• Home
  • »
  • News
  • »
  • lifestyle
  • »
  • Ravana in Gokarna: ರಾವಣ ಗೋಕರ್ಣಕ್ಕೆ ಬಂದು ಆತ್ಮಲಿಂಗ ಕಳೆದುಕೊಂಡಿದ್ದನಂತೆ!

Ravana in Gokarna: ರಾವಣ ಗೋಕರ್ಣಕ್ಕೆ ಬಂದು ಆತ್ಮಲಿಂಗ ಕಳೆದುಕೊಂಡಿದ್ದನಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Gokarna Place History: ಪ್ರಯತ್ನ ಬಿಡದೇ, ಆತ್ಮಲಿಂಗವನ್ನು ಶಕ್ತಿಯಿಂದ ಎಳೆಯುತ್ತಾನೆ. ಕೈಗೆ ಬಂದ ಆತ್ಮಲಿಂಗದ ಭಾಗಗಳನ್ನು ನಾಲ್ಕು ದಿಕ್ಕಿಗೆ ಎಸೆಯುತ್ತಾನೆ. ಹಾಗಾಗಿ ಗೋಕರ್ಣದಲ್ಲಿರುವುದು ಆತ್ಮಲಿಂಗ.

  • Share this:

ನಮ್ಮ ರಾಜ್ಯದಲ್ಲಿ (State)  ಹಲವಾರು ಪ್ರೇಕ್ಷಣೀಯ (Travel) ಸ್ಥಳಗಳಿವೆ. ದೇವಾಲಯಗಳಿಗೆ ಇಲ್ಲಿ ಯಾವುದೇ ಕಮ್ಮಿ ಇಲ್ಲ. ಒಂದೊಂದು ದೇವಾಲಯವೂ (Temple), ಒಂದೊಂದು ಇತಿಹಾಸವನ್ನು (history) ಹೊಂದಿದೆ. ಅದರಲ್ಲಿ ಒಂದು ಗೋಕರ್ಣ ಸಹ. ಗೋಕರ್ಣವು (Gokarna) ಕರ್ನಾಟಕದ ಉತ್ತರ ಕನ್ನಡ  (Karnataka Uttara Kannada) ಜಿಲ್ಲೆಯಲ್ಲಿ ನೆಲೆಗೊಂಡಿರುವ ಒಂದು ಸುಂದರ ಸ್ಥಳವಾಗಿದ್ದು, ಈ ಊರಿನ ಹೆಸರಿನ ಅರ್ಥ,'ಹಸುವಿನ ಕಿವಿ' ಎಂದು. ಪೌರಾಣಿಕ ನಂಬಿಕೆಯ ಪ್ರಕಾರ, ಇದು ಶಿವನು 9Shiva) ಭೂಮಾತೆಯ ಅವತಾರದಿಂದ ಹಸುವಿನ ರೂಪದಲ್ಲಿ ಹೊರಹೊಮ್ಮಿದ ಸ್ಥಳವಾಗಿದೆ. ಆದರೆ, ಈ ಸ್ಥಳಕ್ಕೂ ರಾವಣನಿಗೂ (Ravana) ಸಂಬಂಧ ಇದೆ ಗೊತ್ತಾ?. ಹೌದು, ಗೋಕರ್ಣ ಹಾಗೂ ರಾವಣನಿಗೆ ಏನು ಸಂಬಂಧ ಎಂಬುದು ಇಲ್ಲಿದೆ.  


ಹಿಂದಿದೆ ಪೌರಾಣಿಕ ಕಥೆ


ಲಂಕಾಧಿಪತಿ ರಾವಣ ಶಿವನ ಪರಮ ಭಕ್ತ ಎಂಬುದು ಎಲ್ಲರಿಗೂ ಗೊತ್ತಿದೆ. ಈ ರಾವಣನ ತಾಯಿ ಕೈಕಸೆ ಒಂದು ದಿನ ಲಿಂಗಪೂಜೆಯನ್ನು ಮಾಡಲು ನಿರ್ದರಿಸಿದ್ದರು. ಪೂಜೆ ಮಾಡಲು ಸಮುದ್ರದಲ್ಲಿ ಸ್ನಾನ ಮಾಡಿ, ಅಲ್ಲಿಯೇ ದಡದಲ್ಲಿ ಮರಳಿನಲ್ಲಿ ಲಿಂಗವನ್ನು ಮಾಡಿಕೊಂಡು ಪೂಜಿಸುತ್ತಿದ್ದರು. ಆದರೆ, ಅಲೆಗ ರಭಸಕ್ಕೆ ಸಿಲುಕಿ ಲಿಂಗ ಕೊಚ್ಚಿಕೊಂಡು ಹೋಯಿತು. ಇದರಿಂದ ಬೇಸರಗೊಂಡ ಕೈಕಸೆಯು ಮಗನಾದ ರಾವಣನನ್ನು ಕರೆದು ವಿಚಾರವನ್ನು ತಿಳಿಸಿದಾಗ, ಅವನು ಶಿವನನ್ನು ತಪಸ್ಸಿನಿಂದ ಒಲಿಸಿ ಅವನು ಪೂಜಿಸುವ ಆತ್ಮ ಲಿಂಗವನ್ನೇ ತಂದು ಕೊಡುತ್ತೇನೆ ಎಂದು ಸಮಾಧಾನ ಮಾಡಿ ಕೈಲಾಸಕ್ಕೆ ಹೋಗುತ್ತಾನೆ.


ಅಲ್ಲಿ ಹೋದ ನಂತರ ಕೈಲಾಸವನ್ನೇ ಲಂಕೆಗೆ ತೆಗೆದುಕೊಂಡು ಹೋದರೆ ಹೇಗೆ ಎಂಬ ವಿಚಾರ ತಲೆಯಲ್ಲಿ ಬರುತ್ತದೆ. ಆತ ತನ್ನ ಇಪ್ಪತ್ತು ತೋಳುಗಳ ಬಲದಿಂದ ಕೈಲಾಸವನ್ನು ಎತ್ತಲು ಪ್ರಯತ್ನಿಸುತ್ತಾನೆ. ಆಗ ಶಿವನು ತನ್ನ ಎಡಗಾಲಿನಿಂದ ಭೂಮಿಯನ್ನು ಒತ್ತುತ್ತಾನೆ, ಇದರಿಂದ ರಾವಣನ ಕೈಗಳು ಪರ್ವತದ ಬುಡದಲ್ಲಿ ಸಿಲುಕಿಕೊಳ್ಳುತ್ತದೆ.  ಇಷ್ಟಕ್ಕೂ ಸುಮ್ಮನಾಗದ ರಾವಣ ಶಿವನನ್ನ ಒಲಿಸಿಕೊಳ್ಳಲು ನೋವಿನಲ್ಲಿಯೇ ತಪ್ಪಸ್ಸು ಆರಂಭಿಸುತ್ತಾನೆ. ಆದರೆ, ಶಿವ ಒಲಿಯದಿದ್ದಾಗ ದೇಹದ ನಾಳಗಳಿಂದ ತಂತಿಯನ್ನು ಮಾಡಿ ಸಾಮಗಾನವನ್ನು ಹಾಡುತ್ತಾನೆ. ರಾವಣನ ಸಾಮಗಾನಕ್ಕೆ  ಪ್ರಸನ್ನನಾಗಿ ಶಿವ ಬೇಕಾದ ವರವನ್ನು ಕೇಳುವಂತೆ ಹೇಳುತ್ತಾನೆ.
ಆಗ ರಾವಣ ತನ್ನ ತಾಯಿಯು ನಿತ್ಯವೂ ಪೂಜಿಸಲು ಪ್ರಾಣಲಿಂಗವನ್ನು ಅನುಗ್ರಹಿಸುವಂತೆ ಬೇಡುತ್ತಾನೆ. ಇದಕ್ಕೆ ಒಪ್ಪಿದ ಶಿವ ಒಂದು ಕಂಡೀಷನ್ ಹಾಕುತ್ತಾನೆ. ಆತ್ಮಲಿಂಗವನ್ನು ಭೂಮಿಯಲ್ಲಿ ಎಲ್ಲಿಯೂ ಇಡದೇ ತೆಗೆದುಕೊಂಡು ಹೋಗಬೇಕು. ಭೂಮಿಯಲ್ಲಿ ಇಟ್ಟಿದ್ದಾದರೆ ಅದು ಅಲ್ಲೇ ಗಟ್ಟಿಯಾಗಿ ನಿಲ್ಲುತ್ತದೆ ಮತ್ತು ಅದು ಪುನಃ ಎತ್ತಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ.


ಗಣಪತಿಯಿಂದ ಮಾಸ್ಟರ್ ಪ್ಲ್ಯಾನ್​


ಇದನ್ನೆಲ್ಲವನ್ನೂ ಲೋಕ ಸಂಚಾರಿಯಾದ ನಾರ ತಿಳಿದುಕೊಂಡು ದೇವತೆಗಳ ಬಳಿ ಎಲ್ಲವನ್ನೂ ಹೇಳುತ್ತಾನೆ. ರಾವಣ ಲಂಕೆಯನ್ನು ಸೇರಿದರೆ ಅದೇ ಕೈಲಾಸವಾಗುವುದು. ಅವನನ್ನು ದೇವ, ದಾನವ, ರಾಕ್ಷಸ, ಯಕ್ರ, ಕನ್ನರ ಮನುಷ್ಯನಿಂದ ಜಯಿಸಲು ಸಾಧ್ಯವಿಲ್ಲ ಎಂದು ತಿಳಿಸುತ್ತಾನೆ. ಜೊತೆಗೆ ಶಿವನ ಕಂಡೀಷನ್​ ಸಹ ತಿಳಿಸುತ್ತಾನೆ.


ಇದನ್ನೂ ಓದಿ: ವಿಟಮಿನ್ ಇ ಕಮ್ಮಿಯಾದ್ರೆ ಖಂಡಿತಾ ಈ ಎಲ್ಲಾ ಆರೋಗ್ಯ ಸಮಸ್ಯೆ ಕಾಡುತ್ತೆ


ಇದರಿಂದ ಗಾಬರಿಕೊಂಡ ದೇವತೆಗಳು ಮಹಾ ವಿಷ್ಣುವಿನ ಬಳಿ ಹೋಗುತ್ತಾರೆ. ಇದರ ಬಗ್ಗೆ ಚಿಂತಿಸಿ ಅದಕ್ಕೊಂದು ಪರಿಹಾರವನ್ನು ಯೋಚಿಸಿ ಗಣಪತಿಯನ್ನು ಕರೆದ ವಿಷ್ಣು, ರಾವಣನು ನಿನ್ನ ತಂದೆಯನ್ನು ತಪಸ್ಸಿನಿಂದ ಒಲಿಸಿಕೊಂಡು ಲಂಕೆಗೆ ಹೋಗುತ್ತಿದ್ದಾನೆ. ಅದರಿಂದ ಅಪಾಯವಿದೆ. ಹೋಗಿ ಅವನಿಗೆ ನೀನು ವಿಘ್ನವನ್ನ ಮಾಡು ಎಂದು ಹೇಳುತ್ತಾನೆ.


ಆಗ ಗಣಪತಿಯು ನಮ್ಮ ಗೋಕರ್ಣದ ಸಮೀಪದಲ್ಲಿ ರಾವಣನು ಬರುತ್ತಿರುವುದನ್ನು ಕಂಡು ಬ್ರಹ್ಮಚಾರಿಯ ರೂಪವನ್ನು ಧರಿಸಿ ಕುಳಿತಿರುತ್ತಾನೆ. ಆ ಸಮಯಕ್ಕೆ  ಸರಿಯಾಗಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸೂರ್ಯನನ್ನ ಮರೆಮಾಡಿ ಸಂಧ್ಯಾಕಾಲವೆಂಬ ಭ್ರಮೆಯನ್ನು ರಾವಣನಲ್ಲಿ ಸೃಷ್ಟಿಸುತ್ತಾನೆ. ತಪ್ಪದೇ ಸಂಂಧ್ಯಾವಂದನೆ ಮಾಡುವ ರಾವಣನಿಗೆ ಈಗ ಸಂಧ್ಯಾವಂದನೆ ಮಾಡಬೇಕು, ಆದರೆ ಈ ಲಿಂಗವನ್ನು ಭೂಮಿಯ ಮೇಲೆ ಇಡುವಂತಿಲ್ಲ. ಏನು ಮಾಡುವುದು ಎನ್ನುವ ಆಲೋಚನೆ ಕಾಡುತ್ತದೆ.


ಸರಿಯಾಗಿ ಅಲ್ಲಿದ್ದ ಗಣಪತಿಯನ್ನು ಕಂಡು, ಹತ್ತಿರ ಕರೆದು ಈ ಲಿಂಗವನ್ನು ಸ್ವಲ್ಪ ಹಿಡಿದುಕೊಂಡಿರು ನಾನು ಸಂಧ್ಯಾವಂದನೆಯನ್ನು ಮುಗಿಸಿ ಬರುತ್ತೇನೆ. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಭೂಮಿಯ ಮೇಲೆ ಇದನ್ನು ಇಡಬಾರದು ಎಂದು ಹೇಳುತ್ತಾನೆ.  ಅದಕ್ಕೆ ಒಪ್ಪಿಕೊಂಡ ಗಣಪತಿ, ಲಿಂಗವನ್ನು ತೆಗೆದುಕೊಂಡು ಇದು ಭಾರವಿದೆ, ನನ್ನಿಂದ ಬಹಳ ಹೊತ್ತು ಹಿಡಿದುಕೊಳ್ಳಲು ಸಾಧ್ಯವಿಲ್ಲ ಮೂರು ಬಾರಿ ನಿನ್ನನ್ನು ಕರೆಯುತ್ತೇನೆ, ನೀನು ಬರಬೇಕು, ಬರದಿದ್ದಲ್ಲಿ ಇದನ್ನು ಭೂಮಿಯ ಮೇಲೆ ಇಡುತ್ತೇನೆ ಎಂದು ಹೇಳುತ್ತಾನೆ. ಅದಕ್ಕೆ ಸಹ ರಾವಣ ಒಪ್ಪಿಕೊಳ್ಳುತ್ತಾನೆ.


ಸ್ವಲ್ಪ ಸಮಯದ ನಂತರ  ಶೌಚವನ್ನು ಪೂರೈಸಿ ಕಾಲು, ತೊಳೆಯುತ್ತಿರುವಾಗ ಒಮ್ಮೆ, ಅಘ್ರ್ಯವನ್ನು ಕೊಡುತ್ತಿರುವಾಗ, ಜಪವನ್ನು ಪ್ರಾರಂಭಿಸುತ್ತಿರುವಾಗ ಹೀಗೆ ಮೂರು ಬಾರಿ ಓ ರಾವಣಾ ಎಂದು ಕೂಗುತ್ತಾನೆ. ರಾವಣನು ಓ ಬಂದೆ ಎಂದು ಕೂಗುತ್ತ ಓಡಿ ಬರುವುದೊಳಗಾಗಿ ಲಿಂಗವನ್ನು ಭೂಮಿಯ ಮೇಲೆ ಗಣಪತಿ ಇಟ್ಟಾಗಿತ್ತು.  ಇದರಿಂದ ಸಿಟ್ಟಿಗೆದ್ದ ರಾವಣನು ಗಣಪತಿಯ ನೆತ್ತಿಯ ಮೇಲೆ ಮುಷ್ಠಿಯಿಂದ ಗುದ್ದಿದನು,


ಇದನ್ನೂ ಓದಿ: ಲುಕ್ ಹಾಳು ಮಾಡುವ ಒಡೆದ ಹಿಮ್ಮಡಿಗೆ ಇವುಗಳನ್ನು ಹಚ್ಚಿ ಸಾಕು


ಬಲಿಷ್ಟವಾದ ರಾವಣನ ಗುದ್ದಿನಿಂದ ನೆತ್ತಿಯ ಮೇಲೆ ಒಂದು ಕುಳಿಯಾಗಿ ಹೊಟ್ಟೆಯು ಕುಸಿಯಿತು. ಇನ್ನು ರಾವಣನು ಲಿಂಗವನ್ನು ಕೀಳಲು ಪ್ರಯತ್ನಿಸಿದನು. ಆದರೂ ಅದನ್ನು ಕೀಳಲು ಅವನಿಂದ ಆಗುವುದಿಲ್ಲ. ಆದರೂ ಪ್ರಯತ್ನ ಬಿಡದೇ, ಆತ್ಮಲಿಂಗವನ್ನು ಶಕ್ತಿಯಿಂದ ಎಳೆಯುತ್ತಾನೆ. ಕೈಗೆ ಬಂದ ಆತ್ಮಲಿಂಗದ ಭಾಗಗಳನ್ನು ನಾಲ್ಕು ದಿಕ್ಕಿಗೆ ಎಸೆಯುತ್ತಾನೆ. ಹಾಗಾಗಿ ಗೋಕರ್ಣದಲ್ಲಿರುವುದು ಆತ್ಮಲಿಂಗ.

Published by:Sandhya M
First published: