Solar Eclipse: ಗ್ರಹಣಕಾಲದಲ್ಲಿ ಏನು ಮಾಡಬೇಕು? ಏನು ಮಾಡಬಾರದು ? ಇಲ್ಲಿದೆ ಸಂಪೂರ್ಣ ವಿವರ

What we do in Solar Eclipse Time: ಗ್ರಹಣ ಬಿಟ್ಟ ಬಳಿಕ ಸ್ನಾನ ಮಾಡಬೇಕು. ಗ್ರಹಣ ಕಾರಣದಿಂದ ಅಪಾಯಕಾರಿ ರೋಗಾಣುಗಳು ವಾತಾವರಣದಲ್ಲಿ ಹೆಚ್ಚಿರುತ್ತವೆ. ಹಾಗಾಗಿ, ಗ್ರಹಣದ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಅಂಟಿರಬಹುದಾದ ಕೀಟಾಣುಗಳನ್ನು ತೊಡೆದು ಹಾಕಬಹುದು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಈ ವರ್ಷದ 2ನೇ ಸೂರ್ಯ ಗ್ರಹಣ(Solar Eclipse) ಹಾಗೂ ವರ್ಷದ ಕೊನೆಯ ಸೂರ್ಯ ಗ್ರಹಣವು ಶನಿವಾರ, ಡಿಸೆಂಬರ್‌(December) 4 ರಂದು ಸುಮಾರು 4 ಗಂಟೆಗಳ ಕಾಲ ಸೂರ್ಯಗ್ರಹಣವು ಸಂಭವಿಸಲಿದೆ..ಅಮಾವಾಸ್ಯೆಯ ದಿನ ಸೂರ್ಯ(Sun) ಹಾಗೂ ಭೂಮಿಯ(Earth) ಮಧ್ಯೆ ಚಂದ್ರ(Moon) ಆಗಮಿಸಿದ ಸಂದರ್ಭದಲ್ಲಿ ಸೂರ್ಯ ಗ್ರಹಣವು ಸಂಭವಿಸುತ್ತದೆ. ಈ ಗ್ರಹಣವು ಅಂಟಾರ್ಟಿಕಾ(Antarctica) ಮತ್ತು ದಕ್ಷಿಣ ಅಮೆರಿಕ(South America), ಆಫ್ರಿಕಾ(Africa), ಆಸ್ಟ್ರೇಲಿಯಾ(Australia) ಮತ್ತು ನ್ಯೂಜಿಲೆಂಡ್(New Zealand) ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಗೋಚರ ಆಗಲಿದೆ. ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸದಿದ್ದರೂ, ಜ್ಯೋತಿಷ್ಯದ ದೃಷ್ಟಿಯಿಂದ ಇದು ವಿಶೇಷವಾಗಿದೆ.ಇನ್ನು ಸೂರ್ಯ ಗ್ರಹಣದ ಸಮಯದಲ್ಲಿ ಸೂರ್ಯನು ರಾಹು ಮತ್ತು ಕೇತುಗಳಿಂದ ( Rahu and Ketu ) ಕಿರುಕುಳಕ್ಕೊಳಗಾಗುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ ಸೂರ್ಯನು ದುರ್ಬಲನಾಗುತ್ತಾನೆ. ಇದರ ಪರಿಣಾಮವು ಕೆಲ ಗ್ರಹಗಳ ಮೇಲೆ ಪರಿಣಾಮ ಬೀರಲಿದೆ. ಈ ಮೂಲಕ ಕೆಲವರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಸೂರ್ಯಗ್ರಹಣದ ಸಮಯದಲ್ಲಿ ಸೂರ್ಯಗ್ರಹಣದ ಸಮಯದಲ್ಲಿ ಎಚ್ಚರಿಕೆಯಿಂದ ಇರುವುದು ಸೂಕ್ತ..

    ಗ್ರಹಣ ಸಮಯದಲ್ಲಿ ಏನು ಮಾಡಬಾರದು..?

    *ಗ್ರಹಣದ ಸಮಯದಲ್ಲಿ ಏನನ್ನೂ ತಿನ್ನುವುದನ್ನು ನಿಷೇಧಿಸಲಾಗಿದೆ. ಏಕೆಂದರೆ ನೀವು ತಿನ್ನುವ ಆಹಾರ ಕೂಡ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗ್ರಹಣದ ಸಮಯದಲ್ಲಿ ಆಹಾರ ಸೇವಿಸಬಾರದು, ಅಡುಗೆ ಮಾಡಬಾರದು

    *ಸೂರ್ಯ ಗ್ರಹಣವನ್ನ ಬರಿಗಣ್ಣಿನಿಂದ ನೋಡಬಾರದು.ಗ್ರಹಣವನ್ನು ವೀಕ್ಷಿಸಲು, ಪ್ರತಿಯೊಬ್ಬರೂ ಸನ್ ಗ್ಲಾಸ್ ಧರಿಸಬೇಕು . ಸೂರ್ಯಗ್ರಹಣದ ಸಮಯದಲ್ಲಿ ಬರಿಗಣ್ಣಿನಿಂದ ನೋಡುವುದು ಸುರಕ್ಷಿತವಲ್ಲ

    ಇದನ್ನೂ ಓದಿ: ಡಿ. 4ರ ಶನಿವಾರವೇ ಸೂರ್ಯಗ್ರಹಣ ಈ ಕೆಲಸವನ್ನು ಅಪ್ಪಿತಪ್ಪಿಯೂ ಮಾಡಬೇಡಿ

    *ತುಳಸಿ ಮತ್ತು ದೇವತೆಗಳ ವಿಗ್ರಹಗಳನ್ನು ಮುಟ್ಟಬಾರದು

    *ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಬರಬಾರದು.

    *ಗ್ರಹಣದ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು.

    *ಗ್ರಹಣದ ಸಮಯದಲ್ಲಿ ಮಲಗುವುದನ್ನು ತಪ್ಪಿಸಿ.

    *ಗರ್ಭಿಣಿಯರು ಹೊರಗೆ ಹೋಗಬಾರದು

    *ಸೂಜಿಯಲ್ಲಿ ದಾರವನ್ನು ಹಾಕಬಾರದು

    *ಯಾವುದನ್ನೂ ಕತ್ತರಿಸಬಾರದು, ಸಿಪ್ಪೆ ತೆಗೆಯಬಾರದು
    ಏನನ್ನೂ ಸುರಿಯಬಾರದು.

    * ಗ್ರಹಣದ ಸಮಯದಲ್ಲಿ ಸ್ನಾನ ಮಾಡಬಾರದು

    ಗ್ರಹಣ ದೋಷದಿಂದ ಪರಿಹಾರ ಪಡೆಯಲು ಏನು ಮಾಡಬೇಕು.?

    *ಜಾತಕದಲ್ಲಿ ಪಿತೃ ದೋಷ ಅಥವಾ ಗ್ರಹಣ ದೋಷವಿದ್ದರೆ ಸೂರ್ಯಗ್ರಹಣದ ದಿನ ಕಪ್ಪು ಎಳ್ಳು, ಬೆಲ್ಲ, ಗೋಧಿಯನ್ನು ದಾನ ಮಾಡಬೇಕು.ಜಾತಕದಲ್ಲಿ ಸೂರ್ಯಗ್ರಹಣ ದೋಷ ತಪ್ಪಿಸಲು ಅಶ್ವತ್ಥ ಗಿಡ ನೆಡಬೇಕು. ಪ್ರತಿದಿನ ಅದಕ್ಕೆ ನೀರು ಹಾಕಬೇಕು.

    *ಗ್ರಹಣ ದೋಷವಿದ್ದಲ್ಲಿ, ಗ್ರಹಣದ ದಿನ ಯಾರಿಂದಲೂ ದಾನ ಪಡೆಯಬಾರದು. ವಿಕಲಾಂಗರಿಗೆ ದಾನ ಮಾಡಬೇಕು. ಇದಲ್ಲದೆ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸಿಬೇಕು. ಸೂರ್ಯೋದಯಕ್ಕೆ ಮೊದಲು ಸ್ನಾನ ಮಾಡಿ, ತಾಮ್ರದ ಪಾತ್ರೆಯಿಂದ ಉದಯಿಸುತ್ತಿರುವ ಸೂರ್ಯನನ್ನು ನೋಡಬೇಕು.

    *ಜಾತಕದ ಸೂರ್ಯಗ್ರಹಣ ದೋಷವಿದ್ದರೆ ತಂದೆ ಜೊತೆ ಜಗಳವಾಗಬಹುದು. ಆರೋಗ್ಯ ಸಮಸ್ಯೆ ಕಾಡಬಹುದು. ಮೂಳೆಗಳಿಗೆ ಸಂಬಂಧಿಸಿದ ರೋಗ ಕಾಡಬಹುದು. ಸರ್ಕಾರಿ ಕೆಲಸಗಳಲ್ಲಿ ಸಮಸ್ಯೆಯಾಗಬಹುದು.

    ಗ್ರಹಣ ಸಂದರ್ಭದಲ್ಲಿ ಹೊರಡುವ ಸೂರ್ಯನ ಕಿರಣಗಳ ಕೆಟ್ಟ ಪರಿಣಾಮ ಮಾಡಿ ಉಳಿದ ಆಹಾರದ ಮೇಲಾಗಿರಬಹುದು. ಹಾಗಾಗಿ, ಗ್ರಹಣಕ್ಕೂ ಮುಂಚೆ ತಯಾರಿಸಿದ ಆಹಾರವನ್ನು ನಂತರದಲ್ಲಿ ಸೇವಿಸಬೇಡಿ. ಬದಲಿಗೆ, ಗ್ರಹಣ ಮುಗಿದ ಮೇಲೆ ಹೊಸತಾಗಿ ಬಿಸಿ ಬಿಸಿಯಾದ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸಿ.

    ಇದನ್ನೂ ಓದಿ: ಶನಿ ಅಮಾವಾಸ್ಯೆಯಂದೇ ಸೂರ್ಯ ಗ್ರಹಣ: ಈ ವಸ್ತುಗಳನ್ನು ದಾನ ನೀಡುವುದು ಅವಶ್ಯ

    ಗ್ರಹಣ ಕಾಲದಲ್ಲಿ ಏನು ಮಾಡಬೇಕು..?

    *ಧ್ಯಾನ ಯಾವತ್ತಿಗೂ ಒಳ್ಳೆಯದೇ. ಗ್ರಹಣದ ಸಂದರ್ಭದಲ್ಲಿ ಅದರ ಲಾಭಗಳು ಇನ್ನೂ ಹೆಚ್ಚು. ಇದಕ್ಕೆ ಕಾರಣ ನಮ್ಮ ಮನಸ್ಸು ಚಂದ್ರನೊಂದಿಗೆ ಸಂಪರ್ಕ ಹೊಂದಿದ್ದರೆ, ದೇಹವು ಭೂಮಿಯೊಂದಿಗೆ ಸಂಪರ್ಕ ಹೊಂದಿರುತ್ತದೆ. ಹೀಗಿದ್ದಾಗ ಧ್ಯಾನ ಮಾಡುವುದು ಹೆಚ್ಚು ಲಾಭದಾಯಕ.

    *ಗ್ರಹಣ ಬಿಟ್ಟ ಬಳಿಕ ಸ್ನಾನ ಮಾಡಬೇಕು. ಗ್ರಹಣ ಕಾರಣದಿಂದ ಅಪಾಯಕಾರಿ ರೋಗಾಣುಗಳು ವಾತಾವರಣದಲ್ಲಿ ಹೆಚ್ಚಿರುತ್ತವೆ. ಹಾಗಾಗಿ, ಗ್ರಹಣದ ನಂತರ ಸ್ನಾನ ಮಾಡುವುದರಿಂದ ದೇಹಕ್ಕೆ ಅಂಟಿರಬಹುದಾದ ಕೀಟಾಣುಗಳನ್ನು ತೊಡೆದು ಹಾಕಬಹುದು
    Published by:ranjumbkgowda1 ranjumbkgowda1
    First published: