Curd Recipe: ಮೊಸರು ಹುಳಿ ಆಗಿದೆಯೇ? Don't Worry, ಇದರಿಂದಲೇ ಮಾಡಿ ಸ್ಪೆಷಲ್ ಅಡುಗೆ!

ಮೊಸರು ಹೆಚ್ಚು ಕಾಲದವರೆಗೆ ಹೊರಗಡೆ ಇದ್ದರೆ, ಅದರ ರುಚಿ ಹುಳಿಯಾಗುತ್ತದೆ. ಅಂತಹ ಹುಳಿಯಾಗಿರುವ ಮೊಸರನ್ನು ತಿನ್ನುವುದು ಅನೇಕರಿಗೆ ಇಷ್ಟವಾಗುವುದಿಲ್ಲ ಮತ್ತು ಅದನ್ನು ಬಿಸಾಡುತ್ತಾರೆ. ಆದರೆ ಹಾಗೆ ಮಾಡದೇ ಈ ರೀತಿ ಅಡುಗೆಗೆ ಬಳಸಿ...

ಮೊಸರು

ಮೊಸರು

  • Share this:
    ನಿಮ್ಮ ಮನೆಯಲ್ಲಿ ಸಾಮಾನವ್ಯಾಗಿ ಮೊಸರನ್ನು (Curds) ಎರಡು ದಿನಗಳ ಕಾಲ ಹಾಗೆ ಇರಿಸಿದರೆ ಅದು ಹುಳಿಯಾಗುತ್ತದೆ (Sour) ಎಂಬುದು ಬಹುತೇಕವಾಗಿ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ತಂಪಾದ (Cold) ಮತ್ತು ಕೆನೆಭರಿತ ಮೊಸರು (Creamy yogurt) ಬೇಸಿಗೆಯಲ್ಲಿ ನಮ್ಮ ಊಟದಲ್ಲಿ (Meals) ಸೇರಿಸಿಕೊಂಡರೆ ಅದು ತಕ್ಷಣವೇ ನಮ್ಮನ್ನು ತಂಪಾಗಿಸುವುದು ಮಾತ್ರವಲ್ಲದೆ, ನಮ್ಮ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಇನ್ನಷ್ಟು ಸುಲಭ ಮಾಡುತ್ತದೆ. ಮೊಸರಿನಲ್ಲಿರುವ ಪ್ರೋಬಯಾಟಿಕ್‌ಗಳು (Probiotic) ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಪ್ರತಿ ಭಾರತೀಯ ಮನೆಗಳಲ್ಲಿ, ಕೊನೆಗೆ ಉಳಿದಿರುವ ಆ ಮೊಸರನ್ನು ಬೆಚ್ಚಗಿನ ಹಾಲಿನೊಂದಿಗೆ ಬೆರೆಸಿಟ್ಟು ಕುಣಿಕೆಯಲ್ಲಿ ಮೊಸರನ್ನು ತಯಾರಿಸಲಾಗುತ್ತದೆ.

    ಹುಳಿ ಮೊಸರು ಬೀಸಾಡಬೇಡಿ!

    ನಾವು ಈ ನಯವಾದ ಪದರವಿರುವ ಮೊಸರನ್ನು ತಿನ್ನಲು ತುಂಬಾನೇ ಇಷ್ಟ ಪಡುತ್ತೇವೆ ಮತ್ತು ಸಮಯಕ್ಕೆ ಸರಿಯಾಗಿ ಅದನ್ನು ಬಳಸಿ ತಂಪಾದ ಸ್ಥಳದಲ್ಲಿ ಇರಿಸಲು ಮರೆಯುತ್ತೇವೆ. ಹೀಗೆ ಮೊಸರು ಹೆಚ್ಚು ಕಾಲದವರೆಗೆ ಹೊರಗಡೆ ಇದ್ದರೆ, ಅದರ ರುಚಿ ಹುಳಿಯಾಗುತ್ತದೆ. ಅಂತಹ ಹುಳಿಯಾಗಿರುವ ಮೊಸರನ್ನು ತಿನ್ನುವುದು ಅನೇಕರಿಗೆ ಇಷ್ಟವಾಗುವುದಿಲ್ಲ ಮತ್ತು ಅದನ್ನು ಬಿಸಾಡುತ್ತಾರೆ.

    ಆದರೆ ಈ ಹುಳಿಯಾಗಿರುವ ಮೊಸರನ್ನು ಬಿಸಾಡುವ ಬದಲು ಇದರಿಂದ ಅನೇಕ ರೀತಿಯ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಿಕೊಳ್ಳಬಹುದು. ಹುಳಿ ಮೊಸರಿನೊಂದಿಗೆ ನೀವು ಟ್ರೈ ಮಾಡಬಹುದಾದ ಕೆಲವು ರುಚಿಕರವಾದ ಭಕ್ಷ್ಯಗಳ ಬಗ್ಗೆ ಇಲ್ಲಿ ತಿಳಿಯಿರಿ.

    ಕಧಿ: ನಿಮ್ಮ ಮನೆಯಲ್ಲಿ ಮೊಸರು ಹುಳಿಯಾಗಿದ್ದರೆ, ಅದರಿಂದ ಕಧಿಯನ್ನು ಮಾಡಿಕೊಳ್ಳಿರಿ. ಈ ಭಕ್ಷ್ಯವು ಹುಳಿ ಮೊಸರಿನೊಂದಿಗೆ ಉತ್ತಮ ರುಚಿಯನ್ನು ನೀಡುತ್ತದೆ. ಮೊಸರು ಮತ್ತು ಹುರಿದ ಬೇಸನ್ ಉಂಡೆಗಳೊಂದಿಗೆ ಖಾರದ ಕಧಿ ಭಕ್ಷ್ಯವನ್ನು ತಯಾರಿಸಲು ನೀವು ಹುಳಿ ಮೊಸರನ್ನು ಬಳಸಿ. ಈ ಕಧಿಯನ್ನು ಬಿಸಿ ಬಿಸಿ ಅನ್ನದೊಂದಿಗೆ ಹಾಕಿಕೊಂಡು ಸೇವಿಸುತ್ತಾರೆ.

    ಮಸಾಲಾ ಮಜ್ಜಿಗೆ: ಬೇಸಿಗೆ ಕಾಲಕ್ಕೆ ಸೂಕ್ತವಾಗಿರುವ ಪಾನೀಯ ಎಂದರೆ ಅದು ಮಜ್ಜಿಗೆ ಎಂದು ಹೇಳಬಹುದು. ಒಂದು ಉತ್ತಮ ಹೈಡ್ರೇಟಿಂಗ್ ಪಾನೀಯ, ಇದು ಪ್ರತಿ ಸಿಪ್‌ನೊಂದಿಗೆ ತಕ್ಷಣವೇ ನಮ್ಮ ಮನಸ್ಥಿತಿಯನ್ನು ಬದಲಾಯಿಸುತ್ತದೆ. ನಿಮ್ಮ ಹುಳಿ ಮೊಸರಿನೊಂದಿಗೆ ಮಸಾಲಾ ಮಜ್ಜಿಗೆಯನ್ನು ತಯಾರಿಸಿ ಮತ್ತು ನೀವು ಅದನ್ನು ಇನ್ನಷ್ಟು ಇಷ್ಟಪಡುತ್ತೀರಿ.

    ಇದನ್ನೂ ಓದಿ: Weight Loss Tips: ವ್ಯಾಯಾಮ ಮಾಡಲು ಬೇಸರ ಆಗಿದ್ಯಾ? ಹಾಗಿದ್ರೆ ಈ ಆಟ ಆಡ್ತಾ ತೂಕ ಇಳಿಸಿಕೊಳ್ಳಿ!

    ಢೋಕ್ಲಾ: ನಿಮ್ಮ ಮನೆಯಲ್ಲಿರುವ ಹುಳಿ ಮೊಸರಿನ ಸಹಾಯದಿಂದ ಕ್ಲಾಸಿಕ್ ಗುಜರಾತಿ ತಿಂಡಿಯಾದ ಢೋಕ್ಲಾವನ್ನು ತಯಾರಿಸಿಕೊಳ್ಳಬಹುದು. ಈ ಢೋಕ್ಲಾ ಪಾಕವಿಧಾನವನ್ನು ಸಾಮಾನ್ಯ ಮೊಸರಿನ ಬದಲು ಹುಳಿ ಮೊಸರಿನೊಂದಿಗೆ ಪ್ರಯತ್ನಿಸಿ ಮತ್ತು ನೀವು ಇದರ ರುಚಿಯನ್ನು ತುಂಬಾನೇ ಇಷ್ಟಪಡುತ್ತೀರಿ.

    ಭಟೂರೆ: ರಸ್ತೆ ಬದಿಯಲ್ಲಿರುವ ಎಲ್ಲಾ ಡಾಬಾಗಳಿಗಿಂತಲೂ ಈ ಭಟೂರೆ ಭಕ್ಷ್ಯವನ್ನು ಮನೆಯಲ್ಲಿಯೇ ಇನ್ನೂ ರುಚಿಕರವಾಗಿ ತಯಾರಿಸಿಕೊಳ್ಳಬಹುದು. ಇದರ ರಹಸ್ಯ ಎಂದರೆ ಹುಳಿ ಮೊಸರು ಇದರಲ್ಲಿ ಬಳಸುವುದು ಆಗಿದೆ. ಅದು ನಾವೆಲ್ಲರೂ ಪ್ರೀತಿಸುವ ಪರಿಮಳವನ್ನು ನೀಡುತ್ತದೆ. ಮುಂದಿನ ಬಾರಿ ಹುಳಿ ಮೊಸರಿನೊಂದಿಗೆ ಭಟೂರಾ ಮಾಡಿಕೊಂಡು ನೋಡಿ.

    ಮೊಸರನ್ನ: ಇದು ದಕ್ಷಿಣ ಭಾರತದ ಸರಳ ಅಡುಗೆಯಾಗಿದ್ದು ಮತ್ತು ನೀವು ಯಾವಾಗಾದರೂ ಹಗುರವಾದ ಊಟವನ್ನು ಮಾಡಲು ಬಯಸಿದಾಗಲೆಲ್ಲಾ, ಮೊಸರನ್ನವನ್ನು ಮಾಡಿಕೊಳ್ಳಬಹುದು. ಮೊಸರನ್ನವು ಸ್ವಲ್ಪ ಹುಳಿ ಹುಳಿಯಾಗಿ ಇರಲು ಹುಳಿಯಾದ ಮೊಸರು ಬಳಸಿ. ಸಾಮಾನ್ಯ ರುಚಿಯ ಮೊಸರಿಗಿಂತ ಈ ಹುಳಿ ಮೊಸರು ನಿಮ್ಮ ಮೊಸರನ್ನದ ರುಚಿಯನ್ನು ಬದಲಾಯಿಸುತ್ತದೆ ಎಂದು ಹೇಳಬಹುದು.

    ಇಡ್ಲಿ: ಸಾಮಾನ್ಯ ರುಚಿಯ ಮೊಸರಿನ ಬದಲಿಗೆ ಹುಳಿ ಮೊಸರಿನೊಂದಿಗೆ ನಿಮ್ಮ ಸಾದಾ ಇಡ್ಲಿಗಳನ್ನು ತಯಾರಿಸಿ ನೋಡಿ ಮತ್ತು ಈ ದಕ್ಷಿಣ ಭಾರತದ ನೆಚ್ಚಿನ ಉಪಾಹಾರದಲ್ಲಿ ವಿಭಿನ್ನವಾದ ರುಚಿಯನ್ನೇ ನೀವು ಪಡೆಯುತ್ತಿರಿ. ಈ ಪಾಕವಿಧಾನದಿಂದ ಮೃದುವಾದ ಇಡ್ಲಿಗಳನ್ನು ನೀವು ಪಡೆಯುತ್ತೀರಿ, ಆದರೆ ಹುಳಿ ಮೊಸರನ್ನು ಬಳಸಲು ಮರೆಯಬೇಡಿ.

    ಇದನ್ನೂ ಓದಿ: Health Care: ಆರೋಗ್ಯಕರ ಜೀವನಕ್ಕೆ 8 ಗಂಟೆ ನಿದ್ದೆ ಅಲ್ಲ, 'ಒಳ್ಳೆಯ ನಿದ್ದೆ' ಮಾಡಬೇಕು ಅಂತಾರೆ ತಜ್ಞರು!

    ದಹಿ ಆಲೂ: ಭಾರತೀಯ ಪಾಕಪದ್ಧತಿಯಲ್ಲಿ ಮತ್ತೊಂದು ಕ್ಲಾಸಿಕ್ ಭಕ್ಷ್ಯವೆಂದರೆ ಅದು ದಹಿ ಆಲೂ ಎಂದು ಹೇಳಬಹುದು ಮತ್ತು ಇದು ನಮ್ಮ ಸಾರ್ವಕಾಲಿಕ ನೆಚ್ಚಿನದಾಗಿದೆ. ಆದರೆ ಹುಳಿ ಮೊಸರಿನೊಂದಿಗೆ ಈ ದಹಿ ಆಲೂ ತಯಾರಿಸಿ ನೋಡಿ, ಇದರ ರುಚಿಯು ವಿಭಿನ್ನವಾಗಿರುತ್ತದೆ.
    Published by:Annappa Achari
    First published: