ದೊಡ್ಡ ಹುರುಳಿ ಬೀಜದ ಸೇವನೆ ಆರೋಗ್ಯಕ್ಕೆ ಉತ್ತಮ

news18
Updated:May 16, 2018, 7:20 PM IST
ದೊಡ್ಡ ಹುರುಳಿ ಬೀಜದ ಸೇವನೆ ಆರೋಗ್ಯಕ್ಕೆ ಉತ್ತಮ
news18
Updated: May 16, 2018, 7:20 PM IST
ನ್ಯೂಸ್ 18 ಕನ್ನಡ

ದೊಡ್ಡ ಹುರುಳಿ ಬೀಜದ ಸಾಂಬಾರು ಹಾಗೂ ಅನ್ನ (ರಾಜ್ಮಾ ಚಾವಲ್​) ಉತ್ತರ ಭಾರತೀಯರ ಅತ್ಯಂತ ಪ್ರಮುಖ ಆಹಾರ. ಹುರುಳಿ ಬೀಜ ಮತ್ತು ಅನ್ನ ಮಿಶ್ರಿತ ಈ ಆಹಾರವು ಹೆಚ್ಚು ಪೌಷ್ಟಿಕತೆಯಿಂದ ಕೂಡಿರುತ್ತದೆ. ಆದರೆ ದೇಹದ ತೂಕ ಹೆಚ್ಚುತ್ತದೆ ಎಂದು ಹೆಚ್ಚಿನವರು ದೊಡ್ಡ ಹುರುಳಿ ಬೀಜದ ಸಾಂಬಾರು ಹಾಗೂ ಅನ್ನ ಸೇವಿಸುವುದಿಲ್ಲ. ಪೂರ್ಣ ಪ್ರಮಾಣದ ಪ್ರೊಟೀನ್​ಗಳಿರುವ ಈ ಆಹಾರವು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ.

ಸಾಮಾನ್ಯವಾಗಿ ಅನ್ನದೊಂದಿಗೆ ತಯಾರಿಸುವ ದೊಡ್ಡ ಹುರುಳಿ ಬೀಜದ ಸಾಂಬಾರು ಹಾಗೂ ಅನ್ನವ​ನ್ನು ಕೆಂಪಕ್ಕಿ ಅನ್ನದೊಂದಿಗೆ ಮಿಶ್ರಣ ಮಾಡಿ ಸಹ  ತಯಾರಿಸಬಹುದು. ಇದರಲ್ಲಿ ಕೊಬ್ಬಿನಾಂಶ ಕಡಿಮೆಯಿದ್ದು ನಿಯಾಸಿನ್ ಪ್ರಮಾಣ ಹೆಚ್ಚಾಗಿರುತ್ತದೆ. ಇದು ನಿಮ್ಮ ತೂಕವು ನಿಯಂತ್ರಣದಲ್ಲಿಡುತ್ತದೆ.

ಅನ್ನ ಅಥವಾ ದೊಡ್ಡ ಹುರುಳಿ ಬೀಜವನ್ನು ಮಾತ್ರ ಯಾರೂ ಸಹ ಸೇವಿಸಲು ಬಯಸುವುದಿಲ್ಲ. ಆದರೆ ದೊಡ್ಡ ಹುರುಳಿ ಬೀಜದ ಸಾಂಬಾರು ಹಾಗೂ ಅನ್ನವನ್ನು ಸೇವಿಸುವುದರಿಂದ ದೇಹಕ್ಕೆ ಉತ್ತಮ ಪ್ರಮಾಣದ ಪ್ರೊಟೀನ್ ಲಭ್ಯವಾಗುತ್ತದೆ.

ಪ್ರತಿದಿನ ದೊಡ್ಡ ಹುರುಳಿ ಬೀಜದ ಸಾಂಬಾರು ಹಾಗೂ ಅನ್ನ  ಸೇವಿಸುದರಿಂದ ದೇಹಕ್ಕೆ ಬೇಕಾಗಿರುವ 40-50% ಫೈಬರ್ ಅಂಶವನ್ನು ಪಡೆದುಕೊಳ್ಳಬಹುದು. ಇದು ಕರುಳನ್ನು ಸುಗಮವಾಗಿರಿಸಿ ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ರಕ್ತದಲ್ಲಿರುವ ಕೊಲೆಸ್ಟ್ರಾಲ್ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಈ ದ್ವಿದಳ ಧಾನ್ಯದಲ್ಲಿ ದೇಹಕ್ಕೆ ಬೇಕಿರುವ ಕ್ಯಾಲ್ಸಿಯಂ, ಖನಿಜಾಂಶ  ಮತ್ತು ಕಬ್ಬಿಣಾಂಶಗಳು  ಹೆಚ್ಚಾಗಿರುತ್ತದೆ. ಇದು ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದ ಆಹಾರವಾಗಿದ್ದು, ಇದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ದೊಡ್ಡ ಹುರುಳಿ ಬೀಜದ ಸಾಂಬಾರು ಹಾಗೂ ಅನ್ನ (ರಾಜ್ಮಾ ಚಾವಲ್​)​ ತಯಾರಿಸುವಾಗ ಅಕ್ಕಿ ಮತ್ತು ಹುರುಳಿ ಬೀಜದ ಪ್ರಮಾಣ ಸಮವಾಗಿರಲಿ ಅಥವಾ ಹೆಚ್ಚು ಹುರುಳಿ ಬೀಜವನ್ನು ಬಳಸಿ. ಅಲ್ಲದೆ ದೊಡ್ಡ ಹುರುಳಿ ಬೀಜದ ಸಾಂಬಾರು ಹಾಗೂ ಅನ್ನದೊಂದಿಗೆ ತಜಾ ಸಲಾಡ್​ ಅನ್ನು ಸೇವಿಸುವ ಮೂಲಕ ಪೌಷ್ಟಿಕತೆಯನ್ನು ಹೆಚ್ಚಿಸಬಹುದು.
First published:May 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ