ನಮಗೆ ಏನಾದ್ರು ತಿನ್ಬೇಕು ಅಂತ ಅನ್ನಿಸಿದಾಗ ಅದೇ ಸಡನ್ನಾಗಿ ನೆನಪಾಗುವುದು ಟೀ(Tea) ಹಾಗೂ ಬಿಸ್ಕೆಟ್(Biscuit).. ಶ್ರೀಮಂತರಿಂದ (Rich)ಹಿಡಿದು ಬಡವರವರೆಗೂ(Poor) ಬೆಳಗ್ಗೆ(Morning) ಹಾಗೂ ಸಂಜೆ(Evening) ಸಮಯದ ಆಹಾರವಾಗಿರುವ ಟೀ ಹಾಗೂ ಬಿಸ್ಕತ್ ಸೇವನೆ, ಧಿಡೀರ್ ಎಂದು ಸಿಗುವ ಆಹಾರ ಎಂದು ಹೆಚ್ಚಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು.. ಹೀಗಾಗಿ ದಿನ ಬೆಳಗ್ಗೆ ಹಾಗೂ ಸಂಜೆ ಟೀ ಹಾಗೂ ಕಾಫಿ ಜೊತೆಗೆ ಬಿಸ್ಕೆಟ್ ಸೇವನೆ ಮಾಡುವವರು ನಮ್ಮ ದೇಹದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು..
ಟೀ ಹಾಗೂ ಕಾಫಿ ಜೊತೆಗೆ ಬಿಸ್ಕೆಟ್ ಸೇವನೆ ಮಾಡುವ ಮುನ್ನ ಎಚ್ಚರ..
ನಮ್ಮ ಇದುವರೆಗಿನ ಅನಾರೋಗ್ಯಕರ ಜೀವನ ಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬೆಳ್ಳಂಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಡ್ ಕಾಫಿ ಕುಡಿಯುವುದು ಅಥವಾ ಉಪಾಹಾರಕ್ಕಿಂತ ಮುಂಚೆ ಚಹಾದ ಜೊತೆಗೆ ಬಿಸ್ಕೆಟ್ ಸೇವನೆ ಮಾಡುವುದು. ಇದು ಎಷ್ಟು ಅನಾರೋಗ್ಯಕರ ಎಂದರೆ ನಮ್ಮ ದೇಹದ ಆರೋಗ್ಯದ ಮೇಲೆ ಮುಂದಿನ ದಿನಗಳಲ್ಲಿ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತದೆ. ಏಕೆಂದರೆ ಕಾಫಿ ಮತ್ತು ಚಹಾದಲ್ಲಿ ಕೆಫೀನ್ ಅಂಶ ಹೆಚ್ಚಾಗಿರುವ ಕಾರಣ ಇದು ನಮ್ಮ ಖಾಲಿ ಹೊಟ್ಟೆಯಲ್ಲಿ ನಮ್ಮ ಆರೋಗ್ಯದ ಮೇಲೆ ಕೆಲವು ಅಡ್ಡ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ. ಇನ್ನು ಖಾಲಿ ಹೊಟ್ಟೆಯಲ್ಲಿ ಬಿಸ್ಕೆಟ್ ಸೇವನೆ ಮಾಡಿದರೆ ಉಂಟಾಗುವ ಅನಾರೋಗ್ಯಕರ ಪರಿಣಾಮಗಳು ಒಂದೆರಡಲ್ಲ.
1)ಹಲ್ಲುಗಳ ದಂತಕವಚಕ್ಕೆ ಹಾನಿ: ಬಿಸ್ಕೆಟ್ ನಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚು. ನೀವು ಇದನ್ನು ಪ್ರತಿದಿನ ಸೇವಿಸಿದರೆ, ಇದು ಹಲ್ಲುಗಳ ದಂತಕವಚವನ್ನು ಹಾನಿಗೊಳಿಸುತ್ತದೆ. ಈ ಕಾರಣದಿಂದಾಗಿ, ಹಲ್ಲಿನ ಕುಳಿಯು ಬೆಳೆಯಬಹುದು ಮತ್ತು ಹಲ್ಲಿನ ನಷ್ಟಕ್ಕೆ ಕಾರಣವಾಗಬಹುದು.
ಇದನ್ನೂ ಓದಿ :ಈ ಬ್ಯುಸಿನೆಸ್ ಮಾಡಲು ಸರ್ಕಾರವೇ ನಿಮಗೆ ಹಣ ನೀಡುತ್ತೆ..! ಮತ್ಯಾಕೆ ತಡ?
2) ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಹೆಚ್ಚಳ : ಕಾಫಿ ಹಾಗೂ ಜೊತೆಗೆ ಬಿಸ್ಕೆಟ್ ಸೇವನೆ ಮಾಡುವುದರಿಂದ ನಮ್ಮ ಹೊಟ್ಟೆಯಲ್ಲಿ ಆಮ್ಲದ ಪ್ರಮಾಣ ಹೆಚ್ಚಳವಾಗುತ್ತದೆ.. ಇಂತಹ ಸಂದರ್ಭದಲ್ಲಿ ಖಾಲಿ ಹೊಟ್ಟೆಯಲ್ಲಿ ಹಾಗೂ ಕಾಫಿ ಜೊತೆಗೆ ಬಿಸ್ಕೆಟ್ ಸೇವನೆ ಮಾಡಿದರೆ ಆಮ್ಲೀಯತೆ ಹೆಚ್ಚಾಗಿ ಹೊಟ್ಟೆ ಉಬ್ಬರಿಸಿ ಕೊಳ್ಳುವ ಸಾಧ್ಯತೆ ಇರುತ್ತದೆ..
3)ಮಲಬದ್ಧತೆ ಸಮಸ್ಯೆ :ಬಿಸ್ಕೆಟ್ ಯಾವುದೇ ಫೈಬರ್ ಅಂಶಗಳು ಇರುವುದಿಲ್ಲ.. ಸಂಸ್ಕರಿಸಿದ ಹಿಟ್ಟಿನಿಂದ ಬಿಸ್ಕೆಟ್ ತಯಾರು ಮಾಡಲಾಗುತ್ತೆ.. ಹೀಗಾಗಿ ಇದನ್ನು ನಾವು ಸೇವನೆ ಮಾಡುವುದರಿಂದ ಮಲಬದ್ಧತೆಯ ಸಮಸ್ಯೆ ಹೆಚ್ಚಾಗುತ್ತದೆ.. ಜೊತೆಗೆ BHA ಮತ್ತು BHT ಎಂಬ ಎರಡು ಸಂರಕ್ಷಕಗಳನ್ನು ಬಿಸ್ಕತ್ತುಗಳು ಅಥವಾ ಕುಕೀಗಳಲ್ಲಿ ಹಾಕಲಾಗುತ್ತದೆ. ಹೀಗಾಗಿ ಚಹಾ ಅಥವಾ ಕಾಫಿ ಜೊತೆಗೆ ಬಿಸ್ಕೆಟ್ ಸೇವನೆಯ ಮಾಡುವುದು ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ..
4) ಅಜೀರ್ಣತೆ ಹೆಚ್ಚು ಮಾಡುತ್ತದೆ : ನಾವು ರಾತ್ರಿ ಮಲಗಿದ ಸಂದರ್ಭದಲ್ಲಿ ನಮ್ಮ ದೇಹದ ಜೀರ್ಣ ಪ್ರಕ್ರಿಯೆ ಸಂಪೂರ್ಣವಾಗಿ ನಿಧಾನವಾಗುತ್ತದೆ. ನಾವು ಬೆಳಗ್ಗೆ ಎದ್ದ ತಕ್ಷಣ ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದ ಶಕ್ತಿ ಮತ್ತು ಚೈತನ್ಯ ಬೇಕಾಗುತ್ತದೆ. ಹೀಗಾಗಿ ಬೆಳಗ್ಗೆ ಸಮಯದಲ್ಲಿ ಕಾಫಿ ಮತ್ತು ಚಹಾ ಹಾಲಿನ ಮಿಶ್ರಣದಿಂದ ನಮ್ಮ ದೇಹದಲ್ಲಿ ಜೀರ್ಣ ಆಗುವ ಪ್ರಕ್ರಿಯೆ ತುಂಬ ಸಮಯ ಹಿಡಿಯುತ್ತದೆ ಮತ್ತು ಇದರ ನಂತರ ಸೇವಿಸುವ ಯಾವುದೇ ಆಹಾರ ಕೂಡ ಇದೇ ದಾರಿಯನ್ನು ಹಿಡಿಯುತ್ತದೆ. ಹೀಗಾಗಿ ಬಿಸ್ಕೆಟ್ ಸೇವನೆ ಅಜೀರ್ಣತೆ ಸಮಸ್ಯೆ ಉಂಟುಮಾಡುತ್ತದೆ..
ಇದನ್ನೂ ಓದಿ :82 ವರ್ಷದ ನಂತರವೂ ಅತಿ ಹೆಚ್ಚು ಮಾರಾಟವಾಗಿ ದಾಖಲೆ ಬರೆದ ಪಾರ್ಲೆ-ಜಿ ಬಿಸ್ಕತ್
5)ರಕ್ತದಲ್ಲಿನ ಸಕ್ಕರೆ ಮಟ್ಟ : ದೀರ್ಘಕಾಲದವರೆಗೆ ಚಹಾದೊಂದಿಗೆ ಸಿಹಿ ಬಿಸ್ಕತ್ತುಗಳನ್ನು ತಿನ್ನುವ ಅಭ್ಯಾಸವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇದರಲ್ಲಿ ಹೆಚ್ಚಿನ ಸೋಡಿಯಂ ಅಂಶವೂ ಇದೆ. ಮಧುಮೇಹ ಮತ್ತು ಥೈರಾಯ್ಡ್ ರೋಗಿಗಳು ಬಿಸ್ಕತ್ತುಗಳನ್ನು ಸೇವಿಸಬಾರದು.
6) ಬೊಜ್ಜು ಹೆಚ್ಚಳ : ಪ್ರತಿನಿತ್ಯ ತೂಕ ಇಳಿಸಿಕೊಳ್ಳಲು ನಾನ ಪ್ರಯತ್ನಗಳನ್ನು ನೀವು ಮಾಡುತ್ತಲೇ ಇರುತ್ತೀರಾ. ಇದಕ್ಕಾಗಿ ತರಕಾರಿ, ಹಣ್ಣು ಹಾಗೂ ಪೌಷ್ಠಿಕಾಂಶಯುಕ್ತ ಆಹಾರಗಳೆಲ್ಲವನ್ನೂ ನಿಯಮಿತವಾಗಿ ಸೇವಿಸಿ ವ್ಯಾಯಾಮ ಮಾಡುತ್ತಾ ಇರ್ತಿರಾ.. ಆದ್ರೆ ನೀವು ಮಾಡುವ ಒಂದು ಸಣ್ಣ ತಪ್ಪು ತೂಕ ಹೆಚ್ಚಳವಾಗಲು ಕಾರಣವಾಗಬಹುದು.. ಹೌದು ಕಾಫಿ ಹಾಗೂ ಚಹಾದ ಜೊತೆಗೆ ಬಿಸ್ಕೆಟ್ ಸೇವನೆ ಮಾಡುವುದರಿಂದ ತೂಕ ಹೆಚ್ಚಳವಾಗುತ್ತದೆ.. ಬಿಸ್ಕೆಟ್ ಹೈಡ್ರೋಜನೀಕರಿಸಿದ ಕೊಬ್ಬನ್ನು ಹೊಂದಿರುತ್ತದೆ. ಬಿಸ್ಕತ್ತು ಕೊಬ್ಬು ಮುಕ್ತವಾಗಿರುವುದಿಲ್ಲ, ಆದ್ದರಿಂದ ನೀವು ಇದನ್ನು ದೀರ್ಘಕಾಲದವರೆಗೆ ಸೇವಿಸಿದರೆ, ಅದು ಬೊಜ್ಜು ಹೆಚ್ಚಿಸಬಹುದು ಮತ್ತು ನಿಮಗೆ ಚರ್ಮದ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು..
7) ರೋಗನಿರೋಧಕ ಶಕ್ತಿ ದುರ್ಬಲ : ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಗಳು ಅಧಿಕವಾಗಿವೆ.. ಹೀಗಾಗಿ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಇರುವುದು ಅತ್ಯಗತ್ಯ.. ಬ್ರೆಡ್ ಬಿಸ್ಕೆಟ್ ನಲ್ಲಿ ಚೀನಾ ಸಕ್ಕರೆ ಇರುವುದರಿಂದ ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ