Jackfruit Seeds: ಹಲಸಿನ ಹಣ್ಣಷ್ಟೇ ಅಲ್ಲ, ಅದರ ಬೀಜ ಸೇವನೆಯಿಂದಲೂ ಲಾಭವಿದೆ!

ಹಲಸಿನ ಬೀಜಗಳಲ್ಲಿ ಅನೇಕ ಪೋಷಕಾಂಶ ತತ್ವಗಳಿವೆ. ಇದರಿಂದಾಗಿ ಇದನ್ನು ಅಗ್ಗದ ಬಾದಾಮಿ ಎಂದೂ ಕರೆಯುತ್ತಾರೆ. ಹಲಸಿನ ಬೀಜಗಳ ಪ್ರಯೋಜನಕಾರಿ ಗುಣಗಳನ್ನು ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೇಸಿಗೆ (Summer) ಕಾಲದಲ್ಲಿ (Season) ಸಿಗುವ ತರಕಾರಿಗಳಲ್ಲಿ (Vegetables) ಹಲಸು (Jackfruit) ಕೂಡ ಒಂದಾಗಿದೆ. ಕೆಲವರು ಇದನ್ನು ಸಸ್ಯಾಹಾರಿಗಳ ಮಾಂಸಾಹಾರ (Non Vegetarian) ಆಹಾರ ಎಂದೂ ಕರೆಯುತ್ತಾರೆ. ಹಲಸು ತರಕಾರಿಯಾಗಿ ಮತ್ತು ಹಣ್ಣಾಗಿ ಬಳಕೆ ಮಾಡುತ್ತಾರೆ. ಹಲಸಿನ ಹಣ್ಣನ್ನು ವಿವಿಧ ತರಹದ ರೆಸಿಪಿ ಮಾಡಲು ಬಳಸುತ್ತಾರೆ. ಹಸಿ ಹಲಸಿನ ಕಾಯಿಯನ್ನು ತರಕಾರಿಯಾಗಿ ಸೇವನೆ ಮಾಡಲಾಗುತ್ತದೆ. ಹಲಸು ಕಾಯಿಯಿಂದ ಮತ್ತು ಹಣ್ಣಾದಾಗ ಸಿಹಿ, ರಸಭರಿತ ಮತ್ತು ಹಣ್ಣನ್ನು ವಿವಿಧ ರೀತಿಯಲ್ಲಿ ಸೇವನೆ ಮಾಡುತ್ತಾರೆ. ಅದರ ರುಚಿಯ ಹೊರತಾಗಿ, ಇದು ಕೆಲವು ಜನರಿಗೆ ತಿಳಿದಿರುವ ಮತ್ತೊಂದು ವೈಶಿಷ್ಟ್ಯವನ್ನು ಹೊಂದಿದೆ. ಗೊತ್ತಿಲ್ಲದವರಲ್ಲಿ ನೀವೂ ಒಬ್ಬರಾಗಿದ್ದರೆ ಮೊದಲು ತಿಳಿಯಿರಿ.

    ಹಲಸಿನ ಬೀಜಗಳಲ್ಲಿ ಅನೇಕ ಪೋಷಕಾಂಶವಿದೆ

    ಹಲಸಿನ ಬೀಜಗಳಲ್ಲಿ ಅನೇಕ ಪೋಷಕಾಂಶ ತತ್ವಗಳಿವೆ. ಇದರಿಂದಾಗಿ ಇದನ್ನು ಅಗ್ಗದ ಬಾದಾಮಿ ಎಂದೂ ಕರೆಯುತ್ತಾರೆ. ಹಲಸಿನ ಬೀಜಗಳ ಪ್ರಯೋಜನಕಾರಿ ಗುಣಗಳನ್ನು ಸೆಲೆಬ್ರಿಟಿ ಪೌಷ್ಟಿಕತಜ್ಞೆ ರುಜುತಾ ದಿವೇಕರ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಶೇರ್ ಮಾಡಿದ್ದಾರೆ.

    ಈ ವೀಡಿಯೊದಲ್ಲಿ ಅವರ ತಂಡದ ಸದಸ್ಯರೊಬ್ಬರು ಹಲಸಿನ ಬೀಜಗಳ ಪ್ರಯೋಜನಗಳು ಮತ್ತು ಅವುಗಳನ್ನು ಹೇಗೆ ಸೇವಿಸಬೇಕು ಎಂದು ತಿಳಿಸಿದ್ದಾರೆ. ಹಲಸಿನ ಬೀಜಗಳನ್ನು ಎಸೆಯುವ ತಪ್ಪನ್ನು ಮಾಡಬೇಡಿ. ಯಾಕೆ ಹಲಸಿನ ಬೀಜಗಳನ್ನು ಎಸೆಯದೇ ಬಳಕೆ ಮಾಡಬೇಕು ಎಂದು ತಿಳಿಯಿರಿ.

    ಇದನ್ನೂ ಓದಿ: ಗರ್ಭಿಣಿಯರಲ್ಲಿ ಕಬ್ಬಿಣದ ಕೊರತೆಯಾಗದಂತೆ ನೋಡಿಕೊಳ್ಳಿ! ಇದು ಅಪಾಯಕ್ಕೆ ಅಹ್ವಾನ, ಏನೇನು ತಿನ್ನಬಹುದು?

    ಹಲಸಿನ ಬೀಜಗಳು ಜೀರ್ಣಕ್ರಿಯೆ, ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿ

    ಹಲಸಿನ ಬೀಜಗಳು ಫೈಬರ್‌ನಲ್ಲಿ ಸಮೃದ್ಧವಾಗಿವೆ. ಇದು ಜೀರ್ಣಕ್ರಿಯೆ, ಚಯಾಪಚಯ ಮತ್ತು ಕರುಳಿನ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇದು ಚರ್ಮ ಮತ್ತು ಕೂದಲನ್ನು ಆರೋಗ್ಯಕರವಾಗಿಸುತ್ತದೆ.

    ಹಲಸಿನ ಬೀಜಗಳು ದೇಹವನ್ನು ಶಕ್ತಿಯುತವಾಗಿರಿಸುತ್ತದೆ

    ಹಲಸಿನ ಬೀಜಗಳಲ್ಲಿ ವಿಟಮಿನ್ ಬಿ ಕಂಡು ಬರುತ್ತದೆ. ಒಟ್ಟಾರೆ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ಇದು ಶಕ್ತಿಯ ಮಟ್ಟದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ದೇಹದಲ್ಲಿ ಮೆದುಳಿನ ಕಾರ್ಯ ಮತ್ತು ಆರೋಗ್ಯಕರ ಜೀವಕೋಶಗಳನ್ನು ಸುಧಾರಿಸುತ್ತದೆ.

    ಹಲಸಿನ ಬೀಜಗಳು ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ

    ಹಲಸಿನ ಬೀಜಗಳು ಕಬ್ಬಿಣದಲ್ಲಿ ಸಮೃದ್ಧವಾಗಿವೆ. ಇದು ನಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಉತ್ಪಾದನೆ ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಹೆಚ್ಚಿನ ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ.

    ಹಲಸಿನ ಬೀಜಗಳು ಪ್ರೋಟೀನ್ ನಲ್ಲಿ ಸಮೃದ್ಧವಾಗಿದೆ

    ನೀವು ಆಗಾಗ್ಗೆ ಹಸಿವಿನಿಂದ ಬಳಲುತ್ತಿದ್ದರೆ ಮತ್ತು ಅದಕ್ಕಾಗಿ ನೀವು ಕೆಲವು ಆರೋಗ್ಯಕರ ವಿಧಾನಗಳನ್ನು ಹುಡುಕುತ್ತಿದ್ದರೆ, ನೀವು ಹಲಸಿನ ಬೀಜಗಳನ್ನು ತಿನ್ನುವುದು ಸೂಕ್ತ. ಇದರಲ್ಲಿ ಸಾಕಷ್ಟು ಪ್ರೊಟೀನ್ ಇದ್ದು ನಿಮ್ಮ ಹೊಟ್ಟೆಯು ದೀರ್ಘ ಕಾಲದವರೆಗೆ ತುಂಬಿರುವಂತೆ ಮಾಡುತ್ತದೆ.

    ಹಲಸಿನ ಬೀಜಗಳು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ

    ಪ್ರತಿದಿನ ಹರಡುವ ಹೊಸ ವೈರಸ್ ವಿರುದ್ಧ ಹೋರಾಡಲು, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು ತುಂಬಾ ಮುಖ್ಯ. ಈ ಅಗತ್ಯತೆ ಪೂರೈಕೆ ಮಾಡಲು ಹಲಸಿನ ಬೀಜಗಳು ನಿಮಗೆ ಪ್ರಯೋಜನಕಾರಿ ಎಂದು ಸಾಬೀತು ಪಡಿಸಬಹುದು.

    ಇದನ್ನೂ ಓದಿ: ಹಾಲಿನ ಜೊತೆ ಈ ವಸ್ತುಗಳನ್ನು ಮಿಕ್ಸ್ ಮಾಡಿ ಸೇವಿಸಿದ್ರೆ ವಿಷಕಾರಿ ಅಂಶ ಸೃಷ್ಟಿ! ಇರಲಿ ಎಚ್ಚರ

    ಹಲಸಿನ ಬೀಜಗಳನ್ನು ತಿನ್ನುವ ಬಗೆ ಹೇಗೆ

    ಹಲಸಿನ ಬೀಜಗಳನ್ನು ಎರಡು ರೀತಿಯಲ್ಲಿ ಸೇವನೆ ಮಾಡಬಹುದು ಅದರಲ್ಲಿ ಒಂದು ಹಲಸಿನ ಬೀಜಗಳನ್ನು 10 ರಿಂದ 15 ನಿಮಿಷಗಳ ಕಾಲ ಕುದಿಸಿದ ನಂತರ, ಸಿಪ್ಪೆ ತೆಗೆದು ತಿನ್ನುವುದು. ಇನ್ನೊಂದು ಹಲಸಿನ ಕಾಳುಗಳನ್ನು ಉಪ್ಪಿನೊಂದಿಗೆ ತುಪ್ಪದಲ್ಲಿ ಹುರಿದ ನಂತರ ತಿನ್ನಿರಿ.
    Published by:renukadariyannavar
    First published: