Coffee: ಚಳಿಗಾಲದಲ್ಲಿ ಸದಾ ಉಲ್ಲಾಸದಿಂದ ಇರಲು ಸೇವಿಸಿ ಈ 5 ಬಗೆಯ ಕಾಫಿ

Coffee Types : ಚಳಿಗಾಲದಲ್ಲಿ ನಾವು ನಿಯಮಿತವಾಗಿ ಕಾಫಿ ಸೇವನೆ ಮಾಡುವುದರಿಂದ ನಮ್ಮ ದೇಹ ಬೆಚ್ಚಗೆ ಇರಲು ಸಹಾಯವಾಗುತ್ತೆ.. ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ನಮ್ಮ ಚರ್ಮವನ್ನ ರಕ್ಷಣೆ ಮಾಡುವ ಕೆಫೀನ್ ಅಂಶ ಕಾಫಿಯಲ್ಲಿ ಇದೆ. ಜೊತೆಗೆ B2 & B5 ವಿಟಮಿನ್ ಗಳು ಕಾಫಿಯಲ್ಲಿವೆ

ಕಾಫಿ

ಕಾಫಿ

 • Share this:
  A lot can happen over coffee ಅನ್ನೋ ಮಾತಿನಂತೆ ಒಂದು ಕಪ್ ಕಾಫಿಯಿಂದ(Cup of Coffee) ಬದುಕಲ್ಲಿ(Life) ಸಾಕಷ್ಟು ಬದಲಾವಣೆಗಳು ಆಗುತ್ತವೆ..ಕಾಫಿ ಬೇಸರದ ಕಾಲಿನ ಆಪದ‌್ಬಾಂಧವ.. ಮುಂಜಾನೆಯ(Morning) ಚಳಿಯನ್ನ ಬೆಚ್ಚಗೆ ಆರಂಭಿಸಲು ಇರುವ ಸ್ನೇಹಿತ.. ಇಳಿ ಸಂಜೆಯ(Evening) ಸಮಯದಲ್ಲಿ ಬೇಸರ ಕಳೆಯಲು ಇರುವ ಜೊತೆಗಾರ..ಗಟ್ಟಿ ಹಾಲು ಬಳಸಿ ತಕ್ಕಂತೆ ಸಕ್ಕರೆ(Sugar) ಹಾಕಿ ತಯಾರಿಸೋ ಕಾಫಿ ಎಷ್ಟೇ ಬೇಸರದಲ್ಲಿ ಇರೋರ ಮನಸ್ಸನ್ನ ಕ್ಷಣ ಮಾತ್ರದಲ್ಲಿಯೇ ತಿಳಿಗೊಳಿಸಿ ಬಿಡುತ್ತೆ,.. ಇಂಥಹ ಕಾಫಿ ಕೇವಲ ಬೇಸರ ಕಾಲದ ಗೆಳೆಯ ಮಾತ್ರವಲ್ಲ ಆರೋಗ್ಯದ ರಕ್ಷಕ ಕೂಡ .ಒಂದು ಕಪ್ ಕಾಫಿ ಕುಡಿದರೆ ಒಂದು ಬಗೆಯ ಆಹ್ಲಾದ ಹಾಗೂ ನಿರಾಳತೆಯ ಭಾವನೆ ಮೂಡುವುದು. ಕಾಫಿ ಯಕೃತ್ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ಕಾಫಿಯ ಹಳೆಯ ರುಚಿಯಿಂದ ಬೇಸತ್ತವರು ಇದೀಗ ಹೊಸ ಬಗೆಯ ಕಾಫಿಯನ್ನು ಕುಡಿಯಬಹುದು. ಉತ್ತಮ ಪರಿಮಳ ಹಾಗೂ ರುಚಿಯು ದೊರೆಯುವುದು. ಈ ಕಾಫಿಗೆ ನಿಮಗೆ ಇಷ್ಟವಾಗುವ ಕ್ಯಾರಮೆಲ್, ಹ್ಯಾಝೆಲ್ಟ್ ಅಥವಾ ವೆನಿಲ್ಲಾದಂತಹ ಶ್ರೀಮಂತ ಪರಿಮಳ ಹಾಗೂ ಕೆನೆಯನ್ನು ಸೇರಿಸಿಕೊಳ್ಳಬಹುದು.

  ಚಳಿಗಾಲದಲ್ಲಿ ಆರೋಗ್ಯದ ರಕ್ಷಕ ಕಾಫಿ

  ಚಳಿಗಾಲದಲ್ಲಿ ನಾವು ನಿಯಮಿತವಾಗಿ ಕಾಫಿ ಸೇವನೆ ಮಾಡುವುದರಿಂದ ನಮ್ಮ ದೇಹ ಬೆಚ್ಚಗೆ ಇರಲು ಸಹಾಯವಾಗುತ್ತೆ.. ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ನಮ್ಮ ಚರ್ಮವನ್ನ ರಕ್ಷಣೆ ಮಾಡುವ ಕೆಫೀನ್ ಅಂಶ ಕಾಫಿಯಲ್ಲಿ ಇದೆ. ಜೊತೆಗೆ B2 & B5 ವಿಟಮಿನ್ ಗಳು ಕಾಫಿಯಲ್ಲಿವೆ .. ಇದು ನಮ್ಮ ದೇಹವನ್ನ ಶೀತ,ಕೆಮ್ಮು ಹಾಗೂ ಸೀನಿನಂತಹ ಸಮಸ್ಯೆಗಳಿಂದ ರಕ್ಷಣೆ ಮಾಡುತ್ತದೆ.. ಇನ್ನೂ ಇಷ್ಟೆಲ್ಲ ಆರೋಗ್ಯಕ್ಕೆ ಪ್ರಯೋಜನವಾಗಿರುವ ಕಾಫಿಯು
  ಇಂತಹ ಕಾಫಿಯು ನಾನಾ ರೀತಿಯಲ್ಲಿ, ನಾನಾ ಬಗೆಯಲ್ಲಿ ಇದ್ದು, ಅವು ಕಾಫಿ ಪ್ರಿಯರ ಮನ ಗೆದ್ದಿವೆ.. ಹಾಗಿದ್ರೆ ಆ ಕಾಫಿಗಳು ಯಾವು ಅಂತ ತಿಳ್ಕೋಬೇಕಾ ಹಾಗಿದ್ರೆ ಈ ಸ್ಟೋರಿ ಓದಿ

  ಇದನ್ನೂ ಓದಿ :ಕಾಫಿ ಅಥವಾ ಟೀ ಜೊತೆಗೆ ಬಿಸ್ಕೆಟ್ ಸೇವನೆ ಮಾಡುವ ಮುನ್ನ ಎಚ್ಚರ...

  ೧)ಕ್ಯಾಪೆಚಿನೋ :ನೊರೆ ಭರಿತ ಹಾಲು, ಹಾಗೂ ಚೆನ್ನಾಗಿ ಉರಿದ ಕಾಫಿ ಪುಡಿ ಡಿಕಾಕ್ಷನ್ ನಿಂದ ತಯಾರಿಸೋ ಈ ಕ್ಯಾಪೆಚಿನೋ ಕಾಫಿ, ಎಲ್ಲಾ ಕಾಫಿಡೇಗಳಲ್ಲಿ ಕಾಫಿ ಪ್ರಿಯರ ಹಾಟ್ ಫೆವರೀಟ್.. ಜೊತೆಗೆ ಚಳಿಗಾಲದಲ್ಲಿ ಮನೆಯಲ್ಲಿ ಅತಿ ಸುಲುಭವಾಗಿ ತಯಾರಿಸಿಕೊಂಡು ಕುಡಿಯಬಹುದಾಗಿದೆ..

  ೨)ಫಿಲ್ಟರ್ ಕಾಫಿ : ಫಿಲ್ಟರ್ ಕಾಫಿ ಹೆಚ್ಚು ಗಟ್ಟಿಯಾಗಿ ಇರುವುದಿಲ್ಲ.. ಇದರಲ್ಲಿನ ಹಾಲು, ನಮ್ಮ ನಾಲಿಗೆಯ ಮೇಲೆ ಹಾಗೆ ಹಸಿಯಾಗಿ ಸಿಗುವುದಿಲ್ಲ ..ಬದಲಿಗೆ ಚೆನ್ನಾಗಿ ಹುರಿದ ಕಾಫಿ ಬೀಜವನ್ನ ಸೂಕ್ತ ಪ್ರಮಾಣದಲ್ಲಿ ಡಿಕಾಕ್ಷನ್ ಮಾಡಿಕೊಂಡು, ಹಾಲಿಗೆ ತಕ್ಕಂತೆ ಬೇರಿಸಿ ಕೊಟ್ರೆ, ಇದನ್ನ ಕೂಡಿದವರು ಎಂತಹ ಮನಸ್ಥಿತಿಯಲ್ಲಿ ಇದ್ರೂ, ಎಷ್ಟೇ ಚಳಿಯಿದ್ರು ಅದರಿಂದ ಹೊರ ಬರಲೇಬೇಕು

  ೩)ಮಸಾಲೆ ಕಾಫಿ : ಹಾಲು, ಸಕ್ಕರೆ. ಕಾಫಿ ಪುಡಿಯ ಜೊತೆಗೆ ತಯಾರಿಸುವ ಕಾಫಿಗೆ ಶುಂಠಿ ಹಾಗೂ ಏಲಕ್ಕಿಯನ್ನ ಸೇರಿಸಿ ಸುಲುಭವಾಗಿ ಮಸಾಲೆ ಕಾಫಿ ಸೇರಿಸಬಹುದು.. ಏಲಕ್ಕಿಯನ್ನ ಕಾಫಿ ಜೊತೆಗೆ ಸೇರಿಸಿ ಕುಡಿಯುವುದರಿಂದ ದೇಹದಲ್ಲಿ ಉರಿಯೂ ಕಡಿಮೆಯಾಗುತ್ತದೆ. ಜೊತೆಗೆ ರಕ್ತದ ಒತ್ತಡ ಕೂಡ ನಿಯಂತ್ರಣಕ್ಕೆ ಬರುತ್ತದೆ\

  ಇದನ್ನೂ ಓದಿ :ನೀವು ಬ್ಲ್ಯಾಕ್ ಕಾಫಿ ಹೆಚ್ಚು ಕುಡಿತೀರಾ? ಹಾಗಾದ್ರೆ ಇದನ್ನು ಓದಲೇಬೇಕು

  ೪)ಇನ್ಸ್ಟೆಂಟ್ ಕಾಫಿ : ಹಾಲು&ನೀರು ಹಾಗೂ ಸಕ್ಕರೆಯನ್ನ ಚೆನ್ನಾಗಿ ಕುದಿಸಿ ಅಂಗಡಿಯಿಂದ ತಂದ ಬ್ರೂ ಅಥವಾ ನೆಸ್ ಕೆಫೆ ಕಾಫೆ ಪುಡಿ ಬೆರೆಸಿ ಇನ್ಸ್ಟೆಂಟ್ ಕಾಫಿ ಕಾಫಿ ತಯಾರು ಮಾಡಬಹುದು

  ೫) ಐರಿಷ್ ಕಾಫಿ :ಐರಿಶ್ ಕಾಫಿ ಕ್ಲಾಸಿಕ್ ಐರಿಶ್ ಕಾಫಿಯನ್ನು ಕೇವಲ ನಾಲ್ಕು ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ: ಬಿಸಿ ಕಾಫಿ, ಐರಿಶ್ ವಿಸ್ಕಿ, ಸಕ್ಕರೆ ಮತ್ತು ಹಾಲಿನ ಕೆನೆ. ಇದು ಸರಳ ಮತ್ತು ಆನಂದದಾಯಕವಾಗಿದೆ.
  Published by:ranjumbkgowda1 ranjumbkgowda1
  First published: