Chromosome: ಪುರುಷರಲ್ಲಿ ಕಣ್ಮರೆಯಾಗುತ್ತಾ ವರ್ಣತಂತು? ಹೊಸ ಹುಡುಕಾಟದಲ್ಲಿ ವಿಜ್ಞಾನಿಗಳು!

ಕ್ರೋಮೋಸೋಮ್​ಗಳು

ಕ್ರೋಮೋಸೋಮ್​ಗಳು

ನಮ್ಮಲ್ಲಿ ಬ್ರೂಣದ ಲಿಂಗ ಅಂದರೆ ಗಂಡು ಅಥವಾ ಹೆಣ್ಣು ಅಂತ ನಿರ್ಧಾರ ಆಗುವಂತೆ ಮಾಡುವುದು ಮನುಷ್ಯನಲ್ಲಿ ಇರುವ ಕ್ರೋಮೋಜೋಮ್‌ಗಳು... ಈಗ ಆಧುನಿಕ ಲೈಫ್‌ಸ್ಟೈಲ್‌ನಿಂದ ಪುರುಷರಲ್ಲಿ ಆ ಜೀವಕೋಶ ನಾಶವಾಗ್ತಿದೆಯಂತೆ. ಅದಕ್ಕೆ ಇನ್ನು ಬ್ರೂಣದ ಲಿಂಗ ನಿರ್ಧಾರ ಮಾಡುವುದು ಹೇಗೆ ಅಂತ ವಿಜ್ಞಾನಿಗಳು ಯೋಚನೆ ಮಾಡಿ, ಹೊಸ ಜೀವಕೋಶ ಅಥವಾ ವರ್ಣತಂತು ಕಂಡು ಹಿಡಿಯಬೇಕು ಅಂತ ಸಂಶೋಧನೆ ಮಾಡ್ತಾ ಇದ್ದಾರೆ.

ಮುಂದೆ ಓದಿ ...
  • Share this:

    ಮಾನವ ಹಾಗೂ ಇತರ ಸಸ್ತನಿಗಳ ಲಿಂಗವನ್ನು ವೈ ವರ್ಣತಂತುಗಳಲ್ಲಿರುವ (Y Chromosome) ಪುರುಷ ಲಿಂಗ ನಿರ್ಣಯಿಸುವ ಜೀನ್ (Gene) ನಿರ್ಧರಿಸುತ್ತದೆ. ಆದರೆ ಆಘಾತಕಾರಿಯಾದ ಸುದ್ದಿಯೊಂದು ವರದಿಯಾಗಿದ್ದು ವೈ ಕ್ರೋಮೋಸೋಮ್ ಕ್ಷೀಣಿಸುತ್ತಿದ್ದು ಕೆಲವು ಮಿಲಿಯನ್ ವರ್ಷಗಳಲ್ಲಿ ಕಣ್ಮರೆಯಾಗಬಹುದು ಹಾಗಾಗಿ ಲಿಂಗ ನಿರ್ಣಯಿಸುವ ಹೊಸ ಜೀನ್ ಅನ್ನು ವಿಕಸನಗೊಳಿಸಬೇಕಾದ ಅನಿವಾರ್ಯತೆ ಎದುರಾಗಬಹುದು ಎಂದು ವರದಿ ತಿಳಿಸಿದೆ. ಇದು ಇತ್ತೀಚಿನ ಲೈಫ್​ಸ್ಟೈಲ್​ಗಳಿಂದ (Lifestyle) ಈ ರೀತಿಯ ಸಮಸ್ಯೆಗಳು ಸಂಭವಿಸುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಯೋಚಿಸಬೇಕಾದ ಸಂಗತಿಗಳು ಹಲವಾರು ಇವೆ ಎಂಬ ಮಾತನ್ನು ವಿಜ್ಞಾನಿಗಳು (Scientist) ವ್ಯಕ್ತ ಪಡಿಸಿದ್ದಾರೆ.


    ಅದಾಗ್ಯೂ ವೈ ಕ್ರೋಮೋಸೋಮ್​ಗಳನ್ನು ಸಂಪೂರ್ಣವಾಗಿ ಕಳೆದುಕೊಂಡಿರುವ ದಂಶಕಗಳು (ಇಲಿ, ಹೆಗ್ಗಣ) ಜೀವಿಸುತ್ತಿರುವುದಾಗಿ ತಿಳಿದುಬಂದಿದ್ದು ವಿಜ್ಞಾನಕ್ಕೆ ಈ ಬೆಳವಣಿಗೆ ಸವಾಲು ಹಾಕುತ್ತಿದೆ. ಇದು ಹೇಗೆ ಸಾಧ್ಯ ಎಂಬುದನ್ನು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ನ ಹೊಸ ಪ್ರಬಂಧವು ತಿಳಿಸಿದೆ.


    ವೈ ಕ್ರೋಮೋಸೋಮ್ ಮಾನವರ ಲಿಂಗವನ್ನು ಹೇಗೆ ನಿರ್ಧರಿಸುತ್ತದೆ


    ಮಾನವರಲ್ಲಿ ಇತರ ಸಸ್ತನಿಗಳಲ್ಲಿರುವಂತೆಯೇ ಮಹಿಳೆಯರು ಎರಡು ಎಕ್ಸ್ ವರ್ಣತಂತುಗಳನ್ನು ಹೊಂದಿದ್ದು, ಪುರುಷರು ಒಂದೇ ಎಕ್ಸ್ ವರ್ಣತಂತುಗಳು ಹಾಗೂ ವೈ ಹೆಸರಿನ ಸಣ್ಣ ವರ್ಣತಂತುಗಳನ್ನು ಹೊಂದಿರುತ್ತಾರೆ. ಸುಮಾರು 900 ವಂಶವಾಹಿಗಳನ್ನು ಒಳಗೊಂಡಿರುವ ಎಕ್ಸ್ ವರ್ಣತಂತು ಲೈಂಗಿಕತೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುತ್ತದೆ.


    ಇದನ್ನೂ ಓದಿ: ಈ ಮ್ಯಾಟರ್​ ಕೇಳಿದ್ರೆ, ಹಲ್ಲು ಉಜ್ಜದೇ ಇರುವವರೂ ತಿಕ್ಕಿ ತಿಕ್ಕಿ ತೊಳಿತೀರಾ!


    ಆದರೆ ವೈ ವರ್ಣತಂತು ಕೆಲವೊಂದು ಜೀನ್‌ಗಳು (ಸುಮಾರು 55) ಹಾಗೂ ಸರಳವಾದ ಪುನರಾವರ್ತಿತ ಡಿಎನ್‌ಎ (DNA) ಗಳನ್ನು ಹೊಂದಿದೆ. ಭ್ರೂಣದಲ್ಲಿ ಗಂಡು ಮಗುವಿನ ಬೆಳವಣಿಗೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಜೀನ್‌ಗಳನ್ನು ವೈ ಕ್ರೋಮೋಸೋಮ್ ಒಳಗೊಂಡಿರುತ್ತದೆ.


    ಕಣ್ಮರೆಯಾಗುತ್ತಿರುವ ವೈ ವರ್ಣತಂತು


    ಹೆಚ್ಚಿನ ಸಸ್ತನಿಗಳು ಮಾನವರಂತೆಯೇ ಎಕ್ಸ್ ಹಾಗೂ ವೈ ವರ್ಣತಂತುಗಳನ್ನು ಹೊಂದಿರುತ್ತವೆ. ಆದರೆ ಪುರುಷ ಹಾಗೂ ಮಹಿಳೆಯರಲ್ಲಿ ಈ ವರ್ಣತಂತುಗಳು ಭಿನ್ನವಾಗಿರುವುದರಿಂದ ಮಾನವರಂತೆ ಸಸ್ತನಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತವೆ. 166 ಮಿಲಿಯನ್ ವರ್ಷಗಳಲ್ಲಿ ವೈ ವರ್ಣತಂತು 900-55 ಸಕ್ರಿಯ ಜೀನ್‌ಗಳನ್ನು ಕಳೆದುಕೊಂಡಿದೆ ಎಂಬುದು ಇದರಿಂದ ತಿಳಿದುಬಂದಿದ್ದು, ಮಿಲಿಯನ್ ವರ್ಷಕ್ಕೆ ಸುಮಾರು ಐದು ಜೀನ್‌ಗಳಂತೆ ವೈ ವರ್ಣತಂತು ಜೀನ್‌ಗಳನ್ನು ಕಳೆದುಕೊಳ್ಳುತ್ತಿದೆ. ಈ ಲೆಕ್ಕಾಚಾರಕ್ಕೆ ಅನುಗುಣವಾಗಿ ಕೊನೆಯ 55 ಜೀನ್‌ಗಳು 11 ಮಿಲಿಯನ್ ವರ್ಷಗಳಲ್ಲಿ ನಾಶವಾಗಬಹುದು ಎಂದು ಅಂದಾಜಿಸಲಾಗಿದೆ.


    ವೈ ವರ್ಣತಂತುಗಳನ್ನು ಹೊಂದಿರದ ದಂಶಕಗಳು


    ವೈ ವರ್ಣತಂತುಗಳನ್ನು ಕಳೆದುಕೊಂಡಿರುವ ಹಾಗೂ ಇನ್ನೂ ಬದುಕಿರುವ ಎರಡು ದಂಶಕ ವಂಶಗಳ ಮಾಹಿತಿ ಸಂಶೋಧಕರಿಗೆ ದೊರಕಿದೆ. ಪೂರ್ವ ಯುರೋಪ್‌ನ ಮೋಲ್ ವೋಲ್‌ಗಳು ಮತ್ತು ಜಪಾನ್‌ನ ಸ್ಪೈನಿ ಇಲಿಗಳು ವರ್ಣತಂತುಗಳನ್ನು ಕಳೆದುಕೊಂಡಿರುವ ದಂಶಕ ವಂಶಗಳಾಗಿದ್ದು ಇವಿನ್ನೂ ಬದುಕುತ್ತಿವೆ. ಸ್ಪೈನಿ ಇಲಿಯ ಮೇಲೆ ಪ್ರಯೋಗ ನಡೆಸಿದ ವಿಜ್ಞಾನಿಗಳ ತಂಡವು ವರ್ಣತಂತುಗಳಲ್ಲಿರುವ ಪ್ರಮುಖ ಲೈಂಗಿಕ ಜೀನ್ ಆದ SOX9 ನಕಲು ಎಲ್ಲಾ ಪುರುಷ ಇಲಿಗಳಲ್ಲಿ ಕಂಡುಬಂದಿರುವುದನ್ನು ಗುರುತಿಸಿದೆ.


    ಪುರುಷರಲ್ಲಿ ಕಣ್ಮರೆಯಾಗುತ್ತಿರುವ ವೈ ವರ್ಣತಂತುಗಳು


    ಮಾನವನ ವೈ ವರ್ಣತಂತುಗಳು ಕಣ್ಮರೆಯಾಗುತ್ತಿರುವುದು ಭವಿಷ್ಯದ ಬಗೆಗೆ ಊಹಾಪೋಹಗಳನ್ನು ಹುಟ್ಟುಹಾಕಿದೆ. ಕೆಲವೊಂದು ಹಲ್ಲಿಗಳು ಹಾಗೂ ಹಾವುಗಳು ಸ್ತ್ರೀ ಲಿಂಗಗಳು ಮಾತ್ರವಾಗಿದ್ದು ಪಾರ್ಥೆನೋಜೆನೆಸಿಸ್ ಎಂದು ಕರೆಯಲಾದ ತಮ್ಮ ಸ್ವಂತ ಜೀನ್‌ಗಳಿಂದ ಮೊಟ್ಟೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ ಆದರೆ ಇದು ಮಾನವರಲ್ಲಿ ಹಾಗೂ ಇನ್ನಿತರ ಸಸ್ತನಿಗಳಲ್ಲಿ ಸಂಭವಿಸುವುದಿಲ್ಲ ಏಕೆಂದರೆ ಮಾನವರಲ್ಲಿ 30 ನಿರ್ಣಾಯಕ ಜೀನ್‌ಗಳಿದ್ದು ತಂದೆಯ ವೀರ್ಯದ ಮೂಲಕ ಆಗಮಿಸಿದರೆ ಮಾತ್ರ ಕಾರ್ಯನಿರ್ವಹಿಸುತ್ತದೆ.


    ಸಂತಾನೋತ್ಪತ್ತಿಗಾಗಿ ವೀರ್ಯವು ಹಾಗೂ ಪುರುಷ ಲಿಂಗವು ಅವಶ್ಯಕವಾಗಿರುವುದರಿಂದ ವೈ ವರ್ಣತಂತುವಿನ ಕಣ್ಮರೆಯು ಮಾನವ ಜನಾಂಗದ ವಿನಾಶವನ್ನು ಸೂಚಿಸುತ್ತದೆ ಎಂಬುದು ಖಾತ್ರಿಗೊಂಡಿದೆ. ಆದರೆ ಹೊಸ ಸಂಶೋಧನೆಯು ಮಾನವರು ಹೊಸ ಲಿಂಗವನ್ನು ನಿರ್ಧರಿಸುವ ಜೀನ್ ಅನ್ನು ವಿಕಸನಗೊಳಿಸಬಹುದು ಎಂಬುದನ್ನು ಕಂಡುಹಿಡಿದಿದೆ. ಆದರೆ ಈ ಜೀನ್‌ಗಳ ವಿಕಸನವು ಏನಾದರೊಂದು ಅಪಾಯವನ್ನು ಮನುಕುಲಕ್ಕೆ ಉಂಟುಮಾಡಬಹುದು ಎಂಬ ಎಚ್ಚರಿಕೆ ಕೂಡ ಇದ್ದೇ ಇದೆ.

    Published by:Prajwal B
    First published: