Health tips: ಒಳ್ಳೆ ಆಹಾರ ತಿಂದ್ರೆ ಚರ್ಮದ ಸೌಂದರ್ಯ ಚೆನ್ನಾಗಿರೋದು ನಿಜಾನಾ?

ಈಗಾಗಲೇ ಮನುಷ್ಯನ ಆಹಾರ ಪಥ್ಯ ಹಾಗೂ ಪೋಷಕಾಂಶಗಳು ಚರ್ಮ ಸಂಬಂಧಿ ಸ್ಥಿತಿಗತಿಗಳ ಮೇಲೆ ಯಾವೆಲ್ಲ ರೀತಿ ಪ್ರಭಾವ ಬೀರಬಹುದೆಂಬ ವಿಷಯದ ಮೇಲೆ ಹಲವು ಸಂಶೋಧನಾಧ್ಯಯನಗಳನ್ನು ಮಾಡಲಾಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇಂದು ಅನೇಕ ಡರ್ಮ್ಯಾಟಾಲಾಜಿಸ್ಟ್ (Dermatologists )ಗಳು ಹಾಗೂ ಪೌಷ್ಟಿಕ ತಜ್ಞರು (Nutritionists) ಮೂರು ಪ್ರಮುಖ ಅಂಶಗಳ ಮಧ್ಯೆ ಇರುವ ಸಂಬಂಧದ ಬಗ್ಗೆ ಹೆಚ್ಚು ವಿವರವಾಗಿ ತಿಳಿಯಲು ಉತ್ಸುಕರಾಗಿದ್ದಾರೆ. ಅದೇನೆಂದರೆ ಡಯಟ್, ನ್ಯೂಟ್ರಿಷನ್ ಹಾಗೂ ಚರ್ಮದ ಕಂಡಿಷನ್. ಈ ಮೂರು ಅಂಶಗಳ ಮಧ್ಯ ಸಂಬಂಧ (Interrelationship) ತಿಳಿದುಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ.ವೈಜ್ಞಾನಿಕವಾಗಿ ಹೀಗೆ ಯಾವುದಾದರೂ ವಿಷಯದ ಮೇಲೆ ಸ್ಪಷ್ಟವಾದ ಶೋಧನೆಯು ಪರಿಗಣಿಸುವ ಮಟ್ಟಿಗೆ ಹೋಗಬೇಕೆಂದರೆ ಆ ವಿಷಯ ರ್‍ಯಾಂಡಮೈಸ್ಡ್ (Randomized) ಕಂಟ್ರೋಲ್ಡ್ ಟ್ರಯಲ್ಸ್‌ಗೆ ಒಳಪಟ್ಟು ಸಫಲವಾಗಬೇಕು. ಆಗ ಅದನ್ನು ಸಂಶೋಧನೆಯಲ್ಲಿ ಗೋಲ್ಡ್ ಸ್ಟ್ಯಾಂಡರ್ಡ್ ಅಂತ ಹೇಳಲಾಗುತ್ತದೆ. ಈಗಾಗಲೇ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ 150ಕ್ಕೂ ಹೆಚ್ಚಿನ ಅಧ್ಯಯನಗಳನ್ನು ಮಾಡಲಾಗಿದೆ ಎಂಬ ವಿಷಯ (Revealed)ತಿಳಿದುಬಂದಿದೆ.

ಈ ಕುರಿತಂತೆ ಅಧ್ಯಯನ ಪುಸ್ತಕದಲ್ಲಿ "ಕೆಲವೊಮ್ಮೆ ಸಂಶೋಧನೆಯ ಪರಿಸ್ಥಿತಿಗಳಲ್ಲಿ ಪ್ರಭಾವ ಬೀರುತ್ತವೆ ಎಂದು ತೋರಬಹುದಾದ ಕೆಲವು ಪೋಷಕ ತತ್ವಗಳು ವಾಸ್ತವ ಜೀವನದ ಸಂದರ್ಭಗಳ ಹತ್ತಿರವೂ ಬರದೆ ಇರಬಹುದು" ಎಂದು ಅಟಲ್ ಬಿಹಾರಿ ವಾಜಪೇಯಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನ ಡಾ. ಕಬೀರ್ ಸರ್ಡಾನಾ ಹಾಗೂ ದೆಹಲಿಯ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಡಾ. ಸೌಮ್ಯ ಸಚ್‌ದೇವ ಬರೆಯುತ್ತಾರೆ.

ಈ ಇಬ್ಬರೂ ಸಂಶೋಧಕರು ಕಳೆದ 15 ವರ್ಷಗಳಲ್ಲಿ ಆಹಾರ ಪಥ್ಯ, ಪೋಷಕಾಂಶ ಹಾಗೂ ಚರ್ಮದ ಸ್ಥಿತಿಗತಿಗಳ ಬಗ್ಗೆ ಪ್ರಕಟಿಸಲ್ಪಟ್ಟ 150ಕ್ಕೂ ಅಧಿಕ ಅಧ್ಯಯನದ ವರದಿಗಳನ್ನು ವಿವರವಾಗಿ ಅಧ್ಯಯನ ಮಾಡಿದ್ದು ಆ ತಳಹದಿಯ ಮೇಲೆ ಹೀಗೆ ಹೇಳುತ್ತಾರೆ, "ನಮಗೆ ಇಲ್ಲಿಯವರೆಗೂ ಯಾವ ಕರಾರುವಕ್ಕಾದ ಸಂಬಂಧದ ಸ್ಪಷ್ಟತೆಯ ಬಗ್ಗೆ ಯಾವ ಗಟ್ಟಿಯಾದ ಸಾಕ್ಷಿಗಳು ದೊರೆತಿಲ್ಲ. ಇದು ನಿಜಕ್ಕೂ ಡರ್ಮ್ಯಾಟಾಲಾಜಿಸ್ಟ್‌ಗಳು ಇಕ್ಕಟ್ಟಿನಲ್ಲಿ ಸಿಲುಕುವಂತೆ ಮಾಡಿದರೆ ರೋಗಿಗಳಿಗೆ ಗೊಂದಲ ಉಂಟಾಗುವಂತೆ ಮಾಡುತ್ತದೆ.

ಇದನ್ನೂ ಓದಿ: ಮೊಟ್ಟೆ ಸೇರಿದಂತೆ ಈ ಆಹಾರಗಳನ್ನು ಯಾವುದೇ ಕಾರಣಕ್ಕೂ ನಿಮ್ಮ ಫ್ರಿಡ್ಜ್​​​ನ freezerನಲ್ಲಿ ಇಡಬೇಡಿ..

"ಇದು ನಿಜಕ್ಕೂ ದುರದೃಷ್ಟ, ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ಪೋಷಕ ತತ್ವಗಳಿಗಿರುವ ಪಾತ್ರದ ಕುರಿತು ಹೆಚ್ಚಾಗಿ ಬೆಳಕು ಚೆಲ್ಲುವ ಮಾಹಿತಿ ಲಭ್ಯವಿದ್ದಿದ್ದರೆ ಕೆಲ ಪರಿಸ್ಥಿತಿಗಳಲ್ಲಿ ರೋಗಿಗಳಿಗೆ ಉತ್ತಮವಾದ ಸಲಹೆ ನೀಡಲು ಅನುಕೂಲವಾಗುತ್ತಿತ್ತು" ಎಂದು ಈ ಇಬ್ಬರ ವೈದ್ಯ ಸಂಶೋಧಕರ ಅಭಿಪ್ರಾಯವಾಗಿದೆ.

ಇಲ್ಲಿಯವರೆಗೆ ಮಾಡಲಾದ ಅಧ್ಯಯನ
ಈಗಾಗಲೇ ಮನುಷ್ಯನ ಆಹಾರ ಪಥ್ಯ ಹಾಗೂ ಪೋಷಕಾಂಶಗಳು ಚರ್ಮ ಸಂಬಂಧಿ ಸ್ಥಿತಿಗತಿಗಳ ಮೇಲೆ ಯಾವೆಲ್ಲ ರೀತಿ ಪ್ರಭಾವ ಬೀರಬಹುದೆಂಬ ವಿಷಯದ ಮೇಲೆ ಹಲವು ಸಂಶೋಧನಾಧ್ಯಯನಗಳನ್ನು ಮಾಡಲಾಗಿದೆ. ಆದರೆ ಯಾವೊಂದರ ಅಧ್ಯಯನವು ಸ್ಪಷ್ಟವಾಗಿ ಏನೂ ತಿಳಿಸಿಲ್ಲವಾದರೂ ಅದು ಕಲೆ ಹಾಕಿರುವ ಕೆಲ ಮಾಹಿತಿಗಳು ಡರ್ಮ್ಯಾಟಾಲಾಜಿಸ್ಟ್‌ಗಳಿಗೆ ಸಹಾಯಕವಾಗಿದೆ ಎನ್ನುತ್ತಾರೆ ಚರ್ಮ ತಜ್ಞೆಯಾದ ಡಾ. ಪ್ಯಾಟ್ರಿಶಿಯಾ ಫಾರಿಸ್.

ಮಾಡಲಾಗುವ ಎಲ್ಲ ಅಧ್ಯಯನಗಳು ನಿರ್ದಿಷ್ಟ ಅಧ್ಯಯನದ ಎಲ್ಲ ಮಾನದಂಡಗಳನ್ನು ಮುಟ್ಟುವುದು ಕಷ್ಟ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದೊಡ್ಡ ಪ್ರಮಾಣದ ರ್‍ಯಾಂಡಮೈಸ್ಡ್ ಕಂಟ್ರೋಲ್ಡ್ ಟ್ರಯಲ್‌ಗಳಿಗೆ ಬೇಕಾಗಿರುವ ದೊಡ್ಡ ಮೊತ್ತದ ಹಣವನ್ನು ಸಾಮಾನ್ಯವಾಗಿ ಉತ್ಪಾದಕರು ಅಥವಾ ಫಾರ್ಮಾ ಇಂಡಸ್ಟ್ರಿಗಳು ಹೂಡುತ್ತವೆ. ಇಲ್ಲಿ ಆಹಾರ ಮತ್ತು ಸಂಸ್ಕರಣದ ಪ್ರಕ್ರಿಯೆ ಮೂಲಕ ಅನುಮೋದನೆ ಪಡೆಯಬೇಕಾದ ಅವಶ್ಯಕತೆಯಿರದ ಕಾರಣ ಇಂತಹ ವಿಷಯದಲ್ಲಿ ಹೆಚ್ಚಿನ ಹಾಗೂ ಇನ್ನೂ ಮೌಲ್ಯಯುತವಾದ ಸಂಶೋಧನೆಗಳನ್ನು ನಡೆಸಬೇಕಾದ ಅವಶ್ಯಕತೆಯಿದೆ ಎಂದು ಅವರು ವಿವರಿಸುತ್ತಾರೆ,

ಪ್ರಸ್ತುತ ಅಧ್ಯಯನ ಕೊಡುವ ಸಾಕ್ಷಿ ಏನು..?
ಸಾಂಪ್ರದಾಯಿಕವಾಗಿ ಚಾಲ್ತಿಯಲ್ಲಿರುವ ಪೌಷ್ಟಿಕಾಂಶ ತತ್ವದಗಳೊಂದಿಗೆ ಅಥವಾ ಆಹಾರ ಪದ್ಧತಿಯಲ್ಲಿನ ಮಾರ್ಪಾಡುಗಳು ವಾಸ್ತವ ಪ್ರಪಂಚದ ರೋಗಿಗಳ ನಿರ್ವಹಣೆಯಲ್ಲಿ ಯಾವ ರೀತಿ ಹೋಲಿಕೆ ಮಾಡಲು ಶಕ್ತವಾಗಬಹುದೆಂಬುದನ್ನು ತಿಳಿಯಲು ಬೇಕಾದ ಡೇಟಾ ಕೊರತೆಯು ಒಟ್ಟಾರೆ ಈ ವಿಷಯವನ್ನು ವಿಶ್ಲೇಷಿಸಲು ಕಷ್ಟಕರವಾಗಿಸುತ್ತದೆ" ಎಂದು ಲೇಖಕರು ಹೇಳುತ್ತಾರೆ. ಸಂಶೋಧಕರು ಈ ಕುರಿತಂತ ವಿವಿಧ ರೀತಿಯ ಫಲಿತಾಂಶಗಳನ್ನು ಈ ಮಹತ್ವದ ಸಂಬಂಧದ ಬಗ್ಗೆ ದಾಖಲಿಸಿದ್ದಾರೆ.

ಕೆಲವು ಪ್ರಮುಖವಾದವುಗಳೆಂದರೆ..
* ಆಕ್ನೆಯೊಂದಿಗೆ ಕಡಿಮೆ ಗ್ಲೈಸೆಮಿಕ್ ಡಯಟ್
* ಸೊರ್ಯಾಸಿಸ್‌ನೊಂದಿಗೆ ಮೀನು ಎಣ್ಣೆ ಹಾಗೂ ಭಾರ ಇಳಿಕೆ
* ಅಟೋಪಿಕ್ ಡರ್ಮಾಟೈಟಿಸ್‌ನೊಂದಿಗೆ ಮೀನು ಎಣ್ಣೆ ಮತ್ತು ಪ್ರೋಬಯೋಟಿಕ್ಸ್
* ವಿಟಿಲಿಗೋನೊಂದಿಗೆ ವಿಟಮಿನ್ಸ್ ಮತ್ತು ಬೊಟಾನಿಕಲ್ ಎಕ್ಸ್ಟ್ರ್ಯಾಕ್ಟ್ಸ್

ಇನ್ನೂ ಕಟ್ಟುನಿಟ್ಟಾದ ಸಂಶಧನೆಯ ಅಗತ್ಯವಿದೆ
ಡಾ. ಫ್ಯಾರಿಸ್ ಹೇಳುವಂತೆ, ಚರ್ಮ ತಜ್ಞರು ಈ ಅಧ್ಯಯನ ಪುಸ್ತಕವನ್ನು ತಮ್ಮ ಬಳಿ ಇರಿಸಿಕೊಳ್ಳುವುದು ಉತ್ತಮ. ಏಕೆಂದರೆ ಇದರಲ್ಲಿರುವ ಕೆಲ ಮಹತ್ವದ ಮಾಹಿತಿಗಳ ಆಧಾರದ ಮೇಲೆ ಅವರು ತಮ್ಮ ರೋಗಿಗಳ ಸಮಸ್ಯೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಅವರಿಗೆ ಬೇಕಾದ ಉತ್ತಮ ಸಲಹೆಗಳನ್ನು ನೀಡಲು ಶಕ್ತರಾಗಬಹುದು.
ಇನ್ನು, ನಾನು ಈಗಾಗಲೇ ಕೆಲವು ನಿರ್ದಿಷ್ಟ ಪೋಷಕ ತತ್ವಗಳ ಅಧ್ಯಯನದ ಮೇಲೆ ಗಮನವಿರಿಸಿದ್ದೇನೆ. ಏಕೆಂದರೆ ಪ್ರಾಥಮಿಕ ಸಂಶೋಧನೆಯಲ್ಲಿ ಅವು ಉತ್ತಮ ಫಲಿತಾಂಶಗಳನ್ನು ನೀಡಿದ್ದು ಮುಂದಿನ ಅಧ್ಯಯನದಿಂದ ಹೆಚ್ಚು ಹೆಚ್ಚು ಸ್ಪಷ್ಟತೆಗಳು ಕಾಣಲಿದೆ. ಉದಾಹರಣೆಗೆ ಚರ್ಮದ ಕ್ಯಾನ್ಸರ್ ನಿಂದ ಬಳಲಿದ ಇತಿಹಾಸವಿರುವ ಜನರಲ್ಲಿ ನಾನ್ ಮೆಲಾನೊಮಾ ಚರ್ಮ ಕ್ಯಾನ್ಸರ್ ಬರದಂತೆ ನಿಕೊಟಿನಮೈಡ್ ಬಳಸುವುದು. ಆಟೊಪಿಕ್ ಡರ್ಮಟೈಟಿಸ್ ಚಿಕಿತ್ಸೆಗೆ ಪರಿಣಾಮಕಾರಿಯಾಗಿ ಪ್ರಿಬಯೋಟಿಕ್ಸ್ ಹಾಗೂ ಪ್ರೋಬಯಾಟಿಕ್ಸ್ ಬಳಸುವುದು ಎಂದು ಡಾ. ಕಟ್ಟಾ ಹೇಳಿದ್ದಾರೆ.

ಇದನ್ನೂ ಓದಿ: New Year Diet: ಹೊಸ ವರ್ಷಕ್ಕೆ ನಿಮ್ಮ ‘ಡಯಟ್’ ಪ್ಲಾನ್‌ ನಿಜವಾಗ್ಲೂ ವರ್ಕ್‌ ಆಗುತ್ತಾ? ಈ ಸ್ಟೋರಿ ಓದಿ

ಅಲ್ಲದೆ, "ಈ ಅಧ್ಯಯನವು ಈಗಾಗಲೇ ಈ ವಿಷಯದ ಮೇಲೆ ಅಧ್ಯಯನ ಮಾಡಲಾಗಿರುವ ಮಾಹಿತಿಯ ಮೇಲೆ ಹೆಚ್ಚು ಗಮನ ಹೊಂದಿದೆಯೇ ಹೊರತು ಸುರಕ್ಷತೆಯ ಕ್ರಮಗಳ ಬಗ್ಗೆ ಅಲ್ಲ. ಹಾಗಾಗಿ ಇದೊಂದು ಮಹತ್ವದ ವಿಷಯವಾಗಿದೆ, ಏಕೆಂದರೆ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಸಾಕಷ್ಟು ವರದಿಗಳೂ ಸಹ ನಮ್ಮ ಬಳಿ ಇವೆ" ಎಂದೂ ಈ ಅಧ್ಯಯನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
Published by:vanithasanjevani vanithasanjevani
First published: