Navarathri Diet: ನವರಾತ್ರಿ ಉಪವಾಸದ ವೇಳೆ ಆಹಾರದಲ್ಲಿ ಪ್ರೋಟೀನ್ ಇರುವಂತೆ ನೋಡಿಕೊಳ್ಳುವುದು ಹೇಗೆ?

Health Tips in Kannada: ಉಪವಾಸ ಮಾಡುವಾಗ ಸಾಕಷ್ಟು ಪ್ರೋಟೀನ್ ಸಮೃದ್ಧವಾಗಿರುವುದನ್ನು ಸೇವಿಸುವುದು ಹೇಗೆ ಎಂಬ ಯೋಚನೆಗೆ ಪೌಷ್ಟಿಕತಜ್ಞೆ ನಮಾಮಿ ಅಗರ್ವಾಲ್ (Protein Expert Namami Agarwal) ಸಲಹೆ ನೀಡಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನವರಾತ್ರಿ ಭಾರತದ ಅತ್ಯಂತ ವಿಶೇಷ ಮತ್ತು ವ್ಯಾಪಕವಾಗಿ ಆಚರಿಸುವ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ದೇಶದ ವಿವಿಧ ಭಾಗಗಳಲ್ಲಿ ಅತ್ಯಂತ ಉತ್ಸಾಹದಿಂದ ಮತ್ತು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನವರಾತ್ರಿಯ 9 ದಿನಗಳಲ್ಲಿ ಅನೇಕ ಜನರು ಉಪವಾಸ ಮಾಡುತ್ತಾರೆ. ಉಪವಾಸ ಮಾಡುವಾಗ ಸಾಕಷ್ಟು ಮತ್ತು ಸರಿಯಾದ ಆಹಾರವನ್ನು ಸೇವಿಸುವುದು ನಿರ್ಣಾಯಕವಾಗಿದ್ದು ಅದು ನಿಮ್ಮನ್ನು ಆರೋಗ್ಯಯುತವಾಗಿ ಮತ್ತು ಶಕ್ತಿಯುತವಾಗಿರಿಸುತ್ತದೆ. ಪ್ರೋಟೀನ್ ಒಂದು ಅತ್ಯಂತ ಮ್ಯಾಕ್ರೋನ್ಯೂಟ್ರಿಯಂಟ್ ಒಂದಾಗಿದ್ದು, ನಿಮ್ಮ ದೈನಂದಿನ ಆಹಾರದ ಭಾಗವಾಗಿರಬೇಕಾಗುತ್ತದೆ. ಉಪವಾಸ ಮಾಡುವಾಗ ಸಾಕಷ್ಟು ಪ್ರೋಟೀನ್ ಸಮೃದ್ಧವಾಗಿರುವುದನ್ನು ಸೇವಿಸುವುದು ಹೇಗೆ ಎಂಬ ಯೋಚನೆಗೆ ಪೌಷ್ಟಿಕತಜ್ಞೆ ನಮಾಮಿ ಅಗರ್ವಾಲ್ (Protein Expert Namami Agarwal) ಸಲಹೆ ನೀಡಿದ್ದಾರೆ.

    ಹಬ್ಬದ ಸಮಯದಲ್ಲಿ ಪ್ರೋಟೀನ್ ಭರಿತ ಆಹಾರವನ್ನು ಸೇವಿಸಲು ನಿಮಗೆ ಸಹಾಯ ಮಾಡಲು ಅವರು ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. Instagram ವೀಡಿಯೊದಲ್ಲಿ, ನಿಮ್ಮ ನವರಾತ್ರಿಯ ಉಪವಾಸದ ಆಹಾರದಲ್ಲಿ ನೀವು ಸೇವಿಸಬಹುದಾದ ಕೆಲವು ಪ್ರೋಟೀನ್ ಭರಿತ ಆಹಾರ ಪದಾರ್ಥಗಳನ್ನು ಸೂಚಿಸಿದ್ದಾರೆ.

    Navarathri 2021: ಉಪವಾಸ ಮಾಡುವಾಗ ಈ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಬಹುದು. ಪ್ರೋಟೀನ್ ಭರಿತ ಆಹಾರದ ಪಟ್ಟಿ ಇಲ್ಲಿದೆ.

    1) ಪನೀರ್ (Panner)
    2) ಕಾಟೇಜ್ ಚೀಸ್ (Cottage Cheese)
    3) ಹಂಗ್ ಮೊಸರು (ಮೊಸರಿನಲ್ಲಿ ನೀರನ್ನು ತೆಗೆದುಹಾಕಿರಬೇಕು) (Hung Curd)
    4) ಮೊಸರು (Curd)
    5) ಹಾಲು (Milk)
    6) ನಟ್ಸ್ ಮತ್ತು ಬೀಜಗಳು (Nuts)
    7) ಕುಟ್ಟು ಹಿಟ್ಟ್ಟು (ಇದನ್ನು"ಹುರುಳಿ ಹಿಟ್ಟು" ಎಂದೂ ಕರೆಯುತ್ತಾರೆ)
    8) ಸಿಂಘರ ಹಿಟ್ಟು
    9) ಸಮಕ್ ಅಕ್ಕಿ

    ಹಾಗಾದರೆ, ಮೇಲೆ ತಿಳಿಸಿದ ಆಹಾರ ಪದಾರ್ಥಗಳೊಂದಿಗೆ ನಿಮ್ಮ ಊಟವನ್ನು ಹೇಗೆ ಮಾಡುವುದು?

    ನವರಾತ್ರಿಯ ಸಮಯದಲ್ಲಿ ಉಪವಾಸ ಮಾಡುವಾಗ ಅನೇಕ ಜನರು ವ್ರತ ಸ್ನೇಹಿ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಈ ಪಟ್ಟಿಯಲ್ಲಿ ನೀವು ಚಿಲ್ಲಾವನ್ನು ಆಯ್ಕೆ ಮಾಡಬಹುದು. ಚಿಲ್ಲಾ ಎಂದರೆ ವಿವಿಧ ರೀತೀಯ ಕಾಳುಗಳಿಂದ ಮಾಡಿದ ಒಂದು ವಿಧಧ ರೊಟ್ಟಿ. ನೀವು ಕುಟ್ಟು ಹಿಟ್ಟು, ಸಿಂಘರ ಅಟ್ಟ ಅಥವಾ ಸಮಕ್ ಅಕ್ಕಿಯಿಂದ ಚಿಲ್ಲಾ ಮಾಡಲು ಯೋಜಿಸುತ್ತಿದ್ದರೆ, ನೀವು ಅದಕ್ಕೆ ಪನೀರ್ ಸ್ಟಫಿಂಗ್ ಅನ್ನು ಸೇರಿಸಬಹುದು ಎಂದು ನಮಾಮಿ ಹೇಳುತ್ತಾರೆ. ಇದು ನಿಮ್ಮ ಊಟವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಹೊಟ್ಟೆ ತುಂಬುವಂತೆ ಮಾಡುತ್ತದೆ.

    ಇದನ್ನೂ ಓದಿ: Skincare Tips: ನಿಮ್ಮ ಒತ್ತಡವು ಚರ್ಮದ ಮೇಲೆ ಪರಿಣಾಮ ಬೀರುತ್ತೆ! ಹೇಗೆ ಅಂತೀರಾ? ಇಲ್ಲಿದೆ ವಿವರ...

    ಮಧ್ಯಾಹ್ನದ ಊಟ ತಿಂಡಿಗಳಿಗಾಗಿ, ನಿಮ್ಮ ಮೊಸರಿಗೆ ಖರ್ಜೂರ, ಒಣದ್ರಾಕ್ಷಿ ಮತ್ತು ಬೀಜಗಳನ್ನು ಸೇರಿಸಲು ಸೂಚಿಸುತ್ತಾರೆ. ನೀವು ಸಮಕ್ ರೈಸ್‍ನೊಂದಿಗೆ ಪನೀರ್ ಗ್ರೇವಿಯನ್ನು ಕೂಡ ಸೇವಿಸಬಹುದು ಮತ್ತು ಕೊನೆಯದಾಗಿ, ನೀವು ಸಿಹಿ ಆಲೂಗಡ್ಡೆ ಮತ್ತು ಪನೀರ್ ಟಿಕ್ಕಿಯನ್ನು ಕೂಡ ತಿನ್ನಬಹುದು. ಡೇಟ್ಸ್ ಮತ್ತು ಒಣದ್ರಾಕ್ಷಿ ಒಳ್ಳೆಯದು ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.

    ಇದನ್ನೂ ಓದಿ: ನವರಾತ್ರಿಗೆ ಈ ದೇವಸ್ಥಾನದಲ್ಲಿ ಮುಸ್ಲಿಂ ಮಹಿಳೆಯಿಂದ ಪೂಜೆ

    ನಮಾಮಿ ಅಗರ್ವಾಲ್ ಆಗಾಗ ತನ್ನ ಬೆಂಬಲಿಗರಿಗೆ ತುಂಬಾ ಉಪಯುಕ್ತವಾದ ಆರೋಗ್ಯ ಸಲಹೆಗಳನ್ನು ನೀಡುತ್ತಾ ಬಂದಿದ್ದಾರೆ. ಕಳೆದ ವರ್ಷ, ನವರಾತ್ರಿಯ ಸಮಯದಲ್ಲಿ, ಅವರು ತನ್ನ ಬೆಂಬಲಿಗರಿಗೆ ಸರಿಯಾದ ರೀತಿಯ ಆಹಾರದೊಂದಿಗೆ ದೇಹವನ್ನು ಶುಚಿಗೊಳಿಸುವ ಬಗ್ಗೆ ಹೇಳಿದ್ದರು. ಉಪವಾಸ ವೇಳೆ ಸಾಮಾನ್ಯವಾಗಿ ಜನರು ಎಣ್ಣೆ, ಉಪ್ಪು, ಕೊಬ್ಬು ಅಥವಾ ಸರಳವಾದ ಕಾರ್ಬೋಹೈಡ್ರೇಟ್‍ಗಳಿಂದ ಮಾಡಿದ ಭಕ್ಷ್ಯಗಳನ್ನು ಆಯ್ಕೆ ಮಾಡುತ್ತಾರೆ ಎಂದು ಅವರು ಹೇಳಿದರು. ದೇಹದ ಚಯಾಪಚಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಜೀವಾಣುಗಳನ್ನು ತೊಡೆದುಹಾಕುವಾಗ ಕರುಳನ್ನು ಹಗುರವಾಗಿ ಮತ್ತು ಆರೋಗ್ಯಕರವಾಗಿರಿಸುವ ಪ್ರಾಮುಖ್ಯತೆಯನ್ನು ತಿಳಿಸಿದ್ದರು.
    Published by:Sharath Sharma Kalagaru
    First published: