ಈ ಮನುಷ್ಯನ ಜೀವನದಲ್ಲಿ (Humon Life) ಈ ಕನಸು ಅಂತ ಹೇಳುವುದು ಒಂದು ರೀತಿಯಲ್ಲಿ ತುಂಬಾನೇ ವಿಚಿತ್ರವಾದ ಒಂದು ಸನ್ನಿವೇಶ, ಸಂದರ್ಭ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕೆಲವರಿಗೆ ರಾತ್ರಿ ಹೊತ್ತು ನಿದ್ದೆ ಮಾಡಿದಾಗ ಕನಸುಗಳು (Dreams) ಬಿದ್ದರೆ, ಇನ್ನೂ ಕೆಲವರಿಗೆ ಮಧ್ಯಾಹ್ನ ಮಲಗಿದ್ದಾಗ ಸಹ ಕನಸುಗಳು ಬೀಳುತ್ತವೆ ಅಂತ ಹೇಳಬಹುದು. ನಮ್ಮ ನಿದ್ರೆಯ ಕೆಲವು ಹಂತಗಳಲ್ಲಿ ಸಾಮಾನ್ಯವಾಗಿ ಮನಸ್ಸಿನಲ್ಲಿ ಅನೈಚ್ಛಿಕವಾಗಿ ಸಂಭವಿಸುವ ಆಲೋಚನೆಗಳು, ಭಾವನೆಗಳು ಮತ್ತು ಸಂವೇದನೆಗಳ ಅನುಕ್ರಮವೇ ಈ ಕನಸು ಅಂತ ಹೇಳಬಹುದು. ಅನೇಕರಿಗೆ ಪ್ರತಿದಿನ ಅನೇಕ ರೀತಿಯ ಕನಸುಗಳು ಬೀಳುತ್ತವೆ ಅಥವಾ ಕನಸುಗಳನ್ನು ಕಾಣುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಕೆಲವರಿಗೆ ಪದೇ ಪದೇ ಕನಸಿನಲ್ಲಿ ವಿಚಿತ್ರವಾಗಿ ಪ್ರಾಣಿ ಪಕ್ಷಿಗಳು ಬಂದರೆ, ಇನ್ನೂ ಕೆಲವರಿಗೆ ಅಸ್ಪಷ್ಟವಾದ ಸನ್ನಿವೇಶಗಳ ಮತ್ತು ಸಂದರ್ಭಗಳ ಕನಸುಗಳು ಬೀಳುತ್ತವೆ ಅಂತ ಹೇಳಬಹುದು. ಹೀಗೆ ಪ್ರತಿಯೊಂದು ಕನಸುಗಳು ಒಂದೊಂದು ರೀತಿಯ ಅರ್ಥಗಳನ್ನು ಹೊಂದಿರುತ್ತವೆ ಅಂತ ಹೇಳಬಹುದು. ಯಾವ ರೀತಿಯ ಕನಸುಗಳು ಯಾವ ರೀತಿಯ ಅರ್ಥವನ್ನು ನೀಡುತ್ತವೆ ಅಂತ ಈ ಕನಸನ್ನು ಡಿಕೋಡ್ ಮಾಡುವ ಕನಸಿನ ತಜ್ಞರು ಸ್ಪಷ್ಟವಾಗಿ ಹೇಳಬಲ್ಲರು.
ಪರೀಕ್ಷೆಯಲ್ಲಿ ಫೇಲ್ ಆಗಿರುವ ಕನಸು ಪದೇ ಪದೇ ಬೀಳುತ್ತಿದೆಯೇ?
ಕೆಲವರು ಕನಸು ತಾನೇ ಅಂತ ಅದರ ಬಗ್ಗೆ ಜಾಸ್ತಿ ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ, ಇನ್ನೂ ಕೆಲವರು ಆ ಕನಸಿನ ಅರ್ಥ ಏನಿರಬಹುದು ಅಂತ ತಿಳಿದುಕೊಳ್ಳಲು ತುಂಬಾನೇ ಕುತೂಹಲ ಹೊಂದಿರುತ್ತಾರೆ ಅಂತ ಹೇಳಬಹುದು. ಹಾಗೆ ಕುತೂಹಲ ಇರುವವರಿಗೆ ಇಲ್ಲಿ ಪರೀಕ್ಷೆಯಲ್ಲಿ ಫೇಲ್ ಆಗುವ ಕನಸಿನ ಅರ್ಥವನ್ನು ಕನಸಿನ ತಜ್ಞರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ನೋಡಿ.
ಇದನ್ನೂ ಓದಿ: ಮೊಬೈಲ್ ಸ್ಕ್ರೀನ್ ನೋಡೋದ್ರಿಂದ ನಿಮ್ಮ ಕಣ್ಣುಗಳ ಮೇಲೆ ಹೀಗೆಲ್ಲ ಪರಿಣಾಮ ಬೀರಬಹುದು!
ಪರೀಕ್ಷೆಯಲ್ಲಿ ಫೇಲ್ ಆಗಿರುವ ಕನಸು ನಿಜಕ್ಕೂ ಎಂತವರನ್ನಾದರೂ ಸಹ ಒಂದು ಕ್ಷಣ ಬೆಚ್ಚಿ ಬೀಳಿಸುತ್ತದೆ ಅಂತ ಹೇಳಬಹುದು. ಈ ಕನಸು ಹೆಚ್ಚಾಗಿ ಈ ಪರೀಕ್ಷೆ ಬರೆದು ಬಂದಿರುವ ವಿದ್ಯಾರ್ಥಿಗಳಿಗೆ ಬೀಳುತ್ತೇ ಅಂತ ನಾವು ನೀವು ಅಂದುಕೊಳ್ಳಬಹುದು. ಆದರೆ ಪರೀಕ್ಷೆಯಲ್ಲಿ ಫೇಲ್ ಆಗುವುದು ಅನೇಕ ಜನರಿಗೆ ಬೀಳುವ ಕನಸಾಗಿರುತ್ತದೆ ಅಂತ ಹೇಳಬಹುದು.
ಕನಸಿನಲ್ಲಿ ಪರೀಕ್ಷೆಯಲ್ಲಿ ಫೇಲ್ ಆಗುವುದರ ಅರ್ಥ ಏನು ಗೊತ್ತೇ?
ಹೀಗೆ ಪರೀಕ್ಷೆಯಲ್ಲಿ ಫೇಲ್ ಆಗಿರುವ ಕನಸು ಬೀಳುವ ಅರ್ಥ ಎಂದರೆ ನಿಜ ಜೀವನದಲ್ಲಿ ನಮಗಿರುವ ಆತಂಕ ಮತ್ತು ಭಯವನ್ನು ತಿಳಿಸುತ್ತದೆ. ನಮಗೆ ಜೀವನದ ಬಗ್ಗೆ ಒಂದು ರೀತಿಯ ಅಸುರಕ್ಷತೆ ಭಾವನೆ ಇದ್ದರೆ, ನಮಗೆ ಈ ರೀತಿಯ ಪರೀಕ್ಷೆಯಲ್ಲಿ ಫೇಲ್ ಆಗಿರುವ ಕನಸುಗಳು ಬೀಳುತ್ತವೆ ಅಂತ ಹೇಳುತ್ತಾರೆ ಕನಸಿನ ತಜ್ಞರು.
ಈ ರೀತಿಯ ಕನಸು ನೀವು ನಿಜ ಜೀವನದಲ್ಲಿ ನಿಮಗೆ ಅನೇಕ ಸವಾಲುಗಳು ಎದುರಾಗುತ್ತವೆ ಅಂತ ಸಹ ತಿಳಿಸುತ್ತದೆ. ಈ ಸವಾಲುಗಳು ನಿಮಗೆ ಎದುರಾದಾಗ ನೀವು ಒಂದು ಕ್ಷಣ ವಿಚಲಿತಗೊಳ್ಳಬಹುದು ಮತ್ತು ಆ ಕನಸುಗಳು ನಿಮಗೆ ಮುಂಬರುವ ಸವಾಲುಗಳ ಬಗ್ಗೆ ಒಂದು ರೀತಿಯ ಎಚ್ಚರಿಕೆಯ ಸಂಕೇತವನ್ನು ಸಹ ನೀಡುತ್ತಿರಬಹುದು.
ನೀವು ವಿದ್ಯಾರ್ಥಿ ಆಗಿದ್ದಲ್ಲಿ ನಿಮಗೆ ಯಾವುದಾದರೊಂದು ವಿಷಯದ ಬಗ್ಗೆ ತುಂಬಾನೇ ಭಯ ಮತ್ತು ಪರೀಕ್ಷೆಯಲ್ಲಿ ಅದನ್ನು ಹೇಗೆ ಬರೆಯುತ್ತೇನೆ ಅಂತ ಆತಂಕ ಇದ್ದರೂ ಸಹ ಈ ರೀತಿಯ ಕನಸುಗಳು ಬೀಳುತ್ತವೆ ಅಂತ ತಜ್ಞರು ಹೇಳುತ್ತಾರೆ. ನಿಮಗೆ ಬೀಳುವ ಕನಸು ನಿಜವಾಗದೆ ಇರಬಹುದು, ಆದರೆ ನಿಮಗಿರುವ ಭಯ ಮತ್ತು ಆತಂಕವನ್ನು ಸ್ಪಷ್ಟವಾಗಿ ತೋರಿಸುತ್ತದೆ ಅಂತ ಹೇಳಬಹುದು.
ಈ ರೀತಿಯ ಕನಸುಗಳು ನಿಮ್ಮ ಜೀವನದಲ್ಲಿ ಹಿಂದೆ ನಡೆದಿರುವ ಸೋಲುಗಳನ್ನು ಸಹ ಪ್ರತಿಬಿಂಬಿಸುತ್ತವೆ ಅಂತ ಹೇಳಲಾಗುತ್ತದೆ. ಎಂದರೆ ನೀವು ನಿಮ್ಮ ಸಾಮರ್ಥ್ಯಗಳ ಅನುಸಾರವಾಗಿ ಕೆಲಸ ಮಾಡುತ್ತಿಲ್ಲ ಅಥವಾ ಯಶಸ್ಸನ್ನು ಮುಟ್ಟುತ್ತಿಲ್ಲ ಅನ್ನೋದು ಸಹ ಈ ಕನಸಿನ ಅರ್ಥವಾಗಿರಬಹುದು ಅಂತಾರೆ ತಜ್ಞರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ