• Home
  • »
  • News
  • »
  • lifestyle
  • »
  • Foods And Health: ಊಟದ ಟೇಬಲ್ ಮೇಲೆ ಈ ವಸ್ತುಗಳನ್ನು ಇಡ್ತೀರಾ? ಹಾಗಿದ್ರೆ ಈಗಲೇ ಈ ಅಭ್ಯಾಸ ಬದಲಿಸಿಕೊಳ್ಳಿ

Foods And Health: ಊಟದ ಟೇಬಲ್ ಮೇಲೆ ಈ ವಸ್ತುಗಳನ್ನು ಇಡ್ತೀರಾ? ಹಾಗಿದ್ರೆ ಈಗಲೇ ಈ ಅಭ್ಯಾಸ ಬದಲಿಸಿಕೊಳ್ಳಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾಮನ್ ಆಗಿ ಊಟದ ಟೇಬಲ್ ಮೇಲೆ ಯಾವಾಗಲೂ ಸಾಸ್, ಸಾಲ್ಟ್, ರೆಡ್ ಚಟ್ನಿ, ಉಪ್ಪಿನಕಾಯಿ, ಪೆಪ್ಪರ್ ಇಂತಹ ಅನೇಕ ಪದಾರ್ಥಗಳನ್ನು ಯಾವಾಗಲೂ ಇಟ್ಟಿರುತ್ತೇವೆ. ಹಾಗಿದ್ರೆ ಇವೆಲ್ಲ ಆರೋಗ್ಯಕ್ಕೆ ಒಳ್ಳೆಯದಲ್ವಾ?

  • Share this:

    ಕೆಲವು ಪದಾರ್ಥಗಳನ್ನು (Ingredients) ನಾವು ಯಾವಾಗಲೂ ಡೈನಿಂಗ್ ಟೇಬಲ್ (Dining Table) ಮೇಲೆ ಇಟ್ಟಿರ್ತೀವಿ ಅಥವಾ ನಾವು ಹೋಟೆಲ್ ಗಳಿಗೆ (Hotel) ಹೋದಾಗ ಕಾಮನ್ ಆಗಿ ಟೇಬಲ್ ಮೇಲೆ ಯಾವಾಗಲೂ ಸಾಸ್, ಸಾಲ್ಟ್ (Salt), ರೆಡ್ ಚಟ್ನಿ, ಉಪ್ಪಿನಕಾಯಿ, ಪೆಪ್ಪರ್ ಇಂತಹ ಅನೇಕ ಪದಾರ್ಥಗಳನ್ನು ಯಾವಾಗಲೂ ಇಟ್ಟಿರುತ್ತಾರೆ. ಹೀಗೆ ಡೈನಿಂಗ್ ಟೇಬಲ್ ಮೇಲೆ ಇರಿಸಲಾದ ಹಲವು ಪದಾರ್ಥಗಳು ನಿಮ್ಮ ಆಹಾರದ (Food) ರುಚಿ ಹೆಚ್ಚು ಮಾಡುತ್ತವೆ. ಇದನ್ನು ಆಹಾರದ ರುಚಿ ಹೆಚ್ಚಿಸಲು ಸಾಮಾನ್ಯವಾಗಿ ಬಳಕೆ ಮಾಡುತ್ತಾರೆ. ಆದರೆ ರುಚಿಯನ್ನು ಹೆಚ್ಚಿಸುವ ಈ ವಸ್ತುಗಳು ಒಮ್ಮೊಮ್ಮೆ ಆರೋಗ್ಯದ ಮೇಲೆ ಭಾರವೂ ಆಗುವ ಸಾಧ್ಯತೆ ಇದೆ.


    ಊಟದ ಮೇಜಿನ ಮೇಲೆ ಯಾವಾಗಲೂ ಇಡುವ ಈ ಪದಾರ್ಥಗಳು ನಿಮ್ಮ ಆರೋಗ್ಯಕ್ಕೆ ಹೇಗೆ ಹಾನಿಕರ?


    ಟೇಬಲ್ ಉಪ್ಪು


    ಟೇಬಲ್ ಉಪ್ಪು ತುಂಬಾ ಅನಾರೋಗ್ಯಕರ. ಬೆಳಗಿನ ಉಪಾಹಾರ ಅಥವಾ ರಾತ್ರಿ ಊಟದ ತನಕ ನಾವು ಅದನ್ನು ನಮ್ಮ ಡೈನಿಂಗ್ ಟೇಬಲ್‌ ನಲ್ಲಿ ಇರಿಸುತ್ತೇವೆ. ಎಲ್ಲಾ ಆಹಾರ ಪದಾರ್ಥಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಉಪ್ಪು ಈಗಾಗಲೇ ಇರುತ್ತದೆ.


    ಆದರೆ ಇನ್ನೂ ಟೇಬಲ್ ಉಪ್ಪನ್ನು ಮುಂಭಾಗದಲ್ಲಿ ಗೋಚರಿಸಿದರೆ ನಾವು ಆಹಾರಕ್ಕೆ ಹೆಚ್ಚು ಉಪ್ಪನ್ನು ಸೇರಿಸುತ್ತೇವೆ. ಇದು ಆಹಾರದಲ್ಲಿ ಸೋಡಿಯಂ ಪ್ರಮಾಣ ಬಹಳಷ್ಟು ಹೆಚ್ಚಾಗುತ್ತದೆ. ದೇಹದಲ್ಲಿ ಸೋಡಿಯಂ ಪ್ರಮಾಣ ಅಧಿಕವಾಗುವುದು ರಕ್ತದೊತ್ತಡ ಸಮಸ್ಯೆ ಉಂಟು ಮಾಡುತ್ತದೆ.


    ಇದನ್ನೂ ಓದಿ: ಪಾರ್ಶ್ವವಾಯುಗೆ ತುತ್ತಾಗದಂತೆ ತಡೆಯುತ್ತೆ ಈ ಆಹಾರಗಳು


    ಹೃದಯಾಘಾತ, ಹೃದಯ ಸಂಬಂಧಿ ಸಮಸ್ಯೆ ಪಡೆಯುವ ಸಾಧ್ಯತೆ ಹೆಚ್ಚುತ್ತದೆ. ಅಷ್ಟೇ ಅಲ್ಲದೇ ಇದು ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟು ಮಾಡಬಹುದು. ಇದು ನಿಮ್ಮ ಮೂಳೆಗಳಿಗೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಹಾಗಾಗಿ ಅಗತ್ಯಕ್ಕೆ ಅನುಗುಣವಾಗಿ ದೇಹಕ್ಕೆ ಸೀಮಿತ ಪ್ರಮಾಣದ ಸೋಡಿಯಂ ಸೇವನೆ ಮಾಡಿ.


     ಟೊಮೆಟೊ ಕೆಚಪ್ ಅಥವಾ ಸಾಸ್


    ಸಾಸ್‌ ಮತ್ತು ಟೊಮೆಟೊ ಕೆಚಪ್‌ ಗಳು ನಿಮ್ಮ ಡೈನಿಂಗ್ ಟೇಬಲ್‌ನಲ್ಲಿ ಇರುತ್ತವೆ. ಇದು ನೀವು ಹೆಚ್ಚಿನ ಆಹಾರ ಪದಾರ್ಥದ ಜೊತೆ ತಿನ್ನಲು ಇಷ್ಟ ಪಡ್ತೀರಿ. ವಿಶೇಷವಾಗಿ ಮಕ್ಕಳು ಅದನ್ನು ತುಂಬಾ ಇಷ್ಟ ಪಡುತ್ತಾರೆ.


    ಆದರೆ ಅದು ಆರೋಗ್ಯದ ಮೇಲೆ ಹೆಚ್ಚು ಕೆಟ್ಟ ಪರಿಣಾಮ ಉಂಟು ಮಾಡುತ್ತದೆ. ಅವುಗಳಲ್ಲಿ ಹಲವು ರೀತಿಯ ರಾಸಾಯನಿಕಗಳು ಮತ್ತು ಸಂರಕ್ಷಕಗಳು ಇವೆ. ಅದು ನಿಮ್ಮ ಆರೋಗ್ಯವನ್ನು ಹಲವು ರೀತಿಯಲ್ಲಿ ಹಾನಿ ಮಾಡುತ್ತದೆ.


    ಕೆಚಪ್ ಸಕ್ಕರೆ, ಉಪ್ಪು, ಫ್ರಕ್ಟೋಸ್, ಸಂರಕ್ಷಕಗಳು ಮತ್ತು ಕಾರ್ನ್ ಸಿರಪ್ ಪದಾರ್ಥಗಳು ಒಟ್ಟಾಗಿ ದೇಹಕ್ಕೆ ತುಂಬಾ ಹಾನಿಕರವಾಗಿವೆ. ಇವುಗಳ ಅತಿಯಾದ ಸೇವನೆ ಅಸಿಡಿಟಿ ಸಮಸ್ಯೆ ಮತ್ತು ಹೊಟ್ಟೆ ಉರಿ ಉಂಟಾಗುತ್ತದೆ. ಅಷ್ಟೇ ಅಲ್ಲದೇ ಇದನ್ನು ಅತಿಯಾಗಿ ಸೇವಿಸಿದರೆ ಬೊಜ್ಜು ಕೂಡ ಉಂಟಾಗುತ್ತದೆ. ಇದು ಮೂತ್ರಪಿಂಡ, ಕೀಲು ಮತ್ತು ಹೃದಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


    ಸೋಡಾ ಪಾನೀಯ


    ಊಟದ ನಂತರ ಸೋಡಾ ಕುಡಿಯುವುದು ನಿಮ್ಮ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತಿಳಿಯಿರಿ. ಸೋಡಾ ಪಾನೀಯ ಅಥವಾ ತಂಪು ಪಾನೀಯ ಕಾರ್ಬೊನೇಟೆಡ್ ಆಗಿರುತ್ತವೆ. ಆಕ್ಯುಪೇಷನಲ್ ಮೆಡಿಸಿನ್ ಮತ್ತು ಹೆಲ್ತ್‌ ಕೇರ್ ಸಂಸ್ಥೆಯು ತಂಪು ಪಾನೀಯಗಳ ಕುರಿತು ಪ್ರಕಟಿಸಿದ ಅಧ್ಯಯನದ ಪ್ರಕಾರ ಅವುಗಳ ಅತಿಯಾದ ಸೇವನೆ


    ಬೊಜ್ಜು, ಮಧುಮೇಹ, ಕುಳಿ ಮತ್ತು ಸೋಂಕು  ಸಮಸ್ಯೆಗೆ ಕಾರಣ ಆಗುತ್ತದೆ. ಇದು ಅದರಿಂದ ಉಂಟಾಗುವ ದೊಡ್ಡ ಅನಾನುಕೂಲಗಳು ಹೊಟ್ಟೆ ಉಬ್ಬುವುದು ಸೇರಿದೆ. ಊಟದ ನಂತರ ಅಥವಾ ಯಾವುದೇ ಸಮಯದಲ್ಲಿ ತಂಪು ಪಾನೀಯಗಳ ಹಂಬಲ ಹೊಂದಿದ್ದರೆ ಅದನ್ನು ಬಿಟ್ಟು ಬಿಡಿ.


    ಕೃತಕ ಸಿಹಿಕಾರಕಗಳು


    ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸಕ್ಕರೆ ಬದಲಿಗೆ ಕೃತಕ ಸಿಹಿಕಾರಕ ಬಳಸುತ್ತಾರೆ. ತೂಕ ಇಳಿಸಿಕೊಳ್ಳಲು ಅಥವಾ ಮಧುಮೇಹ ಹೊಂದಲು ಬಯಸಿದರೆ, ಕೃತಕ ಸಿಹಿಕಾರಕಗಳು ನೀವು ಪ್ರಿಡಿಯಾಬಿಟಿಸ್‌ ಪರಿಸ್ಥಿತಿ ತಪ್ಪಿಸಲು ಸಕ್ಕರೆಯ ಬದಲಿಗೆ ಕೃತಕ ಸಿಹಿಕಾರಕ ತೆಗೆದುಕೊಳ್ಳಬೇಕು.


    ಇದನ್ನೂ ಓದಿ: ಪ್ರತಿದಿನ ರುಚಿಕರ ಮತ್ತು ಹೆಲ್ದೀ ಪ್ರೊಟೀನ್ ಪೌಡರ್ ಮನೆಯಲ್ಲಿ ತಯಾರಿಸಿ, ಇಲ್ಲಿದೆ ರೆಸಿಪಿ


    ಅಧ್ಯಯನವೊಂದು ಕೃತಕ ಸಿಹಿಕಾರಕಗಳ ಸೇವನೆ ತೂಕ ಹೆಚ್ಚಾಗುವುದು, ಮೆದುಳಿನ ಗೆಡ್ಡೆ, ಮೂತ್ರಕೋಶದ ಕ್ಯಾನ್ಸರ್ ಮತ್ತು ಇತರೆ ಅನೇಕ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದೆ.

    Published by:renukadariyannavar
    First published: