• Home
  • »
  • News
  • »
  • lifestyle
  • »
  • Stomach Pain: ಈ ಒಂದು ಪಾನೀಯ ಸೇವನೆ ಮಾಡಿದ್ರೆ ಸಾಕು ಪಿರಿಯಡ್ಸ್​ ಹೊಟ್ಟೆ ನೋವಿಗೆ ಪರಿಹಾರ ಸಿಗುತ್ತೆ

Stomach Pain: ಈ ಒಂದು ಪಾನೀಯ ಸೇವನೆ ಮಾಡಿದ್ರೆ ಸಾಕು ಪಿರಿಯಡ್ಸ್​ ಹೊಟ್ಟೆ ನೋವಿಗೆ ಪರಿಹಾರ ಸಿಗುತ್ತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜೀರಿಗೆ ಕೊತ್ತಂಬರಿ ಬೀಜ ಮತ್ತು ಸೊಂಪು ಕಾಳು ತಯಾರಿಸಿದ ಚಹಾ ಸೇವನೆ ಮಾಡಿದರೆ ಜೀರ್ಣಕ್ರಿಯೆಗೆ ಹಲವು ಅದ್ಭುತ ಪ್ರಯೋಜನ ಸಿಗುತ್ತದೆ ಅಂತಾರೆ ತಜ್ಞರು. ಆಯುರ್ವೇದ ತಜ್ಞ ಡಾ.ದೀಕ್ಸಾ ಭಾವಸರ್ ಸವಲಿಯಾ ಪ್ರಕಾರ ಮೂರು ಮಸಾಲೆಗಳು ಜೀರ್ಣಕಾರಿ ಉತ್ತೇಜಕವಾಗಿವೆ. ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿದ್ದಾಗ ಮಾತ್ರ ದೇಹವು ಆಹಾರದಿಂದ ಪೋಷಕಾಂಶ ಹೀರಿಕೊಳ್ಳಲು ಮತ್ತು ಬಳಸಲು ಸಾಧ್ಯ.

ಮುಂದೆ ಓದಿ ...
  • Share this:

    ಹೊಟ್ಟೆಯು (Stomach) ನಮ್ಮ ದೇಹದ (Body) ಬಹು ಮುಖ್ಯ ಅಂಗ (Part) ಆಗಿದೆ. ಅದರಲ್ಲಿ ಸ್ವಲ್ಪ ಸಮಸ್ಯೆಯಾದ್ರೂ (Problem) ನಮ್ಮ ಒಟ್ಟಾರೆ ಆರೋಗ್ಯ ಮತ್ತು ಜೀವನಶೈಲಿಯ (Health And Lifestyle) ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಮ್ಮ ಪ್ರಸ್ತುತ ಜೀವನಶೈಲಿಯಿಂದ ಮತ್ತು ಆಹಾರ ಪದ್ಧತಿಗೆ ಸಂಬಂಧಪಟ್ಟಿರುತ್ತದೆ. ಹೊಟ್ಟೆ ಉಬ್ಬುವುದು, ಅಜೀರ್ಣ, ಕರುಳಿನ ಉರಿಯೂತ ಮತ್ತು ನೋವು ಸಾಮಾನ್ಯ ಸಮಸ್ಯೆ ಆಗಿದೆ. ಮತ್ತು ಈ ಸಮಸ್ಯೆಗಳಿಂದ ಹೊರಬರಲು ನೀವು ಆಯುರ್ವೇದ ಪರಿಹಾರ ಹುಡುಕುತ್ತಿದ್ದರೆ ಕರುಳಿನ ಆರೋಗ್ಯಕ್ಕಾಗಿ ಆಯುರ್ವೇದಿಕ್ ಚಹಾ ಬಗ್ಗೆ ಇಲ್ಲಿ ಹೇಳಲಾಗಿದೆ. ಇದರ ನಿಯಮಿತ ಸೇವನೆಯು ನಿಮಗೆ ಅನೇಕ ಸಮಸ್ಯೆಗಳಿಂದ ಪರಿಹಾರ ಪಡೆಯಲು ಸಹಾಯ ಮಾಡುತ್ತದೆ.


    ಹೊಟ್ಟೆಯ ಸಮಸ್ಯೆಗೆ ಈ ಚಹಾ ಸಹಕಾರಿ


    ಜೀರಿಗೆ, ಕೊತ್ತಂಬರಿ ಬೀಜ ಮತ್ತು ಸೊಂಪು ಕಾಳು ತಯಾರಿಸಿದ ಚಹಾ ಸೇವನೆ ಮಾಡಿದರೆ ಜೀರ್ಣಕ್ರಿಯೆಗೆ ಹಲವು ಅದ್ಭುತ ಪ್ರಯೋಜನ ಸಿಗುತ್ತದೆ ಅಂತಾರೆ ತಜ್ಞರು. ಆಯುರ್ವೇದ ತಜ್ಞ ಡಾ.ದೀಕ್ಸಾ ಭಾವಸರ್ ಸವಲಿಯಾ ಪ್ರಕಾರ, ಮೂರು ಮಸಾಲೆಗಳು ಜೀರ್ಣಕಾರಿ ಉತ್ತೇಜಕವಾಗಿವೆ.


    ಜೀರ್ಣಾಂಗ ವ್ಯವಸ್ಥೆ ಆರೋಗ್ಯವಾಗಿದ್ದಾಗ ಮಾತ್ರ ದೇಹವು ಆಹಾರದಿಂದ ಪೋಷಕಾಂಶ ಹೀರಿಕೊಳ್ಳಲು ಮತ್ತು ಬಳಸಲು ಸಾಧ್ಯ. ಈ ಮೂರು ಆಯುರ್ವೇದ ಗಿಡಮೂಲಿಕೆಗಳ ಆರೋಗ್ಯ ಪ್ರಯೋಜನ ತಿಳಿಯೋಣ.




    ಜೀರಿಗೆ, ಕೊತ್ತಂಬರಿ ಬೀಜ ಮತ್ತು ಸೊಂಪು ಕಾಳು ಪ್ರಯೋಜನಗಳು


    ಉರಿಯೂತದಿಂದ ಪರಿಹಾರ ನೀಡುತ್ತದೆ. ಹೊಟ್ಟೆಯ ವಾಯು ಕಡಿಮೆ ಮಾಡುತ್ತದೆ. ಕರುಳಿನಲ್ಲಿನ ಸೆಳೆತ ತಡೆಯುತ್ತದೆ. ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ಹಸಿವನ್ನು ಉತ್ತೇಜಿಸುತ್ತದೆ. ವಾಕರಿಕೆ ಮತ್ತು ವಾಂತಿ ಕಡಿಮೆ ಮಾಡುತ್ತದೆ. ಮುಟ್ಟಿನ ಸೆಳೆತ ಕಡಿಮೆ ಮಾಡುತ್ತದೆ. ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ. ಉರಿಯೂತ ಕಡಿಮೆ ಮಾಡುತ್ತದೆ. ಏಕಾಗ್ರತೆ ಹೆಚ್ಚಿಸುತ್ತದೆ.


    ಜೀರ್ಣಕ್ರಿಯೆ ಮತ್ತು ಮುಟ್ಟಿನ ಅವಧಿಯ ಸೆಳೆತಕ್ಕೆ ಪರಿಹಾರ


    ಜೀರಿಗೆ


    ಜೀರಿಗೆ ಒಂದು ಮಸಾಲೆ. ಇದು ಭಕ್ಷ್ಯಗಳ ರುಚಿಯನ್ನು ಹೆಚ್ಚಿಸುತ್ತದೆ. ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತದೆ. ಜೀರಿಗೆಯನ್ನು ಆಹಾರದಲ್ಲಿ ಸೇರಿಸಿದರೆ ಆಹಾರ ಜೀರ್ಣಿಸಿಕೊಳ್ಳಲು ಸಹಕಾರಿ. ಜೀರ್ಣಕಾರಿ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಅಜೀರ್ಣ, ಗ್ಯಾಸ್, ವಾಯು ಮತ್ತು ಅತಿಸಾರ ಕಡಿಮೆ ಮಾಡುತ್ತದೆ.


    ಸೋಂಪು ಕಾಳು


    ಜೀರ್ಣಕಾರಿ ಸಮಸ್ಯೆಗೆ ಪರಿಹಾರ ನೀಡುತ್ತದೆ. ಕಾರ್ಮಿನೇಟಿವ್‌ ಅಂಶ ವಾಯು ಅಥವಾ ಅನಿಲ ರಚನೆ ತಡೆಯುತ್ತದೆ. ಹೊಟ್ಟೆ ಮತ್ತು ಕರುಳು ಸೆಳೆತ ನಿವಾರಿಸುತ್ತದೆ. ಕೆರಳಿಸುವ ಕರುಳಿನ ಸಹಲಕ್ಷಣ , ತೀವ್ರವಾದ ಹೊಟ್ಟೆ ಸಮಸ್ಯೆ ತೆಗೆದು ಹಾಕುತ್ತದೆ. ಹೊಟ್ಟೆಯ ಊತ, ಅಲ್ಸರ್, ಅತಿಸಾರ, ಹೊಟ್ಟೆ ನೋವು, ಗ್ಯಾಸ್ ಮತ್ತು ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ.


    ಕೊತ್ತಂಬರಿ ಬೀಜ


    ಕೊತ್ತಂಬರಿ ಸೊಪ್ಪನ್ನು ಜೀರ್ಣಕ್ರಿಯೆಗೆ ಬಳಸುತ್ತಾರೆ. ಪಿತ್ತರಸ ಆಮ್ಲ ಉತ್ಪಾದಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಹಕಾರಿ. ಕೊತ್ತಂಬರಿಯು ಕಾರ್ಮಿನೇಟಿವ್ ಗುಣ ಹೊಂದಿದೆ. ಇದು ಗ್ಯಾಸ್ ಸಮಸ್ಯೆ ತಡೆಯುತ್ತದೆ. ಕೊತ್ತಂಬರಿ ಸೇವನೆಯು ಸಣ್ಣ ಕರುಳಿನಲ್ಲಿರುವ ಪ್ರೋಟೀನ್‌ಗಳನ್ನು ಒಡೆಯುವಲ್ಲಿ ಒಳಗೊಂಡಿರುವ ಕಿಣ್ವ ಹೆಚ್ಚಿಸುತ್ತದೆ.


    ಇದನ್ನೂ ಓದಿ: ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿದೆ ಬೆಸ್ಟ್ ಆಹಾರಗಳು


    ಜೀರಿಗೆ, ಕೊತ್ತಂಬರಿ ಬೀಜ ಮತ್ತು ಸೋಂಪು ಚಹಾ ಮಾಡುವುದು ಹೇಗೆ?


    ನೀರು 1 ಗ್ಲಾಸ್, ಜೀರಿಗೆ 1 ಟೀಚಮಚ, ಸೋಂಪು 1 ಟೀಚಮಚ, ಕೊತ್ತಂಬರಿ 1 ಟೀಸ್ಪೂನ್ ಬೇಕು. ಪಾತ್ರೆಯಲ್ಲಿ ನೀರು ಹಾಕಿ ಅದಕ್ಕೆ ಎಲ್ಲಾ ಪದಾರ್ಥ ಹಾಕಿ. 7 ನಿಮಿಷ ಕುದಿಸಿ. ನಂತರ ಫಿಲ್ಟರ್ ಮಾಡಿ ಕುಡಿಯಿರಿ. ಈ ಚಹಾವನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮತ್ತು ಊಟದ ಒಂದು ಗಂಟೆಯ ನಂತರ ಸೇವಿಸಬೇಕು.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು