New Year Diet: ಹೊಸ ವರ್ಷಕ್ಕೆ ನಿಮ್ಮ ‘ಡಯಟ್’ ಪ್ಲಾನ್‌ ನಿಜವಾಗ್ಲೂ ವರ್ಕ್‌ ಆಗುತ್ತಾ? ಈ ಸ್ಟೋರಿ ಓದಿ

ಹೊಸ ವರ್ಷವನ್ನು 'ಪರಿವರ್ತನೆಯ ಕ್ಷಣ' ಎಂದು ಪರಿಗಣಿಸುವುದರಿಂದ ತ್ವರಿತ ಫಲಿತಾಂಶಕ್ಕಾಗಿ ಈ ರೀತಿಯ ತೂಕ ಕಡಿಮೆ ಮಾಡಿಕೊಳ್ಳುವ ಯೋಜನೆ ಅನುಸರಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿ ವರ್ಷ ಜನವರಿ (January) ತಿಂಗಳು ಇನ್ನೂ ಸ್ವಲ್ಪ ದೂರ ಇರುವಾಗಲೇ ಅನೇಕರು ತಾವು ಹೊಸ ವರ್ಷದಿಂದ (New Year) ಹೀಗೆ ಮಾಡಬೇಕು, ಇದೇ ಆಹಾರ ಕ್ರಮ (Food habit) ಅನುಸರಿಸಿ ಆರೋಗ್ಯವಾಗಿರಬೇಕು ಎಂದು ಅನೇಕ ತರಹದ ಯೋಜನೆಗಳನ್ನು(Planning) ಹಾಕಿಕೊಳ್ಳುವವರನ್ನು ನಾವೆಲ್ಲರೂ ನೋಡಿರುತ್ತೇವೆ. ಹೊಸ ವರ್ಷದಲ್ಲಿ ಅವುಗಳನ್ನು ಎಷ್ಟರ ಮಟ್ಟಿಗೆ ಕಟ್ಟು ನಿಟ್ಟಾಗಿ ಪಾಲಿಸುತ್ತೇವೆ (Follow) ಮತ್ತು ಎಷ್ಟು ದಿನಗಳವರೆಗೆ ಅದನ್ನು ಅನುಸರಿಸುತ್ತೇವೆ ಎಂಬುದು ಯಾರಿಗೂ ಗೊತ್ತಿರುವುದಿಲ್ಲ.

ಡಯಟ್ ಯೋಜನೆ
ಸಾಮಾನ್ಯವಾಗಿ ಈ ಹೊಸ ವರ್ಷದಂದು ಬಹುತೇಕರು ಹಾಕಿಕೊಳ್ಳುವ ಡಯಟ್‌ಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗುವ ಸಾಧ್ಯತೆಗಳು ಇವೆ ಮತ್ತು ದೀರ್ಘಾವಧಿಯಲ್ಲಿ ಆರೋಗ್ಯ ಕಾಪಾಡುವ ಆಹಾರ ಕ್ರಮಗಳನ್ನು ಹಾಗೆಯೇ ಮುಂದುವರೆಸಲು ಸಾಧ್ಯವೇ ಎನ್ನುವುದರ ಬಗ್ಗೆ ಸದಾ ಪ್ರಶ್ನೆ ಮೂಡುತ್ತದೆ. ಈ ರಜಾದಿನಗಳಲ್ಲಿ ನಾವು ಸ್ವಲ್ಪ ಸಮಯವನ್ನು ಕುಟುಂಬದವರೊಡನೆ ಮತ್ತು ಸ್ನೇಹಿತರೊಂದಿಗೆ ಸ್ವಾದಿಷ್ಟವಾದ ಭಕ್ಷ್ಯಗಳನ್ನು ಮತ್ತು ಆಹಾರ ಸೇವಿಸುತ್ತೇವೆ. ಇದರ ನಂತರ ಜನರು ತಮ್ಮ ದೇಹದ ತೂಕ ಹೆಚ್ಚಾದ ಬಗ್ಗೆ ತುಂಬಾನೇ ತಲೆ ಕೆಡಿಸಿಕೊಂಡು ಬೇಗನೆ ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಅನೇಕ ರೀತಿಯ ಡಯಟ್ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ.

ಇದನ್ನೂ ಓದಿ: Vegetable: ಹೀರೇಕಾಯಿ ತಿಂದ್ರೆ ಡಯಾಬಿಟಿಸ್ ಕಂಟ್ರೋಲ್​​ನಲ್ಲಿ ಇರುತ್ತಂತೆ, ಇನ್ನೂ ಸಾಕಷ್ಟು ಪ್ರಯೋಜನಗಳಿವೆ...ನೋಡಿ

ಕ್ರ್ಯಾಶ್ ಡಯಟ್
ಇದರ ಪರಿಣಾಮವಾಗಿ, ಹೊಸ ವರ್ಷದ ಆರಂಭವು ಇದಕ್ಕೆ ತುಂಬಾನೇ ಸೂಕ್ತವಾದದ್ದು ಎಂದು ಭಾವಿಸಿ ನಾನಾ ರೀತಿಯ ಡಯಟ್ ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಜನವರಿ ತಿಂಗಳಿನಲ್ಲಿ ಕೆಲವು ಜನರು ಅನಾರೋಗ್ಯಕರ ಮತ್ತು ಸಮರ್ಥನೀಯವಲ್ಲದ 'ಕ್ರ್ಯಾಶ್ ಡಯಟ್'ಗಳನ್ನು ಪ್ರಾರಂಭಿಸುವುದನ್ನು ನಾವು ನೋಡುತ್ತೇವೆ. ಹೊಸ ವರ್ಷವನ್ನು 'ಪರಿವರ್ತನೆಯ ಕ್ಷಣ' ಎಂದು ಪರಿಗಣಿಸುವುದರಿಂದ ತ್ವರಿತ ಫಲಿತಾಂಶಕ್ಕಾಗಿ ಈ ರೀತಿಯ ತೂಕ ಕಡಿಮೆ ಮಾಡಿಕೊಳ್ಳುವ ಯೋಜನೆ ಅನುಸರಿಸಲಾಗುತ್ತದೆ.

ಹೊಸ ವರ್ಷದ ಡಯಟ್
ನೀವು ಕ್ಯಾಲೋರಿಗಳಲ್ಲಿ ಕಡಿತಗೊಳಿಸುವುದರಿಂದ ಅಲ್ಪಾವಧಿಯಲ್ಲಿ ತೂಕ ಕಡಿಮೆ ಮಾಡಿಕೊಳ್ಳಬಹುದಾದರೂ ಇದು ನಿಮ್ಮ ಆರೋಗ್ಯದ ಮೇಲೆ ಬೇರೆ ರೀತಿಯ ಪರಿಣಾಮ ಬೀರಬಹುದು. ಈ ಹೊಸ ವರ್ಷದ ಡಯಟ್ ಯೋಜನೆಯಲ್ಲಿ ಅಟ್ಕಿನ್ಸ್, ಕೀಟೋ, ಕಡಿಮೆ ಕಾರ್ಬ್, ಕಡಿಮೆ ಕೊಬ್ಬು ಮತ್ತು ಮಧ್ಯಂತರ ಉಪವಾಸ ಸೇರಿಸಿ ನೋಡಿ. ನೀವು ಹೀಗೆ ತ್ವರಿತವಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಅನಾರೋಗ್ಯಕರ ಡಯಟ್‌ಗಳನ್ನು ಮಾಡುವುದರಿಂದ ನಿಮ್ಮ ದೇಹದ ಮೇಲೆ ಆಗುವ ಪರಿಣಾಮಗಳು ಇಲ್ಲಿವೆ ನೋಡಿ.

1. ಇದು ಹಸಿವನ್ನು ಪ್ರೇರೇಪಿಸುತ್ತದೆ: ನಾವು ಪ್ರತಿದಿನ ಸೇವಿಸುವ ಕ್ಯಾಲೋರಿಯನ್ನು ಬಿಟ್ಟು ದಿಢೀರನೆ ನಾವು ಸೇವಿಸುವ ಆಹಾರ ಕಡಿಮೆ ಮಾಡಿಕೊಂಡರೆ, ಇದು ನಮ್ಮ ಹಸಿವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ನಾವು ಸಾಮಾನ್ಯಕ್ಕಿಂತಲೂ ಆಹಾರವನ್ನು ಮತ್ತು ಜಂಕ್ ಫುಡ್‌ಗಳನ್ನು ಹೆಚ್ಚಾಗಿ ಸೇವಿಸುತ್ತೇವೆ.

2. ಇದು ಹೃದಯಕ್ಕೆ ಹಾನಿಕಾರಕ: ಕ್ರ್ಯಾಶ್ ಡಯಟಿಂಗ್, ವಿಶೇಷವಾಗಿ ಹೃದಯ ರೋಗಿಗಳಿಗೆ, ಹೃದಯದ ತೊಂದರೆಗಳಿಗೆ ಕಾರಣವಾಗಬಹುದು, ರಕ್ತವನ್ನು ಪಂಪ್ ಮಾಡುವ ಹೃದಯದ ಸಾಮರ್ಥ್ಯವನ್ನು ಈ ಡಯಟ್‌ಗಳು ಹದಗೆಡಿಸಬಹುದು.

3. ಚಯಾಪಚಯ ಕ್ರಿಯೆ ನಿಧಾನಗೊಳಿಸುತ್ತದೆ: ತ್ವರಿತ ಚಯಾಪಚಯ ಕ್ರಿಯೆಯು ವಿಶ್ರಾಂತಿ ಪಡೆಯುತ್ತಿರುವಾಗಲೂ ಕ್ಯಾಲೋರಿಗಳನ್ನು ದಹಿಸಲು ದೇಹಕ್ಕೆ ಅನುಮತಿಸುತ್ತದೆ. ಆದರೂ, ದೇಹವು ಶಕ್ತಿಯನ್ನು ಸಂರಕ್ಷಿಸಲು ಪ್ರಯತ್ನಿಸುತ್ತಿರುವುದರಿಂದ ಕ್ಯಾಲೋರಿ ನಿರ್ಬಂಧವು ನಿಮ್ಮ ಚಯಾಪಚಯ ಕ್ರಿಯೆ ನಿಧಾನಗೊಳಿಸಬಹುದು.

4. ವಿಷಕಾರಿ ಆಹಾರ ಸೇವನೆಗೆ ಉತ್ತೇಜಿಸುತ್ತದೆ: ಕ್ರ್ಯಾಶ್ ಡಯಟ್‌ಗಳು ಹಾನಿಕಾರಕ ಮತ್ತು ತಿನ್ನುವ ಅಸ್ವಸ್ಥತೆಗಳಿಗೆ ಕಾರಣವಾಗಬಹುದು. ನಿಮಗಾಗುವ ಹಸಿವು ಆಹಾರದ ಬಗ್ಗೆ ಇರುವ ನಿಮ್ಮ ದೃಷ್ಟಿಕೋನ ಬದಲಾಯಿಸಬಹುದು, ಅಂತಿಮವಾಗಿ ಆಹಾರದ ಮೇಲೆ ನೀವು ಗೀಳು ಬೆಳೆಸಿಕೊಳ್ಳಬಹುದು.

5. ಶಕ್ತಿಯನ್ನು ಕ್ಷೀಣಿಸುತ್ತದೆ: ಡಯಟ್ ಮಾಡುವುದರಿಂದ ಕೆಲವು ಜನರಿಗೆ ತಲೆಸುತ್ತಿದ ಹಾಗೆ ಆಗಬಹುದು, ದಣಿದಿರುವಂತೆ ಆಗುವುದು ಮತ್ತು ದುರ್ಬಲವಾದಂತೆ ಅನ್ನಿಸುವುದು.

6. ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ: ಕ್ರ್ಯಾಶ್ ಡಯಟಿಂಗ್ ಮಾಡುವಾಗ ತಮಗೆ ಇಷ್ಟವಾದ ಆಹಾರಗಳನ್ನು ತಿನ್ನಲು ಆಗದೆ ಇರುವುದು ನಿಮ್ಮ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಕ್ಯಾಲೋರಿ ನಿರ್ಬಂಧವು ನಮಗೆ ಕಿರಿಕಿರಿ ಉಂಟು ಮಾಡಬಹುದು ಮತ್ತು ಮೂಡಿಯನ್ನಾಗಿ ಸಹ ಮಾಡಬಹುದು ಮತ್ತು ಕೆಲಸಗಳಲ್ಲಿ ಗಮನ ಮತ್ತು ಆಸಕ್ತಿ ಕಡಿಮೆ ಮಾಡಬಹುದು.

7. ಕೂದಲು ಉದುರುತ್ತವೆ: ನೀವು ಸೇವಿಸುವ ಆಹಾರವು ನೇರವಾಗಿ ನಿಮ್ಮ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರ ಪರಿಣಾಮವಾಗಿ, ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ವಿಟಮಿನ್ ಸಿ ಮತ್ತು ಇ ಯನ್ನು ನಾವು ಸರಿಯಾಗಿ ನಮ್ಮ ದೇಹಕ್ಕೆ ಹಾಕದೇ ಹೋದರೆ ಕೂದಲು ಉದುರುವಿಕೆ ಶುರುವಾಗುತ್ತದೆ.

ಇದನ್ನೂ ಓದಿ: Keto Diet: ಸಣ್ಣ ಆಗೋಕೆ ಕಿಟೋ ಡಯೆಟ್ ಮಾಡ್ತಾ ಇದ್ದೀರಾ? ಹಾಗಿದ್ರೆ ಎಚ್ಚರ..

8. ಋತುಚಕ್ರವನ್ನು ಅಡ್ಡಿಪಡಿಸಬಹುದು: ನಿರಂತರವಾಗಿ ಈ ಡಯಟ್ ಮಾಡುವುದರಿಂದ ಮಹಿಳೆಯರಲ್ಲಿ ಋತುಚಕ್ರವು ಸಮಯಕ್ಕೆ ಸರಿಯಾಗಿ ಆಗದಿರಬಹುದು ಮತ್ತು ಕಾಲಾನಂತರದಲ್ಲಿ ಋತುಚಕ್ರವನ್ನು ಸಂಪೂರ್ಣವಾಗಿ ನಿಲ್ಲಿಸಲು ಸಹ ಇದು ಕಾರಣವಾಗಬಹುದು. ಇಷ್ಟೇ ಅಲ್ಲದೆ ಇದು ಫಲವತ್ತತೆಯ ಮೇಲೆ ಭಾರಿ ಪರಿಣಾಮ ಬೀರಬಹುದು.

ಒಟ್ಟಿನಲ್ಲಿ ಹೇಳುವುದಾದರೆ ನಾವು ಪ್ರತಿದಿನ ಮಾಡುವ ತಾಲೀಮುಗಳ ಜೊತೆಗೆ ಪೌಷ್ಟಿಕ ಆಹಾರ ಚೆನ್ನಾಗಿ ಸೇವಿಸಿದರೆ ಮಾತ್ರ ದೀರ್ಘಾವಧಿಯಲ್ಲಿ ನಮ್ಮ ದೇಹದ ಆರೋಗ್ಯವು ಹೆಚ್ಚು ಸುಸ್ಥಿರವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ.
Published by:vanithasanjevani vanithasanjevani
First published: