Health Tips: ಥೈರಾಯಿಡ್ ಸಮಸ್ಯೆಯಿಂದ ನಿಮ್ಮ ತೂಕ ಹೆಚ್ಚಾಗಿದೆಯೇ? ಹಾಗಾದ್ರೆ ತೂಕ ಇಳಿಸಿಕೊಳ್ಳಲು ಈ ಆಹಾರ ಪದ್ಧತಿಯನ್ನು ಅನುಸರಿಸಿ

ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿರುವವರು ತೂಕ ಹೆಚ್ಚಳದಂತಹ ತೊಂದರೆಗಳನ್ನು ಎದುರಿಸುವುದು ಸಹಜ. ಆದ್ದರಿಂದ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಕೆಲವು ಆಹಾರ ಪದ್ದತಿಯನ್ನು ಅನುಸರಿಸಬೇಕಾಗುತ್ತದೆ ಅವು ಯಾವುದು ಗೊತ್ತಾ ಇಲ್ಲಿದೆ ಓದಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಥೈರಾಯಿಡ್ ಸಮಸ್ಯೆಯಿಂದ (Thyroid problem) ಬಳಲುತ್ತಿರುವವರು ತೂಕ ಹೆಚ್ಚಳದಂತಹ (Weight Gain) ತೊಂದರೆಗಳನ್ನು ಎದುರಿಸುವುದು ಸಹಜ. ದೇಹದ ಮೆಟಬಾಲಿಸಂ (Metabolism) ನಿಯಂತ್ರಿಸುವ ಕಾರ್ಯ ನಿರ್ವಹಿಸುವ ಥೈರಾಯ್ಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸದೇ ಹೋದಲ್ಲಿ, ಬಂದೊದಗುವ ಸಮಸ್ಯೆಗಳು ಅನೇಕ. ಕೆಲವರ ತೂಕ ಕಡಿಮೆಯಾದರೆ, ಮತ್ತೆ ಕೆಲವರದ್ದು ವಿಪರೀತ ಹೆಚ್ಚಳವಾಗುತ್ತಾರೆ. ಹೀಗೆ ಥೈರಾಯಿಡ್ ಸಮಸ್ಯೆಯಿಂದ ಬಳಲುತ್ತಿರುವವರು ತೂಕ ಇಳಿಸಿಕೊಳ್ಳಲು ಬಯಸಿದರೆ ಕೆಲವು ಆಹಾರಗಳ (Food) ಬಗ್ಗೆ ಗಮನಹರಿಸಬೇಕು. ಹೆಚ್ಚಿನ ಆರೋಗ್ಯ ಸಮಸ್ಯೆಗಳ (Health Problems) ಚಿಕಿತ್ಸೆಯಲ್ಲಿ (Treatment) ಆಹಾರವು ಅತ್ಯಗತ್ಯ. ಹೀಗಾಗಿ ಆಹಾರ ಪದ್ಧತಿಯನ್ನು ಬದಲಾಯಿಸುವುದು ಮತ್ತು ಆರೋಗ್ಯಕರ ಆಹಾರವನ್ನು ನಿರ್ವಹಿಸುವುದು ಥೈರಾಯ್ಡ್‌ನಿಂದಾಗಿ ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಥೈರಾಯ್ಡ್ ರೋಗಿಗಳಿಗೆ ತೂಕ ನಷ್ಟ ಆಹಾರ ಸಲಹೆಗಳು

1) ಫೈಬರ್ ಭರಿತ ಆಹಾರ
ಥೈರಾಯ್ಡ್ ನಿಂದ ಬಳಲುತ್ತಿರುವವರು ಹೆಚ್ಚು ಫೈಬರ್ ಭರಿತ ಆಹಾರ ಸೇವನೆ ಬಗ್ಗೆ ಗಮನಹರಿಸಬೇಕು. ಇದು ಕೊಲೆಸ್ಟ್ರಾಲನ್ನು ಕಡಿಮೆ ಮಾಡುವುದರಿಂದ ಹಿಡಿದು ಆರೋಗ್ಯಕರ ತೂಕವನ್ನು ಉತ್ತೇಜಿಸುವವರೆಗೆ ಸಹಕಾರಿಯಾಗಿದೆ.

ಫೈಬರ್ ಆಹಾರಗಳು ನಿಮ್ಮನ್ನು ಹೆಚ್ಚು ಕಾಲ ಹೊಟ್ಟೆ ತುಂಬಿದಂತಿಡುತ್ತದೆ ಮತ್ತು ಹಸಿವನ್ನು ನಿಗ್ರಹಿಸುತ್ತದೆ. ನಿಮ್ಮ ಕಡುಬಯಕೆಗಳ ಮೇಲೂ ನಿಯಂತ್ರಣ ಸಾಧಿಸಲು ಸಹಕಾರಿ. ತರಕಾರಿಗಳು, ದ್ವಿದಳ ಧಾನ್ಯಗಳು, ಹಣ್ಣುಗಳು, ಬೀಜಗಳಂತಹ ಆಹಾರ ತೂಕ ನಷ್ಟಕ್ಕೆ ಸಹಕಾರಿ.

2) ಮಿನಿ ಮೀಲ್ಸ್
ತೂಕ ನಷ್ಟದಲ್ಲಿ ಸಣ್ಣ ಊಟ ತುಂಬಾ ಸಹಕಾರಿ, ಒಂದೇ ಬಾರಿ ಹೊಟ್ಟೆ ಬಿರಿಯುವ ಹಾಗೆ ತಿನ್ನುವ ಬದಲು ಆಗಾಗ್ಗೆ ಸ್ವಲ್ಪ ಆಹಾರ ಸೇವನೆ ಥೈರಾಯ್ಡ್ ರೋಗಿಗಳು ವೇಗವಾಗಿ ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ. ಅಂದರೆ ನೀವು ಸೇವಿಸುವ ಊಟವನ್ನು 5, 6 ಬಾರಿ ವಿಭಜಿಸಿಕೊಂಡು ಸೇವಿಸುವುದು.

3) ಕಾರ್ಬೋಹೈಡ್ರೇಟುಗಳು
ಸಂಕೀರ್ಣ ಅಥವಾ ಸಂಪೂರ್ಣ ಧಾನ್ಯವಾಗಿರುವ ಕಾರ್ಬೋಹೈಡ್ರೇಟ್‌ಗಳು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಮತ್ತು ದೀರ್ಘಕಾಲದವರೆಗೆ ನಿಮ್ಮನ್ನು ತೃಪ್ತಿಪಡಿಸುವ ಅಗತ್ಯ ಸಂಯುಕ್ತಗಳನ್ನು ಒಳಗೊಂಡಿರುತ್ತವೆ. ಹೀಗಾಗಿ ತೂಕ ನಷ್ಟದಲ್ಲಿ ಇವುಗಳನ್ನೊಳಗೊಂಡ ಆಹಾರ ಉತ್ತಮ ಫಲಿತಾಂಶ ನೀಡುತ್ತದೆ.

4) ಹೆಚ್ಚು ಉರಿಯೂತ-ವಿರೋಧಿ ಆಹಾರಗಳನ್ನು ಸೇವಿಸಿ
ಉರಿಯೂತ-ವಿರೋಧಿ ಆಹಾರಗಳು ಹೈಪೋಥೈರಾಯ್ಡಿಸಂನಿಂದ ಬಳಲುತ್ತಿರುವವರ ಕೀಲು ನೋವು, ಖಿನ್ನತೆ ಮತ್ತು ತೂಕ ನಷ್ಟಕ್ಕೆ ಶಿಫಾರಸ್ಸು ಮಾಡಲಾದ ಉತ್ತಮ ಆಹಾರ. ಮೆಗ್ನೀಸಿಯಮ್, ಬಿ ಜೀವಸತ್ವಗಳು, ಸತು, ಸೆಲೆನಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ ಆರೋಗ್ಯಕರ ಥೈರಾಯ್ಡ್ ಕಾರ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಬೆಂಬಲಿಸುತ್ತದೆ.

ಕೊಬ್ಬಿನ ಮೀನುಗಳು, ಬೀಜಗಳು, ಹಣ್ಣುಗಳು ಮತ್ತು ಆಲಿವ್ ಎಣ್ಣೆ, ಶುಂಠಿ, ಅರಿಶಿಣ ಉರಿಯೂತ-ವಿರೋಧಿ ಆಹಾರಗಳಾಗಿವೆ.

ಇದನ್ನೂ ಓದಿ:  Health Tips: ಆರೋಗ್ಯವಾಗಿ ಇರಬೇಕು ಅಂದರೆ ಈ ತಪ್ಪನ್ನು ಮತ್ತೆ ಮಾಡಲೇ ಬೇಡಿ!

5) ಅತ್ಯುತ್ತಮ ಕ್ಯಾಲೋರಿ ಸೇವನೆ
ಕ್ಯಾಲೋರಿ ಇರುವ ಆಹಾರಗಳ ನಿಯಮಿತ ಸೇವನೆಯಿಂದ ಕೂಡ ತೂಕವನ್ನು ಇಳಿಸಬಹುದು. ಆರೋಗ್ಯವಂತ ದೇಹಕ್ಕೆ ಕ್ಯಾಲೋರಿ ಇರುವ ಆಹಾರ ಅತ್ಯವಶ್ಯಕ. ಹೀಗಾಗಿ ಥೈರಾಯ್ಡ್ ರೋಗಿಗಳು ತುಪ್ಪ, ಬಾಳೆಹಣ್ಣು, ಮೊಟ್ಟೆಯಂತಹ ಉತ್ತಮ ಕ್ಯಾಲೋರಿ ಸೇವನೆಗಳನ್ನು ತೆಗೆದುಕೊಳ್ಳಬೇಕು. ಈ ರೋಗಿಗಳು ಅವರ ಪೌಷ್ಟಿಕತಜ್ಞರು ಶಿಫಾರಸು ಮಾಡಲಾದ ಕ್ಯಾಲೊರಿ ಆಹಾರಗಳಿಗೆ ಬದ್ಧರಾಗಿರಬೇಕು.

6) ಲೋಡಿನ್
ಈ ಖನಿಜವು ಥೈರಾಯ್ಡ್ ಗಳ ಸರಿಯಾದ ಕಾರ್ಯನಿರ್ವಹಣೆಗೆ ಅವಶ್ಯಕವಾಗಿದೆ ಮತ್ತು ಥೈರಾಯ್ಡ್ ಹಾರ್ಮೋನ್ ಸಂಶ್ಲೇಷಣೆಯನ್ನು ಹೆಚ್ಚಿಸುವುದರ ಜೊತೆಗೆ ತೂಕ ಇಳಿಕೆಗೆ ಸಹಕಾರಿ.

7) ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಆಹಾರಗಳು
ಕೆಂಪು ಬಣ್ಣದ ಹಣ್ಣುಗಳು ಮತ್ತು ತರಕಾರಿಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇವು ಥೈರಾಯ್ಡ್ ಹೊಂದಿರುವವರಲ್ಲಿ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಲ್ಲಂಗಡಿ, ಸೇಬು, ಟೋಮ್ಯಾಟೋ ಇವಕ್ಕೆ ಉತ್ತಮ ಉದಾಹರಣೆ.

8) ಪ್ರೋಟೀನ್ ಭರಿತ ಆಹಾರಗಳು
ಪ್ರೋಟೀನ್ ಸಮೃದ್ಧ ಆಹಾರಗಳು ತೂಕ ಇಳಿಕೆ ಪ್ರಯಾಣದಲ್ಲಿ ಅತ್ಯಂತ ಪ್ರಮುಖ ಆಹಾರ. ಪ್ರೋಟೀನ್ ಅಂಶ ಹೆಚ್ಚಿರುವ ಹಣ್ಣು - ತರಕಾರಿಗಳನ್ನು ಸೇರಿಸುವುದರ ಜೊತೆಗೆ ಇನ್ನಿತರ ಆಹಾರ ಪದಾರ್ಥಗಳಾದ ಮೊಸರು, ಮೊಟ್ಟೆ, ಮೀನು, ಕಾಳುಗಳು, ಬೀಜಗಳು ಇತ್ಯಾದಿಗಳನ್ನು ನಿಯಮಿತವಾಗಿ ಸೇವನೆ ಮಾಡುತ್ತಾ ಬರುವುದರಿಂದ ಆರೋಗ್ಯಕರವಾದ ಆಹಾರ ಪದ್ಧತಿಯ ಜೊತೆಗೆ ಆರೋಗ್ಯಕರ ತೂಕ ನಿಮ್ಮದಾಗುತ್ತದೆ.

9) ಆರೋಗ್ಯಕರ ಕೊಬ್ಬು ಆಹಾರ
ಮಾನವನ ಆಹಾರ ಕ್ರಮದಲ್ಲಿ ಕಾರ್ಬೋಹೈಡ್ರೇಟ್ ಮತ್ತು ಪ್ರೊಟೀನುಗಳ ರೀತಿ ಕೊಬ್ಬು ಸಹ ಅತಿ ಮುಖ್ಯವಾದ ಆಹಾರಾಂಶವಾಗಿದೆ. ಹೀಗಾಗಿ ಉತ್ತಮ ಆರೋಗ್ಯಕರ ಕೊಬ್ಬನ್ನು ಸೇವಿಸುವುದು ಸಣ್ಣ ಆಗಲು ಪರಿಣಾಮಕಾರಿ.

ಇದನ್ನೂ ಓದಿ:  Weight Loss Tips: ತೂಕ ಇಳಿಸಲು ಯಾವ ಹಣ್ಣು ತಿನ್ಬೇಕು? ಯಾವ್ದು ತಿನ್ಬಾರ್ದು? ಇಲ್ಲಿದೆ ನೋಡಿ ಲಿಸ್ಟ್

10) ಹೆಚ್ಚೆಚ್ಚು ನೀರು ಕುಡಿಯಿರಿ
ಥೈರಾಯ್ಡ್ ರೋಗಿಗಳು ಹೆಚ್ಚೆಚ್ಚು ನೀರು ಸೇವನೆಯನ್ನು ಮಿಸ್ ಮಾಡಬಾರದು. ಇದು ದೇಹವನ್ನು ಹೈಡ್ರೇಟ್ ಮಾಡುವುದರ ಜೊತೆಗೆ ಸಣ್ಣ ಆಗಲು ಸಹ ಸಹಕಾರಿ.
Published by:Ashwini Prabhu
First published: