ನು ಇನ್ನಷ್ಟು ಪಸರಿಸುವ ಭೀತಿ ಇದೆ ಎಂದು ಹೇಳಿದ್ದಾರೆ. ಇನ್ನೂ BF.7 ಒಮಿಕ್ರಾನ್‌ (Omicron) ಹೆಚ್ಚು ಹರಡುವ ರೂಪಾಂತರವಾಗಿದ್ದು, ರೋಗ ಲಕ್ಷಣಗಳು ಕೂಡ ಹೆಚ್ಚಾಗಿವೆ. ಎದೆ ನೋವು (Chest Pain) ಮತ್ತು ವಾಸನೆಯ ಅಸ್ವಸ್ಥತೆಗಳಿಂದ ಹಿಡಿದು ಕಿವುಡತನ ಎಲ್ಲವೂ ಅಪಾಯಕಾರಿ ಎಂದಿದ್ದಾರೆ ತಜ್ಞರು.


ಓಮಿಕ್ರಾನ್ ಉಪ-ರೂಪಾಂತರಗಳಾದ BA.5.1.7 ಮತ್ತು BF.7 ಚೀನಾದ ಮಂಗೋಲಿಯಾದ ಪ್ರದೇಶದಿಂದ ಪತ್ತೆಯಾದ ನಂತರ ಈಗ ಇತರ ಭಾಗಗಳಿಗೆ ವಿಸ್ತರಿಸುತ್ತಿದೆ ಹಾಗೂ ಹೊಸ ಆರೋಗ್ಯ ಅಪಾಯಗಳ ಬೆದರಿಕೆಗಳಿಗೆ ಕಾರಣವಾಗಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. BF.7 ಈಗ ಯುಕೆ, ಯುಎಸ್‌, ಆಸ್ಟ್ರೇಲಿಯಾ, ಬೆಲ್ಜಿಯಂನಲ್ಲೂ ಕಾಣಿಸಿಕೊಂಡಿದೆ ಎಂಬ ವರದಿಗಳು ಹರಿದಾಡುತ್ತಿವೆ. ಹೀಗಾಗಿ ಭಾರತದಲ್ಲೂ ಮುಂಬರುವ ಹಬ್ಬದ ಋತುವಿನಲ್ಲಿ ಮುನ್ನೆಚ್ಚರಿಕೆ ಮತ್ತು ಕೋವಿಡ್ ಸೂಕ್ತ ನಡವಳಿಕೆಯನ್ನು ತಜ್ಞರು ಸಲಹೆ ನೀಡಿದ್ದಾರೆ.


"ಹೆಚ್ಚಿನ ಪ್ರಮಾಣದ ಸೋಂಕಿನ ಪ್ರಮಾಣ ಹೊಂದಿದೆ"
ಹೊಸ ರೂಪಾಂತರದ ಕುರಿತು ಶಾಲಿಮಾರ್ ಬಾಗ್‌ನ ಮ್ಯಾಕ್ಸ್ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ನಿರ್ದೇಶಕ ಡಾ ಸಂಜಯ್ ಧಾಲ್, ಮಾತನಾಡಿ "ಓಮಿಕ್ರಾನ್ ಬಿಎಫ್.7 ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ನಿಂದ ಎಚ್ಚರಿಕೆಯ ವಿಷಯವಾಗಿತ್ತು. ಅಸ್ತಿತ್ವದಲ್ಲಿರುವ ಪ್ರಬಲ ರೂಪಾಂತರವನ್ನು ಇದು ಬದಲಿಸುವ ನಿರೀಕ್ಷೆಯಿದೆ." ಎಂದು ಎಚ್ಚರಿಕೆ ನೀಡಿದರು.


ಇದನ್ನೂ ಓದಿ:  Acidic Burps Remedy: ಹುಳಿ ತೇಗು ಸಮಸ್ಯೆ ಕಾಡುತ್ತಿದ್ರೆ ಇಲ್ಲಿದೆ ನೋಡಿ ಪರಿಹಾರ


ಈ ಬಗ್ಗೆ ಹೆಚ್ಚು ಮಾಹಿತಿ ನೀಡಿದ ಡಾ. ಸಂಜಯ್ ಧಾಲ್ ಬಿಎಫ್.7 ರೂಪಾಂತರವು ಹೆಚ್ಚಿನ ಪ್ರಮಾಣದ ಸೋಂಕಿನ ಪ್ರಮಾಣವನ್ನು ಹೊಂದಿದ್ದು, ಓಮಿಕ್ರಾನ್ ಮತ್ತು ಅದರ ರೂಪಾಂತರಗಳು ಮಾನವನ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವಂತದ್ದು. ಅದೃಷ್ಟವಶಾತ್, ಓಮಿಕ್ರಾನ್ ಮತ್ತು ಅದರ ರೂಪಾಂತರಗಳು ತುಂಬಾ ತೀವ್ರವಾಗಿರುವುದಿಲ್ಲ ಮತ್ತು ಸಾಮಾನ್ಯ ರೋಗಲಕ್ಷಣಗಳನ್ನು ಉಂಟುಮಾಡುತ್ತವೆ, ಆದರೆ ಇತರ ಹೃದ್ರೋಗ, ಮೂತ್ರಪಿಂಡ ಕಾಯಿಲೆ ಅಥವಾ ಯಕೃತ್ತಿನ ಕಾಯಿಲೆ ಮತ್ತು ವೃದ್ಧಾಪ್ಯದ ರೋಗಿಗಳು ಸೇರಿ ಇತರೆ ಕಾಯಿಲೆಗಳನ್ನು ಹೊಂದಿರುವ ರೋಗಿಗಳಲ್ಲಿ ಈ ರೋಗಲಕ್ಷಣಗಳು ಗಂಭೀರವಾಗಬಹುದು ಎಂದು ತಿಳಿಸಿದರು.


ಹಾಗಾದರೆ ಓಮಿಕ್ರಾನ್ BF.7 ನ ರೋಗಲಕ್ಷಣಗಳು ಯಾವುವು ಎಂದು ನಾವಿಲ್ಲಿ ತಿಳಿದುಕೊಳ್ಳೋಣ.


ಓಮಿಕ್ರಾನ್ BF.7 ನ ರೋಗಲಕ್ಷಣಗಳು ಯಾವುವು?


 • ನಿರಂತರ ಕೆಮ್ಮು

 • ಎದೆ ನೋವು

 • ಮೈ ನಡುಗುವಿಕೆ

 • ವಾಸನೆ ಕಳೆದುಕೊಳ್ಳುವಿಕೆ

 • ಕಿವಿ ಕೇಳದಿರುವುದು

 • ಶೀತ, ಮೂಗು ಕಟ್ಟುವಿಕೆ

 • ಗಂಟಲು ಕೆರತ

 • ಸುಸ್ತು ಮತ್ತು ಆಯಾಸ

 • ಕೆಮ್ಮು ಮತ್ತು ಶೀತ

 • ಸ್ರವಿಸುವ ಮೂಗು


ಆತಂಕ ಬಿಡಿ...ಮುನ್ನೆಚ್ಚರಿಕೆ ವಹಿಸಿ
ಕೋವಿಡ್‌ನ ಹೊಸ ರೂಪಾಂತರ ಬಂದಾಗಲೆಲ್ಲಾ, ಕೋವಿಡ್ ಹರಡುವ ಸಾಧ್ಯತೆಗಳು ಹೆಚ್ಚಾಗುತ್ತವೆ ಮತ್ತು ಅದು ಕೂಡ ಹಬ್ಬದ ಸೀಸನ್ ಸಮೀಪಿಸುತ್ತಿರುವಾಗ ಮತ್ತು ಪ್ರತಿಯೊಬ್ಬರೂ ಮತ್ತೆ ಸಾಮಾಜಿಕ ಅಂತರದ ನಿಯಮಗಳನ್ನು ಉಲ್ಲಂಘಿಸಲು ಪ್ರಾರಂಭಿಸುತ್ತಾರೆ. ಹಾಗೆಯೇ ಮಾಸ್ಕ್‌ ಇಲ್ಲದೆಯೇ ಎಲ್ಲೆಡೆ ಓಡಾಡುತ್ತಾರೆ. ಇದು ಅಪಾಯವನ್ನು ಉಲ್ಬಣಗೊಳಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.


ಇದನ್ನೂ ಓದಿ:  Thyroid Problem: ಥೈರಾಯ್ಡ್​ನಿಂದ ಬಿಡುಗಡೆ ಹೊಂದಲು ಈ ಸೂಪರ್​ ಫುಡ್​​ಗಳು ಸಹಕಾರಿ


ಅದಾಗ್ಯೂ ಹೊಸ ಉಪ-ವೇರಿಯಂಟ್ನ ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಾರೆ. ಮುನ್ನೆಚ್ಚರಿಕೆ ವಹಿಸಿದರೆ ಇದನ್ನು ತಪ್ಪಿಸಬಹುದು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಜನರು ಕಿಕ್ಕಿರಿದ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುವುದು ಮತ್ತು ಕೈ ತೊಳೆಯುವುದು ಮುಖ್ಯ. ಆಗ ಈ ವೈರಸ್ ಅನ್ನು ತಪ್ಪಿಸಬಹುದು ಎಂಬುವುದು ವೈದ್ಯರ ಸಲಹೆ.

Published by:Ashwini Prabhu
First published: