Health Tips: ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ಸೇವಿಸುತ್ತಿದ್ದೀರಾ? ದೇಹಕ್ಕೆ ಅಂಟಿಕೊಳ್ಳೋ ಸಮಸ್ಯೆ ಒಂದೆರಡಲ್ಲ

ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸಿದರೆ ಅದು ಪಿತ್ತರಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದೇ ರೀತಿ ಇದರಿಂದಾಗಿ ಅಸಿಡಿಟಿ ವಾಕರಿಕೆ ಸಮಸ್ಯೆಗಳು ಕಂಡುಬರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಸಾಮಾನ್ಯವಾಗಿ ಯಾವ ಆಹಾರವನ್ನು (Foods) ಯಾವ ಹೊತ್ತಿಗೆ ತೆಗೆದುಕೊಳ್ಳಬೇಕು ಎನ್ನುವ ಮಾಹಿತಿ ಇರುವುದಿಲ್ಲ. ವಾಸ್ತವದಲ್ಲಿ ಕೆಲವು ಆಹಾರಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದೇ ಆದರೂ ಅದನ್ನು ಯಾವ ಸಮಯಕ್ಕೆ ಸೇವನೆ ಮಾಡುತ್ತೇವೆ ಎನ್ನುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವಂತಹ ಕೆಲವು ತಿನಿಸುಗಳನ್ನು ಖಾಲಿ ಹೊಟ್ಟೆಗೆ (Empty Stomach) ಸೇವಿಸಿದರೆ ಅದು ಆರೋಗ್ಯಕ್ಕೆ ವಿಷವಾಗಿ ಪರಿಣಮಿಸುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಖಾಲಿ ಹೊಟ್ಟೆಯಲ್ಲಿ ಚಹಾ (Tea) ಸೇವಿಸಿದರೆ ಅದು ಪಿತ್ತರಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅದೇ ರೀತಿ ಇದರಿಂದಾಗಿ ಅಸಿಡಿಟಿ (Acidity) ವಾಕರಿಕೆ ಸಮಸ್ಯೆಗಳು ಕಂಡುಬರುತ್ತದೆ.

  ಸಿಟ್ರಸ್ ಹಣ್ಣಿನ ಜ್ಯೂಸ್ ಕುಡಿಯುವುದು

  ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸಿಟ್ರಸ್ ಹಣ್ಣುಗಳ ರಸವನ್ನು ಕುಡಿಯುವುದರಿಂದ ಆರೋಗ್ಯಕ್ಕೆ ಇದು ಹಾನಿಕಾರಕವಾಗಿ ಪರಿಣಮಿಸುವುದು. ಇದು ದೇಹದಲ್ಲಿನ ಆಮ್ಲವನ್ನು ಉಂಟುಮಾಡುತ್ತದೆ ಜೊತೆಗೆ ಜಠರದ ಉರಿಗೆ ಕಾರಣವಾಗಬಹುದು. ಆದ್ದರಿಂದ ಸಿಟ್ರಸ್ ಹಣ್ಣುಗಳ ರಸವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಲೇಬಾರದು. ಹೊಟ್ಟೆಯು ಖಾಲಿಯಾಗಿರುವುದರಿಂದ, ಹಣ್ಣುಗಳಲ್ಲಿನ ಫ್ರಕ್ಟೋಸ್ ರೂಪದಲ್ಲಿ ಸಕ್ಕರೆಯು ನಿಮ್ಮ ಯಕೃತ್ತಿನ ಮೇಲೆ ಅತಿಯಾದ ಹೊರೆಯನ್ನು ಉಂಟುಮಾಡಬಹುದು. ದೇಹದಲ್ಲಿರುವ ಉದರದ ಆಮ್ಲಗಳೊಂದಿಗೆ ಸಾಫ್ಟ್ ಡ್ರಿಂಕ್ಸ್ ಸೇರಿ ಸ್ನಾಯು ಸೆಳೆತ, ಬಾಡಿ ಪೆಯಿನ್ಸ್ ಕಾಣಿಸಿಕೊಳ್ಳಬಹುದು.

  ಇದನ್ನೂ ಓದಿ: Milk And Health: ಹಾಲಿನ ಜೊತೆ ಈ ವಸ್ತುಗಳನ್ನು ಮಿಕ್ಸ್ ಮಾಡಿ ಸೇವಿಸಿದ್ರೆ ವಿಷಕಾರಿ ಅಂಶ ಸೃಷ್ಟಿ! ಇರಲಿ ಎಚ್ಚರ

  ಮಸಾಲೆಯುಕ್ತ ಆಹಾರ ಪದಾರ್ಥಗಳನ್ನು ಸೇವಿಸಬಾರದು

  ಸಾಮಾನ್ಯವಾಗಿ ಎಲ್ಲರೂ ನಾಲಿಗೆಗೆ ರುಚಿ ಹಿಡಿಸುವಂತಹ ಆಹಾರಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಅದರಲ್ಲೂ ಮಸಾಲೆಯುಕ್ತ ಆಹಾರ ಪದಾರ್ಥಗಳ ಹೆಚ್ಚಾಗಿರುತ್ತದೆ ಎನ್ನುವ ಕಾರಣಕ್ಕೆ ಜನ ಬೆಳಗ್ಗೆ ಮಸಾಲೆಯುಕ್ತ ಆಹಾರವನ್ನು ತಿನ್ನಲು ಬಯಸುತ್ತಾರೆ. ಆದರೆ ಅಧಿಕ ಖಾರವಿರುವ ಪದಾರ್ಥಗಳನ್ನು ಸೇವಿಸಿದರೆ ಅದು ಗ್ಯಾಸ್ಟಿಕ್ ಸಮಸ್ಯೆಗೆ ಎಡೆ ಮಾಡಿಕೊಡಬಹುದು. ಮೆಣಸಿನಕಾಯಿ, ಲವಂಗ ಚೆಕ್ಕೆ ಗಳಂತಹ ಮೊದಲಾದ ಮಸಾಲಾ ತಿನಿಸುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಒಳ್ಳೆಯದಲ್ಲ.

  ಕಾಫಿ ಸೇವನೆ ಮಾರಕವಾಗಬಹುದು

  ಒಟ್ಟು ಕಪ್ ಕಾಫಿಯೊಂದಿಗೆ ದಿನವನ್ನು ಆರಂಭಿಸುವುದು ಸಾಮಾನ್ಯವಾಗಿ ಎಲ್ಲರ ರೂಡಿ. ನಿದ್ರಾ ಮಂಪರಿನಿಂದ ಹೊರಗೆ ಬರಲು ಇದು ಸುಲಭ ಮಾರ್ಗವೆಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ಎದುರಾಗಬಹುದು. ಅದೇ ರೀತಿ ಇದು ಜೀರ್ಣಾಂಗ ವ್ಯವಸ್ಥೆ ಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ.

  ಸಿಹಿಗೆಣಸು ಸೇವನೆ ಅಪಾಯ ತರಬಹುದು

  ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸಿಹಿ ಗೆಣಸು ಒಂದು ಅದ್ಭುತ ಫುಡ್. ಇದನ್ನು ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಇಲ್ಲಿ ಮುಖ್ಯವಾಗಿ ಯೋಚನೆ ಮಾಡಬೇಕಿರುವುದು ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ಖಂಡಿತ ಸಮಸ್ಯೆ ಕಟ್ಟಿಟ್ಟ ಬುತ್ತಿ. ಸಿಹಿಗೆಣಸು ಬರಿ ಹೊಟ್ಟೆಯಲ್ಲಿ ತಿಂದರೆ ಇದರಿಂದ ಟ್ಯಾನಿಕ್ ಮತ್ತು ಪೆಕ್ಟಿನ್ ಅನಿಲವನ್ನು ಹೆಚ್ಚ ಬಹುದು. ಇದು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗಬಹುದು ಹಾಗೆ ಎದೆಯುರಿ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು.
  ಆದ್ದರಿಂದ ಖಾಲಿಹೊಟ್ಟೆಯಲ್ಲಿ ಸಿಹಿಗೆಣಸನ್ನು ಸೇವಿಸುವುದನ್ನು ಬಿಟ್ಟು ಬಿಡಿ.

  ಇದನ್ನೂ ಓದಿ: Aloe Vera Benefits: ಅಂದದ ಸುಂದರ ತ್ವಚೆಗಾಗಿ ಪ್ರತಿದಿನವೂ ತಪ್ಪದೇ ಬಳಸಿ ಅಲೋವೆರಾ

  ಬಾಳೆಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ

  ಬಾಳೆಹಣ್ಣನ್ನು ಪೋಷಕಾಂಶದ ಗಣಿಯಿಂದೇ ಕರೆಯುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಸಾಕಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ಬಾಳೆ ಹಣ್ಣಿನಲ್ಲಿ ಅನಿಲದ ಗುಣ ಹೆಚ್ಚಿರುತ್ತದೆ. ಇದು ಹೊಟ್ಟೆ ಉಬ್ಬರದ ಸಮಸ್ಯೆಗೆ ಕಾರಣವಾಗಬಹುದು. ಆದ್ದರಿಂದ ಖಾಲಿ ಹೊಟ್ಟೆಗೆ ಬಾಳೆಹಣ್ಣನ್ನು ಸೇವಿಸುವುದನ್ನು ಬಿಡುವುದು ಒಳ್ಳೆಯದು.
  Published by:Swathi Nayak
  First published: