• Home
  • »
  • News
  • »
  • lifestyle
  • »
  • DIY Hacks: ಈ ಎರಡು ವಸ್ತು ಬಳಸಿ ನೀವು ಮನೆಯಲ್ಲಿಯೇ ಕ್ರೀಮ್​ ಮಾಡ್ಬೋದು, ಚಳಿಗಾಲಕ್ಕೆ ಇದು ಬಹಳ ಬೆಸ್ಟ್​

DIY Hacks: ಈ ಎರಡು ವಸ್ತು ಬಳಸಿ ನೀವು ಮನೆಯಲ್ಲಿಯೇ ಕ್ರೀಮ್​ ಮಾಡ್ಬೋದು, ಚಳಿಗಾಲಕ್ಕೆ ಇದು ಬಹಳ ಬೆಸ್ಟ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Winter Skin Care Tips: ಮ್ಮ ತ್ವಚೆಯನ್ನು ಪುನರ್ಜಲೀಕರಣಗೊಳಿಸಲು ದುಬಾರಿ ಲೋಷನ್ ಮತ್ತು ಕ್ರೀಮ್ ಗಳನ್ನು ಖರೀದಿಸುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಚರ್ಮವನ್ನು ತೇವಗೊಳಿಸಲು ಮನೆಮದ್ದುಗಳನ್ನು ಬಳಸಬಹುದು. 

  • Share this:

ಚಳಿಗಾಲ (Winter) ಶುರುವಾದ ಕೂಡಲೇ ಚರ್ಮದ ಸಮಸ್ಯೆಗಳು (Skin Problem)  ಶುರುವಾಗುತ್ತವೆ. ಚರ್ಮವು ಒಣಗಿ ಹೋಗಿರುತ್ತದೆ, ಆಗಾಗ ತುರಿಕೆ ಉಂಟಾಗುತ್ತದೆ. ಶುಷ್ಕ ಚರ್ಮವು ಹವಾಮಾನ ಬದಲಾವಣೆ, ಬಿಸಿ ನೀರಿನ ಶವರ್, ನಿಮ್ಮ ತ್ವಚೆಗೆ ಸೂಕ್ತವಲ್ಲದ ಸಾಬೂನುಗಳು ಅಥವಾ ಟವೆಲ್ನಿಂದ ಚರ್ಮವನ್ನು ಸ್ಕ್ರಬ್ ಮಾಡುವುದು ಸೇರಿದಂತೆ ವಿವಿಧ ಕಾರಣಗಳಿಂದ ಉಂಟಾಗುತ್ತದೆ. ಈ ಒಣ ತ್ವಚೆಯಿಂದ ನಾವು ತುಂಬಾಸಮಸ್ಯೆ ಅನುಭವಿಸುತ್ತಿದ್ದೇವೆ. ಆದರೆ ನಿಮ್ಮ ತ್ವಚೆಯನ್ನು ಪುನರ್ಜಲೀಕರಣಗೊಳಿಸಲು ದುಬಾರಿ ಲೋಷನ್ ಮತ್ತು ಕ್ರೀಮ್ ಗಳನ್ನು ಖರೀದಿಸುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಚರ್ಮವನ್ನು ತೇವಗೊಳಿಸಲು ಮನೆಮದ್ದುಗಳನ್ನು (Home Remedies) ಬಳಸಬಹುದು. 


ಚರ್ಮದ ಶುಷ್ಕತೆಯಿಂದಾಗಿ, ನಮ್ಮ ದೇಹವು ಅನೇಕ ಸ್ಥಳಗಳಲ್ಲಿ ತುರಿಕೆ ಸಮಸ್ಯೆ ಅನುಭವಿಸುವುದಲ್ಲದೇ, ಅಲರ್ಜಿ ಕೂಡ ಉಂಟಾಗುತ್ತದೆ. ಕೆಲವೊಮ್ಮೆ ಪರಿಸ್ಥಿತಿಯು ನೋವು ಅಥವಾ ಸೋಂಕಿಗೆ ಕಾರಣವಾಗುತ್ತದೆ. ತುರಿಕೆ ಒಂದೇ ಸಮಯದಲ್ಲಿ ಹಲವಾರು ಭಾಗಗಳಲ್ಲಿ ಪ್ರಾರಂಭವಾದರೆ, ಸಮಸ್ಯೆಯು ಹೆಚ್ಚಾಗುತ್ತದೆ. ಹಾಗಾಗಿ ಇಂದು ನಾವು ಒಣ ತ್ವಚೆಯನ್ನು ಹೋಗಲಾಡಿಸಲು ಕೆಲವು ಮನೆಮದ್ದುಗಳನ್ನು ಹೇಳಲಿದ್ದೇವೆ.ಅದನ್ನು ಮಿಸ್​ ಮಾಡದೇ ಬಳಸಿ.


ಬಾದಾಮಿ ಮತ್ತು ಅಲೋವೆರಾ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದರ ಪೋಷಕಾಂಶಗಳು ಚರ್ಮದ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಚರ್ಮದ ತುರಿಕೆಯನ್ನೂ ಕಡಿಮೆ ಮಾಡುತ್ತದೆ. ಬಾದಾಮಿ ಮತ್ತು ಅಲೋವೆರಾ ತ್ವಚೆಯನ್ನು ತೇವಾಂಶದಿಂದ ಇಡುತ್ತದೆ. ಇದು ಚರ್ಮದ ಮಾಯಿಶ್ಚರೈಸರ್ ಮಟ್ಟವನ್ನು ಕಾಪಾಡುತ್ತದೆ. ಇದನ್ನು ಬಳಸುವುದರಿಂದ ಚಳಿಗಾಲದಲ್ಲಿಯೂ ತ್ವಚೆಯು ಕಾಂತಿಯುತವಾಗಿ ಮತ್ತು ಹೊಳಪಿನಿಂದ ಕೂಡಿರುತ್ತದೆ. ಆದ್ದರಿಂದ ಈ ಮನೆಯಲ್ಲಿ ತಯಾರಿಸಿದ ಬಾದಾಮಿ ಮತ್ತು ಅಲೋವೆರಾ ಕ್ರೀಮ್ ನಿಮ್ಮ ಚರ್ಮದ ಕಿರಿಕಿರಿ ಮತ್ತು ತುರಿಕೆಯನ್ನು ಕಡಿಮೆ ಮಾಡುತ್ತದೆ.


ಬಾದಾಮಿ ಅಲೋ ಕ್ರೀಮ್ ಅನ್ನು ರೀತಿ ಮಾಡಿ


ಈ ಮನೆಯಲ್ಲಿ ಬಾದಾಮಿ ಮತ್ತು ಅಲೋವೆರಾ ಕ್ರೀಮ್ ಮಾಡುವುದು ಬಹಳ ಸುಲಭದ ಕೆಲಸ. ಮೊದಲು 10 ಬಾದಾಮಿಗಳನ್ನು ತೆಗೆದುಕೊಂಡು ರಾತ್ರಿಯಿಡೀ ನೆನೆಸಿಡಿ. ಬೆಳಗ್ಗೆ ಈ ಬಾದಾಮಿಯನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಪೇಸ್ಟ್ ಮಾಡಿಕೊಳ್ಳಿ. ನೀವು ಬಾದಾಮಿಯ ಸಿಪ್ಪೆಯನ್ನು ಬೇಕಾದರೆ ತೆಗೆದು ಸಹ ಪೇಸ್ಟ್​ ಮಾಡಿಕೊಳ್ಳಬಹುದು.


ಇದನ್ನೂ ಓದಿ: ಪ್ರತಿದಿನ ಬಳಸುವ ರೈಸ್ ಬ್ರಾನ್ ಎಣ್ಣೆ ಬಗ್ಗೆ ಈ ವಿಚಾರಗಳು ಗೊತ್ತಿರಲೇಬೇಕು


ನಂತರ ಈ ಬಾದಾಮಿ ಪೇಸ್ಟ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು ಅದಕ್ಕೆ 2 ಚಮಚ ತಾಜಾ ಅಲೋವೆರಾ ಜೆಲ್​ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಿಮ್ಮ ಮನೆಯಲ್ಲಿ ಅಲೋವೆರಾ ಗಿಡ ಇದ್ದರೆ ಅದನ್ನು ಬಳಸುವುದು ಬಹಳ ಒಳ್ಳೆಯದು. ಇಲ್ಲದಿದ್ದರೆ ಮಾತ್ರ ಅಂಗಡಿಯಿಂದ ಖರೀದಿಸಿದ ಜೆಲ್ ಬಳಕೆ ಮಾಡಬಹುದು. ಆದರೆ, ಹೆಚ್ಚು ಪ್ರಯೋಜನ ನೀಡುವುದು ಮನೆಯ ಅಲೋವೆರಾ.


ಈಗ ನಂತರ ಬಾದಾಮಿ ಮತ್ತು ಅಲೋವೆರಾ ಪೇಸ್ಟ್​ನಲ್ಲಿ ಎರಡರಿಂದ ಮೂರು ವಿಟಮಿನ್ ಕ್ಯಾಪ್ಸುಲ್ಗಳನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ನಿಮ್ಮ ಕ್ರೀಮ್ ಸಿದ್ಧವಾಗುತ್ತದೆ. ನೀವು ಸಾಮಾನ್ಯವಾಗಿ ಯಾವುದೇ ರೀತಿಯ ಚರ್ಮದ ಮೇಲೆ ಈ ಕ್ರೀಮ್ ಅನ್ನು ಬಳಸಬಹುದು. ಬೇಕಿದ್ದರೆ ಈ ಕ್ರೀಮ್ ಗೆ ರೋಸ್ ವಾಟರ್ ಕೂಡ ಸೇರಿಸಬಹುದು.
ಆಲಿವ್ ಆಯಿಲ್ ಕ್ಲೆನ್ಸರ್: ಆಲಿವ್ ಆಯಿಲ್ ಒಂದು ನೈಸರ್ಗಿಕ ಎಣ್ಣೆಯಾಗಿದ್ದು, ಇದನ್ನು ಕ್ಲೆನ್ಸರ್ ಮತ್ತು ಮಾಯಿಶ್ಚರೈಸರ್ ಆಗಿ ಬಳಸಬಹುದು. ನಿಮ್ಮ ಕೈಯಲ್ಲಿ ಒಂದು ಹನಿ ಎಣ್ಣೆ ತೆಗೆದುಕೊಂಡು,  ಚರ್ಮದ ಮೇಲೆ ಸ್ವಲ್ಪ ಆಲಿವ್ ಎಣ್ಣೆಯನ್ನು ಹಚ್ಚಿ. ಬೆಚ್ಚಗಿನ, ಒದ್ದೆಯಾದ ಬಟ್ಟೆ ಅಥವಾ ಟವೆಲ್ ತೆಗೆದುಕೊಂಡು ಅದು ತಣ್ಣಗಾಗುವವರೆಗೆ ನಿಮ್ಮ ಮುಖದ ಮೇಲೆ ಇಡಿ. ನಂತರ ಕಾಟನ್ ಪ್ಯಾಡ್‌ನಿಂದ ಎಣ್ಣೆಯನ್ನು ಒರೆಸಿ. ಕೆಲ ಕಾಲ ಹಾಗೆಯೇ ಬಿಡಿ.


ಸಕ್ಕರೆ ಮತ್ತು ಆಲಿವ್ ಸ್ಕ್ರಬ್: ಸಕ್ಕರೆ ಮತ್ತು ಆಲಿವ್ ಎಣ್ಣೆಯನ್ನು ಒಂದು ಉತ್ತಮವಾದ ಎಫ್ಫೋಲಿಯೇಟಿಂಗ್ ಸ್ಕ್ರಬ್ ಮಾಡಲು ನೀವು ಬಳಸಬಹುದು. ಅರ್ಧ ಕಪ್ ಸಕ್ಕರೆಯನ್ನು ತೆಗೆದುಕೊಂಡು ಅದನ್ನು 2 ಟೇಬಲ್ಸ್ಪೂನ್ ಆಲಿವ್ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ನಂತರ ಅದನ್ನು ತ್ವಚೆಗೆ ಹಚ್ಚಿ ಮತ್ತು ನಿಮ್ಮ ಫೇಸ್​ವಾಶ್​ನಿಂದ ತೊಳೆಯಿರಿ. ನೀವು ಉತ್ತಮವಾದ ಪರಿಮಳ ಇರಬೇಕು ಎಂದು ಬಯಸಿದರೆ ನೀವು ಲ್ಯಾವೆಂಡರ್, ಲೆಮೊನ್ಗ್ರಾಸ್ ಮುಂತಾದ ಸಾರಭೂತ ತೈಲಗಳನ್ನು ಸೇರಿಸಬಹುದು.


ಇದನ್ನೂ ಓದಿ: ಶ್‌, ಕರ್ನಾಟಕದಲ್ಲಿದೆ ನಿಮ್ಮನ್ನು ಬೆಚ್ಚಿ ಬೀಳಿಸೋ ಸ್ಥಳಗಳು! ಅಲ್ಲಿಗೆ ಹೋಗ್ಬೇಕು ಅಂದ್ರೆ ಗುಂಡಿಗೆ ಗಟ್ಟಿ ಇರ್ಬೇಕು!


ತೆಂಗಿನೆಣ್ಣೆ: ಒಣ ತ್ವಚೆಗೆ ತೆಂಗಿನೆಣ್ಣೆ ಉತ್ತಮ ಮಾಯಿಶ್ಚರೈಸರ್ ಕೂಡ ಆಗಿದೆ. ಮಲಗುವ ಮುನ್ನ ಚರ್ಮದ ಮೇಲೆ ನಿಧಾನವಾಗಿ ಹಚ್ಚಿ. ತೆಂಗಿನ ಎಣ್ಣೆಯು ಬಳಸಲು ಪರಿಪೂರ್ಣವಾದ ಆರ್ಧ್ರಕ ಕೆನೆಯಾಗಿದೆ. ಇದು ಕೈ ಮತ್ತು ಕಾಲುಗಳ ಬಿರುಕು ಬಿಟ್ಟ ಚರ್ಮವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

Published by:Sandhya M
First published: