ಹಣ್ಣುಗಳನ್ನು (Fruits) ತಿನ್ನುವುದರಿಂದ ಆಗುವ ಲಾಭಗಳು ಎಲ್ಲರಿಗೂ ಗೊತ್ತು. ಕೆಲವರು ಸಮಯ ನೋಡದೆ ಹಣ್ಣುಗಳನ್ನು ಕೊಯ್ದು ಅಥವಾ ಖರೀದಿ ಮಾಡಿ ಯಾವಾಗ ಬೇಕಾದರೂ ತಿನ್ನುತ್ತಾರೆ. ಆದರೆ ಹೆಚ್ಚಿನ ಜನರ ಮನಸ್ಸಿನಲ್ಲಿ ಒಂದು ಪ್ರಶ್ನೆ ಇರುತ್ತದೆ, ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ ಯಾವುದು? ಊಟದ ನಂತರ (After Lunch) ಹಣ್ಣುಗಳನ್ನು ತಿನ್ನಬೇಕೇ? ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿನ್ನುವುದು ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆಯೇ? ಊಟದ ನಂತರ ಹಣ್ಣುಗಳನ್ನು ತಿನ್ನುವುದು ಜೀರ್ಣಕ್ರಿಯೆಗೆ (Digestion) ಸಹಾಯ ಮಾಡುತ್ತದೆಯೇ? ಹಣ್ಣುಗಳ ವಿಚಾರದಲ್ಲಿ ಇಂತಹ ಹಲವು ಪ್ರಶ್ನೆಗಳು ಎದುರಾಗುತ್ತವೆ. ಆದ್ದರಿಂದ ಇದಕ್ಕಾಗಿ ಕೆಲವು ನಿಯಮಗಳಿವೆ.
ಹೌದು, ಬೇರೆ ಆಹಾರಗಳಿಗಿಂತ ಈ ಹಣ್ಣುಗಳು ದೇಹಕ್ಕೆ ಬಹಳಷ್ಟು ಆರೋಗ್ಯಕರ. ಆದರೆ ಇದನ್ನು ತಿನ್ನುವಾಗ ಹಲವಾರು ಪ್ರಶ್ನೆಗಳು ಬರುವುದು ಸಹಜ. ಹಾಗಿದ್ರೆ ಹಣ್ಣುಗಳನ್ನು ಸೇವಿಸುವಾಗ ಯಾವ ಸಮಯದಲ್ಲಿ ತಿನ್ನಬೇಕು, ಎಷ್ಟು ಹೊತ್ತಿಗೆ ತಿನ್ನಬೇಕೆಂದು ತಿಳಿದಿರಬೇಕು. ಇಲ್ಲದಿದ್ದರೆ ಆರೋಗ್ಯದಲ್ಲಿ ಕೆಲವೊಂದು ಏರುಪೇರುಗಳಾಗಲು ಕಾರಣವಾಗುತ್ತದೆ.
ಸಂಜೆ 4 ಗಂಟೆಯ ನಂತರ ಹಣ್ಣುಗಳನ್ನು ಏಕೆ ತಿನ್ನಬಾರದು?
ಆಯುರ್ವೇದದ ಪ್ರಕಾರ, ಹಣ್ಣುಗಳು ಹಗುರವಾಗಿದ್ದರೂ, ಅವು ತಂಪಾಗಿರುತ್ತವೆ. ಅನೇಕ ಹಣ್ಣುಗಳು ಸಿಹಿ ಮತ್ತು ಹುಳಿ ರುಚಿಯನ್ನು ಹೊಂದಿರುತ್ತವೆ. ಸಂಜೆ 4 ಗಂಟೆಯ ನಂತರ ತಿನ್ನುವ ಹಣ್ಣುಗಳು ದೇಹವನ್ನು ತಂಪಾಗಿಸುವುದರಿಂದ ವಾತ ಮತ್ತು ಕಫ ಆಗಲು ಕಾರಣವಾಗುತ್ತದೆ. ಆದ್ದರಿಂದ ಸೂರ್ಯಾಸ್ತದ ನಂತರ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ.
ಇದನ್ನೂ ಓದಿ: ರೋಸ್ ವಾಟರ್ ಅಂಗಡಿಯಲ್ಲಿ ಖರೀದಿ ಮಾಡ್ಬೇಡಿ, ನೀವೇ ಮನೇಲಿ ಹೀಗೆ ತಯಾರಿಸಿ
ಸಂಜೆ 4 ಗಂಟೆಯ ನಂತರ ಹಣ್ಣುಗಳನ್ನು ತಿನ್ನುವುದರಿಂದ ಅಡ್ಡಪರಿಣಾಮಗಳು
ಹಣ್ಣುಗಳನ್ನು ತಿನ್ನಲು ಸರಿಯಾದ ಸಮಯ
ಖಾಲಿ ಹೊಟ್ಟೆಯಲ್ಲಿ ಹಣ್ಣುಗಳನ್ನು ತಿನ್ನಲು ಬೆಳಿಗ್ಗೆ ಉತ್ತಮ ಸಮಯ. ರಾತ್ರಿಯಲ್ಲಿ ಕನಿಷ್ಠ 10 ಗಂಟೆಗಳ ನಿದ್ದೆ ಮಾಡುವುದು ಸಾಮಾನ್ಯ. ಈ ಸಮಯದಲ್ಲಿ ನಮ್ಮ ಹೊಟ್ಟೆಯಲ್ಲಿ ಏನೂ ಇರುವುದಿಲ್ಲ. ಆದ್ದರಿಂದ, ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಆರೋಗ್ಯಕರ ಆಹಾರವನ್ನು ತಿನ್ನುವುದದರಿಂದ ದೇಹ ಪೋಷಕಾಂಶಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಯೂ ಸರಾಗವಾಗಿ ನಡೆಯುತ್ತದೆ. ಅದಕ್ಕಾಗಿಯೇ ಬೆಳಿಗ್ಗೆ ಮತ್ತು ವ್ಯಾಯಾಮದ ಮೊದಲು ಸರಳವಾದ ಕಾರ್ಬೋಹೈಡ್ರೇಟ್‌ಗಳನ್ನು ತಿನ್ನುವುದು ಉತ್ತಮ.
ಅಸಿಡಿಟಿ ಕಡಿಮೆ ಮಾಡಲಿರುವ ಹಣ್ಣುಗಳಿವು
ಬಾಳೆಹಣ್ಣು: ಅಸಿಡಿಟಿ ಸಮಸ್ಯೆಗೆ ಉತ್ತಮ ಹಣ್ಣು ಎಂದರೆ ಅದು ಬಾಳೆಹಣ್ಣು. ಬಾಳೆಹಣ್ಣುಗಳು ಕ್ಷಾರೀಯ ಗುಣಲಕ್ಷಣಗಳನ್ನು ಹೊಂದಿರುವುದರಿಂದ, ಅವುಗಳನ್ನು ಹೊಟ್ಟೆಯ ಆಮ್ಲಕ್ಕೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಬಾಳೆಹಣ್ಣು ಹೊಟ್ಟೆಯ ಆಮ್ಲವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಹಾಗಾಗಿ ಅಸಿಡಿಟಿ ಅನಿಸಿದಾಗಲೆಲ್ಲ ಅರ್ಧ ಬಾಳೆಹಣ್ಣನ್ನು ತೆಗೆದುಕೊಂಡು ಅದಕ್ಕೆ ಉಪ್ಪನ್ನು ಸೇರಿಸಿ ತಿನ್ನಿ.
ಆ್ಯಪಲ್: ಸೇಬು ಹೊಟ್ಟೆಯ ಆಮ್ಲಕ್ಕೂ ಉತ್ತಮ ಹಣ್ಣು. ಸೇಬುಗಳು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ನಂತಹ ಅಂಶಗಳನ್ನು ಹೊಂದಿರುತ್ತವೆ. ಇದು ಹೊಟ್ಟೆಯಲ್ಲಿ ಆಸಿಡ್ ರಿಫ್ಲಕ್ಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತೆಂಗಿನಕಾಯಿ: ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೆಂಗಿನಕಾಯಿ ಅತ್ಯುತ್ತಮ ಆಯ್ಕೆಯಾಗಿದೆ. ತೆಂಗಿನಕಾಯಿಯು ಕಡಿಮೆ ಆಮ್ಲ ಅಂಶವನ್ನು ಹೊಂದಿರುವ ಹಣ್ಣುಗಳಲ್ಲಿ ಒಂದಾಗಿದೆ. ಅದರಲ್ಲಿರುವ ನೀರಿನ ಪ್ರಮಾಣವು ನಿಮ್ಮ ಹೊಟ್ಟೆ ನೋವಿನ ಸಮಸ್ಯೆಯನ್ನು ಪರಿಹರಿಸುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ