ರಾತ್ರಿಯೂಟದ ಬಳಿಕ ಬಾಳೆಹಣ್ಣು ತಿನ್ನದಿರಿ

news18
Updated:June 11, 2018, 3:47 PM IST
ರಾತ್ರಿಯೂಟದ ಬಳಿಕ ಬಾಳೆಹಣ್ಣು ತಿನ್ನದಿರಿ
news18
Updated: June 11, 2018, 3:47 PM IST
-ನ್ಯೂಸ್ 18 ಕನ್ನಡ

ಬಾಳೆಹಣ್ಣನ್ನು ಅತ್ಯಂತ ಆರೋಗ್ಯಕರ ಹಣ್ಣೆಂದು ಪರಿಗಣಿಸಲಾಗುತ್ತದೆ. ಈ ಹಣ್ಣನ್ನು ಪ್ರತಿನಿತ್ಯ ತಿನ್ನುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಇದರಲ್ಲಿರುವ ಪೊಷಕಾಂಶಗಳಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಮುಖ್ಯವಾಗಿ ಬಾಳೆ ಹಣ್ಣಿನಲ್ಲಿರುವ ಅಂಟಿ-ಅಕ್ಸಿಡೆಂಟ್​ಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಬಾಳೆ ಹಣ್ಣಿನಲ್ಲಿ ಪೊಟಾಶಿಯಂ ಅಂಶ ಹೇರಳವಾಗಿದ್ದು, ಇದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಬಾಳೆಹಣ್ಣು ಅನೇಕ ನೈಸರ್ಗಿಕ ಆ್ಯಂಟಸಿಡ್(Antacid)​ಗಳನ್ನು ಹೊಂದಿರುತ್ತದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ದೂರ ಮಾಡುತ್ತದೆ. ಹಾಗೆಯೇ ಬಾಳೆ ಹಣ್ಣಿನಲ್ಲಿರುವ ಸಕ್ಕರೆ ಅಂಶ ದೇಹದ ಶಕ್ತಿ ಹೆಚ್ಚಿಸುವಲ್ಲಿ ನೆರವಾಗುತ್ತದೆ. ಈ ಹಣ್ಣಿನಲ್ಲಿ ಹೆಚ್ಚಿನ ಫೈಬರ್ ಅಂಶವಿರುವುದರಿಂದ ಬೌಲ್ ಮೂವ್​ಮೆಂಟ್ ಮತ್ತು ಮಲಬದ್ದತೆ ಸಮಸ್ಯೆಗೆ ಸಹಾಯ ಮಾಡುತ್ತದೆ.ಬಾಳೆ ಹಣ್ಣು ದೇಹಕ್ಕೆ ತಂಪಾಗಿರುವುದರಿಂದ ರಾತ್ರಿ ವೇಳೆಯಲ್ಲಿ ಹಣ್ಣನ್ನು ತಿನ್ನುವುದರಿಂದ ಶೀತ ಮತ್ತು ಕೆಮ್ಮಿನ ಸಮಸ್ಯೆ ಉಂಟಾಗಬಹುದು. ಆದರೆ ಮದ್ಯರಾತ್ರಿಯ ಸಮಯ ಹೊರತುಪಡಿಸಿ ಬಾಳೆಹಣ್ಣನ್ನು ತಿನ್ನಬಹುದೆಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.ದೊಡ್ಡ ಬಾಳೆಹಣ್ಣು ಜೀರ್ಣವಾಗಲು ಕೆಲ ಸಮಯವನ್ನು ತೆಗೆದುಕೊಳ್ಳುತ್ತದೆ. ರಾತ್ರಿಯಲ್ಲಿ ಮಲಗುವ 2ರಿಂದ 3 ಗಂಟೆ ಮೊದಲು ಈ ಹಣ್ಣನ್ನು ತಿನ್ನುವುದು ಉತ್ತಮ.ಶೀತ ಮತ್ತು ಕೆಮ್ಮಿನ ಸಮಸ್ಯೆ ಹೊಂದಿರುವವರು ಬಾಳೆಹಣ್ಣನ್ನು ತಿನ್ನಬಾರದು. ಇದು ದೇಹವನ್ನು ತಣ್ಣಗಾಗಿಸುವುದರಿಂದ ಶೀತ ಅಥವಾ ಕೆಮ್ಮು ಹೆಚ್ಚಾಗಬಹುದು. ಅದರಲ್ಲೂ ರಾತ್ರಿಯಲ್ಲಿ ಬಾಳೆಹಣ್ಣನ್ನು ಸೇವಿಸುವುದು ಸಾಧ್ಯವಾದಷ್ಟು ಕಡಿಮೆಗೊಳಿಸಿ. ರಾತ್ರಿಯಲ್ಲಿ ನಿದ್ರಿಸುವಾಗ ಚಯಾಪಚಯ ಕ್ರಿಯೆಯು ನಿಧಾನವಾಗಿರುತ್ತದೆ. ಹೀಗಾಗಿ ರಾತ್ರಿಯಲ್ಲಿ ಬಾಳೆ ಹಣ್ಣನ್ನು ತಿಂದರೆ ಜೀರ್ಣಶಕ್ತಿ ಕುಂಠಿತವಾಗಿ ನಿದ್ರಾಹೀನತೆ ಉಂಟಾಗಬಹುದು.
First published:June 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ