ನಿಮಗಾಗಿ ನಿಮ್ಮವರು ಕಾಯುತ್ತಿದ್ದಾರೆ: ಕುಡಿದು ವಾಹನ ಚಲಾಯಿಸಬೇಡಿ..!

ಇದಕ್ಕಾಗಿ ಡಿಯಾಗೋ ರಸ್ತೆ ಸುರಕ್ಷತೆಯ ಅಭಿಯಾನವನ್ನು ನೆಟ್​ವರ್ಕ್ 18 ತಂಡ ಆಯೋಜಿಸಿದೆ. ಕುಡಿತದ ದಾಸರಾಗಿ ಅಪಘಾತಕ್ಕೊಳಗಾಗುವವರಲ್ಲಿ ಯುವಕರೇ ಹೆಚ್ಚಿರುವುದರಿಂದ ರೋಡೀಸ್ ಖ್ಯಾತಿಯ ರಘು ರಾಮ್ ಕೂಡ ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

zahir | news18
Updated:June 14, 2019, 6:44 PM IST
ನಿಮಗಾಗಿ ನಿಮ್ಮವರು ಕಾಯುತ್ತಿದ್ದಾರೆ: ಕುಡಿದು ವಾಹನ ಚಲಾಯಿಸಬೇಡಿ..!
alcoholkikasam
  • News18
  • Last Updated: June 14, 2019, 6:44 PM IST
  • Share this:
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಇನ್ನು ಕುಡಿದು ವಾಹನ ಚಲಾಯಿಸಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಲ್ಲಿ ಹಲವರು ಯುವಕರ ಸಂಖ್ಯೆಯೇ ಹೆಚ್ಚು. ದೇಶದಲ್ಲಿ ಉಂಟಾದ ಶೇ.70ಕ್ಕೂ ಹೆಚ್ಚು ಅಪಘಾತ ಪ್ರಕರಣಗಳು ಡ್ರಿಂಕ್ ಆ್ಯಂಡ್ ಡ್ರೈವ್‌ನಿಂದಲೇ ಸಂಭವಿಸಿದೆ ಎಂಬುದೇ ಆಘಾತಕಾರಿ.

ಇದಕ್ಕಾಗಿ ಡಿಯಾಗೋ ರಸ್ತೆ ಸುರಕ್ಷತೆಯ ಅಭಿಯಾನವನ್ನು ನೆಟ್​ವರ್ಕ್ 18 ತಂಡ ಆಯೋಜಿಸಿದೆ. ಕುಡಿತದ ದಾಸರಾಗಿ ಅಪಘಾತಕ್ಕೊಳಗಾಗುವವರಲ್ಲಿ ಯುವಕರೇ ಹೆಚ್ಚಿರುವುದರಿಂದ ರೋಡೀಸ್ ಖ್ಯಾತಿಯ ರಘು ರಾಮ್ ಕೂಡ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ರಘುವಿನ ವಿಭಿನ್ನ ಶೈಲಿಯ ಮಾತುಗಾರಿಕೆ ಮತ್ತು ವರ್ತನೆ ಯುವ ಪೀಳಿಗೆಯ ವೀಕ್ಷಕರನ್ನು ಹೆಚ್ಚು ಆಕರ್ಷಿಸುತ್ತದೆ. ಅದರಂತೆ ಈ ರಸ್ತೆ ಸುರಕ್ಷಾ ವಿಡಿಯೋವನ್ನು ಕೂಡ ಚಿತ್ರಿಸಲಾಗಿದೆ.

ಈ ವೀಡಿಯೋದಲ್ಲಿ ಕುಡಿತವನ್ನು ಆನಂದಿಸುತ್ತಾ ಗತಿಸಿದ ಅನೇಕ ಕ್ಷಣಗಳನ್ನು ವ್ಯಕ್ತಿ ಹೇಗೆ ಆಸ್ವಾದಿಸುತ್ತಾನೆ ಎಂಬುದನ್ನು ತೋರಿಸಲಾಗಿದೆ. ಹಾಗೆಯೇ ಇದು ಕುಡಿದು ವಾಹನ ಚಾಲನೆ ಮಾಡುವುದು ಸುರಕ್ಷಿತವೇ? ಎನ್ನುವ ಪ್ರಶ್ನೆ ಮೂಡುವಂತೆ ಮಾಡುತ್ತದೆ. ಕುಡಿತದ ಚಟಕ್ಕಾಗಿ ನಿಮ್ಮ ಜೀವವನ್ನು ಯಾಕೆ ಅಪಾಯಕ್ಕೆ ಒಡ್ಡುವಿರಿ ಎಂಬ ಸಂದೇಶವನ್ನು ನೀಡಲಾಗುತ್ತದೆ.

ಭಗ್ನಪ್ರೇಮಿಯೊಬ್ಬನ ಕುಡಿತದೊಂದಿಗೆ ಪ್ರಾರಂಭಾಗುವ ಈ ವಿಡಿಯೋದಲ್ಲಿ ರಘರಾಮ್ ಒಂದು ಸಾಂದರ್ಭಿಕವಾಗಿ ಕಾಣಿಸಿಕೊಳ್ಳುತ್ತಾರೆ. ಇಲ್ಲಿ ನಿಮ್ಮ ಕುಡಿತಕ್ಕೆ ಕಾರಣವಾಗಿರುವ ಕೆಲ ವಿಷಯಗಳನ್ನು ತಿಳಿಸುತ್ತಾ, ನಿಮಗಾಗಿ ಕಾಯುತ್ತಿರುವ ಮನೆಯವರು, ಕಟುಂಬದವರನ್ನು ನೆನಪಿಸಲಾಗುತ್ತದೆ. ಅಷ್ಟೇ ಅಲ್ಲದೆ ಕುಡಿದು ಕಾರು ಚಲಾಯಿಸದಂತೆ ಸೂಚಿಸುವ ಈ ವಿಡಿಯೋ, ಇತರಿಗಾಗಿ ಬದುಕುವಂತೆ ಸಂದೇಶವನ್ನೂ ನೀಡುತ್ತದೆ.

ಕುಡಿದು ಕಾರು ಚಾಲನೆ ಮಾಡಬಾರದೆಂಬ ತಿಳುವಳಿಕೆ ಮೂಡಿಸುವ #alcoholkikasam ಎಂಬ ಹ್ಯಾಶ್​ಟ್ಯಾಗ್ ಅಭಿಯಾನ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ವಿಭಿನ್ನ ಪ್ರಯತ್ನವಾಗಿದೆ. ಇಂತಹದೊಂದು ವಿಶೇಷ ಅಭಿಯಾನದ ಮೂಲಕ ಡಿಯಾಗೋ ಮತ್ತು ನೆಟ್ ವರ್ಕ್ 18 ತಂಡ ಡ್ರಿಂಕ್ ಅ್ಯಂಡ್ ಡ್ರೈವ್ ಕುರಿತಾದ  ಜಾಗೃತಿ ಮೂಡಿಸುವ ಪ್ರಮಾಣಿಕ ಪ್ರಯತ್ನಕ್ಕೆ ಕೈ ಹಾಕಿದೆ.

First published: June 14, 2019, 6:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading