Health Tips: ಮೊಸರಿನ ಜೊತೆ ಈ ಆಹಾರಗಳನ್ನು ಎಂದಿಗೂ ತಿನ್ಬೇಡಿ!

ಮೊಸರು ಮತ್ತು ರೊಟ್ಟಿ

ಮೊಸರು ಮತ್ತು ರೊಟ್ಟಿ

ಮೊಸರಿನ ಜೊತೆ ನಾವು ಈ ಆಹಾರಗಳನ್ನು ತಿಂದರೆ ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಆ ಕಾರಣದಿಂದ ಇಲ್ಲಿ ನೀಡಿರುವ ಯಾವ ಪದಾರ್ಥವನ್ನೂ ಮೊಸರಿನ ಜೊತೆ ತಿನ್ನಬೇಡಿ.

  • Share this:

ಭಾರತೀಯ ಪಾಕಪದ್ಧತಿಯಲ್ಲಿ ಮೊಸರಿಗೆ (Curd) ವಿಶೇಷ ಪ್ರಾಶಸ್ತ್ಯವಿದೆ. ಇದರಲ್ಲಿ ಪ್ರೋಬಯಾಟಿಕ್‌ಗಳು, ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳು ಮುಂತಾದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅಂಶಗಳಿರುತ್ತವೆ. ಆದರೆ ಈ ಮೊಸರನ್ನು ಬಿಸಿ ಆಹಾರದೊಂದಿಗೆ ಜೋಡಿಯಾಗಿ ತಿನ್ನುವುದರಿಂದ ನಮ್ಮ ದೇಹದ (Body) ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಹುದು. ಹೌದು, ಮೊಸರಿನಲ್ಲಿರುವ ಆಮ್ಲೀಯ ಗುಣವು ಪರಾಟಾ, ಮಾವು (Mango), ಈರುಳ್ಳಿ ಸೇರಿದಂತೆ ಕೆಲವು ಆಹಾರಗಳೊಂದಿಗೆ ಸಂಯೋಜಿಸಿದಾಗ ಸಮಸ್ಯೆಗಳನ್ನು ಉಂಟುಮಾಡಬಹುದು.


ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಈ ಆಹಾರ ಸಂಯೋಜನೆಯು ಆಮ್ಲೀಯತೆ, ಹೊಟ್ಟೆ ಉಬ್ಬರಿಸುವುದು ಮತ್ತು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು.


ಆಯುರ್ವೇದದ ಪ್ರಕಾರ, ಪರಸ್ಪರ ಹೊಂದಿಕೆಯಾಗದ ಆಹಾರ ಜೋಡಿಗಳನ್ನು 'ವಿರುಧ್ ಅನ್ನ' ಎಂದು ಕರೆಯಲಾಗುತ್ತದೆ. ಪೌಷ್ಟಿಕತಜ್ಞೆ ರೂಪಾಲಿ ದತ್ತಾ ಅವರು "ಕೆಲವು ಆಹಾರಗಳು ವಿರುದ್ಧ ಗುಣಗಳಿಂದ ಹೊಂದಿಕೆಯಾಗುವುದಿಲ್ಲ. ಒಂದು ಬಿಸಿ ಮತ್ತು ಇನ್ನೊಂದು ಶೀತ ಇರಬಹುದು. ಕೆಲವೊಮ್ಮೆ ಎರಡೂ ಪದಾರ್ಥಗಳು ಒಂದೇ ರೀತಿಯ ಗುಣಗಳನ್ನು ಹೊಂದಿರಬಹುದು. ಅಂಥ ಆಹಾರಗಳನ್ನು ಒಟ್ಟಿಗೆ ಸೇವಿಸಿದಾಗ ರೋಗಕ್ಕೆ ಕಾರಣವಾಗುತ್ತವೆ ಎಂದು ಹೇಳುತ್ತಾರೆ.


ಇದನ್ನೂ ಓದಿ: Watermelon: ಕೆಂಪಾಗಿ, ಸ್ವೀಟ್​ ಆಗಿರುವ ಕಲ್ಲಂಗಡಿ ಸೆಲೆಕ್ಟ್​ ಮಾಡೋಕೆ ಇಲ್ಲಿದೆ ನೋಡಿ ಟ್ರಿಕ್ಸ್


ಹಾಗಿದ್ದರೆ ದೈನಂದಿನ ಆಹಾರದಲ್ಲಿ ಮೊಸರಿನೊಂದಿಗೆ ಸೇವಿಸಬಾರದಂಥ ಪದಾರ್ಥಗಳು ಯಾವವು ಅನ್ನೋದನ್ನು ನೋಡೋಣ.


1. ಬೆಲ್ಲ ಮತ್ತು ಮೊಸರು: ಬೆಲ್ಲವನ್ನು ಸಕ್ಕರೆಗೆ ಆರೋಗ್ಯಕರ ಪರ್ಯಾಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅನೇಕ ಜನರು ಸಕ್ಕರೆಯ ಬದಲಿಗೆ ಬೆಲ್ಲವನ್ನು ಬಳಸುತ್ತಾರೆ.


ನೀವು ಮೊಸರನ್ನು ಬೆಲ್ಲದೊಂದಿಗೆ ಸೇರಿಸಿದಾಗ ಅದು ತೂಕ ಹೆಚ್ಚಾಗಲು ಕಾರಣವಾಗಬಹುದು. ಬೆಲ್ಲವು ಬಿಸಿ ಗುಣವನ್ನು ಹೊಂದಿರುತ್ತದೆ. ಆದರೆ ಮೊಸರು ತಂಪು. ತಜ್ಞರ ಪ್ರಕಾರ, ಈ ಅಂಶಗಳು ಕೆಮ್ಮು, ಶೀತ ಮತ್ತು ಜ್ವರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.


2. ಹಾಲು ಮತ್ತು ಮೊಸರು : ಬಹಳಷ್ಟು ಜನರು ಸ್ಮೂಥಿ ಸೇರಿದಂತೆ ವಿವಿಧ ಆಹಾರಗಳನ್ನು ತಯಾರಿಸಲು ಹಾಲು ಮತ್ತು ದಹಿಯನ್ನು ಒಟ್ಟಿಗೆ ಸೇರಿಸುತ್ತಾರೆ. ಆದರೆ ಆರೋಗ್ಯ ತಜ್ಞ ಡಾ.ಆಶುತೋಷ್ ಗೌತಮ್ ಪ್ರಕಾರ, ದಹಿಯನ್ನು ಹಾಲಿನೊಂದಿಗೆ ಎಂದಿಗೂ ಸೇರಿಸಬಾರದು.



ಮೊಸರನ್ನು ಹಾಲಿನೊಂದಿಗೆ ಸೇವಿಸಬಾರದು. ಏಕೆಂದರೆ ಅದು ದೇಹದ ಚಾನಲ್‌ಗಳನ್ನು ನಿರ್ಬಂಧಿಸುತ್ತದೆ. ಸೋಂಕುಗಳು, ಹೊಟ್ಟೆಯ ಸಮಸ್ಯೆಗಳು ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ" ಎಂದು ಅವರು ವಿವರಿಸುತ್ತಾರೆ.


3. ಚಹಾ ಮತ್ತು ಮೊಸರು : ಚಹಾ ಮತ್ತು ಮೊಸರು ಪರಸ್ಪರ ವಿರುದ್ಧ ಗುಣದ ಸಂಯೋಜನೆಯಾಗಿದೆ. ಚಹಾವು ಬಿಸಿಯ ಗುಣವನ್ನು ಹೊಂದಿರುತ್ತದೆ. ಆದರೆ ಮೊಸರು ಯಾವಾಗಲೂ ತಣ್ಣನೆಯ ಗುಣದ್ದು. ಆದ್ದರಿಂದ ಕೋಲ್ಡ್ ಮೊಸರು ಅಥವಾ ಮೊಸರು ಆಧಾರಿತ ಭಕ್ಷ್ಯಗಳನ್ನು (ಮೊಸರು ಸ್ಯಾಂಡ್‌ವಿಚ್‌ಗಳು ಮತ್ತು ದಹಿ ಕಬಾಬ್) ಸೇರಿಸುವುದು ಆರೋಗ್ಯಕ್ಕೆ ಹಾನಿಯುಂಟುಮಾಡಬಹುದು. ಇದು ನಿಮ್ಮ ದೇಹದ ಚಯಾಪಚಯ ವ್ಯವಸ್ಥೆಯಲ್ಲಿ ಅಸಮತೋಲನ ಉಂಟುಮಾಡಬಹುದು.


4. ಮಾವು ಮತ್ತು ಮೊಸರು : ನೀವು ಮ್ಯಾಂಗೋಶೇಕ್‌ಗೆ ದಹಿಯನ್ನು ಸೇರಿಸುತ್ತಿದ್ದರೆ ಈಗಲೇ ಅದನ್ನು ನಿಲ್ಲಿಸಿ. ಇದು ಉತ್ತಮ ಆಹಾರ ಸಂಯೋಜನೆಯಲ್ಲ. ಮೊಸರಿನಲ್ಲಿ ಪ್ರಾಣಿ ಪ್ರೋಟೀನ್ ಇದೆ ಎಂದು ತಜ್ಞರು ವಿವರಿಸುತ್ತಾರೆ.


ಇದು ಹಣ್ಣುಗಳೊಂದಿಗೆ ಸಂಯೋಜಿಸಿದಾಗ ದೇಹದಲ್ಲಿ ಹುದುಗುವಿಕೆಗೆ ಕಾರಣವಾಗಬಹುದು. ಆದ್ದರಿಂದ ಈ ಸಂಯೋಜನೆ ಅಜೀರ್ಣ, ಆಮ್ಲೀಯತೆ ಮತ್ತು ದೇಹದಲ್ಲಿನ ಇತರ ಸಮಸ್ಯೆಗಳನ್ನು ಉತ್ತೇಜಿಸಬಹುದು.


5. ಈರುಳ್ಳಿ ಮತ್ತು ಮೊಸರು: ಅನೇಕ ಜನರು ಮೊಸರುಬಜ್ಜಿ ಅಥವಾ ರಾಯತಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸುತ್ತಾರೆ. ಆದರೆ ಇದು ಒಟ್ಟಾರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟುಮಾಡಬಹುದು.


ಈರುಳ್ಳಿ ಬಿಸಿ ಗುಣ ಹೊಂದಿರುತ್ತದೆ. ಆದರೆ ಮೊಸರು ಇದಕ್ಕೆ ವಿರುದ್ಧವಾಗಿದೆ. ಇವುಗಳನ್ನು ಒಟ್ಟಿಗೆ ಸೇರಿಸಿದಾಗ, ನಿಮ್ಮ ಚರ್ಮದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮೊಡವೆ, ಕಿರಿಕಿರಿ, ದದ್ದು ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು.


6. ಮೀನು ಮತ್ತು ಮೊಸರು: ಮೀನು ಮತ್ತು ಮೊಸರು ಎರಡೂ ಪ್ರೋಟೀನ್-ಸಮೃದ್ಧವಾಗಿವೆ. ಒಂದು ಊಟದಲ್ಲಿ ಎರಡು ಪ್ರೋಟೀನ್-ಭರಿತ ಆಹಾರ ಪದಾರ್ಥಗಳನ್ನು ಸಂಯೋಜಿಸುವುದನ್ನು ತಪ್ಪಿಸುವುದು ಒಳ್ಳೆಯದು. ಏಕೆಂದರೆ ಒಂದಕ್ಕಿಂತ ಹೆಚ್ಚಿನ ಪ್ರೋಟೀನ್ ಒಂದೇ ಸಮಯದಲ್ಲಿ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ.


7. ಪರಾಠ ಮತ್ತು ದಹಿ: ಬಹಳಷ್ಟು ಜನರಿಗೆ ಪರಾಠವನ್ನು ಮೊಸರಿನೊಂದಿಗೆ ತಿನ್ನುವುದು ಬಹಳ ಇಷ್ಟ. ಆದರೆ ಪರಾಠಾದಲ್ಲಿ ಹೆಚ್ಚು ಎಣ್ಣೆಯನ್ನು ಬಳಸಲಾಗುತ್ತದೆ. ಇದು ಮೊಸರಿನೊಂದಿಗೆ ಜೋಡಿಸಿದಾಗ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಅಲ್ಲದೇ ಇದು ಹೆಚ್ಚಿನ ಆಲಸ್ಯ ಉಂಟು ಮಾಡುತ್ತದೆ.


ಒಟ್ಟಾರೆ, ನಮಗೆ ಗೊತ್ತಿಲ್ಲದೇ ಸೇವಿಸುವ ಅನೇಕ ಆಹಾರದ ಸಂಯೋಜನೆಗಳು ಆರೋಗ್ಯ ಸಮಸ್ಯೆಯನ್ನು ಉಂಟುಮಾಡಬಹುದು. ಆದ್ದರಿಂದ ಈ ಮಾಹಿತಿಗಳನ್ನು ಓದಿದ ಬಳಿಕ ಬುದ್ದಿವಂತಿಕೆಯಿಂದ ತಿಂದು ಆರೋಗ್ಯವಾಗಿರಿ.

First published: