• Home
  • »
  • News
  • »
  • lifestyle
  • »
  • Custard Apple Benefits: ವಿಭಿನ್ನ ರುಚಿ ಹಾಗೂ ಆರೋಗ್ಯಕರ ಸೀತಾಫಲ ಹಣ್ಣು ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?

Custard Apple Benefits: ವಿಭಿನ್ನ ರುಚಿ ಹಾಗೂ ಆರೋಗ್ಯಕರ ಸೀತಾಫಲ ಹಣ್ಣು ಯಾವೆಲ್ಲಾ ಆರೋಗ್ಯ ಪ್ರಯೋಜನ ನೀಡುತ್ತದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಾಲೋಚಿತ ಹಣ್ಣು ಸೀತಾಫಲ ವಿಭಿನ್ನ ರುಚಿ ಹೊಂದಿರುತ್ತದೆ. ಸೀತಾಫಲ ಹಣ್ಣು ಆರೋಗ್ಯಕ್ಕೆ ತುಂಬಾ ವಿಶೇಷ ಮತ್ತು ಅದ್ಭುತ ಲಾಭ ನೀಡುತ್ತದೆ. ಸೀತಾಫಲ ಹಣ್ಣಿನ ಮಾಧುರ್ಯವು ಇತರೆ ಹಣ್ಣುಗಳಿಗಿಂತ ವಿಭಿನ್ನವಾಗಿದೆ. ಈ ರುಚಿಕರವಾದ ಹಣ್ಣು ಮಧುಮೇಹ ನಿಯಂತ್ರಿಸುತ್ತದೆ. ಜೊತೆಗೆ ಅಸ್ತಮಾ ಸಮಸ್ಯೆ ನಿವಾರಣೆಗೆ ಪರಿಹಾರ ನೀಡುತ್ತದೆ.

ಮುಂದೆ ಓದಿ ...
  • Share this:

    ಆರೋಗ್ಯ (Health) ಕಾಪಾಡಿಕೊಳ್ಳಲು ಜನರು (Body) ಆಹಾರದಲ್ಲಿ (Food) ಹಲವು ತರಹದ ತರಕಾರಿ (Vegetables) ಮತ್ತು ಹಣ್ಣುಗಳನ್ನು (Fruits) ಸೇರಿಸಿ ಸೇವನೆ ಮಾಡುತ್ತಾರೆ. ಹಾಗೆಯೇ ಸದೃಢ ಆರೋಗ್ಯಕ್ಕೆ ನಿಮ್ಮ ಆಹಾರದಲ್ಲಿ ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇರಿಸುವುದು ಬಹಳ ಮುಖ್ಯ. ಇವುಗಳಲ್ಲಿ ನೀವು ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿದರೆ ಹೆಚ್ಚಿನ ಆರೋಗ್ಯಕ್ಕೆ ಸಮಸ್ಯೆ (Problem) ತೆಗೆದು ಹಾಕಲು ಇದು ಪ್ರಯೋಜನ ನೀಡುತ್ತದೆ ಎಂದು ಹೇಳಲಾಗಿದೆ. ಬದಲಾಗುತ್ತಿರುವ ಋತುಮಾನಗಳಿಗೆ ಹೊಂದಿಕೊಳ್ಳಲು ಕಾಲೋಚಿತ ಹಣ್ಣುಗಳು ಮತ್ತು ತರಕಾರಿಗಳು ಸಹಾಯ ಮಾಡುತ್ತವೆ. ಕಾಲೋಚಿತ ಹಣ್ಣು ಮತ್ತು ಹಲವು ಆರೋಗ್ಯ ಲಾಭ ನೀಡುವ ಅಂತಹ ಒಂದು ಹಣ್ಣು ಸೀತಾಫಲ.


    ಕಾಲೋಚಿತ ಹಣ್ಣು ಸೀತಾಫಲ ವಿಭಿನ್ನ ರುಚಿ  ಹೊಂದಿರುತ್ತದೆ. ಸೀತಾಫಲ ಹಣ್ಣು ಆರೋಗ್ಯಕ್ಕೆ ತುಂಬಾ ವಿಶೇಷ ಮತ್ತು ಅದ್ಭುತ ಲಾಭ ನೀಡುತ್ತದೆ. ಸೀತಾಫಲ ಹಣ್ಣಿನ ಮಾಧುರ್ಯವು ಇತರೆ ಹಣ್ಣುಗಳಿಗಿಂತ ವಿಭಿನ್ನವಾಗಿದೆ. ಈ ರುಚಿಕರವಾದ ಹಣ್ಣು ಮಧುಮೇಹ ನಿಯಂತ್ರಿಸುತ್ತದೆ. ಜೊತೆಗೆ ಅಸ್ತಮಾ ಸಮಸ್ಯೆ ನಿವಾರಣೆಗೆ ಪರಿಹಾರ ನೀಡುತ್ತದೆ. ಸೀತಾಫಲ ಹಣ್ಣಿನ ಬಗ್ಗೆ ತಜ್ಞರು ಯಾವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಇಲ್ಲಿ ನೋಡೋಣ.


    ಕಾಲೋಚಿತ ಹಣ್ಣು ಸೀತಾಫಲ


    ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ವಿಭಾಗದ ಮುಖ್ಯಸ್ಥರಾಗಿರುವ ಡಾ. ಎಲಿನ್ ಕ್ಯಾಂಡಿ, ಸರ್ ಎಚ್.ಎನ್. ಅವರು ಸೀತಾಫಲ ಹಣ್ಣನ್ನು ಗುಡ್ ಮೂಡ್ ಎಂದೂ ಕರೆಯುತ್ತಾರೆ. ಈ ಋತುಮಾನದ ಹಣ್ಣಿನಲ್ಲಿ ಫೈಬರ್, ವಿಟಮಿನ್-ಬಿ6, ಆ್ಯಂಟಿ ಡಯಾಬಿಟಿಕ್ ಮತ್ತು ಆ್ಯಂಟಿ ಬಯೋಟಿಕ್ ಗುಣಗಳು ಸಮೃದ್ಧವಾಗಿವೆ.


    ಇದನ್ನೂ ಓದಿ: ಮಹಿಳೆಯರ ಆರೋಗ್ಯಕ್ಕೆ ಸಮಸ್ಯೆಯಂತೆ ಈ ಮಧ್ಯಂತರ ಉಪವಾಸ


    ಡಾ.ಕ್ಯಾಂಡಿ ಹೇಳುವ ಪ್ರಕಾರ, ಮಧುಮೇಹ ರೋಗಿಗಳು ಸೀತಾಫಲ ಸೇವಿಸುವುದು ತುಂಬಾ ಪ್ರಯೋಜನಕಾರಿ ಆಗಿದೆ. ಏಕೆಂದರೆ ಇದರಲ್ಲಿ ಮಧುಮೇಹ ನಿವಾರಕ ಗುಣವಿದೆ. ಸೀತಾಫಲ ರಕ್ತದ ಗ್ಲೂಕೋಸ್ ಮಟ್ಟ ಸ್ಥಿರವಾಗಿರಿಸುತ್ತದೆ.


    ಇದರ ಜೊತೆಗೆ ಮಧುಮೇಹಕ್ಕೆ ಕಾರಣವಾದ ವಿವಿಧ ಅಪಾಯ ತಡೆಗಟ್ಟುವಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸೀತಾಫಲ ಮಧುಮೇಹ ಲಕ್ಷಣಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ಆದರೆ ಇದು ಮಧುಮೇಹಕ್ಕೆ ಚಿಕಿತ್ಸೆ ಅಲ್ಲ. ಉತ್ತಮ ಚಿಕಿತ್ಸೆಗಾಗಿ ವೈದ್ಯರ ಸಲಹೆ ಅಗತ್ಯ ಎಂದು ಹೇಳಿದ್ದಾರೆ.


    ತೂಕ ಹೆಚ್ಚಿಸಲು ಸಹಕಾರಿ ಸೀತಾಫಲ


    ಕಡಿಮೆ ತೂಕದಿಂದ ನೀವು ತೊಂದರೆ ಅನುಭವಿಸುತ್ತಿದ್ದರೆ ಸಿತಾಫಲ ಹಣ್ಣು ನಿಮಗೆ ಸಹಾಯ ಮಾಡುತ್ತದೆ. ವಾಸ್ತವದಲ್ಲಿ ಕಡಿಮೆ ತೂಕಕ್ಕೆ ಪ್ರಮುಖ ಕಾರಣ ಅಂದ್ರೆ ದೇಹವು ಅಗತ್ಯಕ್ಕಿಂತ ಹೆಚ್ಚಿನ ಶಕ್ತಿ ವ್ಯಯಿಸುತ್ತದೆ. ಸೀತಾಫಲ ಹಣ್ಣನ್ನು ಶಕ್ತಿಯ ಉತ್ತಮ ಮೂಲವೆಂದು ಹೇಳಲಾಗಿದೆ. ಇದು ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.


    ಉರಿಯೂತ ನಿವಾರಕ ಗುಣ ಹೊಂದಿದೆ ಸೀತಾಫಲ ಅಸ್ತಮಾ ಸಮಸ್ಯೆ ನಿವಾರಿಸುತ್ತದೆ


    ಉಬ್ಬಸ, ಶ್ವಾಸಕೋಶದ ಶ್ವಾಸನಾಳದಲ್ಲಿ ಉರಿಯೂತ ಸಮಸ್ಯೆ ಉಂಟಾದಾಗ ಅಸ್ತಮಾ ಸಮಸ್ಯೆ ಉಂಟಾಗುತ್ತದೆ. ಅಂತಹ ವೇಳೆ ಸೀತಾಫಲದ ಕಂಡು ಬರುವ ಉರಿಯೂತದ ಗುಣಲಕ್ಷಣಗಳು ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡುತ್ತದೆ.


    ವೈಜ್ಞಾನಿಕ ಸಂಶೋಧನೆಯ ಪ್ರಕಾರ, ಉರಿಯೂತದ ಕ್ರಿಯೆಯು ಆಸ್ತಮಾದ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸೀತಾಫಲ ಸೇವನೆಯು ಆಸ್ತಮಾ ನಿವಾರಣೆಗೆ ಪ್ರಯೋಜನಕಾರಿ ಆಗಿದೆ.


    ಹೃದಯಾಘಾತ ಅಪಾಯ ಕಡಿಮೆ ಮಾಡುತ್ತದೆ


    ಸೀತಾಫಲ್ ಅನ್ನು ವಿಟಮಿನ್-ಬಿ6 ನ ಉತ್ತಮ ಮೂಲವಾಗಿದೆ. ಇದು ವಿಟಮಿನ್-ಬಿ6 ಸೇವನೆಯು ಹೃದ್ರೋಗದ ಅಪಾಯ ಗಣನೀಯವಾಗಿ ಕಡಿಮೆ ಮಾಡುತ್ತದೆ.


    ಆರೋಗ್ಯಕರ ಜೀರ್ಣಕ್ರಿಯೆಗೆ ಸಹಕಾರಿ


    ಜೀರ್ಣಕ್ರಿಯೆ ಸುಧಾರಿಸಲು ಸೀತಾಫಲ ಪ್ರಯೋಜನಕಾರಿ ಆಗಿದೆ. ಆರೋಗ್ಯಕರ ಜೀರ್ಣಕ್ರಿಯೆಗೆ ಫೈಬರ್ ಅಗತ್ಯವಿದೆ. ಸೀತಾಫಲ ಬಹಳಷ್ಟು ಫೈಬರ್ ಅನ್ನು ಹೊಂದಿದೆ. ಇದು ಜೀರ್ಣಕ್ರಿಯೆ ಸುಧಾರಿಸುತ್ತದೆ. ಹಾಗೂ ಮಲಬದ್ಧತೆ ಸಮಸ್ಯೆ ನಿವಾರಿಸುತ್ತದೆ.


    ಇದನ್ನೂ ಓದಿ: ಮಧುಮೇಹ ನಿಯಂತ್ರಣಕ್ಕೆ ಈ ಒಂದು ಮೂಲಿಕೆ ಪರಿಣಾಮಕಾರಿ!


    ರಕ್ತದೊತ್ತಡ ನಿಯಂತ್ರಿಸುತ್ತದೆ


    ಸೀತಾಫಲದಲ್ಲಿ ಕೆಲವು ಪ್ರಮಾಣದ ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ಕೂಡ ಇದೆ. ಒಬ್ಬ ವ್ಯಕ್ತಿಯು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ, ಸೀತಾಫಲದಲ್ಲಿರುವ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಸೇವನೆ ನಿಯಂತ್ರಿಸಬಹುದು. ರೋಗಗಳ ಅಪಾಯ ಕಡಿಮೆ ಮಾಡುತ್ತದೆ.

    Published by:renukadariyannavar
    First published: