ಜೂನಿಯರ್ ಡಿಜೆ ಖಾಲಿದ್​ ಲೈಫ್​ಸ್ಟೈಲ್​ ಬಗ್ಗೆ ಕೇಳಿದರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಿ

news18
Updated:July 24, 2018, 6:43 PM IST
ಜೂನಿಯರ್ ಡಿಜೆ ಖಾಲಿದ್​ ಲೈಫ್​ಸ್ಟೈಲ್​ ಬಗ್ಗೆ ಕೇಳಿದರೆ ನೀವು ನಿಜಕ್ಕೂ ಅಚ್ಚರಿ ಪಡುತ್ತೀರಿ
news18
Updated: July 24, 2018, 6:43 PM IST
-ನ್ಯೂಸ್ 18 ಕನ್ನಡ

ನೀವು ಇಂಗ್ಲಿಷ್​ ಆಲ್ಬಂ ಹಾಡುಗಳನ್ನು ಕೇಳುವವರಾಗಿದ್ದರೆ ಡಿಜೆ ಖಾಲಿದ್ ಎಂಬ ಹೆಸರನ್ನು ಕೇಳಿರುತ್ತೀರಿ. ಅದರಂತೆ ಖಾಲಿದ್ ಅವರ ಮಗ 2 ವರ್ಷ ಪ್ರಾಯದ ಅಸಾದ್ ಖಾಲಿದ್ ಕೂಡ ಸದ್ಯ ಸಂಗೀತ ಲೋಕದಲ್ಲಿ ಸುದ್ದಿಯಾಗುತ್ತಿದ್ದಾನೆ. ಖ್ಯಾತ ಗಾಯಕ ಜಸ್ಟಿನ್ ಬೀಬರ್, ಕ್ರಿಸ್ ಬ್ರೌನ್ ಗೀತೆಗಳಿಗೆ ಹೊಸ ಟಚ್ ನೀಡುವ ಡಿಜೆ ಖಾಲಿದ್ ಮಗ ಸಾಮಾಜಿ ತಾಣಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದ್ದಾನೆ. ಅಂತೆಯೆ ಈಗ ಖಾಲಿದ್ ಅವರು ತನ್ನ ಮಗನಿಗೆ​ ಗಿಫ್ಟ್​ ಮಾಡಿರುವ ಮೊತ್ತವು ಅಸಾದ್​ನನ್ನು ಫ್ಯಾಷನ್ ಲೋಕವೇ ತಿರುಗಿ ನೋಡುವಂತೆ ಮಾಡಿದೆ.

ಹೌದು, ಶ್ರೀಮಂತ ಕುಟುಂಬದಲ್ಲಿ ಹುಟ್ಟಿರುವ ಅಸಾದ್​ ತಂದೆಯಂತೆ ಸದಾ ಸ್ಟೈಲಿಸ್ಟ್​ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾನೆ. ಅಲ್ಲದೆ ತಂದೆಯ ಹಾಡುಗಳಿಗೆ ಹೆಜ್ಜೆ ಹಾಕುವುದೆಂದರೆ ಈ ಚೋಟಾ ಡಿಜೆಗೆ ಬಲು ಇಷ್ಟ.
A post shared by Asahd Tuck Khaled (@asahdkhaled) on


Loading...2ನೇ ವಯಸ್ಸಿನಲ್ಲೇ ಸಾಮಾಜಿಕ ತಾಣದಲ್ಲಿ ಖದರ್ ತೋರಿಸುತ್ತಿರುವ ಅಸಾದ್ ಖಾಲಿದ್​ ಇನ್​ಸ್ಟಾಗ್ರಾಂನಲ್ಲಿ ತನ್ನ ಫೋಟೊಗಳನ್ನು ಅಪ್​ಲೋಡ್​ ಮಾಡುವುದರಲ್ಲೂ ಬಲು ಚೂಟಿ.ಈಗಾಗಲೇ ಡಿಜೆ ಖಾಲಿದ್​ ಅವರ ಟೆಂತ್​ ಸ್ಟುಡಿಯೊ ಹೊರತಂದಿರುವ 'ಗ್ರೇಟ್​ಫುಲ್'​ ಆಲ್ಬಂನ ಕಾರ್ಯನಿರ್ವಾಹಕ ನಿರ್ಮಾಪಕನಾಗಿ ಅಸಾದ್ ಕಾರ್ಯಾರಂಭ ಮಾಡಿದ್ದಾನೆ. ನಿರ್ಮಾಪಕರಾಗಿರುವ ಡಿಜೆ ಖಾಲಿದ್ ಪ್ರಕಾರ ಅಸಾದ್ ಕೂಡ ಸಂಗೀತದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾನೆ.A post shared by Made Iconic (@madeiconic) on

ಜೋರ್ಡಾನ್​ ಬ್ರಾಂಡ್​ನ ಉಡುಪುಗಳನ್ನು ತುಂಬಾ ಇಷ್ಟ ಪಡುವ ಈ 2ರ ಬಾಲಕ ಈಗ 'ಜೋರ್ಡಾನ್ ಕಿಡ್ಸ್​ ಕೊಲಾಬ್ ಅಪೆರಲ್'​ನ ಬ್ರಾಂಡ್ ಅಂಬಾಸಿಡರ್ ಆಗಿ ಮಿಂಚುತ್ತಿದ್ದಾನೆ. ಈ ಮೂಲಕ ಅಟವಾಡುವ ವಯಸ್ಸಿನಲ್ಲೇ ಲಕ್ಷಗಟ್ಟಲೇ ದುಡ್ಡನ್ನು ಜೇಬಿಗಿಳಿಸುತ್ತಿದ್ದಾನೆ. ಅಲ್ಲದೆ ಅತಿ ಸಣ್ಣ ವಯಸ್ಸಿನ ಬ್ರಾಂಡ್ ಅಂಬಾಸಿಡರ್ ಎಂಬ ಖ್ಯಾತಿ ಅಸಾದ್ ಖಾಲಿದ್ ಪಾಲಾಗಿದೆ.A post shared by DJ KHALED (@djkhaled) on

ಈಗಾಗಲೇ ವಿಶ್ವಪ್ರಸಿದ್ಧ ಹಿಪ್​-ಹಾಪ್ ಗಾಯಕ- ಗಾಯಕಿರೊಂದಿಗೆ ಅಸಾದ್ ಒಡನಾಟ ಹೊಂದಿದ್ದಾನೆ. ಈ ಪುಟಾಣಿಯ ಫ್ರೆಂಡ್ಸ್​ ಲೀಸ್ಟ್​ನಲ್ಲಿರುವವರು ಖ್ಯಾತಿಯ ಉತ್ತುಂಗದಲ್ಲಿರುವ ನಿಕ್ಕಿ ಮಿನಾಜ್, ರಿಹಾನ್ನಾ, ಝಾಕ್ ಎಫ್ರಾನ್, ಫ್ಯೂಚರ್, ಜಸ್ಟಿನ್ ಬೀಬರ್,ಡಿಡ್ಡಿ, ನಾಸ್, ಬಿಗ್ ಸೀನ್...ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.A post shared by DJ KHALED (@djkhaled) on

ಅಸಾದ್​ ಬರೀ ಸಂಗೀತ ಲೋಕದಲ್ಲಿ ಮಾತ್ರ ತನ್ನನ್ನು ತೊಡಗಿಸಿಕೊಂಡಿಲ್ಲ. ಬದಲಾಗಿ 1 ವರ್ಷ ಪ್ರಾಯದಲ್ಲೇ ಅತ್ಯುತ್ತಮವಾಗಿ ಈಜುವುದನ್ನು ಕಲಿತಿದ್ದಾನೆ.


ಡಿಜೆ ಖಾಲಿದ್​ ತನ್ನ ಮಗನಿಗೆ ಇತ್ತೀಚೆಗೆ ದುಬಾರಿ ಬೆಲೆಯ ಗಿಫ್ಟ್​ ನೀಡಿದ್ದಾರೆ. ಪ್ರಸಿದ್ಧ ವಾಚ್​ ಕಂಪನಿಯ ರೊಲೆಕ್ಸ್ ಕೈ ಗಡಿಯಾರವನ್ನು ಮಗನಿಗಾಗಿ ಖರೀದಿಸಿದ್ದಾರೆ. ಇದರ ವೆಚ್ಚವು 34,000 ಡಾಲರ್ ಎನ್ನಲಾಗಿದೆ. ಆದರೆ ಅದೆಲ್ಲಕ್ಕಿಂತ ಹೆಚ್ಚು ಸುದ್ದಿಯಾಗಿರುವುದು ಮೊದಲ ಬರ್ತ್​ಡೆ ಗಿಫ್ಟ್​.ತನ್ನ ಮೊದಲ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ತಂದೆ ಡಿಜೆ ಖಾಲಿದ್​ 600 ವಜ್ರಗಳಿಂದ ಅಲಂಕರಿತ ಡೈಮಂಡ್ ವಾಚ್ ಅನ್ನು ಗಿಫ್ಟ್​ ಮಾಡಿದ್ದರು. ಇದರ ಬೆಲೆ ಬರೋಬ್ಬರಿ 1 ಲಕ್ಷ ಡಾಲರ್. ಈಗಷ್ಟೇ ಅಂಬೆಗಾಲಿಡುವುದನ್ನು ನಿಲ್ಲಿಸಿರುವ ಅಸಾದ್​ಗೆ ಸಿಕ್ಕಿರುವ ಭರ್ಜರಿ ವಾಚ್​ನ ಭಾರತದ ಮೌಲ್ಯ 68 ಲಕ್ಷ ರೂ ಎಂದರೆ ನಂಬಲೇಬೇಕು.


First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ