Video: ಫಿಟ್​ನೆಸ್​ ಫ್ರೀಕ್ ನಟಿ ದಿಶಾ ಪಠಾಣಿ ದೇಹಸಿರಿಯ ಗುಟ್ಟು ರಟ್ಟು

DISHA PATANI : ದಿಶಾ ದೇಹಸಿರಿಯ ರಹಸ್ಯ ಕೂಡ ಕಠಿಣ ತಾಲೀಮು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಟೈಗರ್ ಶ್ರಾಫ್ ಜೊತೆಗಿನ ಬ್ರೇಕ್ ಸುದ್ದಿಯಿಂದ ನೊಂದಿರುವ ಭಾರತ್ ಚಿತ್ರನಟಿ ಸದ್ಯ ಜಿಮ್​ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ.

zahir | news18
Updated:July 26, 2019, 3:59 PM IST
Video: ಫಿಟ್​ನೆಸ್​ ಫ್ರೀಕ್ ನಟಿ ದಿಶಾ ಪಠಾಣಿ ದೇಹಸಿರಿಯ ಗುಟ್ಟು ರಟ್ಟು
Disha patani
  • News18
  • Last Updated: July 26, 2019, 3:59 PM IST
  • Share this:
ಒಂದೆಡೆ ಪ್ರಿಯಕರ ಟೈಗರ್ ಶ್ರಾಫ್ ಜತೆ ಸುತ್ತಾಟ, ಮತ್ತೊಂದೆಡೆ ಹೊಸ ಚಿತ್ರದ ಹುಡುಕಾಟ..ಇದು ಬಾಲಿವುಡ್​ ಬ್ಯೂಟಿ ದಿಶಾ ಪಠಾಣಿಯ ಸದ್ಯದ ಪರಿಸ್ಥಿತಿ. ಅಭಿನಯಿಸಿರುವುದು 6 ಚಿತ್ರಗಳಲ್ಲಾದರೂ ತಮ್ಮ ಮಾದಕ ಲುಕ್​ನಿಂದ ದಿಶಾ ಒಂದಷ್ಟು ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿರುವುದು ಸುಳ್ಳಲ್ಲ. ನಟ ಟೈಗರ್ ಜತೆ ಪಾರ್ಟಿ ಪಬ್​ಗಳಲ್ಲಿ ಸದಾ ಕಾಣಿಸಿಕೊಳ್ಳುವ ಯುವನಟಿ ತಮ್ಮ ದೇಹಸಿರಿ ಬಗ್ಗೆ ಅಪಾರ ಕಾಳಜಿವಹಿಸುತ್ತಾರೆ.

2016ರಲ್ಲಿ 'ಧೋನಿ'ಯ ಪ್ರೇಯಸಿಯಾಗಿ ಗಮನ ಸೆಳೆದಿದ್ದ ದಿಶಾ ಬಳಿಕ 'ಬಾಗಿ 2' ಚಿತ್ರದಲ್ಲಿ ತಮ್ಮ ಬಳುಕುವ ಬಳ್ಳಿಯಂತಹ ದೇಹದಿಂದ ಮೋಡಿ ಮಾಡಿದ್ದರು. ಇದರ ನಡುವೆ ಹಾಲಿವುಡ್ ಚಿತ್ರ 'ಕುಂಗ್​ ಫೂ ಯೋಗ'ದಲ್ಲೂ ತಮ್ಮ ಮೈಮಾಟದಿಂದ ಕಮಾಲ್ ಮಾಡಿದ್ದರು. ದೇಹಸಿರಿ ಬಗ್ಗೆ ಅಪಾರ ಕಾಳಜಿ ಹೊಂದಿರುವ ಪಠಾಣಿ ಕುಡಿ ಅದೆಷ್ಟೇ ಬ್ಯುಸಿಯಿದ್ದರೂ ವರ್ಕೌಟ್​ ಮಾಡುವುದನ್ನು ತಪ್ಪಿಸಿಕೊಳ್ಳುವುದಿಲ್ಲವಂತೆ. ಅದಕ್ಕೆ ಸಾಕ್ಷಿ ಎಂಬಂತೆ ದಿಶಾ ಕೆಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಬಾಲಿವುಡ್​ನ ಫಿಟ್ನೆಸ್ ಫ್ರೀಕ್ ಆಗಿರುವ ದಿಶಾ ದೇಹಸಿರಿಯ ರಹಸ್ಯ ಕೂಡ ಕಠಿಣ ತಾಲೀಮು ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ಟೈಗರ್ ಶ್ರಾಫ್ ಜೊತೆಗಿನ ಬ್ರೇಕ್ ಸುದ್ದಿಯಿಂದ ನೊಂದಿರುವ 'ಭಾರತ್' ಚಿತ್ರನಟಿ ಸದ್ಯ ಜಿಮ್​ ಕಸರತ್ತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಹೆವೀ ವರ್ಕೌಟ್​ ಕಡೆ ಹೆಚ್ಚಿನ ಒಲವು ಹೊಂದಿರುವ ದಿಶಾ ಪಠಾಣಿ ಸಾಮಾನ್ಯವಾಗಿ 60 ಕೆ.ಜಿಗಿಂತಲೂ ಡೆಡ್​ ಲಿಫ್ಟ್​ ಎತ್ತುವಲ್ಲಿ ನಿಸ್ಸೀಮರು.
ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಧ್ಯಮಗಳಿಂದ ದೂರವೇ ಉಳಿದಿರುವ ದಿಶಾ ಸದ್ಯ ಮಲಾಂಗ್ ಚಿತ್ರಕ್ಕಾಗಿ ವರ್ಕೌಟ್ ಮಾಡುತ್ತಿದ್ದಾರಂತೆ. ಏಕ್ ವಿಲನ್ ಖ್ಯಾತಿಯ ನಿರ್ದೇಶಕ ಮೋಹಿತ್ ಸೂರಿ ನಿರ್ದೇಶಿಸುವ ಮಲಾಂಗ್ ಚಿತ್ರವು ಬಹುತಾರಾಗಣದಿಂದ ಕೂಡಿದ್ದು, ಇದೊಂದು ಥ್ರಿಲ್ಲರ್ ಕಥೆಯನ್ನು ಹೊಂದಿರುವ ಸಿನಿಮಾ ಎನ್ನಲಾಗಿದೆ.


First published:July 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ