Rice And Health: ವಿವಿಧ ತಳಿಯ ಅಕ್ಕಿ ಹೇಗೆ ಆರೋಗ್ಯ ಸಮಸ್ಯೆ ನಿವಾರಿಸುತ್ತದೆ? ಯಾವ ಅಕ್ಕಿ ಸೇವನೆ ಆರೋಗ್ಯಕ್ಕೆ ಬೆಸ್ಟ್?

ಅಕ್ಕಿಯು ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಬಹಳ ಜನಪ್ರಿಯ ಮತ್ತು ಆಹಾರ ಪ್ರಧಾನ ಭಾಗವಾಗಿದೆ. ಹೆಚ್ಚಿನ ಜನರು ತಮ್ಮ ರುಚಿಗೆ ಮಾತ್ರ ಅನ್ನ ಊಟ ಮಾಡಲು ಪ್ರತಿದಿನ ಇಷ್ಟ ಪಡುತ್ತಾರೆ. ಅಕ್ಕಿಯು ನಿಮಗೆ ಆರೋಗ್ಯ ಸಂಬಂಧಿ ಅನೇಕ ಪ್ರಯೋಜನ ನೀಡುತ್ತದೆ. ಆದರೆ ನೀವು ಸರಿಯಾದ ಆಯ್ಕೆ ಮಾಡಬೇಕಷ್ಟೇ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇತ್ತೀಚಿನ ದಿನಗಳಲ್ಲಿ (Now a Days) ಅನ್ನ (Rice) ಊಟ ಮಾಡಿದರೆ ಬೊಜ್ಜು (Obesity), ಮಧುಮೇಹ (Diabetes) ಬರುತ್ತದೆ ಎಂದು ಭಾವಿಸಿ, ಹಲವರು ಅನ್ನ ಊಟ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಭಾರತೀಯ ಪ್ರಮುಖ ಆಹಾರ ಪದ್ಧತಿಯಲ್ಲಿ (Food Plan) ಅನ್ನಕ್ಕೆ ಮುಖ್ಯ ಸ್ಥಾನವಿದೆ. ಪ್ರತಿ ಮನೆಗಳಲ್ಲಿ ಜನರು ಅನ್ನ ಊಟ ಮಾಡುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಯಿಲೆ ಹೆಚ್ಚುತ್ತಿವೆ. ಜೀವನಶೈಲಿ ಬದಲಾವಣೆ ಮತ್ತು ಆಹಾರ ಪದ್ಧತಿಯೂ ಬದಲಾಗುತ್ತಿದೆ. ಸ್ವದೇಶಿ ಪಾಕ ವಿಧಾನ ಮತ್ತು ಆಹಾರ ಪದ್ಧತಿ ಹಾಗೂ ವಿದೇಶಿ ಆಹಾರ ಪದ್ಧತಿ ಮಿಶ್ರಣಗೊಂಡಿದೆ. ಜನರು ಎಲ್ಲಾ ರೀತಿಯ ಆಹಾರ ಸೇವನೆ ಮಾಡುತ್ತಾರೆ.

  ವಿವಿಧ ತಳಿಯ ಅಕ್ಕಿ ಮತ್ತು ಆರೋಗ್ಯ ಪ್ರಯೋಜನಗಳು

  ಅಕ್ಕಿಯು ಪ್ರಪಂಚದ ಹೆಚ್ಚಿನ ಭಾಗಗಳಲ್ಲಿ ಬಹಳ ಜನಪ್ರಿಯ ಮತ್ತು ಆಹಾರ ಪ್ರಧಾನ ಭಾಗವಾಗಿದೆ. ಹೆಚ್ಚಿನ ಜನರು ತಮ್ಮ ರುಚಿಗೆ ಮಾತ್ರ ಅನ್ನ ಊಟ ಮಾಡಲು ಪ್ರತಿದಿನ ಇಷ್ಟ ಪಡುತ್ತಾರೆ. ಆದರೆ ಅಕ್ಕಿಯು ಫೋಲಿಕ್ ಆಮ್ಲ, ಬಿ ಜೀವಸತ್ವ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸೆಲೆನಿಯಮ್, ಫೈಬರ್, ಕಬ್ಬಿಣ ಮತ್ತು ಸತು ಸೇರಿದಂತೆ 15 ಕ್ಕೂ ಹೆಚ್ಚು ಅಗತ್ಯ ಜೀವಸತ್ವ ಮತ್ತು ಖನಿಜ ಒದಗಿಸುತ್ತದೆ.

  ಅಕ್ಕಿಯು ನಿಮಗೆ ಆರೋಗ್ಯ ಸಂಬಂಧಿ ಅನೇಕ ಪ್ರಯೋಜನ ನೀಡುತ್ತದೆ. ಆದರೆ ನೀವು ಸರಿಯಾದ ಆಯ್ಕೆ ಮಾಡಬೇಕಷ್ಟೇ. ಕೆಲವರಿಗೆ ಅನ್ನ ತಿನ್ನಲು ನಿಷಿದ್ಧವಿದೆ. ಇದರಲ್ಲಿರುವ ಕ್ಯಾಲೋರಿ ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆ ಹೆಚ್ಚಿಸಬಹುದು ಎಂದು ನಂಬಲಾಗಿದೆ.

  ಇದನ್ನೂ ಓದಿ: ನಿಂಬೆ ಅಷ್ಟೇ ಅಲ್ಲ ಅದರ ಎಲೆಗಳೂ ಸಹ ಹಲವು ಆರೋಗ್ಯ ಪ್ರಯೋಜನ ನೀಡುತ್ತವೆ! ಹೇಗೆ ಎಂದು ನೋಡಿ

  ಆದರೆ ಆಂಟಿಡಯಾಬಿಟಿಕ್ ಗುಣ ಹೊಂದಿರುವ ಅನೇಕ ಭತ್ತದ ತಳಿಗಳಿವೆ. ಇಲ್ಲಿ ನೀವು ಅಕ್ಕಿಯ ಕೆಲವು ತಳಿಗಳ ಬಗ್ಗೆ ತಿಳಿಯಬಹುದು. ಮತ್ತು ನಿಮ್ಮ ಅವಶ್ಯಕತೆ್ಎ ತಕ್ಕಂತೆ ಆಯಾ ಅಕ್ಕಿಯ ಅನ್ನ ಸೇವನೆ ಮಾಡಬಹುದು.

  ಬಿಳಿ ಅಕ್ಕಿ

  ಅಕ್ಕಿಯ ಎಲ್ಲಾ ವಿಧಗಳಲ್ಲಿ ಅತ್ಯಂತ ಸಾಮಾನ್ಯವಾದ ತಳಿ ಬಿಳಿ ಅಕ್ಕಿ. ನೀವು ಅದನ್ನು ಯಾವುದೇ ಕಿರಾಣಿ ಅಂಗಡಿಯಲ್ಲಿ ಸುಲಭವಾಗಿ ಪಡೆಯಬಹುದು. ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್ ನ್ಯಾಶನಲ್ ಪ್ರಕಾರ, ಬಿಳಿ ಅಕ್ಕಿಯು ಪ್ರತ್ಯೇಕವಾಗಿ ಕಬ್ಬಿಣ, ಥಯಾಮಿನ್ ವಿಟಮಿನ್ B1, ನಿಯಾಸಿನ್ ಮತ್ತು ಫೋಲಿಕ್ ಆಮ್ಲ ಹೊಂದಿದೆ. ಇದು ಪ್ರತಿ ಕಪ್‌ನಲ್ಲಿ ಸುಮಾರು 160 ಕ್ಯಾಲೋರಿ ಹೊಂದಿದೆ.

  ಬ್ರೌನ್ ರೈಸ್

  ಬ್ರೌನ್ ರೈಸ್ ಜನಪ್ರಿಯ ಧಾನ್ಯಗಳಲ್ಲಿ ಒಂದು. ಕಂದು ಅಕ್ಕಿಯು ಬಿಳಿ ಅಕ್ಕಿಗಿಂತ ಒಂದೂವರೆ ಕಪ್ ಅಕ್ಕಿಯಲ್ಲಿ 1.5 ಗ್ರಾಂ ಹೆಚ್ಚು ಫೈಬರ್ ಇದೆ. ಕಂದು ಅಕ್ಕಿಯಲ್ಲಿರುವ ಈ ಹೆಚ್ಚುವರಿ ಗ್ರಾಂ ಫೈಬರ್ ಹೆಚ್ಚಾಗಿ ಕರಗುವುದಿಲ್ಲ. ಇದು ಸೌಮ್ಯ ವಿರೇಚಕವಾಗಿ ಕಾರ್ಯ ನಿರ್ವಹಿಸುವ ಮೂಲಕ ಜೀರ್ಣಕಾರಿ ಆರೋಗ್ಯಕ್ಕೆ ಸಹಕಾರಿ.

  ಕಪ್ಪು ಅಕ್ಕಿ

  ಕಪ್ಪು ಅಕ್ಕಿಯನ್ನು ನೇರಳೆ ಅಕ್ಕಿ ಎಂದೂ ಕರೆಯುತ್ತಾರೆ. ಈ ಅಕ್ಕಿ ವರ್ಷಗಳಿಂದ ಪೂರ್ವ ಸಂಸ್ಕೃತಿಗಳಲ್ಲಿ ಜನಪ್ರಿಯವಾಗಿದೆ. ಕಪ್ಪು ಅಕ್ಕಿ ಒಣಗಿದಾಗ ಕಪ್ಪಾಗಿ ಕಾಣುತ್ತದೆ. ಆದರೆ ಬೇಯಿಸಿದ ನಂತರ ಕಡು ನೇರಳೆ ಬಣ್ಣಕ್ಕೆ ತಿರುಗುತ್ತದೆ. ಇದರಲ್ಲಿರುವ ಆಂಥೋಸಯಾನಿನ್‌ಗಳು, ಒಂದು ರೀತಿಯ ಫ್ಲೇವನಾಯ್ಡ್ ವರ್ಣದ್ರವ್ಯ, ಹೃದ್ರೋಗ, ಕ್ಯಾನ್ಸರ್ ಮತ್ತು ನ್ಯೂರೋ ಡಿಜೆನೆರೇಟಿವ್ ಕಾಯಿಲೆಗಳ ವಿರುದ್ಧ ರಕ್ಷಣೆ ನೀಡುತ್ತದೆ.

  ಕೆಂಪು ಅಕ್ಕಿ

  ಕೆಂಪು ಅಕ್ಕಿಯು ಜೇನು-ಬಣ್ಣದ ಧಾನ್ಯ. ಸ್ವಲ್ಪ ಉಪ್ಪು ಮತ್ತು ಕಾಯಿ ರುಚಿ ಹೊಂದಿದೆ. ಕೆಲ ಸಂಶೋಧನೆ ಪ್ರಕಾರ, ಕೆಂಪು ಅಕ್ಕಿ ಲ್ಯುಕೇಮಿಯಾ, ಗರ್ಭಕಂಠದ ಮತ್ತು ಕೊಲೊನ್ ಕ್ಯಾನ್ಸರ್ ಕೋಶಗಳ ಮೇಲೆ ಧನಾತ್ಮಕ ಪ್ರತಿಬಂಧಕ ಪರಿಣಾಮ ಬೀರುತ್ತದೆ.

  ಇದನ್ನೂ ಓದಿ: ಗರ್ಭಧಾರಣೆಯ ನಂತರ ಹೊಟ್ಟೆ ಕೊಬ್ಬನ್ನು ಕಡಿಮೆ ಮಾಡುವುದು ಹೇಗೆ?

  ಜರ್ನಲ್ ಆಫ್ ಅಗ್ರಿಕಲ್ಚರಲ್ ಅಂಡ್ ಫುಡ್ ಕೆಮಿಸ್ಟ್ರಿ ಅಧ್ಯಯನದ ಪ್ರಕಾರ, ಕೆಂಪು ಅಕ್ಕಿ ಮಧುಮೇಹ ವಿರೋಧಿ ಪರಿಣಾಮ ಹೊಂದಿದೆ. ವಿವಿಧ ವಿಧದ ಅಕ್ಕಿಗಳ ವಿಶ್ಲೇಷಣೆ ಕೆಂಪು ಅಕ್ಕಿಯು ವಿಟಮಿನ್ ಇ ಯ ಒಂದು ರೂಪವಾದ ಟೊಕೊಟ್ರಿಯೊನಾಲ್‌ ಹೊಂದಿದೆ. ನರರೋಗ, ಕ್ಯಾನ್ಸರ್ ವಿರೋಧಿ ಚಟುವಟಿಕೆ ಮತ್ತು ಕೊಲೆಸ್ಟ್ರಾಲ್-ಕಡಿಮೆ ಮಾಡುವ ಗುಣ ಹೊಂದಿದೆ.
  Published by:renukadariyannavar
  First published: