ಆಹಾರ ಸೇವಿಸಿ ಕೂಡ ದೇಹ ತೂಕ ಇಳಿಸಬಹುದು..!

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಮತ್ತು ನಿಂಬೆ ರಸವನ್ನು ಮಿಶ್ರ ಮಾಡಿ ಕುಡಿಯಿರಿ. ದಿನದ ಆಹಾರ ಕ್ರಮವನ್ನು ಈ ರೀತಿಯಾಗಿ ಪ್ರಾರಂಭಿಸುವುದರಿಂದ ದಿನವಿಡೀ ದೇಹ ತುಂಬಾ ಹಗುರವಾಗಿರುತ್ತದೆ.

zahir | news18-kannada
Updated:August 27, 2019, 4:44 PM IST
ಆಹಾರ ಸೇವಿಸಿ ಕೂಡ ದೇಹ ತೂಕ ಇಳಿಸಬಹುದು..!
ಸಾಂದರ್ಭಿಕ ಚಿತ್ರ
zahir | news18-kannada
Updated: August 27, 2019, 4:44 PM IST
ದೇಹದ ತೂಕ ಇಳಿಸಲು ಎಷ್ಟೆಲ್ಲಾ ಕಷ್ಟಪಡುತ್ತೇವೆ. ವ್ಯಾಯಾಮ, ಜಿಮ್ ಹೀಗೆ ಒಂದಲ್ಲಾ ಎರಡಲ್ಲಾ ಕಸರತ್ತಿನ ಮೊರೆ ಹೋಗುವವರೇ. ಅದರಲ್ಲೂ ಮುಖ್ಯವಾಗಿ ಅನೇಕರು ಊಟ ಬಿಡುತ್ತಾರೆ. ಆದರೆ ಇದೊಂದು ತಪ್ಪು ಕಲ್ಪನೆ. ದೇಹ ತೂಕವನ್ನು ಇಳಿಸಲು ಊಟ ಬಿಡುವ ಬದಲು ಹಿತಮಿತವಾಗಿ ಸೇವಿಸುವುದು ಒಳ್ಳೆಯದು ಎನ್ನುತ್ತಾರೆ ಆರೋಗ್ಯ ತಜ್ಞರು.

ಸಾಮಾನ್ಯವಾಗಿ ಮಹಿಳೆಯರಲ್ಲಿ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಒಂದು ಕಾರಣ ಗರ್ಭಧಾರಣೆ ಸಮಯದಲ್ಲಿ ಹೆಚ್ಚಾಗುವ ದೇಹದಲ್ಲಿ ಕ್ಯಾಲೊರಿಗಳು ಎನ್ನಬಹುದು.  ಆ ಬಳಿಕ ಅದೆಷ್ಟೇ ವ್ಯಾಯಾಮ, ಯೋಗ ಅಥವಾ ನಾನಾ ಕಸರತ್ತನ್ನು ನಡೆಸಿದರೂ ದೇಹದಲ್ಲಿ ಒಂಚೂರು ಬದಲಾವಣೆ ಕಾಣುವುದಿಲ್ಲ. ಆದರೆ ಉತ್ತಮ ಆಹಾರ ಕ್ರಮಗಳಿಂದಲೂ ಸಹ ದೇಹತೂಕವನ್ನು ಇಳಿಸಿಕೊಳ್ಳಬಹುದು ಎಂದರೆ ನಂಬುವಿರಾ? ಹೌದು, ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಂಡರೆ ಸಾಕು.

ಆರಂಭ ಹೇಗೆ?

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಜೇನುತುಪ್ಪ ಮತ್ತು ನಿಂಬೆ ರಸವನ್ನು ಮಿಶ್ರ ಮಾಡಿ ಕುಡಿಯಿರಿ. ದಿನದ ಆಹಾರ ಕ್ರಮವನ್ನು ಈ ರೀತಿಯಾಗಿ ಪ್ರಾರಂಭಿಸುವುದರಿಂದ ದಿನವಿಡೀ ದೇಹ ತುಂಬಾ ಹಗುರವಾಗಿರುತ್ತದೆ. ಅಷ್ಟೇ ಅಲ್ಲದೆ ಶೀಘ್ರದಲ್ಲೇ ನಿಮ್ಮ ಸೊಂಟದ ಭಾಗದ ಬೊಜ್ಜು ಕರಗುತ್ತದೆ.

ಬೆಳಗಿನ ಉಪಾಹಾರ:
ನಿಮಗೆ ರಕ್ತದೊತ್ತಡದ ಸಮಸ್ಯೆ ಇಲ್ಲದಿದ್ದರೆ, ಬೆಳಗಿನ ಉಪಾಹಾರವನ್ನು ನೆನೆಸಿದ ಸ್ವಲ್ಪ ಬಾದಾಮಿ ಮತ್ತು 1 ಕಪ್ ಕಪ್ಪು ಕಾಫಿಯೊಂದಿಗೆ ಆರಂಭಿಸಿ. ಅದರೊಂದಿಗೆ ಒಂದು ಪ್ಲೇಟ್ ಉಪ್ಪಿಟ್ಟು ಸೇವಿಸಿ. ಅಥವಾ 2 ಬೇಯಿಸಿದ ಮೊಟ್ಟೆಗಳೊಂದಿಗೆ ಟೋಸ್ಟ್ ತಿನ್ನಬಹುದು.

ಊಟ:
Loading...

ಸಾಂಪ್ರದಾಯಿಕ ಭಾರತೀಯ ಮಧ್ಯಾಹ್ನದ ಊಟಕ್ಕಿಂತ ಉತ್ತಮವಾದ ಆಹಾರ ಇನ್ನೊಂದಿಲ್ಲ ಎನ್ನಬಹುದು. ಊಟದೊಂದಿಗೆ ದಾಲ್, ಹಸಿರು ತರಕಾರಿ, ಮೊಸರು ಮತ್ತು ತಾಜಾ ಸಲಾಡ್‌ನ್ನು ಹೆಚ್ಚಾಗಿ ಸೇವಿಸಿ.

ತಿಂಡಿಗಳು:
ಸಂಜೆ ಪಾನೀಯದಲ್ಲಿ ನೀವು ಗ್ರೀನ್ ಟೀ ಕುಡಿಯುವುದು ಉತ್ತಮ. ಸಾಧ್ಯವಾದರೆ ಈ ವೇಳೆ ಹೆಚ್ಚಿನ ತಿಂಡಿಗಳನ್ನು ತಿನ್ನದಿರಿ. ಇದೇ ಸಮಯದಲ್ಲಿ ಹಣ್ಣುಗಳನ್ನು ಸೇವಿಸುವುದು ಕೂಡ ಒಳ್ಳೆಯದು.

ಭೋಜನ:
ರಾತ್ರಿ 8 ಗಂಟೆಯ ಮೊದಲು ಊಟ ಮಾಡಲು ಪ್ರಯತ್ನಿಸಿ. ಭೋಜನದಲ್ಲಿ ಕಾರ್ಬನ್ ಅಂಶಗಳಿರುವ ಆಹಾರವನ್ನು ಕಡಿಮೆ ಮಾಡಿ. ಅಂದರೆ ಕರಿದ ಆಹಾರಗಳನ್ನು ರಾತ್ರಿ ವೇಳೆ ಸೇವಿಸದಿರುವುದು ಉತ್ತಮ. ಇನ್ನು ಊಟದ ಬದಲು ಹಸಿರು ತರಕಾರಿಗಳನ್ನು ಪ್ರೋಟೀನ್ ಶೇಕ್, ಹುರಿದ ಚೀಸ್ ತಿನ್ನುವುದು ಒಳ್ಳೆಯದು.

ಈ ಎಲ್ಲಾ ಆಹಾರಗಳ ಸೇವನೆಯನ್ನು ಇತಿಮಿತಿಯಲ್ಲರಿಸಿ. ಇದರೊಂದಿಗೆ, ದಿನಕ್ಕೆ ಕನಿಷ್ಠ 8 ರಿಂದ 9 ಲೋಟ ನೀರು ಕುಡಿಯಬೇಕು. ದೇಹದಲ್ಲಿ ನೀರು ಹೆಚ್ಚಾದಂತೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ನಿಮ್ಮ ಚರ್ಮದ ತೇವಾಂಶವನ್ನು ಸಹ ಉಳಿಸಿಕೊಳ್ಳುತ್ತದೆ. ಹೀಗೆ ಮಾಡುವುದರಿಂದ ಆರೋಗ್ಯ ಉತ್ತಮವಾಗುವುದಲ್ಲದೆ, ದೇಹತೂಕ ಕೂಡ ಇಳಿಕೆಯಾಗುತ್ತದೆ.

 
First published:August 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...