• Home
  • »
  • News
  • »
  • lifestyle
  • »
  • Blood Group: ರಕ್ತದ ಗುಂಪಿಗೆ ಅನುಗುಣವಾಗಿರಲಿ ನಿಮ್ಮ ಡಯೆಟ್‌ ಪ್ಲಾನ್; ಬೇಗ ಇಳಿಯುತ್ತೆ ತೂಕ

Blood Group: ರಕ್ತದ ಗುಂಪಿಗೆ ಅನುಗುಣವಾಗಿರಲಿ ನಿಮ್ಮ ಡಯೆಟ್‌ ಪ್ಲಾನ್; ಬೇಗ ಇಳಿಯುತ್ತೆ ತೂಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎಬಿ ರಕ್ತದ ಗುಂಪಿನ ಜನರು ಹೆಚ್ಚು ಅಲರ್ಜಿಯಿಂದ ಬಳಲುತ್ತಾರೆ. ಒಬ್ಬ ವ್ಯಕ್ತಿಯು ಬೊಜ್ಜು ಹೊಂದಿದ್ದರೆ, ಅವರ ಆಹಾರವು ಸ್ವಾಭಾವಿಕವಾಗಿ ಬದಲಾಗುತ್ತದೆ.

  • Share this:

ಇಂದಿನ ಕಾಲದಲ್ಲಿ ಬಹುತೇಕರು ಅನುಭವಿಸುತ್ತಿರುವ ಸಮಸ್ಯೆಗಳಲ್ಲಿ ತೂಕ ಹೆಚ್ಚಳ (Weight Gain) ಕಾಮನ್‌ ಸಮಸ್ಯೆ. ಹೀಗೆ ಬೇರೆ ಬೇರೆ ಕಾರಣಗಳಿಂದ ಹೆಚ್ಚಾದ ತೂಕವನ್ನು ಕಳೆದುಕೊಳ್ಳಲು ಬಹಳಷ್ಟು ವಿಧಾನಗಳನ್ನು (Weight Loss) ಜನರು ಅನುಸರಿಸುತ್ತಾರೆ. ಆದ್ರೆ ನಿಮಗೆ ಗೊತ್ತಾ? ನಿಮ್ಮ ರಕ್ತದ ಗುಂಪು (Blood Group) ತೂಕ ನಷ್ಟವನ್ನು ನಿರ್ಧರಿಸುತ್ತದೆ ಅನ್ನೋದು? ಒಬ್ಬ ವ್ಯಕ್ತಿಯ ತೂಕ ನಷ್ಟಕ್ಕೆ ಸಾಕಷ್ಟು ಅಂಶಗಳು ಕಾರಣವಾಗುತ್ತವೆ. ತೂಕ ನಷ್ಟವು ವ್ಯಕ್ತಿಯು ತೆಗೆದುಕೊಳ್ಳುವ ಆಹಾರ (Food), ಅವರ ದೈಹಿಕ ಚಟುವಟಿಕೆಯ ಮಟ್ಟ (Physical Activities), ಅವರ ವಯಸ್ಸು (Age), ಅವರು ಮಾಡುವ ನಿದ್ರೆಯ ಪ್ರಮಾಣ (Sleeping Time) ಮುಂತಾದ ವಿಷಯಗಳನ್ನು ಅವಲಂಬಿಸಿದೆ. ಆದರೆ ತೂಕ ನಷ್ಟಕ್ಕೆ ರಕ್ತದ ಗುಂಪು ಕೂಡ ಒಂದು ನಿರ್ಣಾಯಕ ಅಂಶವಾಗಿದೆ.


ನಿಮ್ಮ ರಕ್ತದ ಗುಂಪು ಎಲ್ಲವನ್ನೂ ನಿರ್ಧರಿಸುತ್ತದೆ!


ಇನ್‌ಸ್ಟಾಗ್ರಾಮ್‌ನಲ್ಲಿ ಪೌಷ್ಟಿಕತಜ್ಞೆ ಅಂಜಲಿ ಮುಖರ್ಜಿ ಅವರು ಈ ಬಗ್ಗೆ ವಿವರವಾಗಿ ಹೇಳಿದ್ದಾರೆ. ರಕ್ತದ ಗುಂಪಿಗೆ ಅನುಗುಣವಾಗಿ ತಿಂದರೆ ತೂಕ ಇಳಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯ ಪಡುತ್ತಾರೆ.


ರಕ್ತದ ಗುಂಪಿನ ಆಹಾರಗಳು ಕೆಲವು ಸಂದರ್ಭಗಳಲ್ಲಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ನೀವು ಹೇಗೆ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತೀರಿ, ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ, ನಿಮ್ಮ ತೂಕ ನಷ್ಟಕ್ಕೆ ಯಾವ ಆಹಾರಗಳು ಹೆಚ್ಚು ಅನುಕೂಲಕರವಾಗಿವೆ.


diet plan for as per blood group stg mrq
ಸಾಂದರ್ಭಿಕ ಚಿತ್ರ


ಯಾವ ರೀತಿಯ ವ್ಯಾಯಾಮವು ನಿಮಗೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂಬುದನ್ನು ನಿಮ್ಮ ರಕ್ತದ ಗುಂಪು ನಿರ್ಧರಿಸುತ್ತದೆ"ಎಂಬುದಾಗಿ ಮುಖರ್ಜಿ ಹೇಳುತ್ತಾರೆ.


ಆದಾಗ್ಯೂ, ದೀರ್ಘಾವಧಿಯ ತೂಕ ನಷ್ಟಕ್ಕೆ ವಯಸ್ಸು, ಜೀರ್ಣಕ್ರಿಯೆ, ಹಾರ್ಮೋನ್ ಅಸಮತೋಲನ ಮತ್ತು ಇತರ ವೈದ್ಯಕೀಯ ಪರಿಸ್ಥಿತಿಗಳೂ ಕಾರಣವಾಗುತ್ತವೆ.


ಬ್ಲಡ್‌ ಟೈಪ್‌ ಡಯೆಟ್


ಪ್ರಕೃತಿ ಚಿಕಿತ್ಸಕ ಪೀಟರ್ ಜೆ. ಡಿ'ಆಡಮೊ ರಚಿಸಿದ 'ಬ್ಲಡ್ ಟೈಪ್ ಡಯಟ್' ಎಂಬ ಆಹಾರ ಸೇವನೆ ವಿಧಾವೊಂದು ಅಸ್ತಿತ್ವದಲ್ಲಿದೆ. ಅದರ ಪ್ರಕಾರ, ನಿಮ್ಮ ರಕ್ತದ ಗುಂಪನ್ನು ಆಧರಿಸಿ ಆಹಾರವನ್ನು ತಿನ್ನುವುದು ತೂಕ ಕಳೆದುಕೊಳ್ಳಲು ಹಾಗೂ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.


ಹಾಗಿದ್ರೆ ಯಾವ ರಕ್ತದ ಗುಂಪಿನವರು ಏನನ್ನು ತಿನ್ನಬೇಕು ಹಾಗೂ ಏನನ್ನು ತಿನ್ನಬಾರದು ಅನ್ನೋದನ್ನು ನೋಡೋಣ.


* O ರಕ್ತದ ಗುಂಪು: ಹೆಚ್ಚು ಪ್ರೋಟೋನ್‌ಯುಕ್ತ ಮಾಂಸ, ಕೋಳಿ, ಮೀನು ಮತ್ತು ತರಕಾರಿಗಳನ್ನು ತಿನ್ನಬೇಕು. ಅಲ್ಲದೇ ಧಾನ್ಯಗಳು, ಬೀನ್ಸ್ ಮತ್ತು ಡೈರಿಗಳ ಉತ್ಪನ್ನಗಳನ್ನು ಆದಷ್ಟು ಕಡಿಮೆ ತಿನ್ನಬೇಕು.


* ಎ ರಕ್ತದ ಗುಂಪು: ಹಣ್ಣುಗಳು ಮತ್ತು ತರಕಾರಿಗಳು, ಬೀನ್ಸ್ ಮತ್ತು ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳನ್ನು ತಿನ್ನಬೇಕು.


* ಬಿ ರಕ್ತದ ಗುಂಪು: ಕಾರ್ನ್, ಗೋಧಿ, ಹುರುಳಿ, ಮಸೂರ, ಟೊಮ್ಯಾಟೊ, ಕಡಲೆಕಾಯಿ ಮತ್ತು ಎಳ್ಳು ಮತ್ತು ಸ್ವಲ್ಪ ಮಟ್ಟಿಗೆ ಚಿಕನ್ ಸೇವನೆಯಿಂದ ದೂರವಿರಿ. ಅದರ ಬದಲು ಹಸಿರು ತರಕಾರಿಗಳು, ಮೊಟ್ಟೆಗಳು, ಮಾಂಸಗಳು ಮತ್ತು ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಿ.


* ಎಬಿ ರಕ್ತದ ಗುಂಪು: ತಿನ್ನಬೇಕಾದ ಆಹಾರಗಳಲ್ಲಿ ಸಮುದ್ರಾಹಾರ, ಡೈರಿ ಉತ್ಪನ್ನ ಮತ್ತು ಹಸಿರು ತರಕಾರಿಗಳು ಸೇರಿವೆ. ಕೆಫೀನ್, ಆಲ್ಕೋಹಾಲ್, ಧೂಮಪಾನ ಮತ್ತು ಸಂಸ್ಕರಿಸಿದ ಮಾಂಸ ಸೇವನೆ ಬೇಡ.


ಇನ್ನು, ಈ ಬಗ್ಗೆ ಕೋಲ್ಕತ್ತಾದ ಫೋರ್ಟಿಸ್ ಆಸ್ಪತ್ರೆ ಮತ್ತು ಕಿಡ್ನಿ ಇನ್‌ಸ್ಟಿಟ್ಯೂಟ್‌ನ ಆಹಾರ ತಜ್ಞರಾದ ಸೋಹಿನಿ ಬ್ಯಾನರ್ಜಿ ಅವರು ಅದನ್ನು ಸಾಬೀತುಪಡಿಸಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ. ಆದರೆ, “ರಕ್ತ ಗುಂಪು ಸ್ಥೂಲಕಾಯತೆ ಮತ್ತು ಇತರ ಅನೇಕ ರೀತಿಯ ಕಾಯಿಲೆಗಳಿಗೆ ಸಂಬಂಧಿಸಿದೆ ಎಂಬುದು ನಿಜ.


diet plan for as per blood group stg mrq
ಸಾಂದರ್ಭಿಕ ಚಿತ್ರ


ಇವರಿಗೆ ಸ್ಥೂಲಕಾಯ ಸಮಸ್ಯೆ


ಉದಾಹರಣೆಗೆ, O ಅಥವಾ B ರಕ್ತದ ಗುಂಪುಗಳನ್ನು ಹೊಂದಿರುವ ಮಹಿಳೆಯರು ಸ್ಥೂಲಕಾಯಕ್ಕೆ ಹೆಚ್ಚು ಒಳಗಾಗುತ್ತಾರೆ. ಅಂತೆಯೇ, A ರಕ್ತದ ಗುಂಪು ಹೊಂದಿರುವ ಜನರು ಹೃದ್ರೋಗಗಳು, ಕ್ಯಾನ್ಸರ್ ಮತ್ತು ಮಧುಮೇಹಕ್ಕೆ ಒಳಗಾಗಬಹುದು.


ಇದನ್ನೂ ಓದಿ:  DIY Hacks: ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಸುಲಭವಾಗಿ ಲಿಪ್​ ಬಾಮ್ ತಯಾರಿಸಿ! ಇಲ್ಲಿವೆ ಟಿಪ್ಸ್​


ಎಬಿ ರಕ್ತದ ಗುಂಪಿನ ಜನರು ಹೆಚ್ಚು ಅಲರ್ಜಿಯಿಂದ ಬಳಲುತ್ತಾರೆ. ಒಬ್ಬ ವ್ಯಕ್ತಿಯು ಬೊಜ್ಜು ಹೊಂದಿದ್ದರೆ, ಅವರ ಆಹಾರವು ಸ್ವಾಭಾವಿಕವಾಗಿ ಬದಲಾಗುತ್ತದೆ.


ಅವರು ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕಾಗಬಹುದು ಮತ್ತು ಕಡಿಮೆ ಕೊಬ್ಬಿನ ಆಹಾರವನ್ನು ತೆಗೆದುಕೊಳ್ಳಬೇಕಾಗುತ್ತದೆ" ಎಂದು ಸೋನಿಹಿ ಅವರು ವಿವರಿಸುತ್ತಾರೆ.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು