• Home
  • »
  • News
  • »
  • lifestyle
  • »
  • Health: ಊಟದ ನಂತರ ಈ ತಪ್ಪುಗಳನ್ನು ಮಾಡಲೇಬೇಡಿ

Health: ಊಟದ ನಂತರ ಈ ತಪ್ಪುಗಳನ್ನು ಮಾಡಲೇಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅನೇಕರು ಊಟದ ನಂತರ ಕೆಲವೊಂದಿಷ್ಟು ಅಭ್ಯಾಸಗಳನ್ನು ರೂಢಿ ಮಾಡಿಕೊಂಡಿರ್ತಾರೆ. ಆದರೆ ಬಹುಕರಿಗೆ ಅದು ಅನಾರೋಗ್ಯಕರ ಅಭ್ಯಾಸ ಅಂತಲೇ ಗೊತ್ತಿರೋದಿಲ್ಲ

  • Share this:

    ಇತ್ತೀಚಿಗೆ ಆರೋಗ್ಯದ ವಿಷಯದಲ್ಲಿ ಬಹುತೇಕರು ಹೆಚ್ಚಿನ ಕಾಳಜಿ ವಹಿಸ್ತಾರೆ. ಸರಿಯಾದ ಆರೋಗ್ಯಕರ ಅಭ್ಯಾಸಗಳನ್ನು ಇಟ್ಟುಕೊಳ್ಳಲು ಜನರು ಶ್ರಮ ವಹಿಸ್ತಾರೆ. ಆದರೆ ಅನೇಕರು ಗೊತ್ತಿಲ್ಲದೇ ಕೆಲವೊಂದಿಷ್ಟು ತಪ್ಪು ಅಭ್ಯಾಸಗಳನ್ನು ಇಟ್ಟುಕೊಂಡಿರ್ತಾರೆ. ಅದರಲ್ಲೂ ಊಟದ ವಿಷಯಗಳಲ್ಲಿ ಹಾಗೂ ನಂತರದ ಚಟುವಟಿಕೆಗಳಲ್ಲಿ.


    ಹೌದು… ಊಟದ ಸಮಯ ಹಾಗೂ ಊಟದ ನಂತರದ ಚಟುವಟಿಕೆಗಳ ಬಗ್ಗೆ ಜನರು ಹೆಚ್ಚಿನ ನಿಗಾ ವಹಿಸಬೇಕು. ಯಾಕೆಂದ್ರೆ, ದೇಹದಲ್ಲಿನ ಅಸಮರ್ಪಕ ಜೀರ್ಣಕ್ರಿಯೆಯು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಏನು ತಿನ್ನಬೇಕು ಎಂದು ತಿಳಿದುಕೊಳ್ಳುವುದು ಮತ್ತು ಆಹಾರವನ್ನು ಹೇಗೆ ತಿನ್ನಬೇಕು.. ಎಷ್ಟು ತಿನ್ನಬೇಕು ಎಂಬುದರ ಬಗ್ಗೆ ತಿಳಿದಿರುವುದು ಸಹ ಮುಖ್ಯವಾಗಿದೆ.


    ಹೌದು.. ಅನೇಕರು ಊಟದ ನಂತರ ಕೆಲವೊಂದಿಷ್ಟು ಅಭ್ಯಾಸಗಳನ್ನು ರೂಢಿ ಮಾಡಿಕೊಂಡಿರ್ತಾರೆ. ಆದರೆ ಬಹುಕರಿಗೆ ಅದು ಅನಾರೋಗ್ಯಕರ ಅಭ್ಯಾಸ ಅಂತಲೇ ಗೊತ್ತಿರೋದಿಲ್ಲ. ಹಾಗಾಗಿ ಊಟದ ಮೊದಲು ಮತ್ತು ನಂತರ ಕೆಲವು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳ್ಯಾವವು ಎಂಬುದನ್ನು ತಿಳಿದುಕೊಳ್ಳುವುದು ಸಹ ಮುಖ್ಯವಾಗಿದೆ. ಇದರ ಬಗ್ಗೆಯೇ ಆನ್‌ಲೈನ್ ನ್ಯೂಟ್ರಿಷನ್ ಮತ್ತು ಫಿಟ್‌ನೆಸ್ ಪ್ಲಾಟ್‌ಫಾರ್ಮ್ ಹಾಫ್ ಲೈಫ್ ಟು ಹೆಲ್ತ್‌ನ ಸಂಸ್ಥಾಪಕಿ ನಿಧಿ ಶರ್ಮಾ ಅವರು ಕೆಲವೊಂದಿಷ್ಟು ಸಲಹೆಗಳನ್ನು ನೀಡ್ತಾರೆ.


    ಊಟದ ನಂತರ ಮಾಡಲೇಬಾರದ ಕೆಲಸಗಳಿವು:


    ಊಟದ ನಂತರ ಸ್ನಾನ ಮಾಡಲೇಬೇಡಿ: ಊಟದ ನಂತರ, ಜೀರ್ಣಕ್ರಿಯೆಗೆ ಸಹಾಯ ಮಾಡಲು ರಕ್ತವು ಹೊಟ್ಟೆಯನ್ನು ಸುತ್ತುವರೆದಿರುತ್ತದೆ. ನೀವು ಸ್ನಾನ ಮಾಡುವಾಗ ದೇಹದ ಉಷ್ಣತೆಯು ಬದಲಾಗುತ್ತದೆ. ದೇಹವನ್ನು ಅದರ ಮೂಲ ತಾಪಮಾನಕ್ಕೆ ಮರಳಿ ತರಲು ರಕ್ತವು ಹೊಟ್ಟೆಯ ಮೇಲ್ಮೈಯಿಂದ ಚರ್ಮದ ಮೇಲ್ಮೈಗೆ ತಿರುಗುತ್ತದೆ. ಇದು ದುರ್ಬಲ ಹಾಗೂ ನಿಧಾನ ಜೀರ್ಣಕ್ರಿಯೆಗೆ ಕಾರಣವಾಗುತ್ತದೆ.


    ವ್ಯಾಯಾಮ ಮಾಡುವುದನ್ನು ತಪ್ಪಿಸಿ: ಊಟವಾದ ತಕ್ಷಣ ತೀವ್ರವಾದ ವ್ಯಾಯಾಮವು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿ ತರುತ್ತದೆ. ಇದು ವಾಕರಿಕೆ, ಹೊಟ್ಟೆ ನೋವು ಮತ್ತು ವಾಂತಿಗೆ ಕಾರಣವಾಗಬಹುದು.ಅಲ್ಲದೇ ಆಸಿಡಿಟಿ ಗೂ ಕಾರಣವಾಗಬಹುದು.


    ಇದನ್ನೂ ಓದಿ: Weight Loss Tips: ತೂಕ ಇಳಿಸೋಕೆ ಈ ಪಾನೀಯವನ್ನು ಈ ರೀತಿ ಕುಡಿಯಬೇಕಂತೆ


    ನಿದ್ರಿಸುವುದನ್ನು ತಪ್ಪಿಸಿ: ಬಹಳಷ್ಟು ಜನರಿಗೆ ಊಟದ ನಂತರ ಮಲಗುವ ಅಭ್ಯಾಸವಿರುತ್ತೆ. ಆದರೆ ಇದು ಜೀರ್ಣಕಾರಿ ರಸವನ್ನು ಮೇಲಕ್ಕೆತ್ತಲು ಕಾರಣವಾಗುತ್ತದೆ. ಇದು ತೀವ್ರವಾದ ಎದೆಯುರಿ ಉಂಟುಮಾಡುತ್ತದೆ ಎನ್ನುತ್ತಾರೆ ತಜ್ಞರು.


    ಹೆಚ್ಚು ನೀರು ಕುಡಿಯಬೇಡಿ: ಊಟದ ನಂತರ ಹೆಚ್ಚು ನೀರು ಕುಡಿಯುವುದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತೆ. ಹೆಚ್ಚುವರಿ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಆಮ್ಲವನ್ನು ದುರ್ಬಲಗೊಳಿಸುದಲ್ಲದೇ ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ಹೆಚ್ಚಿನ ಭಾರತೀಯ ಊಟಗಳು ಗ್ರೇವಿಗಳು, ದಾಲ್‌ಗಳು, ಸಾಂಬಾರ್, ಚಾಸ್, ಇತ್ಯಾದಿಗಳ ರೂಪದಲ್ಲಿ ಸಾಕಷ್ಟು ದ್ರವವನ್ನು ಹೊಂದಿರುತ್ತವೆ. ಸಲಾಡ್‌ಗಳು ಹೆಚ್ಚಿನ ನೀರಿನ ಅಂಶವನ್ನು ಹೊಂದಿರುತ್ತವೆ.


    ಮುಂದಕ್ಕೆ ಬಾಗಬೇಡಿ: ಮುಂದಕ್ಕೆ ಬಾಗುವುದನ್ನು ಒಳಗೊಂಡಿರುವಂಥ ಚಟುವಟಿಕೆಗಳನ್ನು ತಪ್ಪಿಸಿ. ಇದು ಆಸಿಡ್ ರಿಫ್ಲಕ್ಸ್ಗೆ ಕಾರಣವಾಗಬಹುದು.


     ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಿ:ಏಕೆಂದರೆ ಇದು ಹಣ್ಣಿನಿಂದ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.


    ಇದನ್ನೂ ಓದಿ:  Piles Symptoms: ಈ ಸಮಸ್ಯೆಗಳು ನಿಮಗೆ ಪೈಲ್ಸ್ ಬರುವುದರ ಸೂಚನೆಯಂತೆ


    ಚಹಾ/ಕಾಫಿ ಕುಡಿಯಬೇಡಿ : ಊಟದ ನಂತರ ಚಹಾ ಕಾಫಿ ಕುಡಿಯುವ ಅಭ್ಯಾಸವಿದ್ದರೆ ತಕ್ಷಣ ಬಿಟ್ಟುಬಿಡಿ. ಯಾಕೆಂದ್ರೆ ಅವು ಕೆಲವು ಫೀನಾಲಿಕ್ ಸಂಯುಕ್ತಗಳನ್ನು ಹೊಂದಿರುತ್ತವೆ. ಅದು ಊಟದಿಂದ ಕಬ್ಬಿಣದಂತಹ ಕೆಲವು ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಪಡಿಸುತ್ತದೆ.


    ಆಲ್ಕೋಹಾಲ್ ̲ ಧೂಮಪಾನ ತಪ್ಪಿಸಿ: ಅವು ದೇಹಕ್ಕೆ ಹಾನಿಕಾರಕವಾಗಿದ್ದರೂ, ಊಟದ ನಂತರ ಅವುಗಳನ್ನು ಸೇವಿಸುವುದರಿಂದ ಆರೋಗ್ಯದ ಅಪಾಯಗಳು ಹೆಚ್ಚಾಗುತ್ತದೆ ಎನ್ನೋದನ್ನು ನೆನಪಿಡಿ.


    ಇನ್ನೊಂದು ಮುಖ್ಯ ಅಂಶವೆಂದರೆ ಊಟದ ನಂತರ ಬೆಚ್ಚಗಿನ ನೀರನ್ನು ಸೇವಿಸಿ. ಇದು ತಿಂದ ಆಹಾರವನ್ನು ಸರಿಯಾಗಿ ಜೀರ್ಣ ಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಒಟ್ಟಾರೆ, ಒಳ್ಳೆಯ ಹಾಗೂ ಸರಿಯಾದ ಅಭ್ಯಾಸಗಳನ್ನು ರೂಢಿಸಿಕೊಂಡಲ್ಲಿ ನಾವು ಹೆಚ್ಚು ಆರೋಗ್ಯವಾಗಿರಬಹುದು ಅನ್ನೋದಂತೂ ಸತ್ಯ.

    First published: