Coffee Effect: ದಿನಕ್ಕೆ 4 ಕಪ್ ಕಾಫಿ ಕುಡಿತೀರಾ? ನಿಮಗೆ ತಲೆನೋವು ಖಂಡಿತ ಬರಬಹುದು ಎಚ್ಚರ!

ದಿನಕ್ಕೆ 4 ಕಪ್ ಕಾಫಿ ಕುಡಿದ್ರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಂತೆ. ಹೆಚ್ಚಿನ ಪ್ರಮಾಣದ ಕೆಫೀನ್ ತಲೆನೋವಿಗೆ ಕಾರಣವಾಗುತ್ತದೆ ಎಂದು ಅಧ್ಯಯನಗಳ ಪ್ರಕಾರ ತಿಳಿದು ಬಂದಿದೆ. ಮೈಗ್ರೇನ್ ಬರುವ ಸಾಧ್ಯತೆ ಇದೆಯಂತೆ. ಮೈಗ್ರೇನ್ ಒಮ್ಮೆ ಕಾಡಲು ಶುರು ಮಾಡಿದ್ರೆ, ಅದು ಮನುಷ್ಯನನ್ನು ಹಿಂಡಿ ಬಿಡುತ್ತದೆ.

ಕಾಫಿ

ಕಾಫಿ

 • Share this:
  ಚಹಾ (Tea), ಕಾಫಿ (Coffee) ಕೆಲವರಿಗೆ ಎಷ್ಟು ಇಷ್ಟ ಅಂದ್ರೆ. ಬೇಕಾದ್ರೆ ಊಟ ಬೇಕಾದ್ರೆ ಬೀಡ್ತಾರೆ ಆದ್ರೆ, ಕಾಫಿ ಕುಡಿಯುವುದನ್ನು ಮಾತ್ರ ಮಿಸ್ ಮಾಡಲ್ಲ. ಕಾಫಿ ಇಲ್ಲ ಅಂದ್ರೆ ಎಷ್ಟೋ ಜನಕ್ಕೆ ದಿನವೇ ಶುರುವಾಗಲ್ಲ. ಕಾಫಿ ಕುಡಿಯದಿದ್ರೆ ನಮ್ಮ ತಲೆಯೇ ಓಡಲ್ಲ ಅಂತಾರೆ. ಅದಕ್ಕೆ ಎದ್ದ ತಕ್ಷಣ ಕಾಫಿ ಕುಡಿಯುತ್ತಾರೆ. ತಿಂಡಿ ಆದ ಮೇಲೆಯೂ ಕಾಫಿ ಕುಡಿತಾರೆ. ಮಧ್ಯಾಹ್ನವೂ ಕಾಫಿ ಕುಡಿಯುತ್ತಾರೆ. ಸಂಜೆ ಅಂತೂ ಕೇಳಲೇ ಬೇಡಿ. ಆಗ ಬೇಕೇ ಬೇಕು. ಕಾಫಿ ಕುಡಿಯಲಿಲ್ಲ ಅಂದ್ರೆ ಏನೋ ಆದವರ ರೀತಿ ಆಡ್ತಾರೆ. ಎಷ್ಟೋ ಜನರ ಬಾಯಲ್ಲಿ ನಾವು ಕೇಳಿದ್ದೀವಿ ಸಹ, ನಾವು ಕಾಫಿ ಲವರ್ಸ್ ಅಂತ. ದಿನಕ್ಕೆ 4 ಕಪ್ (4 Cup) ಕಾಫಿ ಕುಡಿದ್ರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಂತೆ. ಹೆಚ್ಚಿನ ಪ್ರಮಾಣದ ಕೆಫೀನ್ (caffeine) ತಲೆನೋವಿಗೆ (Headache) ಕಾರಣವಾಗುತ್ತದೆ ಎಂದು ಅಧ್ಯಯನಗಳ ಪ್ರಕಾರ ತಿಳಿದು ಬಂದಿದೆ.

  ಹೆಚ್ಚಿನ ಪ್ರಮಾಣದ ಕೆಫೀನ್ ತಲೆನೋವಿಗೆ ಕಾರಣ

  ಹೆಚ್ಚಿನ ಪ್ರಮಾಣದ ಕೆಫೀನ್ ತಲೆನೋವಿಗೆ ಕಾರಣವಾಗುತ್ತದೆ ಎಂದು ಅಧ್ಯಯನಗಳ ಪ್ರಕಾರ ತಿಳಿದು ಬಂದಿದೆ. ಪ್ರತಿದಿನ 400 ಎಂಜಿ ಅಥವಾ 4 ಕಪ್ ಕಾಫಿ ಕುಡಿಯುವುದರಿಂದ ಇಂತಹ ಸಮಸ್ಯೆಗಳು ಉಂಟಾಗಬಹುದು. ಅದಕ್ಕೆ ನೀವು ಹೆಚ್ಚು ಕಾಫಿ ಕುಡಿಯುವ ಅಭ್ಯಾಸ ಇದ್ರೆ ಕಡಿಮೆ ಮಾಡಿ. ಇಲ್ಲ ಅಂದ್ರೆ ತಲೆನೋವು ಬರಬಹುದು.

  ಮೈಗ್ರೇನ್ ಕಾಡಬಹುದು ಎಚ್ಚರ

  ದಿನಕ್ಕೆ ನಾಲ್ಕು ಕಪ್ ಕುಡಿಯುತ್ತಿದ್ರೆ, ಅದರಲ್ಲಿರುವ ಕೆಫೀನ್ ನಿಂದ ತಲೆನೋವು ಉಂಟಾಗುತ್ತದೆ. ಎರಡು ವಾರಗಳಿಗಿಂತ ಹೆಚ್ಚು ಕಾಲ ದಿನಕ್ಕೆ 200 ಎಂಜಿ ಗಿಂತ ಹೆಚ್ಚು ಕೆಫೀನ್ ಸೇವಿಸುವವರಿಗೂ ಮೈಗ್ರೇನ್ ಬರುವ ಸಾಧ್ಯತೆ ಇದೆಯಂತೆ. ಮೈಗ್ರೇನ್ ಒಮ್ಮೆ ಕಾಡಲು ಶುರು ಮಾಡಿದ್ರೆ, ಅದು ಮನುಷ್ಯನನ್ನು ಹಿಂಡಿ ಬಿಡುತ್ತದೆ.

  ಕಾಫಿಯಿಂದ ಅಡ್ಡ ಪರಿಣಾಮ

  ಕಾಫಿಯೂ ಜೀವನದ ಒಂದು ಭಾಗವಾಗಿದೆ. ದಿನವನ್ನು ಪ್ರಾರಂಭಿಸಲು ಹೆಚ್ಚಿನವರಿಗೆ ಬೆಳಿಗ್ಗೆ ಕಾಫಿ ಬೇಕು. ಕಾಫಿಯಲ್ಲಿರುವ ಕೆಫೀನ್ ನಿಮ್ಮ ಎಲ್ಲಾ ಇಂದ್ರಿಯಗಳನ್ನು ವೇಗವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ. ಅದಕ್ಕಾಗಿಯೇ ಪರೀಕ್ಷೆಯ ಸಮಯದಲ್ಲಿ, ಕೆಲವರು ನಿದ್ರೆ ಬರಬಾರದು ಎಂದು ಕಾಫಿ ಕುಡಿಯುತ್ತಾರೆ. ಕಾಫಿಯು ಕೆಲವು ಅಡ್ಡಪರಿಣಾಮಗಳನ್ನು ಹೊಂದಿದೆ.

  ಇದನ್ನೂ ಓದಿ: Hibiscus Tea Benefits: ದಾಸವಾಳ ಟೀ ನಿಮ್ಮ ಸರ್ವ ಸಮಸ್ಯೆಗಳಿಗೆ ರಾಮಬಾಣವಂತೆ

  ದೇಹದ ಇತರೆ ಸಮಸ್ಯೆಗಳಿಗೆ ಕಾರಣವಾಗಬಹುದು

  ದಿನಕ್ಕೆ 4 ಕಪ್ ಕಾಫಿ ಕುಡಿಯುವುದರಿಂದ ತಲೆನೋವಿನ ಹೊರತಾಗಿ, ಅತಿಯಾದ ಕೆಫೀನ್‍ನಿಂದ ದೇಹಕ್ಕೆ ಇತರ ಸಮಸ್ಯೆಗಳು ಸಹ ಕಾಡಬಹುದು. ಒತ್ತಡ, ನಿದ್ರೆಯ ಸಮಸ್ಯೆಗಳು ಮತ್ತು ಹದಗೆಡುತ್ತಿರುವ ಜೀವನ ಶೈಲಿಯಂತಹ ಸಮಸ್ಯೆಗಳು, ಅಂತಿಮವಾಗಿ ತಲೆನೋವಿಗೆ ಕಾರಣವಾಗಬಹುದು.

  ಇದ್ದಕ್ಕಿದ್ದ ಹಾಗೇ ಕಾಫಿ ಕುಡಿಯುವುದನ್ನು ನಿಲ್ಲಿಸಬೇಡಿ

  ಕಾಫಿ ಕುಡಿಯುವುದರಿಂದ ತೊಂದರೆ ಎಂದು ತಕ್ಷಣವೇ ಕಾಫಿ ಕುಡಿಯುವುದನ್ನು ಸಹ ನಿಲ್ಲಿಸಬಾರದು. ಹಠಾತ್ ಕಾಫಿಯನ್ನು ನಿಲ್ಲಿಸುವುದು ಸಹ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ ನಿಮ್ಮ ಅಭ್ಯಾಸವನ್ನು ಕ್ರಮೇಣ ಬದಲಾಯಿಸಿ. ನಿಧಾನವಾಗಿ ಕಾಫಿ ಕುಡಿಯುವುದನ್ನು ನಿಲ್ಲಿಸಿ. ಆಗ ಮಾತ್ರ ನೀವು ಮೈಗ್ರೇನ್ ನಂತಹ ಅಪಾಯದಿಂದ ದೂರ ಉಳಿಯಬಹುದು.

  ಇದನ್ನೂ ಓದಿ: Good Morning: ಬೆಳಗ್ಗೆ ಎದ್ದೇಳೋಕೆ ಬೇಜಾರಾಗುತ್ತಿದೆಯಾ? ನಿಮ್ಮ ದಿನ ಚೆನ್ನಾಗಿರಬೇಕು ಅಂದ್ರೆ ಈ ರೀತಿ ಮಾಡಿ

  ತಲೆನೋವು ಎಂದು ಕಾಫಿ ಕುಡಿಯುವವರೇ ಹೆಚ್ಚು

  ಕಾಫಿ ಹೊಂದಿರುವ ಕೆಫೀನ್ ಪ್ರಮಾಣವು ಪ್ರತಿಯೊಬ್ಬ ವ್ಯಕ್ತಿಯ ದೇಹಕ್ಕೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಆದರೆ ತಲೆನೋವಿನಂತಹ ಸಂದರ್ಭಗಳಲ್ಲಿ ತಲೆನೋವು ಕಡಿಮೆ ಮಾಡಲು ಜನರು ಹೆಚ್ಚು ಕಾಫಿ ಕುಡಿಯುತ್ತಾರೆ. ಅದನ್ನು ತಪ್ಪಿಸಬೇಕು. ಮೈಗ್ರೇನ್ ಸಮಸ್ಯೆಯೊಂದಿಗೆ ಹೋರಾಡುತ್ತಿರುವವರಿಗೆ, ಕಾಫಿಯ ಸೇವನೆಯನ್ನು ಕಡಿಮೆ ಮಾಡುವುದು ಅತ್ಯಂತ ಪ್ರಯೋಜನಕಾರಿ ಎಂದು ಅಧ್ಯಾಯನದಲ್ಲಿ ತಿಳಿದು ಬಂದಿದೆ. ಆದ್ದರಿಂದ ತಲೆನೋವು ಎಂದು ಕಾಫಿ ಕುಡಿಯುವ ಅಭ್ಯಾಸವನ್ನು ಬಿಟ್ಟರೆ ಒಳ್ಳೆಯದು.
  Published by:Savitha Savitha
  First published: